April 2, 2025
ಸುದ್ದಿ

ಬೊಯಿಸರ್ ನಿತ್ಯಾನಂದ ಸ್ವಾಮಿ ಮಂದಿರದ 14 ನೆಯ ವಾರ್ಷಿಕೋತ್ಸವ ಸಂಪನ್ನ

ಕುಣಿತ ಭಜನೆಯು ಮಕ್ಕಳ ಬೌದ್ದಿಕ ಆಧ್ಯಾತ್ಮಿಕ ಜ್ಞಾನವೃದ್ಧಿಗೆ ಸಹಕಾರಿ ” – ರಘುರಾಮ್ ರೈ.

ಚಿತ್ರ ಹಾಗೂ ಸುದ್ದಿ : ಪಿ.ಆರ್.ರವಿಶಂಕರ್  8483980035

ಬೊಯಿಸರ್ : ತಾ.29.12.2024

 ವರ್ಷದುದ್ದಕ್ಕೂ ಸಾಂಸ್ಕೃತಿಕ  ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಪಾಲ್ಘರ್ ಜಿಲ್ಲೆಯ ತುಳು ಕನ್ನಡಿಗರ ಸಾಂಸ್ಕೃತಿಕ ಶೃದ್ಧಾಕೇಂದ್ರವೆನಿಸಿದ ಬೊಯಿಸರ್ ಪಶ್ಚಿಮದಲ್ಲಿನ ಶ್ರೀ ನಿತ್ಯಾನಂದ ಸ್ವಾಮಿ ಮಂದಿರದ 14 ನೆಯ ವಾರ್ಷಿಕೋತ್ಸವವು ಇದೇ ಡಿಸೆಂಬರ್ 27 ಶುಕ್ರವಾರದಂದು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗಿತು. 

ಮಂದಿರದ ಆವರಣದಲ್ಲಿ ಜರಗಿದ ಈ ಭವ್ಯ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮುಂಬೈ   ಸೇರಿದಂತೆ ಪಾಲ್ಘರ್ ಜಿಲ್ಲೆಯ ವಿವಿಧ ಭಾಗಗಳಿಂದ ಅಸಂಖ್ಯ  ಶೃದ್ಧಾಳುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

    ಪ್ರಾತಃ ಕಾಲದ ಸಂಕಲ್ಪ ಪೂಜೆ ಹಾಗೂ ಗಣಹೋಮವನ್ನು ಶ್ರೀಮತಿ ಸುಹಾಸಿನಿ ಡಿ.ನಾಯ್ಕ್ ಮತ್ತು ಶ್ರೀಮತಿ ಪದ್ಮಾ ಹಾಗೂ ಸತ್ಯಾಕೋಟ್ಯಾನ್ ದಂಪತಿ ನೆರವೇರಿಸಿದರು.

ಕಳಶ ಅಭಿಷೇಕದ ಬಳಿಕ ಜರಗಿದ  ಶ್ರೀ ಸತ್ಯನಾರಾಯಣ ಮಹಾಪೂಜೆಯನ್ನು ಪಾಲ್ಘರ್ ನಾರಾಯಣ್ ಶೆಟ್ಟಿ ದಂಪತಿ ನೆರವೇರಿಸಿದರು.

 ಸಂಜೆ ಮಂದಿರದ ಆವರಣದಲ್ಲಿ ಜರಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ  ಭಜಕ   ವೃಂದದ ಮಕ್ಕಳು ಪ್ರಸ್ತುತ ಪಡಿಸಿದ ಭಕ್ತಿ ಕುಣಿತ ಭಜನೆಯು ಎಲ್ಲರ ಗಮನ ಸೆಳೆದು ರಂಜಿಸಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಪಾಲ್ಘರ್ ತಾಲೂಕು ಹೋಟೆಲ್ ಓನರ್ಸ್ ಅಸೋಸಿಯೇಶನ್ ಅಧ್ಯಕ್ಷರಾದ ರಘುರಾಮ್ ಎಮ್.ರೈ “ಬೆಳೆಯುವ ಮಕ್ಕಳಲ್ಲಿ ಆಧ್ಯಾತ್ಮದತ್ತ ಸೆಳೆಯುವ ಕುಣಿತ ಭಜನೆಯಂತಹ ಕಾರ್ಯಕ್ರಮಗಳು ಬೌದ್ಧಿಕ ಬೆಳವಣಿಗೆಯಲ್ಲಿಯೂ ಸಹಕಾರಿ. ಇಂತಹ ಕಾರ್ಯಕ್ರಮದಲ್ಲಿ ಮಕ್ಕಳನ್ನು ಪ್ರೋತ್ಸಾಹಿಸುವ ಅವರ ಪಾಲಕರು ಅಭಿನಂದನಾರ್ಹರು ” ಎಂದು ಅಭಿಪ್ರಾಯ ಪಟ್ಟರು.

                  ಧಾರ್ಮಿಕ ವಿಧಿ ವಿಧಾನಗಳನ್ನು ಪುರೋಹಿತ ಹರೀಶ್ ಶಾಂತಿ ಪುತ್ತೂರು ,  ಹರೀಶ್ ಶಾಂತಿ ಹೆಜಮಾಡಿ ಮತ್ತು ಪುರೋಹಿತ ರಾಜೇಶ್ ಶಾಂತಿ ನೆರವೇರಿಸಿದರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರ ಆಯುಷ್ಯ ,  ಆರೋಗ್ಯ ಪ್ರಾಪ್ತಿಗೋಸ್ಕರ ಸಾಮೂಹಿಕ ಪ್ರಾರ್ಥನೆಗಳನ್ನು  ಸಲ್ಲಿಸಲಾಯಿತು .

       ಮೀರಾ ಡಹಾಣೂ ಬಂಟ್ಸ್ ನ ಟ್ರಸ್ಟೀ  ಕೆ. ಭುಜಂಗ ಶೆಟ್ಟಿ , ಕಾಂಞಂಗಾಡ್ ನಿತ್ಯಾನಂದ ಸೇವಾ ಟ್ರಸ್ಟ್ ನ    ಟ್ರಸ್ಟೀ ರಮೇಶ್ ಶೆಟ್ಟಿ ಪಾಲ್ಘರ್, ಡಹಾಣೂ ಹೋಟೆಲ್ ಓನರ್ಸ್ ಅಸೋಸಿಯೇಶನ್ ಅದ್ಯಕ್ಷ ರವಿ ಎಸ್.ಶೆಟ್ಟಿ ಸೇರಿದಂತೆ ಸ್ಥಳೀಯ ಉದ್ಯಮಿಗಳು , ವಿವಿಧ ಸಂಸ್ಥೆಯ ಪದಾಧಿಕಾರಿಗಳು ನಿತ್ಯಾನಂದ ಸ್ವಾಮಿ ಭಕ್ತವೃಂದದ ಸದಸ್ಯರು , ಸದ್ಗುರು ನಿತ್ಯಾನಂದ ಸ್ವಾಮಿ ಭಜನಾ ಮಂಡಳಿಯ ಸದಸ್ಯರು ,  ನಿತ್ಯಾನಂದ ಸೇವಾ ಟ್ರಸ್ಟ್ ನ ಶ್ರೀಮತಿ ಸುಹಾಸಿನಿ ದಾಮೋದರ್ ನಾಯ್ಕ್  ಮತ್ತು ಇತರ ವಿಶ್ವಸ್ಥರು  ಹಾಗೂ ಅಸಂಖ್ಯ ತುಳುಕನ್ನಡಿಗರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಸಂಜೆ 7 ಗಂಟೆಗೆ   ರಾಜಬೀದಿಗಳಲ್ಲಿ ಸ್ವಾಮಿ ನಿತ್ಯಾನಂದರ ಪಲ್ಲಕ್ಕಿಯ ಶೋಭಾಯಾತ್ರೆಯ ಬಳಿಕ ವಾರ್ಷಿಕೋತ್ಸವ ಸಂಪನ್ನಗೊಂಡಿತು. ವ್ಯವಸ್ಥಾಪನಾ ಉಸ್ತುವಾರಿಯಲ್ಲಿ ರಮಾನಂದ ಪೂಜಾರಿ ಸಹಕರಿಸಿದರು.

ಕಾರ್ಯಕ್ರಮದ ಬಳಿಕ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆ ಜರಗಿತು

ಸುದ್ದಿ ವಿವರ : ಪಿ.ಆರ್.ರವಿಶಂಕರ್

                   8483980035

Related posts

ಲಂಡನ್ ವಿಶ್ವ ಶೃಂಗಸಭೆಯಲ್ಲಿ ಐಕಾನಿಕ್ ಮಹಿಳಾ ವಿಶ್ವ ನಾಯಕಿ” ಪ್ರಶಸ್ತಿಗೆ ಡಾ. ವಿಜೇತಾ ಎಸ್. ಶೆಟ್ಟಿಆಯ್ಕೆ.

Mumbai News Desk

ಶ್ರೀ ನಿತ್ಯಾನಂದ ಸೇವಾ ಸಂಸ್ಥೆ, ಮೀರಾಭಾಯಂದರ್ ವತಿಯಿಂದ ಗಣೇಶ್ ಪುರಿ ಪಾದಯಾತ್ರೆ.

Mumbai News Desk

ಪುಷ್ಪ 2 ಯಶಸ್ಸಿನ ಬೆನ್ನಲ್ಲೇ ನಟ ಅಲ್ಲು ಅರ್ಜುನ್ ಬಂಧನ, ಅಭಿಮಾನಿಗಳು ಶಾಕ್

Mumbai News Desk

ಮುಂಬೈ – ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ವಿಸ್ತರಿಸುವ ಸಾಧ್ಯತೆ

Mumbai News Desk

ಮುಲ್ಕಿ ಹೊಸ ಆಂಗಣ ತಿಂಗಳ ಬೆಳಕು ಕಾರ್ಯಕ್ರಮ, ದೈವ ಪಾತ್ರಿ ಮಾನಂಪಾಡಿ ಯಾದವ ಪೂಜಾರಿಗೆ ಸನ್ಮಾನ.

Mumbai News Desk

ತೀಯಾ ಫ್ಯಾಮಿಲಿ ಯು.ಎ.ಇ. ಅಧ್ಯಕ್ಷರಾಗಿ ಜಸ್ಮಿತಾ ವಿವೇಕಾನಂದ್

Mumbai News Desk