32 C
Mumbai
March 7, 2026
Mumbai News Kannada
ಪ್ರಕಟಣೆ

ನಟನಾ ನೃತ್ಯ ಅಕಾಡೆಮಿ ಪೊವಾಯಿ, ಡಿ 22 ರಂದು 12ನೇ ವಾರ್ಷಿಕೋತ್ಸವ





ಮುಂಬಯಿ, ಡಿ. 19 – ಖ್ಯಾತ ನೃತ್ಯ ಕಲಾವಿದೆ ವಿದೂಶಿ ಗೀತಾ  ಗೀತಾ ವೇದ್ (ಸಾಲ್ಯಾನ್) ಅವರ ಸ್ಥಾಪಿಸಿರುವ ನಟನಾ ನೃತ್ಯ ಅಕಾಡೆಮಿ ಪೊವಾಯಿಯ ಇದರು12ನೇ ವಾರ್ಷಿಕೋತ್ಸವ ಸಮಾರಂಭವು ಡಿ. 22 ರವಿವಾರ ದಂದು  ಮಧ್ಯಾಹ್ನ 2.30 ರಿಂದ ನಹರ್ ಇಂಟರ್‌ನ್ಯಾಶನಲ್ ಸ್ಕೂಲ್ ಚಾಂದಿವಾಲಿ ಪೊವೈ ಇಲ್ಲಿ ನಡೆಯಲಿದೆ. 

ನಟನಾ ನೃತ್ಯ ಅಕಾಡೆಮಿಯ ಉದಯೋನ್ಮುಖ ಎಳೆಯ ಕಲಾವಿದರು ವಿವಿಧ ನೃತ್ಯಗಳಿಂದ ತಮ್ಮ ಪ್ರತಿಭೆಯನ್ನು ಪ್ರದರ್ಶಸಲಿದ್ದಾರೆ.

ಗೀತಾ ವೇದ್ ಸ್ಥಾಪಿಸಿದ ನಟನಾ ನೃತ್ಯ ಅಕಾಡೆಮಿ ಪೊವಾಯಿ, ಮರೋಲ್ ಮತ್ತು ನಹುರ್‌ನಲ್ಲಿ ತನ್ನ ತರಗತಿಗಳನ್ನು ಹೊಂದಿದೆ. ಇವರು ಮುಂಬೈನ ನಳಂದ ನೃತ್ಯ ಕಲಾ ಮಹಾವಿದ್ಯಾಲಯದಿಂದ ಭರತನಾಟ್ಯದಲ್ಲಿ ಲಲಿತಕಲೆಗಳ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಪ್ರಸ್ತುತ ಪವಾರ್ ಪಬ್ಲಿಕ್ ಸ್ಕೂಲ್ ಭಾಂಡುಪ್‌ನಲ್ಲಿ ಕಾರ್ಯನಿರತರಾಗಿದ್ದಾರೆ. 

ಮುಂಬಯಿಯ ನಲಂದಾ ನೃತ್ಯ ಕಲಾ ಮಹಾವಿದ್ಯಾಲಯದಿಂದ  ಭರತ ನಾಟ್ಯವನ್ನು ಅಭ್ಯಾಸ ಮಾಡಿ ಇದೀಗ ಪವರ್‌ ಪಬ್ಲಿಕ್ ಶಾಲೆಯಲ್ಲಿ ನೃತ್ಯ ಶಿಕ್ಷಕಿಯಾಗಿ ದುಡಿಯುತ್ತಿದ್ದಾರೆ. ದೇಶದ ವಿವಿದೆಡೆ ನೃತ್ಯವನ್ನು ಪ್ರದರ್ಶಿಸಿ ಜನಪ್ರಿಯರಾಗಿದ್ದಾರೆ.

ಮಂಗಳೂರಿನ ಕುಲಶೇಖರದ ಶ್ರೀ ವೀರ ನಾರಾಯಣ ಕ್ಷೇತ್ರದ ಬ್ರಹ್ಮಕಳಸ ವೇದಿಕೆಯಲ್ಲಿ ಅಕಾಡೆಮಿಯ ವಿದ್ಯಾರ್ಥಿಗಳು  ನೃತ್ಯ ಪ್ರದರ್ಶನ ‘ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ . ಮುಂಬೈಯ ವಿವಿಧ ಉಪನಗರಗಳಲ್ಲಿ ಇವರ ಶಿಷ್ಯರು ನೃತ್ಯ ಕಾರ್ಯಕ್ರಮವನ್ನು ನೀಡಿದ್ದಾರೆ, ಗೀತಾ ಸಾಲ್ಯಾನ್ ಅವರು ನೂರಾರು ಮಕ್ಕಳನ್ನು ನೃತ್ಯ ಕಲಾವಿದರನ್ನಾಗಿ ಮಾಡಿರುವರು,



Related posts

ಥಾಣೆಯಲ್ಲಿ ಶ್ರೀ ಕ್ಷೇತ್ರ ಒಡಿಯೂರಿನ  ಶ್ರೀ ಗುರುದೇವಾನಂದ ಸ್ವಾಮೀಜಿಯವರಿಗೆ ಗುರುವಂದನೆ, ಸತ್ಸಂಗ.

Mumbai News Desk

ಕಾಂದಿವಲಿ ಪೂರ್ವ ಶ್ರೀ ಸದ್ಗುರು ಶನೀಶ್ವರ ಸೇವಾ ಸಮಿತಿನ 30 ರಂದು 50 ನೇ ವಾರ್ಷಿಕ ಶ್ರೀ ಶನೀಶ್ವರ ಗ್ರಂಥ ಪಾರಾಯಣ, ಮಹೋತ್ಸವ ಮತ್ತು ಅನ್ನದಾನ

Mumbai News Desk

ಜ. 22 ರಂದು ಡೊಂಬಿವಲಿಯ ಶ್ರೀ ಜಗದಂಬ ಮಂದಿರದಲ್ಲಿ ಅಯೋಧ್ಯ ಮೂರ್ತಿ ಪ್ರತಿಷ್ಠೆಯ ಅಂಗವಾಗಿ ವಿಶೇಷ ಪೂಜೆ

Mumbai News Desk

ಅ.9,ಭಾಯಂದರ್ ಬಿಲ್ಲವರ ಅಸೋಸಿಯೇಶನಿನ ಸ್ಥಳೀಯ ಕಚೇರಿಯ ವತಿಯಿಂದ ‘ಆಟಿಡೊಂಜಿ ಕೂಟ’ ಕಾರ್ಯಕ್ರಮ.

Mumbai News Desk

ನೆಲ್ಲಿಕಾರು ಶಾಲೆಗೆ ಶತಮಾನೋತ್ಸವದ ಸಂಭ್ರಮ, ಹಳೆ ವಿದ್ಯಾರ್ಥಿಗಳಿಂದ ಬರಹ, ಭಾವಚಿತ್ರ ಆಹ್ವಾನ.

Mumbai News Desk

ಎ. 12 ರಿಂದ 21- ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ, ಬಿರ್ಲಾಗೇಟ್, ಶಹಾಡ್, 63 ನೇ, ಮಹಾಪೂಜೆ

Mumbai News Desk