24.7 C
Karnataka
April 3, 2025
ಮುಂಬಯಿ

ಸಾಂತಾಕ್ರೂಸ್ ಶ್ರೀ ಮಂತ್ರದೇವಿ ದೇವಸ್ಥಾನದ ವಾರ್ಷಿಕ ಮಹಾಪೂಜೆ ಸಂಪನ್ನ,



ಮುಂಬಯಿ, ಡಿ.19. ಉಪನಗರ ಸಾಂತಾಕ್ರೂಸ್ (ಪ.)ನ ಮಿಲನ್‌ ಸಬ್‌ವೇ ರೋಡ್, ಆಶಾ ಚಾಳ್‌ನಲ್ಲಿ ಮಂತ್ರ ದೇವಿಯ ಆರಾಧಕ, ಧಾರ್ಮಿಕ ಚಿಂತಕ ಕುತ್ಯಾರು ವಾಸುದೇವ ಬಂಜನ್ ಮಾರ್ಗದರ್ಶನದಲ್ಲಿ ಸ್ಥಾಪಿಸಿರುವ ಶ್ರೀಮಂತ್ರ ದೇವಿ ಚಾರಿಟೇಬಲ್ ಟ್ರಸ್ಟ್ ನ ಆಡಳಿತದಲ್ಲಿ ಇರುವ ಶ್ರೀಮಂತ್ರ ದೇವಿ ಕ್ಷೇತ್ರದ ವಾರ್ಷಿಕ ಮಹಾಪೂಜೆಯು ಡಿ17. ಮಂಗಳವಾರದಂದು ಬೆಳಿಗ್ಗೆಯಿಂದ ಸಂಜೆವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ , ದೇವಿ ಆವೇಶದ ಸೇವೆಯೊಂದಿಗೆ ಭಕ್ತಿ ಸಂಭ್ರಮದೊಂದಿಗೆ ನಡೆಯಿತು,.

ಅಂದು ಶ್ರೀದೇವಿಗೆ ನವಕ ಪ್ರಧಾನ ಹೋಮ, ಕಲಶಾಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ಪರಿವಾರ ದೇವತೆಗಳಿಗೆ ಹೋಮ- ಹವನ, ಅಮ್ಮನವರಿಗೆ ಗದ್ದಿಗೆ ಏರಿಸಿ ಶ್ರೀದೇವಿಯ ಆವೇಶದೊಂದಿಗೆ ಪ್ರಸಾದ ವಿತರಣೆ ನಡೆಯಿತು.

ಮಧ್ಯಾಹ್ನ ಮಹಾ ಮಂಗಳಾರತಿ ನಡೆದು ಬಳಿಕ ಸಂಜೆ ತನಕ ಮಹಾ ಅನ್ನದಾನ ಸೇವೆ ನಡೆಯಿತು.

ಈ ಪುಣ್ಯ ಕಾರ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಶ್ರೀದೇವರ ದರ್ಶನ ಪಡೆದರು,
ಕ್ಷೇತ್ರದ ಧಾನಿಗಳನ್ನು ,ವಿಶೇಷ ಅತಿಥಿಗಳನ್ನು ಮೊತ್ತೇಸರರಾದ ವಾಸುದೇವ ಬಂಜನ್ (ಅರ್ಚಕರು), ಅಧ್ಯಕ್ಷರು, ಟ್ರಸ್ಟಿ, ಮಧ್ಯಸ್ಥರು, ಕಾರ್ಯಕಾರಿ ಸಮಿತಿದರು, ಮಹಿಳಾ ವಿಭಾಗದ ಸದಸ್ಯರು ಗೌರವಿಸಿದರು.
ಈ ಸಂಧರ್ಭದಲ್ಲಿ ದೇವಸ್ಥಾನದಲ್ಲಿ ಸುದೀರ್ಘ ಕಾಲದಿಂದ ಸಕ್ಸೋ ಫೋನ್, ಚಂಡೆ ಮದ್ದಳೆ ವಾದನದ ಸೇವೆ ಕಾರ್ಯವನ್ನು ನೀಡುತ್ತಿರುವ ದಿನೇಶ್ ಕೋಟ್ಯಾನ್ ಜೇರಿ ಮೇರಿ ಇವರಿಗೆ ಬಂಗಾರದ ಪದಕ ದೊಂದಿಗೆ ಮಹಾಪ್ರಸಾದವನ್ನು ನೀಡಿ ಗೌರವಿಸಲಾಯಿತು.

Related posts

ಕುಲಾಲ ಸಂಘ ಮುಂಬಯಿ ನವರಾತ್ರಿ ಉತ್ಸವ.ದುರ್ಗಾ ಪೂಜೆ, ಗರ್ಬಾ ನೃತ್ಯ

Mumbai News Desk

ಸ. ಹಿ. ಪ್ರಾ. ಶಾಲೆ ಉಳಾಯಿಬೆಟ್ಟು ಆಶ್ರಯದಲ್ಲಿ ಮಕ್ಕಳ ಬಹುಭಾಷಾ ನಾಟಕೋತ್ಸವ

Mumbai News Desk

ಶ್ರೀ ಅಯ್ಯಪ್ಪ ಸೇವಾ ಸಮಿತಿ, ಕಿಸಾನ್ ನಗರ ಥಾಣೆ ಇವರ ಇರುಮುಡಿ ಪೂಜೆ ಸಂಪನ್ನ

Mumbai News Desk

ಮುಂಬೈ ಗಿರ್ ಗಾಂವ್ ನಲ್ಲಿ  “ಗುಡಿಪಾಡ್ವಾ”  ಹಿಂದೂ ನವ ವರ್ಷಾಚರಣೆಯ ಸಂಭ್ರಮ.

Mumbai News Desk

ಸಾಯನ್,ಗೋಕುಲ ಶ್ರೀ ಗೋಪಾಲಕೃಷ್ಣ ದೇವರ ಪ್ರತಿಷ್ಠಾಪನಾ ದಿನ

Mumbai News Desk

ಶ್ರೀ ಮಹಾ ವಿಷ್ಣು ಮಂದಿರ ಡೊಂಬಿವಲಿ, ಇದರ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮ

Mumbai News Desk