
.
.
ಶತಮಾನೋತ್ಸವದ ವರ್ಷಪೂರ್ತಿ ಕಾರ್ಯಕ್ರಮಗಳಿಗೆ ಭಗವಂತನ ಅನುಗ್ರಹಿರಲಿ: ಡಾ. ಸುರೇಶ್ ರಾವ್
ಮುಂಬಯಿ . ಬಿ. ಎಸ್ ಕೆ.ಬಿ.ಎಸೋಸಿಯೇಶನ್, ಗೋಕುಲವು ನೂತನ ವರ್ಷ ೨೦೨೫ ವರ್ಷವನ್ನು ಜನವರಿ ೧ ರಂದು, ವಡಾಲಾ ಶ್ರೀ ರಾಮ ಮಂದಿರದಿಂದ ಸಾಯನ್ ಶ್ರೀ ಕೃಷ್ಣ ಮಂದಿರದವರೆಗೆ ಪಾದಯಾತ್ರೆಯ ಮೂಲಕ ತನ್ನ ಶತಮಾನೋತ್ಸವದ ಪ್ರಥಮ ದಿನವನ್ನು ಅತ್ಯಂತ ಸಂಭ್ರಮದಿಂದ ಸ್ವಾಗತಿಸಿತು.

ಮುಂಜಾನೆ ೬ ಗಂಟೆಗೆ ವಡಾಲ ಶ್ರೀ ರಾಮ ಮಂದಿರದಲ್ಲಿ ಗೋಕುಲದ ಅಧ್ಯಕ್ಷರು ಡಾ. ಸುರೇಶ್ ರಾವ್ ನೇತೃತ್ವದಲ್ಲಿ ನೆರೆದ ನೂರಾರು ಸದಸ್ಯರನ್ನು ವಡಾಲ ಶ್ರೀ ರಾಮ ಮಂದಿರದ ಪದಾಧಿಕಾರಿಗಳು ಆದರಾಭಿಮಾನದಿಂದ ಸ್ವಾಗತಿಸಿದರು. ಭಜನಾ ಮಂಡಳಿಯಿಂದ ಭಜನೆ ನೆರವೇರಿದ ನಂತರ ಶ್ರೀ ರಾಮ ಮಂದಿರದ ಅರ್ಚಕರಾದ ವೇ.ಮೂ. ಗೋವಿಂದ ಆಚಾರ್ಯರವರು ಶ್ರೀ ರಾಮ ದೇವರಿಗೆ ಪೂಜೆ ನೆರವೇರಿಸಿ, ಶತಮಾನ ಪೂರೈಸಿದ ಸಂಸ್ಥೆಯನ್ನು ಅಭಿನಂದಿಸಿ, ಮುಂದಿನ ಒಂದು ವರ್ಷದಲ್ಲಿ ನಡೆಯಲಿರುವ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಶೆಕ್ಷಣಿಕ ಕಾರ್ಯಕ್ರಮಗಳು ಅತ್ಯುತ್ತಮವಾಗಿ ನೆರವೇರುವಂತೆ ಭಗವಂತ ಅನುಗ್ರಹಿಸಲಿ ಎಂದು ಶುಭ ಹಾರೈಸಿ, ತೀರ್ಥ ಪ್ರಸಾದ ವಿತರಿಸಿದರು. ಶ್ರೀ ರಾಮ ಮಂದಿರದ ಅಧ್ಯಕ್ಷರು ಮುಕುಂದ್ ಕಾಮತ್, ಉಪಾಧ್ಯಕ್ಷ ಅನಂತ್ ಪೈ, ಕಮಲಾಕ್ಷ ಸರಾಫ್ ಮುಂತಾದ ಅನೇಕ ಗಣ್ಯರು ಉಪಸ್ಥಿತರಿದ್ದರು.

ಬಳಿಕ, ಗೋಕುಲ ಸದಸ್ಯರು ಭಜನೆ, ಕೋಲಾಟ. ಗೋವಿಂದ, ಗೋವಿಂದ, ಹರೇ ರಾಮ ಹರೇ ಕೃಷ್ಣ ನಾಮಾವಳಿ ಘೋಷಣೆಯೊಂದಿಗೆ ಶ್ರೀ ರಾಮನೆಡೆಯಿಂದ ಶ್ರೀ ಕೃಷ್ಣನೆಡೆಗೆ ಕಾಲ್ನಡಿಗೆಯ ಮೂಲಕ ಗೋಕುಲವನ್ನು ತಲಪಿದರು. ಗೋಕುಲದ ಅರ್ಚಕ ಶ್ರೀ ಅಕ್ಷಯ ಬಲ್ಲಾಳ್, ಶ್ರೀ ದೇವರಿಗೆ ಮಂಗಳಾರತಿ ಬೆಳಗಿ, ಪ್ರಾರ್ಥನೆಯೊಂದಿಗೆ ತೀರ್ಥ ಪ್ರಸಾದ ವಿತರಿಸಿದರು.

ಗೋಕುಲದ ಅಧ್ಯಕ್ಷರು ಡಾ. ಸುರೇಶ್ ಎಸ್ ರಾವ್, ಮಾಜಿ ಅಧ್ಯಕ್ಷ ಕೆ. ಸುಬ್ಬಣ್ಣ ರಾವ್ ಅಭಿನಂದನಾ ಮಾತುಗಳನ್ನಾಡಿದರು. ಇಂದು ನೂತನ ವರ್ಷದ ಪ್ರಥಮ ದಿನ, ತ್ರೇತಾ ಯುಗದ ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರನ ಹಾಗೂ ದ್ವಾಪರಾ ಯುಗದ ಗೀತಾಚಾರ್ಯ ಶ್ರೀ ಕೃಷ್ಣನ ದರ್ಶನ ಭಾಗ್ಯ ದೊರಕಿದೆ, ಮುಂದಿನ ಒಂದು ವರ್ಷದ ಕಾರ್ಯಕ್ರಮಗಳು ಸುಗಮವಾಗಿ ನೆರವೇರಲಿ ಎಂದು ಶುಭ ಹಾರೈಸಿದರು.

ಬಿ. ಎಸ್.ಕೆ.ಬಿ. ಸಂಸ್ಥೆ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಅಧ್ಯಕ್ಷ ಡಾ. ಸುರೇಶ್ ಎಸ ರಾವ್ ರವರ ಮುಂದಾಳತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ವಿಜಯಲಕ್ಷ್ಮಿ ಸುರೇಶ್ ರಾವ್, ಉಪಾಧ್ಯಕ್ಷ ವಾಮನ್ ಹೊಳ್ಳ, ಗೌ. ಕಾರ್ಯದರ್ಶಿ ಎ.ಪಿ.ಕೆ. ಪೋತಿ, ಕೋಶಾಧಿಕಾರಿ ಹರಿದಾಸ್ ಭಟ್, ಜತೆ ಕೋಶಾಧಿಕಾರಿ ಗಣೇಶ್ ಭಟ್, ಜತೆ ಕಾರ್ಯದರ್ಶಿ ಚಿತ್ರಾ ಮೇಲ್ಮನೆ, ಮಹಿಳಾ ವಿಭಾಗದ ಅಧ್ಯಕ್ಷೆ ಸಹನಾ ಪೋತಿ, ಯುವ ವಿಭಾಗದ ಅಧ್ಯಕ್ಷ ಪ್ರಶಾಂತ್ ಹೆರ್ಲೆ, ಕಲಾವೃಂದದ ಅಧ್ಯಕ್ಷೆ ವಿನೋದಿನಿ ರಾವ್, ಭಜನಾ ಮಂಡಳಿ ಅಧ್ಯಕ್ಷೆ ಪ್ರೇಮಾ ಎಸ್ ರಾವ್,, ದೀಪಕ್ ಶಿವತ್ತಾಯ, ಕೃಷ್ಣ ಮಂಜರಬೆಟ್ಟು, ರಾಮ ವಿಠಲ ಕಲ್ಲೂರಾಯ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ವಿಶ್ವಸ್ಥ ಮಂಡಳಿ ಸದಸ್ಯರಾದ ಬಿ. ರಮಾನಂದ ರಾವ್, ಕೃಷ್ಣ ಆಚಾರ್ಯ, ಶೈಲಿನಿ ರಾವ್, ಮಾಜಿ ಅಧ್ಯಕ್ಷ ಸುಬ್ಬಣ್ಣ ರಾವ್, ಆಶ್ರಯದ ಅಧ್ಯಕ್ಷ ರಾಜಾರಾಮ ಆಚಾರ್ಯ, ಸಂಚಾಲಕಿ ಚಂದ್ರಾವತಿ ರಾವ್ ಸಹಿತ ಅನೇಕ ಸದಸ್ಯರು ಪಾಲ್ಗೊಂಡರು. .