25 C
Mumbai
March 7, 2026
Mumbai News Kannada
ಪ್ರಕಟಣೆ

ಮಲಾಡ್ ಕನ್ನಡ ಸಂಘದ ಆಶ್ರಯದಲ್ಲಿ ಡಿ. 29 ರಂದು ಸದಸ್ಯ ಬಾಂಧವರಿಗೆ ಮತ್ತು ಮಕ್ಕಳಿಗಾಗಿ ಒಳಾಂಗಣ ಕ್ರೀಡಾಕೂಟ





ನಗರದ ಪ್ರತಿಷ್ಠಿತ ಕನ್ನಡ ಸಂಘದಲ್ಲೊಂದಾದ ಮಲಾಡ್ ಕನ್ನಡ ಸಂಘ ( ರಿ ) ಇದರ ಆಶ್ರಯದಲ್ಲಿ ಸದಸ್ಯ ಬಾಂಧವರಿಗೆ ಮತ್ತು ಮಕ್ಕಳು ಪರಿವಾರದವರಿಗಾಗಿ ಡಿ.29 ರ  ರವಿವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ರವರೆಗೆ  ಒಳಾಂಗಣ  ಕ್ರೀಡಾ ಸ್ವರ್ಧೆಯನ್ನು ಮಲಾಡ್ ಪಶ್ವಿಮ , ಮಾರ್ವೆ ರೋಡ್ , ಮಲಾಡ್ ಪೈಯರ್ ಬ್ರಿಗೇಡ್ ನ  ಹತ್ತಿರ , ಯುನಿಟಿ  ಅಪಾರ್ಟ್ಮೆಂಟ್ ಹೌಸಿಂಗ್ ಸೊಸೈಟಿ ಯಲ್ಲಿನ  ಮಲಾಡ್ ಕನ್ನಡ ಸಂಘದ ರಮಾನಾಥ ಎಸ್.ಪಯ್ಯಾಡೆ  ಮೆಮೋರಿಯಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ .

ಸ್ಪರ್ಧೆಯಲ್ಲಿ ಕ್ಯಾರಂ ಸಿಂಗಲ್ ಮತ್ತು ಡಬಲ್ಸ್ ಚೆಸ್ ಮತ್ತು ಚಿನ್ನದ ಮನೆ ಸಾಂಪ್ರದಾಯಿಕ ಕ್ರೀಡೆ ವಯೋಮಾನದ ಅಂತರದಲ್ಲಿ ಜರಗಲಿದೆ 12 ವರ್ಷ ಮಕ್ಕಳಿಗೆ ಹಾಗೂ 13 ವರ್ಷ ಮೇಲ್ಪಟ್ಟ ವಯಸ್ಸಿನ ಎಲ್ಲರಿಗೂ ಕ್ಯಾರಂ ಸಿಂಗಲ್ಸ್ ಮತ್ತು ಡಬಲ್ಸ್ , ಹಾಗೂ  ಎಲ್ಲಾ ವಯೋಮಿತಿಯ ಸದಸ್ಯ ಬಾಂಧವರಿಗಾಗಿ  ಚೆಸ್ ಮತ್ತು  ಚೆನ್ನೆಮಣೆ ಸ್ವರ್ಧೆಯನ್ನು ಆಯೋಜಿಸಲಾಗಿದೆ .

ಈ  ಎಲ್ಲಾ ಸ್ವರ್ಧೆಯಲ್ಲಿ ವಿಜೇತ ಕ್ರೀಡಾಳುಗಳಿಗೆ  ಕ್ರೀಡಾ ಕೂಟದ ಕೊನೆಯಲ್ಲಿ ಜರಗಲಿರುವ ಸಮಾರೋಪ ಸಮಾರಂಭದಲ್ಲಿ ಫಲಕ ಮತ್ತು ಮಾನಪತ್ರದಿಂದೊಂದಿಗೆ   ಮೊದಲ ಮತ್ತು ದ್ವೀತಿಯ ಬಹುಮಾನವನ್ನು ನೀಡಿ ಗೌರವಿಸಲಾಗುವುದು . 

ಕ್ರೀಡಾಸ್ವರ್ಧೆಯಲ್ಲಿ ಭಾಗವಹಿಸಲಿಚ್ಚಿಸುವವರು   ಆಶಾಲತಾ ಎಸ್ ಕೋಟ್ಯಾನ್ ಮೊ.ನಂಬ್ರ : 9892654908 ಮತ್ತು  ರಾಕೇಶ್ ಜಿ.ಪೂಜಾರಿ ಮೊ.ನಂಬ್ರ : 9969207322 ಇವರನ್ನು ಸಂಪರ್ಕಿಸಿ  ತಮ್ಮ , ತಮ್ಮ ಹೆಸರನ್ನು ನೊಂದಾಯಿಸಿ ಕೊಳ್ಳುವಂತೆ ವಿನಂತಿಸಿ ಕೊಳ್ಳಲಾಗಿದೆ . ಕ್ರೀಡೆಯ ನಿಯಮ ನಿಬಂಧನೆಗಳು ಸಂಘದ ಅಧ್ಯಕ್ಷ ರು ಮತ್ತು ಯುವ ವಿಭಾಗದ ಕಾರ್ಯಾಧ್ಯಕ್ಷ ರ ಅಂತಿಮ ನಿರ್ಧಾರಕ್ಕೆ ಒಳಪಟ್ಟಿದೆ.

ಈ ಕ್ರೀಡಾಸ್ವರ್ಧೆಗೆ  ಎಲ್ಲಾ ಸದಸ್ಯ ಬಾಂಧವರು ಭಾಗವಹಿಸಿ ಸಹಕರಿಸುವಂತೆ  ಮಲಾಡ್ ಕನ್ನಡ ಸಂಘದವತಿಯಿಂದ ಅಧ್ಯಕ್ಷ ನ್ಯಾಯವಾದಿ  ಜಗದೀಶ್ ಹೆಗ್ಡೆ ಮತ್ತು ಪದಾಧಿಕಾರಿಗಳು , ಕಾರ್ಯಕಾರಿ ಸಮಿತಿಯವರು ವಿನಂತಿಸಿ ಕೊಂಡಿದ್ದಾರೆ .

ಕಾರ್ಯಕ್ರಮದ ಕೊನೆಯಲ್ಲಿ ಪ್ರೀತಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ.



Related posts

ಫೆ.1 ರಿಂದ 3 ರ ವರಗೆ ಶ್ರೀ ಶನೀಶ್ವರ ಮಂದಿರ (ರಿ), ಭಟ್ಟಿಪಾಡದ 40ನೇ ವಾರ್ಷಿಕ ಮಹಾಪೂಜೆ.

Mumbai News Desk

ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್, ಮುಂಬಯಿ, ಸೆ 16: ಶ್ರೀ ವಿಶ್ವಕರ್ಮ ಮಹೋತ್ಸವ.

Mumbai News Desk

ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನ, ಜೋಗೇಶ್ವರಿ ಪೂರ್ವ – ಸೆ. 22ರಿಂದ ಶರನ್ನವರಾತ್ರಿ ಹಾಗೂ ವಿಜಯದಶಮಿ ಮಹೋತ್ಸವ

Mumbai News Desk

ಶ್ರೀ ಶ್ರೀ ರಮಾನಂದ ಗುರೂಜಿ ಮುಂಬೈ ಭೇಟಿ

Mumbai News Desk

ಶ್ರೀ ಮಹಾವಿಷ್ಣು ಮಂದಿರ, ಡೊಂಬಿವಲಿ ಯಲ್ಲಿ ಕಾರ್ತಿಕ ಮಾಸದ ದೀಪೋತ್ಸವ

Mumbai News Desk

ಮಾ.7: ಸಸಿಹಿತ್ಲು ಭಗವತಿಗೆ ಕಲಾಸೌರಭದ ಸ್ವರ ಸಂಗೀತಾಭಿಷೇಕಂ

Mumbai News Desk