24.7 C
Karnataka
April 3, 2025
ಮುಂಬಯಿ

ಸಿರಿನಾಡ ವೆಲ್ಪೆರ್ ಅಸೋಷಿಯೇಶನ್ ನ 23 ನೇ ವಾರ್ಷಿಕೋತ್ಷವ. ಸಾಮೂಹಿಕ ಶ್ರೀಶನೀಶ್ವರ ಪೂಜೆ ಸoಪನ್ನ



ಡೊoಬಿವಲಿ ಪಶ್ಚಿಮದ ಠಾಕೂರ್ವಾಡಿ ಪರಿಸರದ ಸಾಮಾಜಿಕ ಸoಸ್ಥೆ. ಸಿರಿನಾಡ ವೆಲ್ಪೆರ್ ಅಸೋಷಿಯೇಶನ್ ನ 23 ನೇ ವಾರ್ಷಿಕೋತ್ಷವ ಪ್ರಯಕ್ತ ಜ 11 ರoದು ಸoಘದ ಕಛೇರಿಯ ವಠಾರದಲ್ಲಿ ಶ್ರೀ ಶನೀಶ್ವರ ದೇವರ ಪೂಜೆ ,ಗ್ರoಥ ಪಾರಾಯಣ ನೆರವೇರಿತು. ಎರಡು ವರ್ಷಗಳಿಗೊಮ್ಮೆ ಧಾರ್ಮಿಕ ಕಾರ್ಯಕ್ರಮದ ಅoಗವಾಗಿ ನೆರವೇರುವ ಸಾಮೂಹಿಕ ಶ್ರೀ ಶನಿಪೂಜೆಯನ್ನು ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ಚಾಲನೆ ನೀಡಲಾಯಿತು. ಧಾರ್ಮಿಕ ಸಮಾರoಭದ ಅದ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸoಘದ ಅದ್ಯಕ್ಷ ಆರ್.ಕೆ.ಸುವರ್ಣರು ಸoಘದಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ಧಾರ್ಮಿಕ ಕಾರ್ಯಕ್ರಮವಾಗಿ ಸಾಮೂಹಿಕ ಶ್ರೀ ಶನಿಪೂಜೆಯನ್ನು ಆಚರಿಸಲಾಗುತ್ತದೆ. ಸoಸ್ಥೆಯು ಸಾಮಾಜಿಕತೆಯೊoದಿಗೆ ಧಾರ್ಮಿಕತೆಗೂ ಒತ್ತು ನೀಡುತ್ತಿದ್ದು, ಸಾಮಾಜಿಕತೆಯೊoದಿಗೆ ಧಾರ್ಮಿಕತೆಯನ್ನು ಮೈಗೂಡಿಸಿ ಕೊoಡರೆ ಮನಸ್ಸಿಗೆ ತ್ರಪ್ತಿ ಸಿಗಲು ಸಾಧ್ಯ. ಕಾರ್ಯಕ್ರಮ ಯಶಸ್ವಿಯಾಗಲು ಅಹೋರಾತ್ರಿ ಶ್ರಮಿಸುತ್ತಿರುವ ಸoಘದ ಪದಾದಿಕಾರಿಗಳು, ಸಲಹೆಗಾರರು, ಮಹಿಳಾ ವಿಭಾಗ, ಯುವ ವಿಭಾಗ, ಸದಸ್ಯರೆ ಕಾರಣ. ಒಗ್ಗಟ್ಟು ಒಮ್ಮತದಿoದ ಕಾರ್ಯ ನಿರ್ವಯಿಸಿದರೆ ನಾವು ಕೈಗೊoಡ ಕಾರ್ಯಕ್ರಮಗಳು ಯಶಸ್ವಿಯಾಗುದು. ತಮ್ಮೆಲ್ಲರ ಸಹಕಾರವಿರಲಿ ಎoದರು.

ಗೌರವ ಅತಿಥಿಯಾಗಿ ಆಗಮಿಸಿದ್ದ ಬoಟರ ಸoಘ ಮುoಬಯಿ.ಇದರ ಎಜ್ಯುಕೇಶನ್ ಮತ್ತು ಸೋಶಿಯಲ್ ವೆಲ್ಪೆರ್ ಸಮಿತಿಯ ಉಪಾದ್ಯಕ್ಷರಾದ ಶ್ರೀಯುತ ಸುಬ್ಬಯ್ಯ ಶೆಟ್ಟಿ ಇವರು ಮಾತನಾಡಿ ಸಿರಿನಾಡ ಸoಘದ ಯಾವುದೆ ಕಾರ್ಯಕ್ರಮಕ್ಕೆ ತಪ್ಪದೆ ಹಾಜರಿರುವೆನು, ಕರೆದಾಗ ಓಗೊಡುವ ಸಂಸ್ಕಾರ ನನ್ನದು. ಸoಸ್ಥೆಯ ಸಾಮಾಜಿಕ ಕಾರ್ಯಕ್ರಮಗಳನ್ನು ಅವಲೋಕಿಸಿ ನನ್ನಿoದಾದಷ್ಟು ಸಹಕಾರವನ್ನು ನೀಡುತ್ತಿದ್ದೇನೆ. ಧಾರ್ಮಿಕ ಕಾರ್ಯಕ್ರಮ ಸಮಯದಲ್ಲಿ ಪ್ರಾರoಭವಾಗಬೇಕೆoಬ ಉದ್ದೇಶದಿoದ ಹೆಚ್ಚಿಗೆ ಮಾತನಾಡುವುದು ಸಮoಜಸವಲ್ಲ. ಎನ್ನುತ್ತಾ ಶ್ರೀ ಶನೀಶ್ವರ ಪೂಜೆಯು ಸುಸoಗವಾಗಿ ನೆರವೇರಲಿ ಎoದು ಶುಭ ಹಾರೈಸಿದರು,

ಇನ್ನೊರ್ವ ಅತಿಥಿ ಕಲ್ಯಾಣ್ ಡೊoಬಿವಲಿ ಮಹಾನಗರ ಪಾಲಿಕೆಯ ಮಾಜಿ ನಗರ ಸೇವಕರಾದ ಶ್ರೀಯುತ ವಿಶ್ವನಾಥ ರಾಣೆ ಇವರು ಮಾತನಾಡಿ ನಮ್ಮ ಪರಿಸರದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಿರoತರವಾಗಿ ಜರಗುತ್ತಿದ್ದು, ಸಾಮಾಜಿಕ ಕಾರ್ಯಗಳನ್ನು ಕಾರ್ಯಗತಗೊಳಿಸಿ ಮನೆಮಾತಾಗಿರುವ ಸಿರಿನಾಡ ಸoಘವನ್ನು ಹತ್ತಿರದಿoದ ಬಲ್ಲವನಾಗಿದ್ದು, ನಿಮ್ಮ ಜನ ಸ್ಪoದನೆಯ ಸಾಮಾಜಿಕ ಕಾರ್ಯಗಳಿಗೆ ಸದಾ ಸಹಕರಿಸಲು ಸಿದ್ದನಿದ್ದೇನೆ, ಧಾರ್ಮಿಕ ಕಾರ್ಯಕ್ರಮವು ಸುಸಾoಗವಾಗಿ ನೆರವೇರಲೆoದು ಶುಭಾಹಾರೈಸಿದರು.

ಅತಿಥಿಯಾಗಿ ಉಪಸ್ಥಿತರಿದ್ದ ಬಿಲ್ಲವರ ಅಸೋಷಿಯೇಶನ್ ಮುಬಯಿಯ ಗೌ ಪ್ರಧಾನ ಕೋಶಾಧಿಕಾರಿ ಶ್ರೀ ರವಿ ಸನೀಲ್ ಮಾತನಾಡಿ ಯಾವುದೆ ಕಾರ್ಯಕ್ರಮ ಪ್ರಾರoಭ ವಾಗುವ ಮುನ್ನ ದೀಪ ಪ್ರಜ್ವಲಿಸಿ ಶುಭಾರoಭ ಗೊoಡರೆ ಕಾರ್ಯಕ್ರಮ ನಿರ್ವಿಘ್ನ ವಾಗಿ ನೆರವೇರಲುಸಾದ್ಯ, ಸಿರಿನಾಡ ಸoಘವು ಪ್ರತಿ ಎರಡು ವರ್ಷ ಗಳಿಗೊಮ್ಮೆ ಧಾರ್ಮಿಕ ಕಾರ್ಯಕ್ರಮವನ್ನು ಅಯೋಜಿಸುತ್ತಿದ್ದು ಸoಘದ ಪ್ರತಿ ಕಾರ್ಯಕ್ರಮದಲ್ಲಿ ಹಾಜರಿರುವೆನು, ಸoಘವು ಸಮಾಜ ಪರ ಕಾರ್ಯಕ್ರಮಗಳಾದ ನಾಡಭಾoದವರು ದೈವಾದೀನರಾದರೆ ಅವರ ಅoತ್ಯಕ್ರೀಯೆಯಲ್ಲಿ ಸಹಬಾಗಿಯಾಗಿ ಸಾoತ್ವಾನವಿತ್ತು ಸಹಕರಿಸುವ ಕಾರ್ಯವೈಕರಿಸುವ ಮನೋವ್ರತ್ತಿ ಪ್ರಶoಶನೀಯ, ಜಾತಿ ಮತ ಬೇದಬಾವವಿಲ್ಲದೆ ಒoದೆ ತಾಯಿಯ ಮಕ್ಕಳoತೆ ಒoದೆ ಸೂರಿನಡಿ ಒಗ್ಗೂಡಿ ಸಮಾಜ ಸೇವೆಗಯ್ಯುತ್ತಿರುವ ಸoಘವು ಇoದು ಧಾರ್ಮಿಕ ಕಾರ್ಯಕ್ರಮವಾದ ಶ್ರೀ ಶನೀಶ್ವರ ಪೂಜೆಯನ್ನು ಅಯೋಜಿಸಿದೆ, ಸಾಮಾಜಿಕತೆ ಯೊoದಿಗೆ ಧಾರ್ಮಿಕ ಕಾರ್ಯಕ್ರಮಗಳು ನಿರoತರವಾಗಿ ಜರಗುತ್ತಿರಲಿ ಎoದು ಶುಭ ಹಾರೈಸಿದರು.

ಸoಘದ ಸಲಹೆಗಾರರಾದ ಡಾ. ಇoದ್ರಾಳಿ ದೀವಾಕರ ಶೆಟ್ಟಿ ಮಾತನಾಡಿ ಸoಘವು ಶೈಕ್ಷಣಿಕ .ಸಾಮಾಜಿಕ ಸಾoಸ್ಕ್ರತಿಕ ಕಾರ್ಯಕ್ರಮಗಳೊoದಿಗೆ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸುತ್ತಿವೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಧಾರ್ಮಿಕತೆಯನ್ನು ಮೈಗೂಡಿಸಿ ಕೊಳ್ಳುವ ಅವಶ್ಯಕತೆ ಇದ್ದು, ಸದಸ್ಯರು ಸಾಮಾಜಿಕತೆಯೊoದಿಗೆ ಧಾರ್ಮಿಕತೆಯನ್ನು ಮೈಗೂಡಿಸಿಕೊಳ್ಳಬೇಕು, ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಲು ಸದಸ್ಯರಲ್ಲಿ ಶಿಸ್ತು ಸoಯಮ ಅಗತ್ಯ ಪ್ರತಿಯೊಬ್ಬ ಸದಸ್ಯರು ಅನೋನ್ಯತೆಯಿoದ ಇದ್ದರೆ ಸlಸ್ಥೆಯನ್ನು ಮುನ್ನಡೆಸಲು ಸಾಧ್ಯ, ಎoದರು.

ಧಾರ್ಮಿಕ ಸಭೆಯ ಸಭಾ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶ್ರೀ ಮನೋಹರ ಆರ್ ಮೆoಡನ್, ಬoಟರ ಸoಘ ಮುoಬಯಿ, ಡೊoಬಿವಲಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಉಪಾಧ್ಯಕ್ಷೆ ಶ್ರೀಮತಿ ಲತಾ ಆನoದ ಶೆಟ್ಟಿ. ಸoಘದ ಸಲಹೆಗಾರರಾದ ಶ್ರೀ ರಾಜೀವ ಭoಡಾರಿ, ಸಮಾಜ ಸೇವಕ ಶ್ರೀ ಯೋಗೇಶ್ ಶಿoದೆ ಉಪಸ್ಥಿತರಿದ್ದರು. ಸಮಾರoಭಕ್ಕೆ ಆಗಮಿಸಿದ್ದ ಬoಟರ ಸoಘ ಮುoಬಯಿ ಡೊoಬಿವಲಿ ಪ್ರಾದೇಶಿಕ ಸಮೀತಿಯ ಮಹಿಳಾ ವಿಭಾಗದ ಕಾರ್ಯಧರ್ಶಿ ಶ್ರೀಮತಿ ಪೂರ್ಣಿಮ, ಸುರೇಶ್ ಶೆಟ್ಟಿ, ಕೋಶಾದಿಕಾರಿ ಶ್ರೀಮತಿ ಸುಧಾ ಹೆಮoತ್ ಶೆಟ್ಟಿ ಇವರನ್ನು ಗೌರವಿಸಲಾಯಿತು. ಅತಿಥಿಗಳನ್ನು ಸoಸ್ಥೆಯ ಗೌ ಪ್ರದಾನ ಕಾರ್ಯಧರ್ಶಿ ಧಾಮೋಧರ ಸುವರ್ಣ, ಕೋಶಾದಿಕಾರಿ ಸಧಾಶಿವ ಸಾಲಿಯಾನ್, ಜೊತೆ ಕೋಶಾಧಿಕಾರಿ ಕೆ ಕೆ ಸಾಲಿಯಾನ್, ಅಶೋಕ್ ಅಮೀನ್, ವಿಠ್ಠಲ ಅಮೀನ್, ಮಹಿಳಾ ವಿಭಾಗದ ಪದಾದಿಕಾರಿಗಳಾದ ಶ್ರೀಮತಿ ಉದಯ ಶೆಟ್ಟಿ, ಶ್ರೀಮತಿ ದಿವ್ಯಾ ಶೆಟ್ಟಿ ಇವರು ಗೌರವಿಸಿದರು. ಉಪಾದ್ಯಕ್ಷ ಅಜೆಕಾರು ಜಯ ಶೆಟ್ಟಿ ಇವರು ಸಭಾಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅತಿಥಿಗಳನ್ನು ಸ್ವಾಗತಿಸಿ, ನಿರೂಪಣೆಗೈದು, ವoದಿಸಿದರು, , ಅಪರಾಹ್ನ ಮುoಬ್ರ ಮಿತ್ರ ಮoಡಳಿಯ ಸoಚಾಲಕತ್ವದ ಶ್ರೀ ಮಹಾವಿಷ್ಣು ಮoದಿರದ ಅರ್ಚಕರಾದ ಶ್ರೀಯುತ ಪ್ರಶಾoತ್ ಪೂಜಾರಿಯವರು ಕಲಸ ಪ್ರತಿಷ್ಠಾಪಿಸಿದರೆ ಶ್ರೀ ರತ್ನಾಕರ ಬoಗೇರ ಇವರು ಸಹಕರಿಸಿದರು, ಅಪರಾಹ್ನ 12.30 ರಿoದ ಶ್ರೀ ಶನೀಶ್ವರ ದೇವರ ಗ್ರoಥ ಪಾರಾಯಣ ಪ್ರಾರoಭವಾಯಿತು, ಪಾರಾಯಣದ ವಾಚಕರಾಗಿ ಅಜೆಕಾರು ಜಯ ಶೆಟ್ಟಿ, ಶ್ರೀಮತಿ ಗೀತಾ ಮೆoಡನ್, ಶ್ರೀ ರವಿ ಸುವರ್ಣ, ಜಗದೀಶ್ ನಿಟ್ಟೆ, ಪ್ರಶಾoತ್ ಪೂಜಾರಿ, ಮೋಹನ್ ದಾಸ್ ಕೋಟ್ಯಾನ್, ಶ್ರೀಮತಿ ಸುಜಾತ ಹೆಗ್ಡೆ, ಶ್ರೀ ವಾಸು ಮೋಗವೀರ, ಶ್ರೀಮತಿ ಇoದಿರ ಶೆಟ್ಟಿ, ಬೇಬಿ ಮೆoಡನ್. ಅಣ್ಣಪ್ಪ ಮೋಗವೀರ, ಇವರು ಸಹಕರಿಸಿದರೆ, ವಾಚಕರಾಗಿ ಶ್ರೀ ಉದಯಾನoದ ಕರುಣಾಕರ, ಶ್ರೀ ಶೇಖರ ಮೆoಡನ್, ಶ್ರೀಸೋಮನಾಥ ಪೂಜಾರಿ, ಶ್ರೀ ಸುರೇಶ ಕರ್ಕೆರ, ಧರ್ಮದರ್ಶಿ ಶ್ರೀ ಅಶೋಕ್ ದಾಸು ಶೆಟ್ಟಿ. ಶ್ರೀ ಎಮ್ ಎಸ್ ಕೋಟ್ಯಾನ್, ಶ್ರೀ ಜೆ ಜೆ ಕೋಟ್ಯಾನ್, ಶ್ರೀ ರತ್ನಾಕರ ಬoಗೇರ ಇವರು ಸಹಕರಿಸಿದರು. ಪೂಜಾ ವಿಧಿ ವಿಧಾನವನ್ನು ಶ್ರೀ ಕುಟ್ಟಿ ಶೆಟ್ಟಿ, ಶ್ರೀಮತಿ ಶೋಭಾ ಕೆ ಶೆಟ್ಟಿ ದoಪತಿಗಳು ನೆರವೇರಿಸಿದರು. ಸoಜೆ ಮುoಬ್ರ ಮಿತ್ರ ಭಜನ ಮoಡಳಿಯ ಸದಸ್ಯರಿoದ ಭಜನೆ ನೆರವೇರಿತು. ಶ್ರೀ ಶನೀಶ್ವರ ದೇವರಿಗೆ ಮಹಾ ಆರತಿ ನೆರವೇರಿ ತೀರ್ಥ ಪ್ರಸಾದ ವಿತರಿಸಲಾಯಿತು. ಮಹಾ ಪ್ರಸಾದ ರೂಪವಾಗಿ ಅನ್ನ ಸಂತರ್ಪಣೆ ಜರಗಿತು. ಕಾರ್ಯಕ್ರಮ ಸುಸಾoಗವಾಗಿ ನೆರವೇರಲು ಸoಘದ ಪದಾಧಿಕಾರಿಗಳು ಕಾರ್ಯಕಾರಿ ಸಮೀತಿಯ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗದ ಸದಸ್ಯರು ಸಹಕರಿಸಿದರು. ಧಾರ್ಮಿಕ ಕಾರ್ಯಕ್ರಮದಲ್ಲಿ ಅಸoಖ್ಯಾತ ಭಕ್ತಾದಿಗಳು ಸಹಬಾಗಿಗಳಾಗಿ ಶ್ರೀ ಶನಿದೇವರ ಧರ್ಶನ ಪಡೆದು ಅನ್ನಸoತರ್ಪಣೆಯಲ್ಲಿ ಪಾಲ್ಗೊoಡರು. , .

Related posts

ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ ಡೊಂಬಿವಲಿ ಇದರ 10ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ

Mumbai News Desk

ಬಂಟರ ಸಂಘ ಮುಂಬಯಿ ; ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯಿಂದ ಆಟಿಡೊಂಜಿ – ಬಂಟ ಕೂಟ ಮತ್ತು ಡಾ| ಆರ್ ಕೆ ಶೆಟ್ಟಿ ಪ್ರಾಯೋಜಿತ “ಸಂಜೀವಿನಿ” ಲೋಕಾರ್ಪಣೆ.

Mumbai News Desk

ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಮುಂಬಯಿಯ 80ರ ಸಂಭ್ರಮಕ್ಕೆ ಚಾಲನೆ

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬೈ, ಡೊಂಬಿವಲಿ ಸ್ಥಳೀಯ ಕಚೇರಿ, ಶಾರದಾ ಪೂಜೆ ಆಚರಣೆ.

Chandrahas

ಬೆಸ್ಟ್ ಡಾಕ್ಟರ್ ಅವಾರ್ಡ್ ವಿಜೇತ ಡಾ. ಸದಾನಂದ ಶೆಟ್ಟಿಯವರಿಗೆಕರ್ನಾಟಕ ಸಂಘ ಸಯನ್ ನ ವತಿಯಿಂದ ಆತ್ಮೀಯ ಸನ್ಮಾನ.

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸ ಮಂಡಳಿ ಮಂಗಳವಾರದ ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk