ಪುಣೆ : ಪುಣೆ ಬಂಟರ ಸಂಘದ ವತಿಯಿಂದ ಜರಗಿದ ಅಂತರ್‌ರಾಷ್ಟ್ರೀಯ ಬಂಟರ ಕ್ರೀಡಾಕೂಟದಲ್ಲಿ ಗುರುಪುರ ಬಂಟರ ಮಾತೃ ಸಂಘವು ತ್ರೋಬಾಲ್ ವಿಭಾಗದಲ್ಲಿ ಅದ್ವಿತೀಯ ಆಟವನ್ನು ಆಡಿ ತೃತೀಯ ಸ್ಥಾನವನ್ನು ಪಡೆದು ಕೆ.ಎಸ್.ಎಚ್. ಟ್ರೋಫಿ ಹಾಗೂ ನಗದನ್ನು ತನ್ನದಾಗಿಸಿಕೊಂಡಿದೆ. ಈ ಕ್ರೀಡಾಕೂಟದಲ್ಲಿ ಅಂತರ್‌ರಾಷ್ಟ್ರೀಯ ಮಟ್ಟದ ಹದಿನಾಲ್ಕು ಬಂಟರ ಸಂಘಗಳ ತ್ರೋಬಾಲ್ ತಂಡಗಳು ಸ್ಪರ್ಧಿಸಿದ್ದವು.
ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿದ, ದೇಶ ವಿದೇಶಗಳ ಹಲವಾರು ಬಂಟರ ಸಂಘಗಳ ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು ಗುರುಪುರ ಬಂಟರ ಮಾತೃ ಸಂಘವು ತ್ರೋಬಾಲ್ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತದೆ. ಇವರ ಈ ಸಾಧನೆಗೆ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ, ಕಾರ್ಯದರ್ಶಿ ಜಯರಾಮ್ ರೈ, ಮಹಿಳಾ ವಿಭಾಗದ ಅಧ್ಯಕ್ಷೆ ಇಂದಿರಾಕ್ಷಿ ಶೆಟ್ಟಿ, ಮಾಜಿ ಸಂಚಾಲಕರಾದ ಸುದರ್ಶನ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯದರ್ಶಿ ಜಯಲಕ್ಷ್ಮಿ ಸುಲಾಯ, ತಂಡದ ವ್ಯವಸ್ಥಾಪಕರು ತಿಲಕ್ ಶೆಟ್ಟಿ, ತರಬೇತುದಾರರಾದ ಧೀರಜ್, ಯುವವಿಭಾಗದ ಅಧ್ಯಕ್ಷ ಸಂದೀಪ್ ಆಳ್ವ, ಯುವವಿಭಾಗದ ಕಾರ್ಯದರ್ಶಿ ಪ್ರಖ್ಯಾತ್ ಶೆಟ್ಟಿ ಶೆಡ್ಡೆ, ಕ್ರೀಡಾಕಾರ್ಯದರ್ಶಿ ಪ್ರಖ್ಯಾತ್ ಶೆಟ್ಟಿ ಕುಳವೂರು ಇವರು ವಿಜಯ ಗಳಿಸಿದ ತಂಡವನ್ನು ಅಭಿನಂದಿಸಿದರು. ವಿಜಯ ಗಳಿಸಿದ ತಂಡವನ್ನು ಗುರುಪುರ ಬಂಟರ ಸಂಘದ ಕಛೇರಿಯಲ್ಲಿ ಅತ್ಮೀಯವಾಗಿ ಬರಮಾಡಿಕೊಂಡು ಗೌರವಿಸಲಾಯಿತು.
ಡಿ29ರಂದು ಪಡುಬಿದ್ರಿ ಬಂಟರ ಸಂಘದ ವತಿಯಿಂದ ಜರಗಿದ ಅಂತರ್‌ರಾಜ್ಯಮಟ್ಟದ ಬಂಟರ ಕ್ರೀಡಾಕೂಟದಲ್ಲಿ ಗುರುಪುರ ಬಂಟರ ಮಾತೃಸಂಘವು ವಾಲಿಬಾಲ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಹಾಗೂ ಕಬಡ್ಡಿ ಪಂದ್ಯಾಟದಲ್ಲಿ ತೃತೀಯ ಸ್ಥಾನವನ್ನು ಪಡೆದು ಅವಳಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ವಾಲಿಬಾಲ್ ಪಂದ್ಯಾಟದಲ್ಲಿ ಗುರುಪುರ ಬಂಟರ ಮಾತೃ ಸಂಘದ ಅನೀಶ್ ರೈ ಬೆಸ್ಟ್ ಆಲ್‌ರೌಂಡರ್ ಪ್ರಶಸ್ತಿಯನ್ನು ಪಡೆದರು.
ಸಂಘದ ಆಟಗಾರರ ಜೊತೆಗೆ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಶೆಡ್ಡೆ ಹೊಸಲಕ್ಕೆ, ಮಾಜಿ ಸಂಚಾಲಕರಾದ ಸುದರ್ಶನ್ ಶೆಟ್ಟಿ ಪೆರ್ಮಂಕಿ, ಯುವ ವಿಭಾಗದ ಅಧ್ಯಕ್ಷರಾದ ಸಂದೀಪ್ ಆಳ್ವ ಕುಳವೂರು, ಮಾಜಿ ಅಧ್ಯಕ್ಷರಾದ ರಾಜ್ ಕುಮಾರ್ ಶೆಟ್ಟಿ ತಿರುವೈಲುಗುತ್ತು, ಯಶ್ ಆಳ್ವ ಕಾರಮೊಗರುಗುತ್ತು. ಶಿವರಾಜ್ ಶೆಟ್ಟಿ ಶೆಡ್ಡೆ, ಉಮಾಶಂಕರ್ ಸುಲಾಯ, ಮಹಿಳಾ ವಿಭಾಗದ ಅಧ್ಯಕ್ಷೆ ಇಂದಿರಾಕ್ಷಿ ಶೆಟ್ಟಿ, ಜಯ ಸುಲಾಯ ಹಾಗೂ ಸಂಘದ ಇತರ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದು ವಿಜಯ ಗಳಿಸಿದ ತಂಡವನ್ನು ಅಭಿನಂದಿಸಿದರು.