
.
.
ಸಂಘದ, ಮಂದಿರದ ಉನ್ನತಿಗೆ ಶ್ರಮಿಸುವೆ – ರಾಜು ಎಸ್ ಪೂಜಾರಿ,
ಮುಂಬಯಿ ಜ 3.ಚಿತ್ರಾಪು ಬಿಲ್ಲವರ ಸಂಘ ಮುಂಬೈ ಇದರ 79ನೇ ವಾರ್ಷಿಕ ಮಹಾಸಭೆ ಇದೇ ಕಳೆದ ತಾರೀಕು 29/ 12 /24, ರವಿವಾರ ಬೆಳಿಗ್ಗೆ 10:30ಕ್ಕೆ ಸಾಂತಕ್ರೂಜ್ ಪೂರ್ವದ ಬಿಲ್ಲಭ ಭವನದ ಸಭಾಗ್ರಹದಲ್ಲಿ ಸಂಘದ ಅಧ್ಯಕ್ಷರಾದ ರಾಜು ಎಸ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಜರಗಿತು ,
ಗೌರವ ಪ್ರಧಾನ ಕಾರ್ಯದರ್ಶಿ ಉಮೇಶ್ ಜಿ ಕೋಟ್ಯಾನ್ ಸ್ವಾಗತಿಸಿದರು. ಕಾರ್ಯಸೂಚಿಯ ಪ್ರಕಾರ ಸಂಘ ಹಾಗೂ ಮಂದಿರದ ಆರಾಧ್ಯ ದೇವರಾದ ಶ್ರೀ ವಿಠೋಬ ರುಕುಮಾಯಿ ಅಮ್ಮನವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಮಹಾಸಭೆಗೆ ಚಾಲನೆ ನೀಡಲಾಯಿತು.
ಸಂಘದ ಅಧ್ಯಕ್ಷ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರ ಹಾಗೂ ಸಂಘದ ಹಿರಿಯ ವ್ಯಕ್ತಿಗಳ ಸಮ್ಮುಖದಲ್ಲಿ ದೇವರಿಗೆ ದೀಪ ಪ್ರಜ್ವಲಿಸಲಾಯಿತು.

ಪ್ರಾರ್ಥನೆಯ ಬಳಿಕ ವರದಿ ವರ್ಷದಲ್ಲಿ ಸ್ವರ್ಗಸ್ತರಾದ ಸಂಘದ ಹಾಗೂ ಚಿತ್ರಪು ಗ್ರಾಮದ ಸದಸ್ಯರಿಗೆ ಶ್ರದ್ದಾಂಜಲಿ ನೀಡಲಾಯಿತು. ಸಂಘದ ಕೆಲವು ವರ್ಷಗಳಿಂದ ಲೆಕ್ಕ ಪರಿಶೋಧನೆ ಮಾಡಿದ ಸಿಎ ಕೆ.ಪಿ ಜಗನ್ನಾಥ್ ಶಾಸ್ತ್ರಿ ಅವರ ನಿಧನದ ಬಗ್ಗೆ ಕೂಡ ದುಃಖ ಸೂಚಿಸಲಾಯಿತು. ನಂತರ ಸಂಘದ ಅಧ್ಯಕ್ಷರು ಇತರ ಕಾರ್ಯಸೂಚಿಯನ್ನು ಸಭೆಗೆ ತಿಳಿಸಿದರು.
ಗತ ವರ್ಷದ ಮಹಾಸಭೆಯ ವರದಿಯನ್ನು ಕಾರ್ಯದರ್ಶಿ ಉಮೇಶ್ ಕೋಟ್ಯಾನ್ ರವರು ಸಂಕ್ಷಿಪ್ತವಾಗಿ ಸಭೆಯ ಮುಂದೆ ಸಾದರ ಪಡಿಸಿದರು. ನಂತರ ಶೇಖರ್ ಜೆ ಚಿತ್ರಾಪು ಅವರ ಸೂಚನೆ ಮತ್ತು ರಾಧಾ ಕೋಟ್ಯಾನ್ ರವರ ಅನುಮೋದನೆ ಯೊಂದಿಗೆ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಗೌರವ ಕೋಶಾಧಿಕಾರಿ ಸೋಮನಾಥ್ ಪಿ ಪೂಜಾರಿ ಅವರು ಲೆಕ್ಕ ಪರಿಶೋಧಕರು ಪರಿಶೀಲಿಸಿದ ವಾರ್ಷಿಕ ಲೆಕ್ಕಪತ್ರವನ್ನು ಸಭೆಯ ಮುಂದೆ ಮಂಡಿಸಿದರು.
01-04-24 ರಿಂದ 31 -03-25ರ ಸಾಲಿನ ಲೆಕ್ಕಪರಿಶೋಧಕರಾಗಿ ಅಶ್ವಜಿತ್ ಅಸೋಸಿಯೇಟ್ ಇವರನ್ನು ಪುನರಪಿ ನೇಮಿಸಲಾಯಿತು.
ಈ ಸಂದರ್ಭ ಹಲವಾರು ವರ್ಷಗಳಿಂದ ಸಂಘದ ಸರ್ವ ಕಾರ್ಯ ಚಟುವಟಿಕೆಗಳಲ್ಲಿ ಭಾಗಿಯಾಗಿ ತನು -ಮನ- ಧನಗಳನಿಟ್ಟು ನಿಸ್ವಾರ್ಥ ಸೇವೆ ಸಲ್ಲಿಸಿದ ಹಿರಿಯ ಸದಸ್ಯರುಗಳಾದ ರವಿ ಸನಿಲ್, ತಾರಾನಾಥ ಎಸ್ ಅಮೀನ್, ಗಂಗಾಧರ್ ಎಸ್ ಕೋಟ್ಯಾನ್, ಯಕ್ಷಗಾನ ಕಲಾವಿದೆ, ಶನಿ ಗ್ರಂಥ ಪಾರಾಯಣದ ಅರ್ಥದಾರಿ ರಕ್ಷಿತಾ ಕೋಟ್ಯಾನ್ ಇವರನ್ನು ಶಾಲು, ಫಲ-ಪುಷ್ಪ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಸಂಘದ ಆರ್ಥಿಕ ನಿಧಿಯ ಸಂಗ್ರಹಕ್ಕೆ ಕೇವಲ ಒಂದು ವರ್ಷದ ಅವಧಿಯಲ್ಲಿ ಸುಮಾರು 2 ಲಕ್ಷ ರೂಪಾಯಿ ಸಂಗ್ರಹ ಮಾಡಿರುವ ಕಾರ್ಯಕಾರಿ ಸಮಿತಿಯ ಸದಸ್ಯರಾದ ಶೇಖರ್ ಎಚ್ ಅಂಚನ್ ಅವರನ್ನು ಶಾಲು ಹೂಗುಚ್ಛ ನೀಡಿ ಗೌರವಿಸಲಾಯಿತು.

ದೆಹಲಿ ಬೋರ್ಡ್ ನಡೆಸಿದ ಅಂತಿಮ ಪರೀಕ್ಷೆಯಲ್ಲಿ 87.03% ಪಡೆದು ಉತ್ತೀರ್ಣನಾದ ಕುಮಾರಿ ಟ್ವಿಶಾ ಸಿ ಕೋಟ್ಯಾನ್ ಹಾಗೂ ಬಾಂಬೆ ಯುನಿವರ್ಸಿಟಿ ನಡೆಸಿದ ಅಂತಿಮ ಬಿಕಾಂ ( ಇನ್ವೆಸ್ಟ್ಮೆಂಟ್ ಬ್ಯಾಂಕ್ ಕೋರ್ಸ್) ನಲ್ಲಿ 91.02% ಪಡೆದ ಪ್ರನಯ್ ಎಸ್ ಪೂಜಾರಿ ಅವರಿಗೆ ಪಾರಿತೋಷಕ, ಹೂಗುಚ್ಛ ನೀಡಿ ಗೌರವಿಸಲಾಯಿತು.
ಸಭಿಕರ ಪರವಾಗಿ ಸಂಘದ ಮಾಜಿ ಅಧ್ಯಕ್ಷರಾದ ಹಾಗೂ ರಾಷ್ಟ್ರವಾದಿ ಕಾಂಗ್ರೆಸ್‌ನ ನೇತಾರ ಲಕ್ಷಣ ಸಿ ಪೂಜಾರಿ ಮಾತನಾಡುತ್ತ ” ಸಂಘದ ನಿಯಮಾವಳಿಯ ಪ್ರಕಾರ ಮಹಾಸಭೆಯನ್ನು ಪ್ರತಿ ವರ್ಷ ಅಕ್ಟೋಬರ್, ಸೆಪ್ಟೆಂಬರ್ ಒಳಗೆ ಮಾಡಬೇಕು ಮತ್ತು ಸಂಘದ ಹಾಗೂ ಮಂದಿರದ ಕಾರ್ಯಕಾರಿ ಸಮಿತಿಯ ಸದಸ್ಯರು ಉತ್ತಮ ಕಾರ್ಯವನ್ನು ಮಾಡುತ್ತಿದ್ದು, ಇತರ ಸದಸ್ಯರುಗಳು ಸ್ಪಂದಿಸಿ ಸದಸ್ಯತನ ಹೆಚ್ಚಿಸುವಂತೆ ಸಲಹೆ ನೀಡಿದರು.
ಶೇಖರ್ ಜೆ ಚಿತ್ರಾಪು ಮಾತನಾಡುತ್ತಾ ಹಿರಿಯ ಸದಸ್ಯರು ಮಾಡಿದ ಉತ್ತಮ ಕಾರ್ಯದಿಂದ ಇಂದು ಮಹಾನಗರದಲ್ಲಿ ನಾವು ತಲೆ ಎತ್ತಿ ನಿಲ್ಲುವಂತೆ ಆಗಿದೆ. ಆದ್ದರಿಂದ ಸಂಘದ ಆರ್ಥಿಕ ಪರಿಸ್ಥಿತಿಯನ್ನು ಸದೃಢಗೊಳಿಸಬೇಕು.ಹೆಚ್ಚಿನ ಸದಸ್ಯತನ ಮಾಡುವಂತೆ ಸಲಹೆ ನೀಡಿದರು.

ವಿಜಯ್ ಮುಲ್ಕಿ ಮಾತನಾಡುತ್ತಾ ನಾವು ನಮ್ಮ ಸಂಘದ ಉಳಿತಾಯ ಖಾತೆಯಲ್ಲಿ ಆದಷ್ಟು ಕಡಿಮೆ ಮೊತ್ತ ಇಡಬೇಕು . ಮತ್ತು ಸದಸ್ಯತನ ಹೆಚ್ಚು ಮಾಡಿದರೆ ಸಂಘದ ಮಹಾ ಸಭೆಗೆ ಹೆಚ್ಚು ಜನ ಬರಬಹುದು ಎಂದು ತಿಳಿಸಿದರು.
ರವಿ ಸನಿಲ್ ತನ್ನ ಅನಿಸಿಕೆ ತಿಳಿಸುತ್ತಾ ಮಹಾಸಭೆಯಲ್ಲಿ ಗೌರವಿಸಿದ್ದಕ್ಕೆ ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರಿಗೆ ಹಾಗೂ ಸಂಘದ ಹಿರಿಯ ಸದಸ್ಯರಿಗೆ ನನ್ನ ಮನದಾಳದ ವಂದನೆಯನ್ನು ಸಲ್ಲಿಸಿದರು ಮತ್ತು ಸದಸ್ಯತನ ಹೆಚ್ಚಿಸುವಂತೆ ಪ್ರಯತ್ನಿಸಬೇಕು, ಸಂಘದ ಆರ್ಥಿಕ ಮಟ್ಟ ಸುದೃಢವಾಗಿದ್ದರೆ ಆಗ ಎಲ್ಲರೂ ಸಂಘಕ್ಕೆ ಬರುತ್ತಾರೆ. ಆರ್ಥಿಕ ಮಟ್ಟ ಉತ್ತಮ ಇಲ್ಲದಿದ್ದರೆ ಸದಸ್ಯರ ಅನುಪಸ್ಥಿತಿ ಕಂಡುಬರುತ್ತದೆ. ತಾನು ಕೂಡ ಸಂಘಕ್ಕೆ ಧನ ಸಂಗ್ರಹ ಮಾಡುವಲ್ಲಿ ತನ್ನ ಅಳಿಲುಸೇವೆ ನೀಡುವುದಾಗಿ ಭರವಸೆ ನೀಡಿದರು.
ಇನ್ನೋರ್ವ ಸನ್ಮಾನಿತೆ ರಕ್ಷಿತಾ ಕೋಟ್ಯಾನ್ ಮಾತನಾಡುತ್ತಾ ತನ್ನನ್ನು ಮಹಾಸಭೆಯಲ್ಲಿ ಗೌರವಿಸಿದ್ದಕ್ಕೆ ಸಂಘದ ಎಲ್ಲ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಮತ್ತು ಎಲ್ಲಾ ಹಿರಿಯ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದಳು.
ಪಾರಿತೋಷಕ ವಿಜೇತ ಪ್ರನಯ್ ಎಸ್ ಪೂಜಾರಿ ತನ್ನನ್ನು ಸಭೆಯಲ್ಲಿ ಪಾರಿತೋಷಕವನ್ನು ನೀಡಿ ಗೌರವಿಸಿದ್ದಕ್ಕೆ ಹೃದಯಂತರಾಳದ ವಂದನೆ ಸಲ್ಲಿಸಿದರು, ಮತ್ತು ಮುಂದಿನ ಮಹಾಸಭೆಯಲ್ಲಿ ತಾನು ಭಾಗವಹಿಸಿ ತನ್ನ ಇತರ ಸಂಬಂಧಿಕರನ್ನು ಕೂಡ ಬರುವಂತೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಸಂಘದ ಸದಸ್ಯ ಮತ್ತು ಭಾರತ್ ಬ್ಯಾಂಕಿನ ನಿರ್ದೇಶಕರಾದ ನಿರಂಜನ್ ಎಲ್ ಪೂಜಾರಿ ತನ್ನ ಅಭಿಪ್ರಾಯ ತಿಳಿಸುತ್ತಾ ತನ್ನ ತಂದೆ ಲಕ್ಷ್ಮಣ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಕೂಡ ಸಂಘದ ಕಾರ್ಯಕಾರಿ ಸಮಿತಿಯವರಿಂದ ಒಳ್ಳೆ ಕಾರ್ಯಗಳು ನಡೆದಿವೆ. ಇನ್ನು ಮುಂದಕ್ಕೆ ಡಿಜಿಟಲ್ ಮೀಡಿಯಾದಲ್ಲಿ ಸಂಘದ ಕಾರ್ಯಕ್ರಮವನ್ನು ವಿವರಣೆ ಮಾಡಬೇಕು ಮತ್ತು ಪಂಡರಪುರಕ್ಕೆ ಹೋಗುವ ದಿನವನ್ನು ನಿಗದಿಸ ಬೇಕು ಪಾಂಡುರಂಗನ ದರ್ಶನ ಮಾಡಿದರೆ ಉತ್ತಮ, ತಾನು ಕೂಡ ಅದರಲ್ಲಿ ಸಹಭಾಗಿ ಆಗುತ್ತೇನೆ ಎಂದರು.
ಸಂಘದ ಕಾರ್ಯಕಾರಿ ಸಮಿತಿಯ ಶೇಖರ್ ಎಚ್ ಅಂಚನ್ ಮಾತನಾಡುತ್ತಾ ಹೆಚ್ಚಿನ ಆರ್ಥಿಕ ನಿಧಿಯನ್ನು ಸಂಗ್ರಹಿಸಿದ್ದಕ್ಕೆ ಸಂಘದ ವತಿಯಿಂದ ಗೌರವಿಸಿದ್ದಕ್ಕೆ ಧನ್ಯವಾದ. ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಧನಸಂಗ್ರಹ ಮಾಡುವ ಭರವಸೆ ನೀಡಿದರು ಮತ್ತು ಊರಿನಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ನೀಡುವ ನೀಡಬೇಕು ಹಾಗೂ ಪಂಡರಪುರಕ್ಕೆ ಆದಷ್ಟು ಬೇಗ ಹೋಗಿ ದೇವರ ದರ್ಶನ ಮಾಡಬೇಕು ಎಂದು ತಿಳಿಸಿದರು.
ಸಂಘದ ಜೊತೆ ಕಾರ್ಯದರ್ಶಿಗಳಾದ ನಿಶಿತ್ ಎಸ್ ಕೋಟ್ಯಾನ್, ಮಧುಕರ್ ಆರ್ ಕೋಟ್ಯಾನ್ ಸಂದರ್ಭೋಜಿತವಾಗಿ ಮಾತನಾಡಿದರು.
ಕೋಶಾಧಿಕಾರಿಯದ ಸೋಮನಾಥ ಪೂಜಾರಿ ಅವರು ತನ್ನ ಅಭಿಪ್ರಾಯ ತಿಳಿಸುತ್ತಾ ಸಂಘದ ಆರ್ಥಿಕ ಸ್ಥಿತಿಯನ್ನು ಒಂದು ವರ್ಷದಲ್ಲಿ ಉತ್ತಮಪಡಿಸಿದ್ದೇವೆ.ಇನ್ನು ಬರುವ ವರ್ಷದಲ್ಲಿ ನಮ್ಮ ಕಾರ್ಯಕಾರಿ ಸಮಿತಿ ಸದಸ್ಯರೊಂದಿಗೆ ಚರ್ಚಿಸಿ ಧನಸಂಗ್ರಹ ಮಾಡುವ ರೂಪುರೇಷೆಯನ್ನು ಮಾಡಿ ಊರಿನ ಹಾಗೂ ಮುಂಬೈಯ ಸದಸ್ಯರಿಗೆ ವೈದಕೀಯ ಮತ್ತು ವಿದ್ಯಾರ್ಜನೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತೇವೆ. ಮತ್ತು ಸದಸ್ಯರ ಸೂಚನೆಯಂತೆ ಸಂಘದ ಉಳಿತಾಯ ಖಾತೆಯಲ್ಲಿರುವ ಹಣವನ್ನು, ಸಂಘದ ನಿರಖು ಖಾತೆ (ಎಫ್ ಡಿ )ಯಲ್ಲಿ ಹೆಚ್ಚು ಆದಾಯ ಬರುವಂತೆ ಪ್ರಯತ್ನಿಸುತ್ತೇವೆ ಎಂದು ಸದಸ್ಯರಿಗೆ ಮನವರಿಕೆ ಮಾಡಿದರು.
ಅಧ್ಯಕ್ಷೀಯ ಭಾಷಣ ಮಾಡಿದ ರಾಜು ಎಸ್ ಪೂಜಾರಿ ಅವರು ” ಮಹಾಸಭೆಯನ್ನು ತುಂಬಾ ಉತ್ತಮ ರೀತಿಯಲ್ಲಿ ನಡೆಸಲು ಸಹಕರಿಸಿದ ಎಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ತುಂಬು ಹೃದಯದ ಧನ್ಯವಾದ ಸಮರ್ಪಿಸಿದರು. ಎಲ್ಲ ಸದಸ್ಯರೊಂದಿಗೆ ಚರ್ಚಿಸಿ ಸಂಘದ ಸದಸ್ಯತನ ಹೆಚ್ಚಿಸಲು ಹಾಗೂ ಧನಸಂಗ್ರಹಕ್ಕೆ ಮಹತ್ವ ಕೊಟ್ಟು, ಸಂಘದ ಹಿರಿಯರಿಂದ ಅನುಭವ ಪಡೆದು ಸಂಘ ಹಾಗೂ ಮಂದಿರದ ಉನ್ನತಿಗೆ ಶ್ರಮಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಉಪಸ್ತರಿದ್ದ ಲಕ್ಷ್ಮಣ್ ಸಿ ಪೂಜಾರಿ, ಶೇಖರ್ ಚಿತ್ರಪು , ವಿಜಯ ಮುಲ್ಕಿ, ರವಿ ಜಿ ಸನಿಲ್, ಶೇಖರ್ ಎಚ್ ಅಂಚನ್ ಸಲಹೆ ಸೂಚನೆಗಳನ್ನು ನೀಡಿದರು,
ಕೊನೆಯಲ್ಲಿ ಧನ್ಯವಾದ ನೀಡಿದ ಗೌರವ ಪ್ರಧಾನ ಕಾರ್ಯದರ್ಶಿಯಾದ ಉಮೇಶ್ ಜಿ ಕೋಟ್ಯಾನ್ ಅವರು ಮಹಾಸಭೆಯನ್ನು ಸುಸಂಗವಾಗಿ ನಡೆಸಿದ್ದ ಕಾರ್ಯಾಧ್ಯಕ್ಷರಾದ ರಾಜು ಎಸ್ ಪೂಜಾರಿ, ಸಂಘದ ಎಲ್ಲಾ ಪದಾಧಿಕಾರಿಗಳಿಗೆ, ಉಪಸ್ಥಿತರಿದ್ದ ಸದಸ್ಯರಿಗೆ ಧನ್ಯವಾದ ಸಮರ್ಪಿಸಿದರು.
ಸಂಘದ ಉಪಾಧ್ಯಕ್ಷ ವಿ ಕೆ ಕುಂದರ್, ಜತೆ ಕಾರ್ಯದರ್ಶಿ ಗಳಾದ ಮಧುಕರ್ ಆರ್ ಕೋಟ್ಯಾನ್, ನಿಶಿತ್ ಎಸ್ ಕೋಟ್ಯಾನ್, ಜತೆ ಕೋಶಧಿಕಾರಿ ಕಿಶೋರ್ ಎಸ್ ಕರ್ಕೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು