
ಸುದ್ದಿ ವಿವರ: ಪಿ.ಆರ್.ರವಿಶಂಕರ್
ಬೊಯಿಸರ್ ಪಶ್ಚಿಮದಲ್ಲಿನ ಸಿಡ್ಕೋ ವಲಯದಲ್ಲಿನ ಶ್ರೀ ಗಣೇಶ ಅಯ್ಯಪ್ಪ ಮಂದಿರದಲ್ಲಿ ಇದೇ ಡಿಸೆಂಬರ್ ತಾ.18 ನೆಯ ಬುಧವಾರದಂದು ಸಂಜೆ ಶ್ರೀ ಗಣೇಶ ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ಪೂಜೆಯು ಅದ್ದೂರಿಯಾಗಿ ಜರಗಿತು.
ಆರಂಭದಲ್ಲಿ ಮೀರಾ ರೋಡ್ ನ ಪ್ರಸಿದ್ಧ ಲಕ್ಶ್ಮೀನಾರಾಯಣ ಭಜನಾ ಮಂಡಲಿ ಹಾಗೂ ಅಯ್ಯಪ್ಪ ಭಕ್ತ ಮಂಡಳಿ ಮೀರಾರೊಡ್ ಇವಯರಿಂದ ದೇವರ ಭಜನಾ ಸಂಕೀರ್ತನೆ ಹಾಗೂ ಸ್ವಾಮಿ ಅಯ್ಯಪ್ಪ ಭಕ್ತಿ ಭಜನಾ ಕಾರ್ಯಕ್ರಮವು ಜರಗಿತು. ಅಯ್ಯಪ್ಪ ವೃತಧಾರಿಯಾದ ಸಂತೋಷ್ ಶೆಟ್ಟಿ ಸ್ವಾಮಿ ( ತುಂಗಾ ಹಾಸ್ಪಿಟಲ್ಸ್) ಇವರು ಈ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಮಹಾ ಮಂಗಳಾರತಿಯ ಬಳಿಕ ತೀರ್ಥಪ್ರಸಾದ ಹಾಗೂ ಹರಿವರಾಸನಮ್ ಕಾರ್ಯಕ್ರಮ ಜರಗಿತು.

ಸರ್ವ ಭಕ್ತಾಭಿಮಾನಿಗಳ ನಿತ್ಯಜೀವನದಲ್ಲಿನ ಉತ್ತಮ ಆರೋಗ್ಯ , ನೆಮ್ಮದಿ ಹಾಗೂ ಸುಭಿಕ್ಷತೆಯ ಪ್ರಾರ್ಥನೆಗಳೊಂದಿಗೆ ಪೂಜಾ ಕಾರ್ಯಕ್ರಮ ಸಂಪನ್ನಗೊಂಡಿತು.

ಮೀರಾ ರೋಡ್ ನ ಅಯ್ಯಪ್ಪ ಭಕ್ತಮಂಡಳಿಯ ಹಿರಿಯ ಶ್ರೀ ಜಯಶೀಲ ಗುರುಸ್ವಾಮಿಯವರ ಉಪಸ್ಥಿತಿಯಲ್ಲಿ ಜರಗಿದ ಈ ಕಾರ್ಯ ಕ್ರಮದಲ್ಲಿ ಸ್ವಾಮಿ ನಿತ್ಯಾನಂದ ಮಂದಿರದ ವಿಶ್ವಸ್ಥರು ಸತ್ಯಾ ಕೋಟ್ಯಾನ್, ಪಾಲ್ಘರ್ ತಾಲೂಕು ಹೋಟೆಲ್ ಅಸೋಸಿಯೇಶನ್ ಅಧ್ಯಕ್ಷ ರಘುರಾಮ್ ಎಮ್.ರೈ , ಮೀರಾ ಡಹಾಣೂ ಬಂಟ್ಸ್ ಸಂಸ್ಥೆಯ ಟ್ರಸ್ಟೀ ಕೆ.ಭುಜಂಗ ಶೆಟ್ಟಿ , ಸ್ಥಳೀಯ ಉದ್ಯಮಿಗಳು , ವಿವಿಧ ಸಂಸ್ಥೆಯ ಪದಾಧಿಕಾರಿಗಳು ,ತುಂಗಾ ಹಾಸ್ಪಿಟಲ್ಸ್ ಸಮೂಹದ ಕರ್ಮಚಾರಿ ಸದಸ್ಯರು ಹಾಗೂ ಸ್ಥಳೀಯ ಅಯ್ಯಪ್ಪ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಪೂಜೆಯ ಬಳಿಕ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ಜರಗಿತು.
ಚಿತ್ರ ಹಾಗೂ ಸುದ್ದಿ : ಪಿ.ಆರ್.ರವಿಶಂಕರ್
8483980035