ಮೊಗವೀರ ಮಹಾಜನ ಸೇವಾ ಸಂಘ ಡೊಂಬಿವಲಿ ಸ್ಥಳೀಯ ಸಮಿತಿಯವತಿಯಿಂದ ಕಲ್ಯಾಣ-ಡೊಂಬಿವಲಿ ಪರಿಸರದ ಸದಸ್ಯರ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಜನವರಿ 19ರಂದು ಸಂಘದ ಕಚೇರಿ, ಸುಮಿತ್ರಾ ನಿವಾಸ್, ಮೊದಲ ಮಹಡಿ, ದೇವಿ ಚೌಕ್, ಶಾಸ್ತ್ರಿ ನಗರ, ಡೊಂಬಿವಲಿ ಪಶ್ಚಿಮ ಇಲ್ಲಿ ಏರ್ಪಡಿಸಲಾಗಿದೆ.
ಸ್ಪರ್ಧೆಯು ತರಗತಿ ಜೂನಿಯರ್ ಕೆಜಿ ಮತ್ತು ಸೀನಿಯರ್ ಕೆಜಿ, 1 ರಿಂದ 4, 5 ರಿಂದ 7 ಮತ್ತು 8 ರಿಂದ 10ನೇ ತರಗತಿಯವರೆಗೆ ಹೀಗೆ ನಾಲ್ಕು ವಿಭಾಗದಲ್ಲಿ ವಿಂಗಡಿಸಲಾಗಿದೆ.
ಹೆಚ್ಚಿನ ಮಕ್ಕಳಿಗೆ ಅನುಕೂಲವಾಗಲೆಂದು ಮುಂಜಾನೆ ಗಂಟೆ 9.30 ರಿಂದ 11 ಗಂಟೆಯ ತನಕ ಮತ್ತು 11.15 ರಿಂದ 12.45 ರ ತನಕ ಹೀಗೆ 2 ತಂಡಗಳಲ್ಲಿ ನೆರವೇರಲಿದೆ ಎಂದು ಕಾರ್ಯಧ್ಯಕ್ಷರಾದ ರಾಜು ಮೊಗವೀರ ತಗ್ಗರ್ಸೆ ಹಾಗೂ ಕಾರ್ಯದರ್ಶಿ ಸಂತೋಷ ಪುತ್ರನ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂತೋಷ ಪುತ್ರನ್ ಮೊ.ನಂ – 9930023998, ನಿಶಾ ಮೆಂಡನ್ ಮೊ.ನಂ – 9967371724 ಹಾಗೂ ದಿನೇಶ್ ಪುತ್ರನ್ ಮೊ ನಂ. 8779295645 ಕ್ಕೆ ಸಂಪರ್ಕಿಸಬಹುದು.