ಮೀರಾ ರೋಡ್ ಪೂರ್ವ ಭಾರತಿ ಪಾರ್ಕ್ ಬಳಿಯ ಶ್ರೀ ಅಯ್ಯಪ್ಪ ಭಕ್ತ ಮಂಡಳಿಯ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ ಡಿ. 22ರ, ಆದಿತ್ಯವಾರ, ಶ್ರೀ ಲಕ್ಷ್ಮಿ ನಾರಾಯಣ ಭಜನಾ ಸಮಿತಿಯ ಸಂಚಾಲಕತ್ವದ ಶ್ರೀ ಲಕ್ಷ್ಮಿನಾರಾಯಣ ಭಜನಾ ಮಂದಿರದಲ್ಲಿ ಜರಗಲಿದೆ.
ಕಾರ್ಯಕ್ರಮ :
ಅಂದು ಬೆಳಿಗ್ಗೆ ಆರು ಗಂಟೆಗೆ ಪುರೋಹಿತರಾದ ಸಾಣೂರು ಸಾತಿಂಜ ಜನಾರ್ದನ್ ಭಟ್ ಅವರ ಪೌರೋಹಿತ್ಯದಲ್ಲಿ ಗಣ ಹೋಮ, 9:30 ರಿಂದ ಶ್ರೀ ಲಕ್ಷ್ಮಿನಾರಾಯಣ ಭಜನಾ ಸಮಿತಿಯ ಸದಸ್ಯರಿಂದ ಭಜನೆ, 11.30ಕ್ಕೆ ಅರ್ಚನೆ, 12 ಮಧ್ಯಾಹ್ನ ಗಂಟೆಗೆ ಪಡಿಪೂಜೆ, 12.30ಕ್ಕೆ ಮಹಾ ಮಂಗಳಾರತಿ, ಗಂಟೆ ಒಂದರಿಂದ ತೀರ್ಥ- ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ.
ಸಂಜೆ 6 ಗಂಟೆಯಿಂದ ಬ್ರಹ್ಮ ಬಾಲಾಂಡಿ ತುಳು ಯಕ್ಷಗಾನ – ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಕಲಾಮಿತ್ರ ಮಂಡಳಿ ಸಾಕಿನಾಕ ಇದರ ಕಲಾವಿದರಿಂದ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಅಯ್ಯಪ್ಪ ಮಹಾಪೂಜೆಯಲ್ಲಿ ಭಾಗವಹಿಸಿ ಶ್ರೀ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಶ್ರೀ ಅಯ್ಯಪ್ಪ ಭಕ್ತ ಮಂಡಳಿಯ ಏರ್ಮಾಳ್ ಬಡ ಜಯಶೀಲ ಬಿ ತಿಂಗಳಾಯ ಗುರುಸ್ವಾಮಿ, ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸಮಿತಿ ಸದಸ್ಯರು, ಮತ್ತು ಶ್ರೀ ಲಕ್ಷ್ಮಿ ನಾರಾಯಣ ಭಜನಾ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಮಿತಿ ಸದಸ್ಯರು ವಿನಂತಿಸಿದ್ದಾರೆ.

previous post