
ಮುಂಬಯಿ : ಶ್ರೀ ಸತ್ಯಧರ್ಮ ದೇವೀ ದೇವಸ್ಥಾನ, ಮುಖ್ಯ ಧರ್ಮ ಬೀಡು, ಶ್ರೀ ಕ್ಷೇತ್ರ ಮುಕ್ಕ, ಮಂಗಳೂರು ಇದರ ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಬಗ್ಗೆ ಸಮಾಲೋಚನ ಸಭೆಯು ದಿನಾಂಕ 11-01-2025 ರಂದು ಶನಿವಾರ ಸಂಜೆ ಗಂಟೇ 4 ಕ್ಕೆ ಸರಿಯಾಗಿ ಬಿಲ್ಲವರ ಭವನ ಸಾಂತಾಕ್ರೂಸ್, ಮುಂಬಯಿಯ ಸಭಾಗ್ರಹದಲ್ಲಿ ಬಿಲ್ಲವರ ಅಸೋಸಿಯೇಷನ್ ನ ಅಧ್ಯಕ್ಷರಾದ ಶ್ರೀ ಹರೀಶ್ ಜಿ. ಅಮೀನ್ (ಭಂಡಾರ ಮನೆ ಮುಕ್ಕ ) ಇವರ ಮುಂದಾಳುತನದಲ್ಲಿ ಜರಗಲಿದೆ. ಆ ಪ್ರಯುಕ್ತ ಶ್ರೀ ಕ್ಷೇತ್ರದ ಎಲ್ಲಾ ಭಕ್ತಾಭಿಮಾನಿಗಳು ಆಗಮಿಸಿ ಈ ಸಭೆಯಲ್ಲಿ ಉಪಸ್ಥಿತರಿದ್ದು ತಮ್ಮ ಅಮೂಲ್ಯವಾದ ಸಲಹೆ ಸೂಚನೆಗಳನ್ನು ನೀಡಿ ಸಭೆಯನ್ನು ಚಂದಕಾಣಿಸಿಕೊಡಬೇಕಾಗಿ ಜೀರ್ಣೋದ್ದಾರ ಸಮಿತಿಯ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದೆ

