ಮುಂಬಯಿ,ಡಿ.17- ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿ(ರಿ) ಪೋರ್ಟ್ ಇದರ 80 ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಹಾಗೂ ಶ್ರೀ ಶನೀಶ್ವರ ಮಹಾಪೂಜೆಯು ಡಿ.21ರಂದು ಶನಿವಾರ ಖಾನ್ಜಿ ಖೇತ್ಸಿ ಸಭಾಗೃಹ ,ಮಿಂಟ್ ರೋಡ್, ಪೋರ್ಟ್ ಇಲ್ಲಿ ಜರಗಲಿದೆ. ಅಂದು ಬೆಳಿಗ್ಗೆ 6.00 ರಿಂದ 7.30 ಗಣ ಹೋಮ ಮತ್ತು ಪ್ರಾರ್ಥನೆ ,9.00 ರಿಂದ 10.30 ರ ತನಕ ಹರೀಶ್ ಶಾಂತಿ ಹೆಜಮಾಡಿಯವರ ಪೌರೋಹಿತ್ಯದಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆ, 10.30 ರಿಂದ 11.30 ರ ವರೆಗೆ ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿ ಮತ್ತು ವಿದ್ಯಾದಾಹಿನಿ ಭಜನಾ ಮಂಡಳಿ ಪೋರ್ಟ್ ಇವರಿಂದ ಭಜನೆ.11.30 ರಿಂದ 12.00 ಪ್ರಧಾನ ಅರ್ಚಕರಾದ ಸತೀಶ್ ಕೋಟ್ಯಾನ್ ಅವರಿಂದ ಶ್ರೀ ಶನೀಶ್ವರ ಕಲಶ ಪ್ರತಿಷ್ಠಾಪನೆ,12 ಗಂಟೆಗೆ ದೀಪ ಪ್ರಜ್ವಲನೆಯನ್ನು ಅಂತರಾಷ್ಟ್ರೀಯ ಖ್ಯಾತಿಯ ಪುರೋಹಿತರು, ಜ್ಯೋತಿಷಿ, ವಾಸ್ತುತಜ್ಞರು
ಅಶೋಕ್ ಪುರೋಹಿತ್, ಸಮಾಜ ಸೇವಕ
ಸದಾನಂದ ಕೆ ಅಂಚನ್, ಬಿಲ್ಲವರ ಅಸೋಸಿಯೇಷನ್ ಡೊಂಬಿವಲಿ ಸ್ಥಳೀಯ ಕಚೇರಿ ಕಾರ್ಯಾಧ್ಯಕ್ಷ ಶ್ರೀಧರ್ ಬಿ. ಅಮೀನ್ ಇವರು ಮಾಡಲಿರುವರು.
ಮಧ್ಯಾಹ್ನ 12:30 ರಿಂದ ಶ್ರೀ ಮಹಾವಿಷ್ಣು ಮಂದಿರ( ಮುಂಬ್ರಾ ಮಿತ್ರ ಭಜನಾ ಮಂಡಳಿ ಡೊಂಬಿವಲಿ) ಇವರಿಂದ ಕುಣಿತ ಭಜನೆ ನಡೆಯಲಿದೆ.
ಮಧ್ಯಾಹ್ನ 12.30 ರಿಂದ ಅನ್ನಸಂತರ್ಪಣೆಯು ಅಭಿಷೇಕ್ ಸತೀಶ್ ಕೋಟ್ಯಾನ್ ಹಾಗೂ ಡಾ. ಭವ್ಯ ಅಭಿಷೇಕ್ ಕೋಟ್ಯಾನ್ ಯುಎಸ್ ಎ ಇವರ ಸೇವೆಯ ರೂಪದಲ್ಲಿ ಜರಗಲಿದೆ. ಮಧ್ಯಾಹ್ನ 1.30 ರಿಂದ ಸಂಜೆ 5.30 ರ ತನಕ ಶ್ರೀ ಶನೀಶ್ವರ ಗ್ರಂಥ ಪಾರಾಯಣ ಹಾಗೂ ಮಹಾಪೂಜೆಯು ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ನಡೆಯಲಿದೆ.ಸಂಜೆ 5:30 ರಿಂದ 7.30 ರ ತನಕ ಧಾರ್ಮಿಕ ಸಭೆಯು ಜರಗಲಿದ್ದು ಆಶೀರ್ವಚನವನ್ನು ಶ್ರೀ ಉಮಾಮಹೇಶ್ವರಿ ದೇವಸ್ಥಾನ ಜೆರಿಮೆರಿ ಪ್ರಧಾನ ಅರ್ಚಕರು ಎಸ್ ಎನ್ .ಉಡುಪ ನೀಡಲಿದ್ದಾರೆ.
ಅಧ್ಯಕ್ಷತೆಯನ್ನು ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿ(ರಿ) ಇದರ ಅಧ್ಯಕ್ಷ ರವಿ ಎಲ್. ಬಂಗೇರ ವಹಿಸಿಕೊಳ್ಳಲಿದ್ದಾರೆ. ಅತಿಥಿಗಳಾಗಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಉಪಾಧ್ಯಕ್ಷ ಹರೀಶ್ ಡಿ ಸಾಲಿಯಾನ್ ಬಜಗೋಳಿ,ಸ್ಟಕ್ಚರಲ್ ಇಂಜಿನಿಯರ್ ಶ್ರೀ ಸುಧಾಕರ್ ಪೂಜಾರಿ, ಅಭ್ಯುದಯ್ ಕೋ ಆಪರೇಟಿವ್ ಬ್ಯಾಂಕಿನ ಮಾಜಿ ಆಡಳಿತ ನಿರ್ದೇಶಕರು ಪುನೀತ್ ಕುಮಾರ್ ಶೆಟ್ಟಿ, ಸಮಾಜ ಸೇವಕರು ರಾಘವೇಂದ್ರ ಕಾಪು, ಶ್ರೀ ಭುವನೇಶ್ವರಿ ಸೇವಾ ಸಮಿತಿ ಪೋರ್ಟ್ ಅಧ್ಯಕ್ಷರು ಡಾ. ಪ್ರಕಾಶ್ ಮೂಡುಬಿದ್ರಿ ಇವರೆಲ್ಲ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಶ್ರೀ ನಾರಾಯಣ ಬಿ. ಸಾಲಿಯಾನ್ ಸ್ಮರಣಾರ್ಥ ಪ್ರಶಸ್ತಿಯನ್ನು ಶ್ರೀ ಭುವನೇಶ್ವರಿ ಸೇವಾ ಸಮಿತಿ ಪೋರ್ಟ್ ಇದರ ಧರ್ಮದರ್ಶಿ ರಾಜೇಶ್ ಭಟ್ ಅವರಿಗೆ ಪ್ರಧಾನಿಸಲಾಗುವುದದು. ಹಾಗೂ ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ ಹಿರಿಯ ಸದಸ್ಯ
ಸತೀಶ್ ಐ ಪೂಜಾರಿ ಎಲ್ಲೂರು ಇವರನ್ನು ಸನ್ಮಾನಿಸಲಾಗುವುದು. ಧಾರ್ಮಿಕ ಸಭೆಯ ಬಳಿಕ ಮಹಾಮಂಗಳಾರತಿ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ. ಈ ಧಾರ್ಮಿಕ ಉತ್ಸವದಲ್ಲಿ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಶನಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿ (ರಿ) ಗೌರವಾಧ್ಯಕ್ಷರು ಹರೀಶ್ ಜಿ. ಅಮೀನ್,ಅಧ್ಯಕ್ಷರು
ರವಿ.ಎಲ್ . ಬಂಗೇರ ,ಉಪಾಧ್ಯಕ್ಷರು ವಿಶ್ವನಾಥ್ ಭಂಡಾರಿ, ಗೌ. ಪ್ರ. ಕಾರ್ಯದರ್ಶಿ ಶರತ್ ಜಿ. ಪೂಜಾರಿ ಪಡುಬೆಳ್ಳೆ, ಗೌರವ ಕೋಶಾಧಿಕಾರಿ ಪ್ರಸಾದ್ . ಎಸ್ ಕರ್ಕೇರ, ಧಾರ್ಮಿಕ ಸಲಹೆಗಾರ ಜೆ.ಜೆ. ಕೋಟ್ಯಾನ್ , ಕಾನೂನು ಸಲಹೆಗಾರ ನ್ಯಾಯವಾದಿ ಸುದೇಶ್ ಪೂಜಾರಿಯವರು ವಿನಂತಿಸಿಕೊಂಡಿದ್ದಾರೆ.
