
ನವಿ ಮುಂಬಯಿಯ ಕೋಪರಖೈರಣೆ, ಎನ್ಎಂಎಂಸಿ ಶಾಲಾ ಮೈದಾನದ ಹಿಂಬದಿಯ ರೂಮ್ 906 SS-III, ಇಲ್ಲಿಯ ಶ್ರೀ ಕಟೀಲು ದುರ್ಗಾಪರಮೇಶ್ವರಿ ಕಲ್ಲುರ್ಟಿ ಮಂತ್ರಾದೇವತಾ ಸಾನಿದ್ಯದಲ್ಲಿ ಪ್ರತಿ ತಿಂಗಳು
ಸಂಕ್ರಾಂತಿಯಂದು ನಡೆಯುವ ಧರ್ಮದೈವ ಕಲ್ಲುರ್ಟಿಯ ದರ್ಶನ ಸೇವೆ, ಡಿ. 15ರಂದು ಪಾತ್ರಿ ಗುರುಪ್ರಸಾದ್ ನಿಶಾ ಅವರಿಂದ ನಡೆಯಿತು.
ಭಕ್ತರು ಅಮ್ಮನ ಆಶೀರ್ವಾದ ಪಡೆದು, ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಪ್ರಶ್ನೆ ಮೂಲಕ ಕೇಳಿ, ಪ್ರಸಾದ ಸ್ವೀಕರಿಸಿದರು.




ಇಲ್ಲಿ ತಾಯಿ ಉಳ್ಳಾಲ್ಡಿ ಪ್ರಧಾನ ದೇವರಾದರೆ, ಗಣೇಶ, ನಾಗ, ತಾಯಿ ಭದ್ರಕಾಳಿ ಮತ್ತು ಧರ್ಮದೈವ ಕಲ್ಲುರ್ಟಿ, ಮಂತ್ರದೇವತೆ, ಗುಳಿಗ, ಮಂತ್ರಗುಳಿಗ ಮತ್ತು ಕೊರಜ್ಜ ಇಲ್ಲಿಯ ಪರಿವಾರ ದೈವವಾಗಿದೆ.
ದೇವಸ್ಥಾನದಲ್ಲಿ ಪ್ರತಿದಿನ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12:00 ರವರೆಗೆ ಮತ್ತು ಸಂಜೆ 5:30 ರಿಂದ 7:00 ರವರೆಗೆ ಭಕ್ತಾದಿಗಳು ಪ್ರಶ್ನೆ ಕೇಳಬಹುದು.ಪ್ರತಿ ತಿಂಗಳು ಅಮವಾಸ್ಯೆ ಪೂಜೆ, ಪಂಚಮಿ ಪೂಜೆ, ಸಂಕ್ರಾಂತಿ ಪೂಜೆ ನಡೆಯುತ್ತದೆ. ತಿಂಗಳಿಗೆ ಎರಡು ಬಾರಿ ದರ್ಶನ ಸೇವೆ ಸಂಕ್ರಾಂತಿ ದಿನ ಮತ್ತು ಪ್ರತಿ ತಿಂಗಳ ಕೊನೆಯ ಭಾನುವಾರ ಬೆಳಿಗ್ಗೆ 10:30 ಕ್ಕೆ ನಡೆಯುತದೆ. 2021 ಗುರುಪ್ರಸಾದ್ ಅವರ ಗುರು ರಮೇಶ್ ಮುಳಿಯೆ ಅವರು ದೈವಾದಿನರಾದ ಬಳಿಕ ಅವರು ನಡೆದ ಹಾದಿಯಲ್ಲಿ ಹೆಜ್ಜೆ ಹಾಕುತ್ತ, ದೇವಸ್ಥಾನವನ್ನು ಗುರುಪ್ರಸಾದ್ ನಿಶಾ ಮುನ್ನಡೆಸುತ್ತಿರುವರು.