23.5 C
Karnataka
April 4, 2025
ಮುಂಬಯಿ

ಮುಂಬೈ : ಬ್ರೇಕ್ ಫೇಲ್ ಆಗಿ ಎದುರಿದ್ದ ವಾಹನಗಳು, ಜನರ ಮೇಲೆ ಹರಿದ ಬಸ್, 7 ಸಾವು, 49 ಮಂದಿಗೆ ಗಂಭೀರ ಗಾಯ



ಮುಂಬೈನ ಕುರ್ಲಾ ಪಶ್ಚಿಮದಲ್ಲಿ, ಸೋಮವಾರ ರಾತ್ರಿ 9.30ಕ್ಕೆ ಸಂಭವಿಸಿದ ದೊಡ್ಡ ರಸ್ತೆ ಅಪಘಾತದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು 49 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಪಘಾತದ ಗಂಭೀರ ಸ್ವರೂಪವನ್ನು ಗಮನಿಸಿದರೆ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಪೊಲೀಸ ಅಧಿಕಾರಿಗಳು ತಿಳಿಸಿದ್ದಾರೆ.ಮುಂಬೈನ ನಾಗರಿಕ ಸಾರಿಗೆ ಸಂಸ್ಥೆ, ಬೆಸ್ಟ್ ಬಸ್ ಪಾದಚಾರಿಗಳಿಗೆ ಹಾಗೂ ವಾಹನಗಳಿಗೆ ಡಿಕ್ಕಿ ಹೊಡೆದು ಹಲವಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ.

ಕುರ್ಲಾದ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ (ಬಿಎಂಸಿ) ಎಲ್ ವಾರ್ಡ್ ಬಳಿ ಬ್ರೇಕ್ ವೈಫಲ್ಯದಿಂದ ಅಪಘಾತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಅಪಘಾತದ ನಂತರ ಬಸ್ ಚಾಲಕನನ್ನು ಬಂಧಿಸಲಾಗಿದೆ. ಬಸ್, ಪಾದಚಾರಿಗಳಿಗೆ, ವಾಹನಗಳಿಗೆ ಡಿಕ್ಕಿ ಹೊಡೆದ ಬಳಿಕ ಬುದ್ಧ ಕಾಲೊನಿಯೊಳಗಿನ ವಸತಿ ಕಟ್ಟಡದೊಳಗೆ ಪ್ರವೇಶಿಸಿತ್ತು.

ಕುರ್ಲಾದಿಂದ ಅಂಧೇರಿಗೆ ಹೋಗುವ ಮಾರ್ಗ 332 ರ ಬಸ್ ಎಲ್ ವಾರ್ಡ್ ಕಚೇರಿಯ ಪಕ್ಕದಲ್ಲಿರುವ ವೈಟ್ ಹೌಸ್ ಕಟ್ಟಡದ ಬಳಿ ನಿಯಂತ್ರಣ ಕಳೆದುಕೊಂಡಿತು. ಬಸ್ ವಾಹನಗಳಿಗೆ ಮತ್ತು ನಡೆದುಕೊಂಡು ಹೋಗುತಿದ್ದ ಜನರಿಗೆ ಡಿಕ್ಕಿ ಹೊಡೆದಿದೆ., ಐದರಿಂದ ಆರು ಆಟೋರಿಕ್ಷಗಳು, 10 ಮೋಟರ್ ಸೈಕಲ್ ಗಳು, ಮತ್ತು ಸುಮಾರು 10 ಪಾದ ಚಾರಿಗಳಿಗೆ ಡಿಕ್ಕಿ ಹೊಡೆದು ಕನಿಷ್ಠ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ. MH01-EM-8228 ನೋಂದಣಿ ಸಂಖ್ಯೆಯ ಬಸ್ ಕುರ್ಲಾ ರೈಲು ನಿಲ್ದಾಣದಿಂದ ಅಂಧೇರಿಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಹಲವು ವಾಹನಗಳು ಜಖಂಗೊಂಡಿವೆ. 12 ಮೀಟರ್ ಉದ್ದದ ಈ ಎಲೆಕ್ಟ್ರಿಕ್ ಬಸ್ ಅನ್ನು ಹೈದರಾಬಾದ್ ಮೂಲದ ‘ಒಲೆಕ್ಟ್ರಾ ಗ್ರೀನ್‌ಟೆಕ್’ ತಯಾರಿಸಿದೆ ಮತ್ತು ಬೆಸ್ಟ್‌ನಿಂದ ಗುತ್ತಿಗೆಗೆ ತೆಗೆದುಕೊಳ್ಳಲಾಗಿದೆ ಎಂದು ಇನ್ನೊಬ್ಬ ಅಧಿಕಾರಿ ತಿಳಿಸಿದ್ದಾರೆ. ಅಂತಹ ಬಸ್‌ಗಳ ಚಾಲಕರನ್ನು ಖಾಸಗಿ ನಿರ್ವಾಹಕರು ಒದಗಿಸುತ್ತಾರೆ ಎಂದು ಹೇಳಿದರು.
ಆ ಜಾಗರೂಕ ಚಾಲನೆಯಿಂದ ಅಪಘಾತ ಸಂಭವಿಸಿದೆಯೇ ಎಂದು ನಿರ್ಧರಿಸಲು ಬೆಸ್ಟ್ ಅಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದ್ದಾರೆ ಆರಂಭಿಕ ವರದಿಗಳು ಬ್ರೇಕ್ ವೈಫಲ್ಯವನ್ನು ಸಂಭವನೀಯ ಕಾರಣವೆಂದು ಸೂಚಿಸಿದ್ದು, ಸಂಚಾರ ವಿಭಾಗದ ತಾಂತ್ರಿಕ ತಜ್ಞರು ಪರಿಶೀಲಿಸುತ್ತಿದ್ದಾರೆ.

Related posts

ಬಿಲ್ಲವರ ಅಸೋಸಿಯಶನ್ ಮುಂಬಯಿ ಇದರ ಡೊಂಬಿವಲಿ ಸ್ಥಳೀಯ ಸಮಿತಿಯಲ್ಲಿ ಶನಿ ಪೂಜೆ

Mumbai News Desk

ಜೇಷ್ಠ ನಾಗರಿಕರಿಗಾಗಿ ಆಯೋಜಿಸಿದ ವಿಶಿಷ್ಟ ಕಾರ್ಯಕ್ರಮ ” ಪಿಂದಣಿಗೆದ ತುಪ್ಪೆ”

Mumbai News Desk

ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಗೆ ಎಸ್ ಎಸ್ ಸಿ ಯಲ್ಲಿ ಶೇಕಡ 80% ಫಲಿತಾಂಶ

Mumbai News Desk

ಮೀರಾ- ಬಾಯಂದರ್ ನ  ರೈ  ಸುಮತಿ  ಎಜ್ಯುಕೇಶನ್ ಟ್ರಸ್ಟ್(ರಿ)   ನ ಸೈಂಟ್  ಆಗ್ನೆಸ್ ಇಂಗ್ಲಿಷ್ ಹೈ ಸ್ಕೂಲ್ ಗೆ  100% ಫಲಿತಾಂಶ.

Mumbai News Desk

ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್ ಇದರ 29ನೇ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ

Mumbai News Desk

ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ ಸಸಿಹಿತ್ಲು(ರಿ) ಪುನರ್ ನಿರ್ಮಾಣ ಮನವಿಪತ್ರ ಬಿಡುಗಡೆ.

Mumbai News Desk