24.7 C
Karnataka
April 3, 2025
ಪ್ರಕಟಣೆ

ಬಿ.. ಎಸ್ ಕೆ.ಬಿ. ಎಸೋಸಿಯೇಶನ್, ಗೋಕುಲ – ಶತಮಾನೋತ್ಸವ ಸಂಭ್ರಮಾಚರಣೆಗೆ ಸರ್ವಸಿದ್ಧತೆ



ಮುಂಬಯಿಯ ಪ್ರತಿಷ್ಠಿತ “ಬಾಂಬೆ ದಕ್ಷಿಣ ಕನ್ನಡ ಬ್ರಾಹ್ಮಣರ ಸಂಘ, ಬಿ. ಎಸ್ ಕೆ.ಬಿ. ಎಸೋಸಿಯೇಶನ್, ಗೋಕುಲ”, ಬರುವ ವರ್ಷ ಅಂದರೆ 2025 ರಲ್ಲಿ ಶತಮಾನೋತ್ಸವವನ್ನು ಆಚರಿಸಲಿದೆ. ಸಂಸ್ಥೆಯು 100 ವರ್ಷಗಳಲ್ಲಿ ಮಾಡಿದ ಸಾಮಾಜಿಕ ಸಾಧನೆಗಳು, ಚಿರಸ್ಮರಣೀಯ ಘಟನೆಗಳು ಸಮುದಾಯವನ್ನು ಒಂದುಗೂಡಿಸಿ ಮಾಡಿರುವ ಆಚರಣೆಗಳು ಇತ್ಯಾದಿಗಳೊಂದಿಗೆ ಈ ಮಹತ್ವದ ಮೈಲಿಗಲ್ಲನ್ನು ಅತ್ಯಂತ ಸಂಭ್ರಮ ಸಡಗರದೊಂದಿಗೆ ಅರ್ಥಪೂರ್ಣವಾಗಿ ಆಚರಿಸಲು ಬಿ.ಎಸ್.ಕೆ.ಬಿ. ಸಂಸ್ಥೆ ಸಜ್ಜಾಗುತ್ತಿದೆ. ಅಲ್ಲದೆ ಒಂದು ಸಣ್ಣ, ಸಾಮಾನ್ಯ ಸಂಸ್ಥೆಯಾಗಿದ್ದು ಪ್ರಸ್ತುತ ಹೆಮ್ಮರವಾಗಿ ಬೆಳೆದು ಅಸಾಮಾನ್ಯ ಸಾಧನೆಗಳನ್ನು ಮಾಡಿದ, ಅವಿಸ್ಮರಣೀಯ ಘಟನೆಗಳನ್ನು ನೆನಪಿಸಿಕೊಳ್ಳುವ ಮತ್ತು ಇದುವರೆಗೆ ಸಂಘದ ಬೆಳವಣಿಗೆಗೆ ಅವಿರತವಾಗಿ ಶ್ರಮಿಸಿ, ಪ್ರಮುಖ ಪಾತ್ರವಹಿಸಿದ, ತನು – ಮನ-ಧನದ ಬೆಂಬಲವನ್ನಿತ್ತ ಮಹನೀಯರನ್ನು ಗೌರವಿಸುವ ಯೋಜನೆಯನ್ನು ಸಂಸ್ಥೆ ಹಮ್ಮಿಕೊಂಡಿದೆ. 

ಶತಮಾನೋತ್ಸವದ ವರ್ಷವಾದ 2025ನ್ನು, ವರ್ಷವಿಡೀ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಸಾಹಿತ್ಯಿಕ ಮತ್ತು ಕ್ರೀಡಾ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು. ಉತ್ಸವದ ಉದ್ಘಾಟನಾ ಕಾರ್ಯಕ್ರಮವನ್ನು ಜನವರಿ 5, 2025 ರಂದು ಬೆಳಿಗ್ಗೆ ವಿಘ್ನ ನಿವಾರಕ ಗಣಪತಿ ಆರಾಧನಾ ಅಂಗವಾಗಿ ಗಣಹೋಮ, ಗಾಯತ್ರಿ ಮಂತ್ರ ಹೋಮ ಅಷ್ಟಾಕ್ಷರ ಮಂತ್ರ ಹೋಮ ಮತ್ತು ನವಗ್ರಹ ಶಾಂತಿ ಹೋಮದೊಂದಿಗೆ ಶ್ರೀ ವಿಘ್ನೇಶ್ವರ ಹಾಗೂ ಸಮುದಾಯದ ಆರಾಧ್ಯ ಮೂರ್ತಿ ಶ್ರೀ ಗೋಪಾಲಕೃಷ್ಣನ ಅನುಗ್ರಹದೊಂದಿಗೆ ಶುಭಾರಂಭವಾಗಲಿದೆ. ಈ ಸುಸಂದರ್ಭದಲ್ಲಿ, ಅರುವತ್ತರ ಸಂಭ್ರಮದಲ್ಲಿರುವ, ಶ್ರೀ ಪೇಜಾವರ ಮಠಾಧೀಶ, ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಭಕ್ತಾದಿಗಳಿಂದ ಭಕ್ತಿ ಪೂರ್ವಕ ಪುಷ್ಪಾರ್ಚನೆ, ಅಭಿವಂದನೆ ಹಾಗೂ ತುಲಾಭಾರ ಸೇವೆ ಅರ್ಪಣೆಯಾಗಲಿದೆ.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ, ಸಂಜೆ ಷಣ್ಮುಖಾನಂದ ಸಭಾಗೃಹದಲ್ಲಿ ಕರ್ನಾಟಕದ ಪ್ರಸಿದ್ಧ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಮತ್ತು ಬಳಗದವರಿಂದ ಸಂಗೀತ ಸಂಜೆ ಜರಗಲಿದೆ. ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪರಮಪೂಜ್ಯ ಪೇಜಾವರ ಶ್ರೀ ಶ್ರೀ ಹಾಗೂ ಗೌರವ ಅತಿಥಿಯಾಗಿ ಲೋಕಸಭಾ ಸದಸ್ಯ ಹಾಗೂ ಅಖಿಲ ಭಾರತ ಭಾರತೀಯ ಯುವ ಮೋರ್ಚಾದ ಅಧ್ಯಕ್ಷ ಮಾನನೀಯ ತೇಜಸ್ವೀ ಸೂರ್ಯ ಆಗಮಿಸಲಿದ್ದಾರೆ. 

ಇನ್ನುಳಿದಂತೆ ವರ್ಷವಿಡೀ ಹಲವಾರು ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಸಾಹಿತ್ಯಿಕ ಕಾರ್ಯಕ್ರಮಗಳೊಂದಿಗೆ ಸರಿ ಸುಮಾರು ೧೦೦ ಕಾರ್ಯಕ್ರಮಗಳನ್ನು ಸಂಸ್ಥೆಯು ಹಮ್ಮಿಕೊಂಡಿದೆ. ಅವುಗಳಲ್ಲಿ ಜನವರಿ ೫ ರ ಕಾರ್ಯಕ್ರಮ ಸಹಿತ ಆರು ಕಾರ್ಯಕ್ರಮಗಳು ದೇಣಿಗೆ ಪಾಸ್ ಹಾಗೂ ಇನ್ನುಳಿದವು ಉಚಿತ ಕಾರ್ಯಕ್ರಮಗಳು. ಷಣ್ಮುಖಾನಂದ ಸಭಾಗೃಹದಲ್ಲಿ ಜನವರಿ ೫ ರಂದು ವಿಜಯ ಪ್ರಕಾಶ್ ಬಳಗದವರಿಂದ ಸಂಗೀತ ಸಂಜೆ, ಅಕ್ಟೋಬರ್ ೧೮ ರಂದು ರಾತ್ರಿ ೮ ರಿಂದ ಮರುದಿನ ಬೆಳಗಿನವರೆಗೆ ತೆಂಕು ತಿಟ್ಟಿನ ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ನೇತೃತ್ವದಲ್ಲಿ ಯಕ್ಷಗಾನ ” ಸಂಪೂರ್ಣ ದಶಾವತಾರ” ಹಾಗೂ ಡಿಸೆಂಬರ್ ೨೮ ರಂದು ಗೋಕುಲ ಶತಮಾನೋತ್ಸವ ಸಮಾರೋಪ ಸಮಾರಂಭ ನಡೆಯಲಿದೆ. ಉಳಿದ ಮೂರು ಸಾಂಕೃತಿಕ ಕಾರ್ಯಕ್ರಮಗಳು ಫೆಬ್ರವರಿ ೨೨ ರಂದು ಬಾಲ ಕಲಾವಿದೆ, ವಾಯಲಿನ್ ಮಾಂತ್ರಿಕೆ ಕುಮಾರಿ ಗಂಗಾ ಶಶಿಧರನ್ ರವರಿಂದ ವಾಯಲಿನ್ ವಾದನ, ಜೂನ್ ೧ ರಂದು ಪುಣ್ಯಾಹ ಡಾನ್ಸ್ ಅಕಾಡೆಮಿಯಿಂದ “ಸಂಜೀವಿನಿ” ನೃತ್ಯ ರೂಪಕ, ನವೆಂಬರ್ ೩೦ ರಂದು ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ “ಶಿವದೂತೆ ಗುಳಿಗೆ” ವಿಭಿನ್ನ ಶೈಲಿಯ ತುಳು ನಾಟಕವು ಚೆಂಬೂರು ಫೈನ್ ಆರ್ಟ್ಸ್ ಸಭಾಗೃಹದಲ್ಲಿ ಜರಗಲಿದೆ. 

ಫೆಬ್ರವರಿ ೮ ಮತ್ತು ೯ ರಂದು ಗೋಕುಲ ಹಾಗೂ ಮುಂಬಯಿಯ ತುಳು – ಕನ್ನಡ ಸಂಘ ಸಂಸ್ಥೆಗಳ ಭಾಗವಹಿಸುವಿದೆಯಲ್ಲಿ ಕಾಂದಿವಲಿ ಪೊಯ್ನ್ ಸರ್ ಕ್ರೀಡಾಂಗಣದಲ್ಲಿ ಎರಡು ದಿನಗಳ ಕ್ರೀಡಾ ಕಾರ್ಯಕ್ರಮ ಆಯೋಜಿಸಲಾಗಿದೆ.  

ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಗೋಕುಲ ದೇವಾಲಯ ಸಭಾಗೃಹದಲ್ಲಿ ಹಿರಿಯ ವಿದ್ವಾಂಸರ ನೇತೃತ್ವದಲ್ಲಿ ಪ್ರತಿ ತಿಂಗಳು ವಿವಿಧ ಹೋಮಗಳು ಭಗವದ್ಗೀತಾ ಪ್ರವಚನ, ಭಾಗವತ ಸಪ್ತಾಹ ರಾಮಾಯಣ ಹರಿಕಥಾ ಸಪ್ತಾಹ, ತಾಳಮದ್ದಳೆ ಸಪ್ತಾಹ , ಪ್ರತಿ ಬುಧವಾರ ಸಂಜೆ 5 ರಿಂದ 7 ಗಂಟೆಯವರೆಗೆ ಭಜನೆ ಮತ್ತು ಆಷಾಢ ಏಕಾದಶಿಯಂದು 12 ಗಂಟೆಗಳ ಕಾಲ ಭಜನೆ ಇತ್ಯಾದಿಗಳನ್ನು ಹಮ್ಮಿಕೊಂಡಿದೆ.         

 ಸಾಹಿತ್ಯಿಕ ಕಾರ್ಯಕ್ರಮಗಳು: ಮುಂಬಯಿ ವಿಶ್ವ ವಿದ್ಯಾಲಯದಲ್ಲಿ ಮಾರ್ಚ್ 2025 ರಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಗೋಕುಲದ ಇತಿಹಾಸವನ್ನೊಳಗೊಂಡ ಪುಸ್ತಕವನ್ನು ಬಿಡುಗಡೆಗೊಳಿಸುವುದು.   

ಮಾರ್ಚ್ 2025 ರ ಗೋಕುಲವಾಣಿಯನ್ನು ಗೋಕುಲ ಶತಮಾನೋತ್ಸವದ ಸಂಚಿಕೆಯಾಗಿ ಮುಂಬಯಿ ವಿಶ್ವ ವಿದ್ಯಾಲಯದಲ್ಲಿ ಬಿಡುಗಡೆಗೊಳಿಸುವುದು. ಶತಮಾನೋತ್ಸವದ ಸ್ಮರಣಾರ್ಥ ಮುಂಬಯಿ ವಿಶ್ವ ವಿದ್ಯಾಲಯದಲ್ಲಿ ಒಂದು ಪ್ರಶಸ್ತಿಯನ್ನು ಸ್ಥಾಪಿಸುವುದು. 

 ಭಾರತೀಯ ಅಂಚೆ ಇಲಾಖೆಯನ್ನು ಸಂಪರ್ಕಿಸಿ ವಿಶೇಷ ಕವರ್, ರದ್ದತಿ ಮೊಹರು, ಕರ ಪತ್ರ, ದೇವಾಲಯದ ಕಾಷ್ಠ ಶಿಲ್ಪದ ಚಿತ್ರಣವನ್ನೊಳಗೊಂಡ ಪೋಸ್ಟ್ ಕಾರ್ಡ್ ಇತ್ಯಾದಿ ಬಿಡುಗಡೆಗೊಳಿಸುವುದು  

ಸಾಮಾಜಿಕ ಕಾರ್ಯಕ್ರಮಗಳು: ಗೋಕುಲ ಒಂದು ದಿನದ ಅಥವಾ ಒಂದು ದಿನ/ರಾತ್ರಿ ಹೊರಾಂಗಣ ವಿಹಾರ, ದಕ್ಷಿಣ ಕನ್ನಡ ಪ್ರವಾಸ, ದೇಶೀಯ ಹಾಗೂ ವಿದೇಶೀಯ ಪ್ರವಾಸ, ಆರ್ಥಿಕ ಮಿತಿ ಅಂತಾರಾಷ್ಟ್ರೀಯ ಪ್ರವಾಸ ಇತ್ಯಾದಿಗಳನ್ನು ಆಯೋಜಿಸಿದೆ. 

ಇದರ ಹೊರತಾಗಿ ಗೋಕುಲದ ನಿಯಮಿತವಾಗಿ ನಡೆಯುವ ಕೃಷ್ಣ ವೇಷ ಸ್ಪರ್ಧೆ, ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ, ದೀಪಾರಾಧನೆ, ತುಳಸಿ ಪೋಕೆ, ದೀಪೋತ್ಸವ ಇತ್ಯಾದಿ ಸುಮಾರು ೨೫ ಧಾರ್ಮಿಕ, ಗಣರಾಜ್ಯೋತ್ಸವ ಆಚರಣೆ, ಸ್ವಾತಂತ್ರ್ಯ ದಿನಾಚರಣೆ, ಆಗಸ್ಟ್ 15,16,17, ಮೂರು ದಿನಗಳ ಗೋಕುಲ ಕನೆಕ್ಟ್ ಕಾರ್ಯಕ್ರಮ, ಯುವ ವಿಭಾಗದ ಬೃಹತ್ ಕಾರ್ಯಕ್ರಮ, ಮಹಿಳಾ ವಿಭಾಗದ ಬೃಹತ್ ಕಾರ್ಯಕ್ರಮ, ಪುರುಷರ ಬೃಹತ್ ಕಾರ್ಯಕ್ರಮ, ಆಶ್ರಯ ಹಿರಿಯ ನಾಗರಿಕರ ದಿನಾಚರಣೆ, ಯುಫೋರಿಯಾ 2025 ಮುಂತಾದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಎಂದಿನಂತೆ ನಡೆಯಲಿರುವವು. 

“100 ವರ್ಷಗಳ ಏಕತೆ, ಸಂಪ್ರದಾಯ, ಸಂಸ್ಕೃತಿ” ಎನ್ನುವ ಘೋಷಣೆಯೊಂದಿಗೆ ಗೋಕುಲ ಶತಮಾನೋತ್ಸವದ ಚಿಹ್ನೆ, ಪ್ರತಿ ದಿನ ಗೋಕುಲದಲ್ಲಿ ಮತ್ತು ಮಾರುಕಟ್ಟೆಯಲ್ಲಿ ಪ್ರಚಾರಕ್ಕಾಗಿ ಶತಮಾನೋತ್ಸವದ ಗುರುತು ಸಂಗೀತ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಕ್ಕಾಗಿ ಗೋಕುಲ ಗೀತೆ ರಚನೆ, ಕಾರು ಅಥವಾ ಮೇಜಿನ ಮೇಲಿಡುವಂತೆ ಶ್ರೀ ಗೋಪಾಲಕೃಷ್ಣನ ಫೋಟೋ, ಕಾರ್ ಸ್ಟಿಕರ್ಸ್ ಮತ್ತು ಗೋಕುಲ ಶತಮಾನೋತ್ಸವ ಕ್ಯಾಲೆಂಡರ್ 2025 ಮುಂತಾದುವುಗಳನ್ನು ಬಿಡುಗಡೆಗೊಳಿಸಲಾಗುವುದು.  

ಶತಮಾನೋತ್ಸವದ ಎಲ್ಲಾ ಕಾರ್ಯಕ್ರಮಗಳನ್ನು ಪ್ರತಿ ವಯೋಮಾನದವರು ನೋಡಿ, ಆನಂದಿಸಿ ಮುಂದಿನ ಜನಾಂಗದವರೊಂದಿಗೆ ಹಂಚಿಕೊಳ್ಳುವಂತಹ ಅತ್ಯುತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿ, ಶತಮಾನೋತ್ಸವವನ್ನು ಐತಿಹಾಸಿಕ ಸ್ಮರಣೀಯವಾಗಿಸಿ, 2025 ರಲ್ಲಿ ಗೋಕುಲವನ್ನು ಅತ್ಯಂತ ಜನಪ್ರಿಯಗೊಳಿಸುವ ಮುಖ್ಯ ಧ್ಯೇಯ ಸಂಸ್ಥೆಯದ್ದಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳ ಸಕ್ರಿಯ ಭಾಗವಹಿಸುವಿಕೆ ಹಾಗೂ ಬೆಂಬಲವನ್ನು ಸಂಘವು ಅಪೇಕ್ಷಿಸುತ್ತಿದೆ. . 

ಪ್ರೇಮಾ ಎಸ್ ರಾವ್ ,

Related posts

ಫೆ. 02 ರಂದು ಮಹಾವಿಷ್ಣು ಮಂದಿರ ಡೊಂಬಿವಲಿ, ಇದರ ವತಿಯಿಂದ ರಕ್ತದಾನ ಹಾಗೂ ಉಚಿತ ವೈದ್ಯಕೀಯ ಆರೋಗ್ಯ ತಪಾಸಣಾ ಶಿಬಿರ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಜ.21ರಂದು ಸನಾತನ ಶಿವಾಮಯ ದೀಪೋತ್ಸವ.

Mumbai News Desk

ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್ , ಮಹಿಳಾ ವಿಭಾಗ: ಜು 28ರಂದು ಆಶಾಡ ಹಬ್ಬ ಆಚರಣೆ,

Mumbai News Desk

ಶ್ರೀ ಜಗದಂಬಾ ಮಂದಿರ, ಡೊಂಬಿವಲಿ (ಪ.): ಸೆ. 28ಕ್ಕೆ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಯಕ್ಷಗಾನ.

Mumbai News Desk

ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಅ. 26 ರಂದು 24ನೇ ವಾರ್ಷಿಕ ಮಹಾಸಭೆ, ರಜತ ಸಂಭ್ರಮಕ್ಕೆ ಚಾಲನೆ

Mumbai News Desk

ಮಂಗಳೂರು ವಿ. ವಿ.  42ನೇ ಘಟಿಕೋತ್ಸವ : ಎಂ.ಆರ್.ಜಿ. ಗ್ರೂಪ್ ಸ್ಥಾಪಕಾಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿಯವರಿಗೆ ಗೌರವ ಡಾಕ್ಟರೇಟ್ ಪದವಿ

Mumbai News Desk