26.4 C
Karnataka
April 2, 2025
ಮುಂಬಯಿ

ಮೀರಾರೋಡಿನಲ್ಲಿ ಗೆಜ್ಜೆ ಗಿರಿ ಮೇಳದವರಿಂದ……ಎಡ್ಮೂರ ಮುಗೇರ ಸತ್ಯೊಲು…ಯಕ್ಷಗಾನ ಪ್ರದರ್ಶನ.



ಕಲಾವಿದರಿಗೆ ಪ್ರೇಕ್ಷಕರೇ ಸ್ಪೂರ್ತಿ…. ಸಂಪತ್ ಶೆಟ್ಟಿ.

(ಚಿತ್ರ ವರದಿ ಉಮೇಶ್ ಕೆ. ಅಂಚನ್)

ಸನಾತನ ಧರ್ಮ ಸಂಸ್ಕೃತಿಯ ರಕ್ಷಣೆಯನ್ನು ನಾವು ಮಾಡಬೇಕು. ಅಂತಹ ಕೆಲಸ ಯಕ್ಷಗಾನದಿಂದ ಆಗುತ್ತಿದೆ. ಈ ಯಕ್ಷಗಾನದಿಂದ ಯುವ ಜನಾಂಗಕ್ಕೆ ನಮ್ಮ ಧರ್ಮ ಸಂಸ್ಕೃತಿಯ ಆರಿವು ಆಗಲು ಸಾಧ್ಯ. ಯಾವುದೇ ಕಲಾರಂಗಕ್ಕೆ ಪ್ರೇಕ್ಷಕರ ಸಹಕಾರ ಅಗತ್ಯ. ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿದ್ದಲ್ಲಿ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಸ್ಪೂರ್ತಿ, ಉತ್ಸಾಹ ಬರುತ್ತದೆ.ಯಕ್ಷಗಾನಕ್ಕೆ ಪ್ರೋತ್ಸಾಹವನ್ನು ನೀಡಿ ಅದನ್ನು ಬೆಳೆಸುವ ಕಾರ್ಯ ಮಾಡೋಣ ಎಂದು ಸಂಪತ್ ಶೆಟ್ಟಿ ಪಂಜದಗುತ್ತು ಹೇಳಿದರು.

ಅವರು ಡಿ.10 ರಂದು ಮೀರಾರೋಡ್ ಪೂರ್ವದ ಸಾಯಿಬಾಬಾ ನಗರದ ಸೈಂಟ್ ಥಾಮಸ್ ಚರ್ಚ್ ಹಾಲ್ ನಲ್ಲಿ ಸಂಘಟಕರಾದ ದಿನೇಶ್ ಎಸ್ ಸುವರ್ಣರವರ ಮುಂದಾಳತ್ವದಲ್ಲಿ ದಿ. ಸುಂದರ ಸುವರ್ಣ ಹಾಗೂ ದಿ. ಸಂಜೀವ ಪೂಜಾರಿಯವರ (ಸ್ಮರಣಾರ್ಥ)ವೇದಿಕೆಯಲ್ಲಿ ಗೆಜ್ಜೆ ಗಿರಿ ಮೇಳದವರಿಂದ ಪ್ರದರ್ಶನಗೊಂಡ ‘ಎಡ್ಮೂರ ಮುಗೇರ ಸತ್ಯೊಲು’ ಎಂಬ ಯಕ್ಷಗಾನ ಪ್ರದರ್ಶನದ ಮಧ್ಯೆ ಅತಿಥಿಯಾಗಿ ಆಗಮಿಸಿದ್ದ ಶಾಸಕ ನರೇಂದ್ರ ಎಲ್. ಮೆಹತಾರವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮೀರಾ ಭಾಯಂದರ್ ಪ್ರದೇಶದವು ವಿವಿಧ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮ ನೀಡುವಲ್ಲಿ ಹೆಸರು ಪಡೆದಿದೆ. ಜಾತಿ ಮತ ಬೇದವಿಲ್ಲದೆ ಎಲ್ಲಾ ಜನರು ಪ್ರತೀಯೊಂದು ಕಾರ್ಯಕ್ರಮ ದಲ್ಲಿ ಭಾಗವಹಿಸುತ್ತಾರೆ. ಪ್ರಸ್ತುತ ವರ್ಷದ ರಾಜ್ಯಸಭಾ ಚುನಾವಣೆಯಲ್ಲಿ ತನ್ನನ್ನು ಬಹುಮತದಿಂದ ಆರಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿ ತಾನು ಚುನಾವಣಾ ಸಮಯದಲ್ಲಿ ಕೊಟ್ಟ ಭರವಸೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುತ್ತೇನೆ ಎಂದರು.

ಬಂಟರ ಸಂಘದ ಮೀರಾಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾದ್ಯಕ್ಷ ಕೊಟ್ರಪಾಡಿಗುತ್ತು ರವೀಂದ್ರ ಶೆಟ್ಟಿಯವರು ಮಾತನಾಡಿ
ನಮ್ಮ ನಾಡಿನ ಶ್ರೇಷ್ಠ ಕಲೆ ಯಕ್ಷಗಾನವನ್ನು ಉಳಿಸಿ ಬೆಳೆಸುವ ಪ್ರಯತ್ನ ನಮ್ಮದಾಗಬೇಕು. ಕಲಾವಿದರಿಗೆ ನಮ್ಮಿಂದ ಆರ್ಥಿಕ ಸಹಾಯ ನೀಡಲಾಗದಿದ್ದರೂ ಯಕ್ಷಗಾನವನ್ನು ವೀಕ್ಷಿಸಿಯಾದರೂ ಅವರನ್ನು ಪ್ರೋತ್ಸಾಹಿಸ ಬೇಕು ಎಂದರು.
ಈ ಸಂಧರ್ಭದಲ್ಲಿ ಖ್ಯಾತ ಪುರೋಹಿತರು ಹಾಗೂ ವಾಸ್ತುತಜ್ಞ ಅಶೋಕ್ ಪುರೋಹಿತ್, ಮೀರಾಭಾಯಂದರ್ ಜಿಲ್ಲಾ ಬಿಜೆಪಿ ಉಪಾದ್ಯಕ್ಷೆ ರಂಜನಾ ಕಟಾವಟೆ ಹಾಗೂ ಪ್ರಸ್ತುತ ವರ್ಷದಲ್ಲಿ 18ನೇ ಬಾರಿ ಅಯ್ಯಪ್ಪ ಯಾತ್ರೆ ಮಾಡಲಿರುವ ಅಶೋಕ್ ಪೂಜಾರಿ ಸ್ವಾಮಿಯವರನ್ನು ಸನ್ಮಾನಿಸಲಾಯಿತು. ಗೆಜ್ಜೆ ಗಿರಿ ಯಕ್ಷಗಾನ ಮೇಳದ ಪರವಾಗಿ ದಿನೇಶ್ ಎಸ್. ಸುವರ್ಣ ದಂಪತಿಗಳನ್ನು, ಅಜಿತ್ ಶೆಟ್ಟಿ ಬೆಳ್ಮಣ್, ಯಕ್ಷಗಾನದ ಹಾಸ್ಯ ಕಲಾವಿದ ಕಡಬ ದಿನೇಶ್ ರೈ ಹಾಗೂ ಯಕ್ಷಗಾನ ಮೇಳದ ಮುಂಬಯಿ ಸಂಚಾಲಕ ನವೀನ್ ಪಡುಇನ್ನ ರವರನ್ನು ಗೌರವಿಸಲಾಯಿತು. ಬಾಲಪ್ರತಿಭೆಗಳಾದ ಕಾರ್ತಿಕ್ ಮುಚ್ಚೂರು, ಸಹನಾ ಮಚ್ಚೂರು, ಕುಮಾರಿ ವಂಶಿ ಹಾಗೂ ಶ್ರೇಯಸ್ ಶೆಟ್ಟಿಯವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕಾರ್ಯಕ್ರಮವನ್ನು ಶಿಲ್ಪಾ ಪೂಜಾರಿ ನಿರೂಪಿಸಿದರು. ನಿತೇಶ್ ಪೂಜಾರಿ ಸಹಕರಿಸಿದರು. ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಮೀರಾಭಾಯಂದರ್ ನಗರಪಾಲಿಕೆಯ ಮಜಿ ನಗರ ಸೇವಕ ಅರವಿಂದ್ ಎ. ಶೆಟ್ಟಿ,ಉದ್ಯಮಿ ಉಮೇಶ್ ಎಸ್. ಕರ್ಕೇರ, ಬಿಲ್ಲವರ ಅಸೋಸಿಯೇಷನ್ ಮೀರಾರೋಡ್ ಸ್ಥಳೀಯ ಕಚೇರಿಯ ಕಾರ್ಯಾದ್ಯಕ್ಷ ಸುಭಾಶ್ಚಂದ್ರ ಕರ್ಕೇರ ಉಪಸ್ಥಿತರಿದ್ದರು.

ಸನ್ಮಾನಿತರ ಮಾತು.


ಮೀರಾ ರೋಡ್ ಪರಿಸರದ ಜನರು ಧರ್ಮಿಷ್ಠರು. ಧರ್ಮ ಕಾರ್ಯದೊಂದಿಗೆ ನಮ್ಮ ಸಂಸ್ಕೃತಿ ಕಲೆಗೆ ಪ್ರೋತ್ಸಾಹವನ್ನು ನೀಡುತ್ತಾ ಬಂದವರು. ಹಾಗಾಗಿ ಈ ಪರಿಸರದಲ್ಲಿ ನಿರಂತರ ಕಲೆ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಕಾರ್ಯಕ್ರಮಗಳು ನಡೆಯುತ್ತಾ ಇದೆ. ಸಮಾಜವನ್ನು ಒಂದೆಡೆ ಸೇರಿಸುವ ಕಾರ್ಯವನ್ನು ಯಕ್ಷಗಾನ ಮಾಡುತ್ತದೆ. ಸಮಾಜಕ್ಕೆ ಸಂಸ್ಕೃತಿ ಸಂಸ್ಕಾರವನ್ನು ಮುಟ್ಟಿಸುವ ಕೆಲಸವನ್ನು ಯಕ್ಷಗಾನ ಕಲಾವಿದರು ಮಾಡುತ್ತಿದ್ದಾರೆ. ನಾವು ಕಲೆಯೊಂದಿಗೆ ಕಲಾವಿದರನ್ನು ಪ್ರೋತ್ಸಾಹಿಸಿ ಗೌರವಿಸಬೇಕು. ಸಂಘಟಕರು ,ಸಮಾಜ ಸೇವಕರು, ಸಾಧಕರು ಕಲಾವಿದರನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಅಂತಹ ಮಹತ್ತರವಾದ ಕಾರ್ಯ ಇಂದಿನ ವೇದಿಕೆಯಲ್ಲಿ ಆಗಿದೆ. ಮಕ್ಕಳನ್ನು ಪವಿತ್ರವಾದ ಯಕ್ಷಗಾನ ಕಾರ್ಯಕ್ರಮಕ್ಕೆ ಕರೆ ತರಬೇಕು. ಇದರಿಂದ ಮಕ್ಕಳ ಮನಸ್ಸು ವಿಕಸನ ಆಗುವುದರ ಜೊತೆಗೆ ಪರಿವರ್ತನೆ ಆಗಲು ಸಾಧ್ಯವಿದೆ. ನೀವು ಕೊಟ್ಟ ಸನ್ಮಾನವನ್ನು ಸಂತೋಷದಿಂದ ಸ್ವೀಕರಿಸಿದ್ದೇನೆ
(ಖ್ಯಾತ ಅಂತರಾಷ್ಟ್ರೀಯ ಪುರೋಹಿತರು, ವಾಸ್ತು ತಜ್ಞರು, ಜ್ಯೋತಿಷಿ ಅಶೋಕ್ ಪುರೋಹಿತ್).


ಇಂದಿನ ಸನ್ಮಾನವು ನನ್ನ ಕಾರ್ಯ ಚಟುವಟಿಕೆಗಳಿಗೆ ಸಮಾಜಸೇವೆಗೆ ಉತ್ತೇಜನ ನೀಡಿದೆ.ಸಮಾಜಕ್ಕೆ ಅಳಿಲ ಸೇವೆಯನ್ನು ಸಲ್ಲಿಸುತ್ತಿದ್ದೇನೆ. ಸನ್ಮಾನದಿಂದ ಸಂತೋಷವಾಗಿದೆ. ನಿಮ್ಮೆಲ್ಲರ ಪ್ರೀತಿಯ ಆಶೀರ್ವಾದ ಸದಾ ನನ್ನ ಮೇಲಿರಲಿ
ರಂಜನಾ ಕಟವಟೆ. ಮೀರಾಭಾಯಂದರ್ ಜಿಲ್ಲಾ ಬಿಜೆಪಿ ಉಪಾದ್ಯಕ್ಷೆ)

Related posts

ಬಂಟರ ಸಂಘ ಮುಂಬಯಿ, ವಸಾಯಿ-ಡಹಾಣು ಪ್ರಾದೇಶಿಕ ಸಮಿತಿಯಿಂದ ವಿದ್ಯಾರ್ಥಿವೇತನ,   ಆರ್ಥಿಕ ನೆರವು ವಿತರಣೆ,

Mumbai News Desk

ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ 79 ನೇ ವಾರ್ಷಿಕ ಮಹಾಪೂಜೆ, ಧಾರ್ಮಿಕ ಸಭೆ

Mumbai News Desk

ಕುಲಾಲ ಸಂಘ ಮುಂಬಯಿ ; 93ನೇ ವಾರ್ಷಿಕ ಮಹಾಸಭೆ

Mumbai News Desk

ಬಂಟರ ಸಂಘ ಮುಂಬಯಿ, ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ;ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Mumbai News Desk

ಬಂಟರ ಸಂಘ ಭಿವಂಡಿ- ಬದ್ಲಾಪುರ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದಿಂದ ಆಷಾಢ ವೈಭವ ಮತ್ತು ಅಡುಗೆ ಸ್ಪರ್ಧೆ

Mumbai News Desk

ತುಳು ಸಂಘ ಬೊರಿವಲಿ, ಮಹಿಳಾ ವಿಭಾಗದಿಂದ ಅರಸಿನ ಕುಂಕುಮ

Mumbai News Desk