April 2, 2025
ಪ್ರಕಟಣೆ

ಬೊಯಿಸರ್ ಪಶ್ಚಿಮದ ಶ್ರೀ ಗಣೇಶ ಅಯ್ಯಪ್ಪ ಮಂದಿರದಲ್ಲಿ ಪೂಜಾ ಕಾರ್ಯಕ್ರಮ

   ✒️ ಸುದ್ದಿ ವಿವರ :    ಪಿ.ಆರ್.ರವಿಶಂಕರ್ 8483980035

ಬೊಯಿಸರ್ ಪಶ್ಚಿಮದಲ್ಲಿನ ಸಿಡ್ಕೋ ವಲಯದಲ್ಲಿನ (ರೈಲ್ವೇ ಸ್ಟೇಷನ್ ಚಿತ್ರಾಲಯ ರಸ್ತೆ) ಶ್ರೀ ಗಣೇಶ ಅಯ್ಯಪ್ಪ ಮಂದಿರದಲ್ಲಿ ಇದೇ ಬರುವ  ತಾ.18 ನೆಯ ಬುಧವಾರ 2024 ರಂದು ಸಂಜೆ  ಶ್ರೀ ಗಣೇಶ ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ಪೂಜೆಯು ವಿದ್ಯುಕ್ತವಾಗಿ ಜರಗಲಿದೆ.

    ಸಂಜೆ 6 ಗಂಟೆಯಿಂದ 8 ರ  ತನಕ ಶ್ರೀ ಜಯಶೀಲ ಗುರುಸ್ವಾಮಿಯವರ  ಉಪಸ್ಥಿತಿಯಲ್ಲಿ ಮೀರಾ ರೋಡ್ ನ ಸುಪ್ರಸಿದ್ಧ ಲಕ್ಶ್ಮೀನಾರಾಯಣ ಭಜನಾ ಮಂಡಲಿಯವರಿಂದ ಭಕ್ತಿ ಭಜನಾ ಕಾರ್ಯಕ್ರಮವಿದೆ.   8 ರಿಂದ 8.30 ರ ತನಕ ಮಹಾ ಮಂಗಳಾರತಿ ಹಾಗೂ ತೀರ್ಥಪ್ರಸಾದ ,  8.30 ರಿಂದ 8.45 ರ ತನಕ ಹರಿವರಾಸನಮ್

ಜರಗಲಿದ್ದು ಬಳಿಕ ಪ್ರಸಾದ ರೂಪದಲ್ಲಿ ಅನ್ನದಾನ ಜರಗಲಿದೆ.

   ಸರ್ವ ಭಕ್ತಾದಿಗಳ ಜೀವನದಲ್ಲಿ ಉತ್ತಮ ಆರೋಗ್ಯ , ಸಂತಸ ಹಾಗೂ ಸುಭಿಕ್ಷತೆಯ ಪ್ರಾರ್ಥನೆಗಳೊಂದಿಗೆ ಶ್ರೀ ಗಣೇಶ ಅಯ್ಯಪ್ಪ ಮಂದಿರದ ದಿವ್ಯ ಸನ್ನಿಧಿಯಲ್ಲಿ ಜರಗುವ ಈ ಪವಿತ್ರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸರ್ವ ಭಕ್ತಾಭಿಮಾನಿಗಳು ಕುಟುಂಬ ಸಮೇತ ಭಾಗವಹಿಸಿ ಕೃಪಾನುಗ್ರಹಿತರಾಗಬೇಕಾಗಿ ಆಯೋಜಕರಾದ ದಯಾನಂದ  ಶೆಟ್ಟಿ ಹಾಗೂ ಸಂತೋಷ ಸ್ವಾಮಿ ( ತುಂಗಾ ಹಾಸ್ಪಿಟಲ್ಸ್) ಇವರು ಪ್ರಕಟಣೆಯ ಮೂಲಕ ವಿನಂತಿಸಿಕೊಂಡಿದ್ದಾರೆ.

ಸುದ್ದಿ ವಿವರ : ಪಿ.ಆರ್.ರವಿಶಂಕರ್

Related posts

ಶ್ರೀ ಮಹಾವಿಷ್ಣು ಮಂದಿರ – ಡೊಂಬಿವಲಿ, ತಾ.26 ಮತ್ತು 27 ಅಕ್ಟೋಬರ್ ರಂದು 47ನೇ ವಾರ್ಷಿಕ ಭಜನಾ ಮಂಗಲೋತ್ಸವ ಮತ್ತು ಏಕಾಹ ಭಜನಾ ಕಾರ್ಯಕ್ರಮ

Mumbai News Desk

ತುಳುಕೂಟ ಫೌಂಡೇಶನ್  ಮಹಿಳಾ ವಿಭಾಗ, ಜೂನ್ 21 ರಂದು ಯೋಗ ದಿನಾಚರಣೆ ,

Mumbai News Desk

ಭಾಯಂದರ ಶ್ರೀ  ಮೂಕಾಂಬಿಕಾ ಶಾಂತ ದುರ್ಗೆಗೆ ದೇವಸ್ಥಾನ, ಎ 14 ರಂದು ವಾರ್ಷಿಕ ಮಹಾಪೂಜೆ,

Mumbai News Desk

ಜೂ 29: , ಮೈಸೂರು ಅಸೋಸಿಯೇಶನ್  ಮುಂಬಯಿ, ಅಂತರಾಷ್ಟ್ರೀಯ ಕಲಾವಿದೆ ಸ್ಮಿತಾ ಬೆಳ್ಳೂರ್ ಸಂಗೀತ ಕಾರ್ಯಕ್ರಮ

Mumbai News Desk

ಜ.14 ರಿಂದ 23ರ ತನಕ ಶ್ರೀ ಕ್ಷೇತ್ರ ಕಾಂತಾವರದ ವರ್ಷಾವಧಿ ಜಾತ್ರಾ ಮಹೋತ್ಸವ.

Mumbai News Desk

ಜ. 12ಕ್ಕೆ ಎನ್. ಪಿ. ಸುವರ್ಣ – ಪ್ರಭಾ ಸುವರ್ಣ ಅವರ ಅಭಿನಂದನಾ ಸಮಾರಂಭ.

Mumbai News Desk