
ಎಲ್ಲರನ್ನೂ ಸಾಮೂಹಿಕವಾಗಿ ಒಟ್ಟುಗೂಡಿಸುವ ಶಕ್ತಿ ಇರುವುದು ಭಜನೆಗೆ ಮಾತ್ರ – ಎಸ್ ಎನ್ ಉಡುಪ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತು, ಮಹಾರಾಷ್ಟ್ರ ಘಟಕ, ಭಜನಾ ಮಂಡಳಿಗಳ ಒಕ್ಕೂಟದ ಸಂಸ್ಥಾ, ( ರಿ.) ಮುಂಬೈ ಇದರ ಅಧ್ಯಕ್ಷರಾದ ದೇವು ಬಿ ಪೂಜಾರಿ ಯವರ ಅಧ್ಯಕ್ಷತೆಯಲ್ಲಿ ವಾರ್ಷಿಕೋತ್ಸವದ ಉದ್ಘಾಟನಾ ಕಾರ್ಯಕ್ರಮವನ್ನು ಡಿಸಂಬರ್ 8ರ ಆದಿತ್ಯವಾರ ಅಸಲ್ಪಾ ಶ್ರೀ ದತ್ತಾತ್ರೇಯ ದುರ್ಗಾಂಬಿಕ ದೇವಸ್ಥಾನದಲ್ಲಿ ಶ್ರೀ ಉಮಾ ಮಹೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಎಸ್ ಎನ್ ಉಡುಪ ಅವರು ದೀಪಾ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡುತ್ತಾ ಮಹಾನಗರದ ಎಲ್ಲಾ ಭಜನಾ ಮಂಡಳಿಗಳನ್ನು ಸಾಮೂಹಿಕವಾಗಿ ಒಟ್ಟುಗೂಡಿಸಿರುವುದು ನಿಜವಾಗಿಯೂ ಅಭಿನಂದನೀಯ, ಎಲ್ಲರೂ ಏಕ ಮನಸ್ಸಿನಿಂದ ಜಾತಿ ಧರ್ಮ ಮೇಲು ಕೀಳು ಹಿರಿಯ ಕಿರಿಯ ಲಿಂಗ ಬೇಧ ಇಲ್ಲದೆ ಭಗವಂತನ ನಾಮ ಸ್ಮರಣೆಯ ಮೂಲಕ ಪ್ರತಿಯೊಬ್ಬರನ್ನು ಒಟ್ಟುಗೂಡಿಸುವ ಶಕ್ತಿ ಇರುವುದು ಭಜನೆಗೆ ಮಾತ್ರ ಎಂದರು.




ಶ್ರೀ ದತ್ತಾತ್ರೇಯ ದುರ್ಗಾಂಬಿಕ ಮಂದಿರದ ಪ್ರಧಾನ ಅರ್ಚಕರಾದ ಜಗದೀಶ್ ಭಟ್ ದೇವರಿಗೆ ಪೂಜೆಗೈದು ಪ್ರಾರ್ಥನೆ ಸಲ್ಲಿಸಿ ನಂತರ ವೇದಿಕೆಯಲ್ಲಿ ಮಾತನಾಡುತ್ತಾ ಎಲ್ಲರೂ ಸೇರಿ ಜನವರಿ 19 ರಂದು ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಿದ್ದೀರಿ ಅದು ಯಶಸ್ವಿಯಾಗಿ ನೆರವೇರಲಿ ಎಂದು ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ವೇದಿಕೆಯ ಗಣ್ಯರು ವಿಜ್ಞಾಪನ ಪತ್ರವನ್ನು ಬಿಡುಗಡೆ ಗೊಳಿಸಿದರು.






ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಘಟಕದ ಅಧ್ಯಕ್ಷರಾದ ದೇವು ಪೂಜಾರಿಯವರು ಮಾತನಾಡುತ್ತಾ ಮುಂಬಯಿಯಲ್ಲಿ ನಡೆಯುವ ಭಜನೋತ್ಸವನ್ನು ನಾವೆಲ್ಲರೂ ಸೇರಿ ಯಶಸ್ವಿಗೊಳಿಸಿ ಅದರ ಕೀರ್ತಿಯನ್ನು ನಾವೆಲ್ಲರೂ ಪಡೆಯೋಣ, ಎಲ್ಲರ ಸಹಕಾರ ಇರಲಿ ಎಂದರು.

ಗೌರವ ಪ್ರಧಾನ ಕಾರ್ಯದರ್ಶಿ ರವೀಂದ್ರ ಶಾಂತಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು.
ವೇದಿಕೆಯಲ್ಲಿ ಎಸ್ ಎನ್ ಉಡುಪ, ಜಗದೀಶ್ ಭಟ್,
ದೇವು ಬಿ ಪೂಜಾರಿ, ವಿ. ಕೆ. ಸುವರ್ಣ. ರವೀಂದ್ರ ಶಾಂತಿ, ಜಯ ಎಲ್ ದೇವಾಡಿಗ ಉಪಸ್ಥಿತರಿದ್ದರು.
ಕೇಂದ್ರ ಮತ್ತು ವಲಯದ ಪದಾಧಿಕಾರಿಗಳು ಹಾಗೋ ಭಜಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ನಂತರ 5 ವಲಯದವರಿಂದ ಭಜನೆ ನಡೆಯಿತು.
ಭಾರತೀಯ ಸನಾತನ ಸಂಸ್ಕೃತಿಯ ಮೌಲ್ಯವನ್ನು ಎತ್ತಿ ಹಿಡಿದು ದಾಸ ಸಾಹಿತ್ಯವನ್ನು ಉಳಿಸಿ ಬೆಳೆಸಿ, ಮುಂಬಯಿ ನಗರದಾದ್ಯಂತ ಮನೆ ಮನೆಗಳಲ್ಲಿ ಭಕ್ತಿ ಭಜನೆಯ ಹಣತೆಯನ್ನು ಹಚ್ಚುವ ಪ್ರಯತ್ನವೇ ಈ ಭಜನಾ ಮಂಡಳಿಗಳ ಒಕ್ಕೂಟದ ಸಂಸ್ಥೆಯ ಉದ್ದೇಶವಾಗಿದೆ. ಇದೇ ಜನವರಿ 19 ರಂದು ಭಜನೋತ್ಸವ ಕಾರ್ಯಕ್ರಮವನ್ನು ಅಸಾಲ್ಪಾ ಶ್ರೀ ದತ್ತಾತ್ರೇಯ ದುರ್ಗಂಬಿಕಾ ಮಂದಿರದಲ್ಲಿ ಆಯೋಜಿಸಲಾಗಿದ್ದು ಸಮಸ್ತ ಭಜಕ ವೃಂದದವದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಜನೋತ್ಸವವನ್ನು ಯಶಸ್ವಿ ಗೊಳಿಸಬೇಕಾಗಿ ಅಧ್ಯಕ್ಷರು ಮತ್ತು ಕೇಂದ್ರ ಹಾಗೋ ವಲಯದ ಸರ್ವ ಪದಾಧಿಕಾರಿಗಳು ವಿನಂತಿಸಿದ್ದಾರೆ.