24.2 C
Karnataka
April 4, 2025
ಸುದ್ದಿ

ಬೆಂಗಳೂರು : ದಕ್ಷಿಣ ಕನ್ನಡಿಗರ ಸಂಘದ ಸಂಭ್ರಮಾಚರಣೆ, ಸಾಧಕರಿಗೆ ಪ್ರಶಸ್ತಿ, ಕರ್ನಿರೆ ವಿಶ್ವನಾಥ ಶೆಟ್ಟಿಯವರಿಗೆ ‘ಕರಾವಳಿ ರತ್ನ’ ಪ್ರಶಸ್ತಿ ಪ್ರದಾನ,



ಬೆಂಗಳೂರು : ದಕ್ಷಿಣ ಕನ್ನಡಿಗರ ಸಂಘದ ಸಂಭ್ರಮಾಚರಣೆ, ಸಾಧಕರಿಗೆ ಪ್ರಶಸ್ತಿ,
ಕರ್ನಿರೆ ವಿಶ್ವನಾಥ ಶೆಟ್ಟಿಯವರಿಗೆ ‘ಕರಾವಳಿ ರತ್ನ’ ಪ್ರಶಸ್ತಿ ಪ್ರದಾನ,

ಕರಾವಳಿಗರಿಗೆ ತಮ್ಮ ಜೀವನ ಶೈಲಿಯನ್ನು ಪ್ರಪಂಚದ ಎಲ್ಲಾ ಭಾಗಕ್ಕೂ ಕೊಂಡೊಯ್ಯುವ ಶಕ್ತಿ ಇದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ ಅಭಿಪ್ರಾಯಪಟ್ಟರು. ನಯನ ಸಭಾಂಗಣದಲ್ಲಿ ದಕ್ಷಿಣ ಕನ್ನಡಿಗರ ಸಂಘದಿಂದ ಭಾನುವಾರ ನಡೆದ ‘ಕರಾವಳಿ ರತ್ನ’ ಪ್ರಶಸ್ತಿ ಮತ್ತು ಪ್ರತಿಭಾ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕರಾವಳಿಗರು ವಿವಿಧ ಉದ್ಯಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದಲ್ಲದೇ, ಪ್ರತೀ ಕ್ಷೇತ್ರದಲ್ಲಿಯೂ ತಮ್ಮದೇ ಛಾಪು ಮೂಡಿಸುತ್ತಾರೆ. ಸಮಾಜದ ಸಾಮರಸ್ಯಕ್ಕೆ ಹಾಗೂ ಒಗ್ಗಟ್ಟಿಗೆ ಸದಾ ಬೆಂಬಲವಾಗಿ ನಿಂತು, ವಿವಿಧ ಸಂಘ ಸಂಸ್ಥೆಗಳನ್ನು ಸ್ಥಾಪಿಸಿ ಸಮಾಜಕ್ಕೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ಈ ಮೂಲಕ ಕರಾವಳಿಯು ಕೇವಲ ಸಮೃದ್ಧವಾದ ಪ್ರದೇಶ ಮಾತ್ರವಲ್ಲದೇ, ಅಲ್ಲಿನವರ ಮನಸ್ಸು ಪರಿಶುದ್ಧವಾಗಿದೆ ಎಂದು ಸಾಬೀತುಪಡಿಸಿದ್ದಾರೆ ಎಂದು ಹೇಳಿದರು.ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ ಮಾತನಾಡಿ, ಸಮಾಜ ಮುಖಿ ಕಾರ್ಯಗಳನ್ನು ಅಭಿನಂದಿಸುವ ಜವಾಬ್ದಾರಿ ಸಮಾಜದ್ದು. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡಿಗರ ಸಂಘವು ಕಾರ್ಯೋನ್ಮುಖವಾಗಿದೆ. ಸಮಾಜದಲ್ಲಿನ ಉತ್ತಮ ಕಾರ್ಯವನ್ನು ಅಭಿನಂದಿಸುವ ಮನಸ್ಥಿತಿ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
2023-24 ರ ಸಾಲಿನ ‘ಕರಾವಳಿ ರತ್ನ’ ಪ್ರಶಸ್ತಿಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ, ಮುಂಬಯಿ ಬಂಟರ ಸಂಘದ ಮಾಜಿ ಅಧ್ಯಕ್ಷ, ಸಮಾಜಸೇವಕ, ಉದ್ಯಮಿ ಕರ್ನಿರೆ ವಿಶ್ವನಾಥ ಶೆಟ್ಟಿ, ಟೀಕೇಸ್ ಗ್ರೂಪ್‌ನ ಸ್ಥಾಪಕ ಉಮರ್ ಟೀಕೇ, ಕ್ಯಾಂಟರ್ಬೆರಿ ಗ್ರೂಪ್‌ನ ಅಧ್ಯಕ್ಷ ಲಿಯೋ ಕ್ವಾಡೋಸ್ ಹಾಗೂ ಆದಾಯ ತೆರಿಗೆಯ ಅಧಿಕಾರಿ ನಿವ್ಯಾ ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ 13 ವಿದ್ಯಾರ್ಥಿಗಳಿಗೆ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ 23 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಈ ಸಂಧರ್ಭದಲ್ಲಿ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಡಾ. ಕೆ.ಸಿ ಬಲ್ಲಾಳ್ ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದರು.

Related posts

ಅನಿತಾ ಪಿ.ತಾಕೊಡೆಯವರ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ

Mumbai News Desk

ಸರ್ಕಾರಿ ಶಾಲಾ ಮಕ್ಕಳಿಗೆ ಯಕ್ಷ ಶಿಕ್ಷಣ- ಪಟ್ಲ ಸತೀಶ್ ಶೆಟ್ಟಿ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು ಹಾಗೂ ಮುತ್ತೂಟ್ ಫೈನಾನ್ಸ್ ಲಿಮಿಟೆಡ್ ಇದರ ಜಂಟಿ ಆಶ್ರಯದಲ್ಲಿ ಸ್ಥನ್ಯಪಾನ ಶಿಬಿರಕ್ಕೆ ಚಾಲನೆ.

Mumbai News Desk

ಜೋಡು ಜೀಟಿಗೆ” ಪೌರಾಣಿಕ ನಾಟಕದ ಪ್ರಥಮ ಪ್ರದರ್ಶನ, ನಾಟಕದ ಮೂಲಕ ಧರ್ಮ ಜಾಗೃತಿಗೊಳ್ಳಲಿ :, ಐಕಳ ಹರೀಶ್ ಶೆಟ್ಟಿ

Mumbai News Desk

ಪಾಲ್ಘರ್ ರಘು ಶೆಟ್ಟಿ ನಿಧನ.

Mumbai News Desk

ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಸೇವಾ ದಳದ ದಳಪತಿಯಗಿ ಪ್ರದೀಪ್ ಅತ್ತಾವರ ಆಯ್ಕೆ

Mumbai News Desk
ನಮ್ಮ ವಾಟ್ಸಪ್‌ ಗ್ರೂಪ್‌ಗೆ ಸೇರಿ