
ಮಂಗಳೂರು : ಕಲಾಸಕ್ತರ ಸಂಭ್ರಮಕ್ಕೆ ಹೊಸ ಹಾದಿ ತೆರೆದಿರುವ ಯುವ ಪ್ರತಿಭೆ ಆಕಾಶ್ ಅಜಿತ್ ಕುಮಾರ್ (ಆಶಿಕಿ ) ಅವರು ತಮ್ಮ ಮೊದಲ ಆಲ್ಬಮ್ “Tu Hi Hai” ಮೂಲಕ ಸಂಗೀತ ಪ್ರಪಂಚದಲ್ಲಿ ಪಾದಾರ್ಪಣೆ ಮಾಡಿದ್ದಾರೆ. ಇವರ ಈ ಪ್ರಯತ್ನವು ಕೇವಲ ಹೊಸ ಅನುಭವವೇ ಅಲ್ಲ, ಆದರೆ ಸಂಗೀತ ಪ್ರಿಯರ ಹೃದಯವನ್ನು ಗೆಲ್ಲುವ ಮಹತ್ವಾಕಾಂಕ್ಷೆಯ ಪ್ರಯತ್ನವಾಗಿದೆ.
ಈ ಆಲ್ಬಮ್‌ವು ಪ್ರೀತಿ, ಬಾಂಧವ್ಯ, ಭಾವನೆ ಮತ್ತು ಬದುಕಿನ ಬಣ್ಣವನ್ನು ಚಿತ್ರಿಸುವ ಮೂಲಕ ಶ್ರೋತೃಗಳ ಮನಸ್ಸಿನಲ್ಲಿ ಹೊಸ ದೃಷ್ಟಿಕೋನವನ್ನು ಮೂಡಿಸುವ ಪ್ರಯತ್ನವನ್ನು ಮಾಡಿದೆ. ಆಕರ್ಷಕ ಸಾಹಿತ್ಯ, ಮನಮುಟ್ಟುವ ಸಂಗೀತ ಸಂಯೋಜನೆ ಮತ್ತು ಯುವ ಪ್ರತಿಭೆಯ ಸ್ಫೂರ್ತಿಯ ಧ್ವನಿ ಈ ಆಲ್ಬಮ್‌ನ್ನು ವಿಭಿನ್ನವಾಗಿ ಮೂಡುವಂತೆ ಮಾಡಿದೆ .
ಆಶಿಕಿ ಸ್ವತಃ ತಾನೇ “Tu Hi Hai ” ಆಲ್ಬಮ್ ಅನ್ನು ಸಂಯೋಜಿಸಿ, ನಿರ್ದೇಶಿಸಿ, ಸಾಹಿತ್ಯ ಬರೆದಿರುವುದು ಗಮನಾರ್ಹ. ಅದರೊಂದಿಗೆ ವಿಡಿಯೋ ಚಿತ್ರೀಕರಣದ ಸಹನಿದ್ದೇಶಕರಾಗಿ ಸುಶ್ಮಿತಾ, ಡಿಓಪಿ ಯಾಗಿ ತೇಜು ತನ್ನ ವಿಭಿನ್ನ ಕೈಚಳಕ ತೋರಿದ್ದಾರೆ. ಆಲ್ಬಮ್ ಸಾಂಗ್ ನಲ್ಲಿ ಸ್ವತಃ ಆಶಿಕಿ ತಾನೇ ನಟಿಸಿದ್ದು, ಸಾಧನ ಪ್ರೇಯಸಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಆಲ್ಬಮ್‌ನಲ್ಲಿ ಕಾರ್ಯನಿರ್ವಹಿಸಿರುವ ತಂಡ ಅತ್ಯಂತ ಸಮರ್ಪಕತೆಯೊಂದಿಗೆ ಕೆಲಸ ಮಾಡಿದ್ದು, ಈ ಯುವ ಪ್ರತಿಭೆಗಳೇ ಇರುವ ತಂಡಕ್ಕೆ ಮತ್ತಷ್ಟು ಸಾಥ್ ನೀಡಲು ಕಾರ್ತಿಕ್ ಶೆಟ್ಟಿ, ಸಿಂಚನ ಕುಲಾಲ್, ನೇಹ ಕೋಟ್ಯಾನ್, ಕೃಪಾ ಗೌಡ, ಸುಶ್ಮಿತಾ ವೈಶಾಖ್ ತೆರೆಯ ಮರೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಇದೀಗ ಈ ಆಲ್ಬಮ್ ಸಾಂಗ್ ಸಾಮಾಜಿಕ ಮಾಧ್ಯಮಗಳು, ಸಂಗೀತ ಆಪ್‌ಗಳಲ್ಲಿ ಬಿಡುಗಡೆ ಯಾಗಿದೆ.
ತನ್ನದೇ ಆದ ಶೈಲಿಯಲ್ಲಿ ತಾನು ತನ್ನ ಕನಸುಗಳಿಗೆ ಜೀವ ನೀಡುವ ಪ್ರಯತ್ನ ಮಾಡಿದ್ದೇನೆ. ಎಲ್ಲಾ ಕಲಾಪೋಷಕರ ಪ್ರೀತಿ ಮತ್ತು ಬೆಂಬಲವೇ ತನ್ನ ಗೆಲುವಿನ ಹಾದಿ” ಎಂದು ಆಶಿಕಿ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಇಂತಹ ಚಿಕ್ಕ ವಯಸ್ಸಿನಲ್ಲಿ ದೊಡ್ಡ ಕನಸು ಹೊತ್ತ ಆಶಿಕಿ ಅವರು ತಮ್ಮ ಕಲೆ ಮತ್ತು ಪ್ರತಿಭೆ ಮೂಲಕ ಹೆಮ್ಮೆ ತಂದಿದ್ದಾರೆ. ಈ ಹೊಸ ಪ್ರತಿಭೆಯ ಪ್ರಯತ್ನಕ್ಕೆ ಬೆಂಬಲ ನೀಡುವುದೇ ನಮ್ಮ ಆಶಯ.