April 1, 2025
ಕ್ರೀಡೆ

ಸುರತ್ಕಲ್ :  ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ, 

 

ಕ್ರೀಡೆ ಮಾತ್ರವಲ್ಲದೆ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳಿ: ಕರುಣಾಕರ ಎಂ. ಶೆಟ್ಟಿ ಮಧ್ಯಗುತ್ತು

ಸುರತ್ಕಲ್: ವೀರಕೇಸರಿ (ರಿ) ತಡಂಬೈಲ್ ಸುರತ್ಕಲ್ ಇದರ ಆಶ್ರಯದಲ್ಲಿ ಡಾ|ಮಂಜಯ್ಯ ಶೆಟ್ಟಿ ಗುಂಡಿಲಗುತ್ತು ಹಾಗೂ ಮಾಜಿ ಮೇಯರ್ ರಜನಿ ದುಗ್ಗಣ್ಣ ಇವರ ಸ್ಮರಣಾರ್ಥ ಪುರುಷರ ಮುಕ್ತ ರಾಷ್ಟ್ರೀಯ ಮಟ್ಟದ ಆಹ್ವಾನಿತ ಆರು ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ವೀರಕೇಸರಿ ಟ್ರೋಫಿ-2025 ಇದರ ಉದ್ಘಾಟನಾ ಸಮಾರಂಭ ಶನಿವಾರ ಸಂಜೆ ಸುರತ್ಕಲ್ ಬಂಟರ ಭವನದ ಬಳಿ ನಡೆಯಿತು. ಕಾರ್ಯಕ್ರಮವನ್ನು ಉದ್ಯಮಿ ಮಧ್ಯಗುತ್ತು ಕರುಣಾಕರ ಶೆಟ್ಟಿ ಮಧ್ಯಗುತ್ತು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು

ಬಳಿಕ ಮಾತಾಡಿದ  ಅವರು, “ನನಗೆ ಕ್ರೀಡೆಯಲ್ಲಿ ಬಾಲ್ಯದಿಂದಲೂ ಹೆಚ್ಚಿನ ಆಸಕ್ತಿ. ಹೀಗಾಗಿ ಕ್ರೀಡಾ ಚಟುವಟಿಕೆಗಳಿಗೆ ನನ್ನಿಂದಾದ ಸಹಕಾರ ನೀಡುತ್ತಾ ಬಂದಿದ್ದೇನೆ. ಬರೀ ಕ್ರೀಡೆ ಮಾತ್ರವಲ್ಲದೆ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ವೀರಕೇಸರಿ ಸಂಘಟನೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಪರ ಕಾಳಜಿಯೊಂದಿಗೆ ಕೆಲಸ ಮಾಡಲಿ“ ಎಂದರು. 

ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಸತೀಶ್ ಮಾತನಾಡಿ, “ರಾಜ್ಯದಲ್ಲಿ ಬೇರೆಲ್ಲೂ ನಮ್ಮ ಜಿಲ್ಲೆಯಲ್ಲಿ ನಡೆಯುವಂತೆ ಶಿಸ್ತುಬದ್ಧವಾಗಿ ವಾಲಿಬಾಲ್ ಪಂದ್ಯಾಟ ನಡೆಯುವುದಿಲ್ಲ. ಕೇರಳದಲ್ಲಿ ಕ್ರೀಡಾಕೂಟಗಳು ಸಾಮಾನ್ಯವಾಗಿ ನಡೆಯುತ್ತದೆ. ಯಾಕೆಂದರೆ ನಮ್ಮಲ್ಲಿ ಕ್ರೀಡೆಗೆ ಸಹಕಾರ ನೀಡುವವರು ಕಡಿಮೆ. ಆದರೆ ಇಲ್ಲಿ ಬಹಳಷ್ಟು ಮಂದಿ ಬೆಂಬಲ ನೀಡುತ್ತಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ ವಿಚಾರ“ ಎಂದರು. 

ವೇದಿಕೆಯಲ್ಲಿ ಬಿಎಎಸ್ ಎಫ್ ನ  ಸೀನಿಯರ್ ಮ್ಯಾನೇಜರ್ ಸಂತೋಷ್ ಪೈ,   ವೈದ್ಯ ಶಶಿರಾಜ್ ಶೆಟ್ಟಿ, ಅಂಜನಾ ಎಂ. ಶೆಟ್ಟಿ, ಯಜ್ನೇಶ್ವರ್ ಬರ್ಕೆ, ಉದ್ಯಮಿ ಸತೀಶ್ ಮುಂಚೂರು, ಮನಪಾ ಸದಸ್ಯ ಲೋಕೇಶ್ ಬೊಳ್ಳಾಜೆ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ, ಮುಂಚೂರು, ಉದ್ಯಮಿ ಗಿರೀಶ್ ಶೆಟ್ಟಿ ಕಟೀಲ್, ಜನನಿ ಕನ್ಸ್ಟ್ರಕ್ಷನ್ ಮಾಲಕ ಸುಧಾಕರ್ ಪೂಂಜಾ, ಯಕ್ಷಧ್ರುವ  ಪಟ್ಲ ಫೌಂಡೇಶನ್ ನ ಟ್ರಸ್ಟಿ ಸಹನಾ ರಾಜೇಶ್  ರೈ, ಸಂಘಟನೆಯ ಗೌರವಾಧ್ಯಕ್ಷ ಸಂಚಾಲಕ ಮಹಾಬಲ ಪೂಜಾರಿ ಕಡಂಬೋಡಿ, ಅಧ್ಯಕ್ಷ ಸುಕುಮಾರ್ ತಡಂಬೈಲ್, ಕಾರ್ಯದರ್ಶಿ ರೂಪೇಶ್ ರೈ ಕೈಲಾಸ್ ತಡಂಬೈಲ್, ಪದ್ಮನಾಭ ಕರ್ಕೇರ, ರಾಘವೇಂದ್ರ ಶೆಟ್ಟಿ ತಡಂಬೈಲ್ ಮತ್ತಿತರರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಉದ್ಯಮಿ ಮಧ್ಯಗುತ್ತು ಕರುಣಾಕರ ಎಂ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತುಮ 

ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಶಾಸಕ ಡಾ ವೈ ಭರತ್ ಶೆಟ್ಟಿ, ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ , ಪಾಂಡುರಂಗ ಕೆ ಪ್ರಭು ಕೊಡಿಪಾಡಿ, ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಅಶೋಕ್ ಶೆಟ್ಟಿ ತಡಂಬೈಲ್ ಭಾಗವಹಿಸಿದ್ದರು. 

ಅನುಪ್ ಶೆಟ್ಟಿ   ಸ್ತುತಿಸಿದರು. ಅಶೋಕ್ ಶೆಟ್ಟಿ ತಡಂಬೈಲ್ ಅತಿಥಿಗಳನ್ನು ಸ್ವಾಗತಿಸಿದರು. ನಿತೇಶ್ ಶೆಟ್ಟಿ ಎಕ್ಕಾರ್, ಬಿಂದಿಯ ಶೆಟ್ಟಿ,  ಅನೂಪ್ ಶೆಟ್ಟಿ, ರಾಮಚಂದ್ರ ಶೆಟ್ಟಿ ತಡಂಬೈಲ್ ಕಾರ್ಯಕ್ರಮ ನಿರೂಪಿಸಿದರು.

ಪಂದ್ಯಾಟದಲ್ಲಿ ಆರು ತಂಡಗಳು ಭಾಗವಹಿಸಿದ್ದು ಪ್ರಥಮ‌ ಬಹುಮಾನವನ್ನು ಪಂಜ ಫ್ರೆಂಡ್ಸ್, ರನ್ನರ್ಸ್ ಅಪ್ ಪ್ರಶಸ್ತಿಯನ್ನು ಸುರತ್ಕಲ್  ಸ್ಟೈಕರ್ಸ್ ತೃತೀಯ ಪ್ರಶಸ್ತಿಯನ್ನು ಐಎಎಮ್ ಟೈಗರ್ ತಂಡ ಚತುರ್ಥ ಪ್ರಶಸ್ತಿಯನ್ನು ಎಂಎಫ್ ಸಿ ಮುಂಚೂರು ತಂಡ ಪಡೆದುಕೊಂಡಿತು.

ಮಹಿಳಾ ವಿಭಾಗದಲ್ಲಿ ಉಜಿರೆ ಪ್ರಥಮ ಉಡುಪಿ ದ್ವಿತೀಯ ಪ್ರಶಸ್ತಿ ಪಡೆಯಿತು.

Related posts

27ನೇ ರಮಾನಾಥ ಪಯ್ಯಡೆ ಸ್ಮಾರಕ ಕಾಲ್ಚೆಂಡು ಲೀಗ್ ಟೂರ್ನಮೆಂಟ್ : ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ ಭರ್ಜರಿ ಜಯ

Mumbai News Desk

ಮಲಾಡ್ ಕನ್ನಡ ಸಂಘ ಒಳಾಂಗಣ ಕ್ರೀಡೆ ಸ್ಪರ್ಧೆ.

Mumbai News Desk

ರಾಷ್ಟ್ರೀಯ ಮಟ್ಟದ ಕರಾಟೆ ಕ್ಷೇತ್ರದಲ್ಲಿ ಗುರುತಿಸಿಕೊಂಡ ಹರ್ಷಿತಾ ಪೂಜಾರಿ   ಇನ್ನಂಜೆ

Mumbai News Desk

ಕರ್ನಾಟಕ ಸಂಘ ಡೊಂಬಿವಲಿ, ಅದ್ಧೂರಿ ಕ್ರೀಡೋತ್ಸವ ದಂಗಲ್ – 2024 ಉದ್ಘಾಟನೆ

Mumbai News Desk

ಸಮರ್ಥ್ ರೈ, ಮಹಾರಾಷ್ಟ್ರ ರಾಜ್ಯ ಲೀಗ್ ಫುಟ್ಬಾಲ್ ಟೂರ್ನಮೆಂಟ್‌ನಲ್ಲಿ ಅಂಡರ್-15 ವಿಭಾಗದಲ್ಲಿ ಅತೀ ಹೆಚ್ಚು ಗೋಲ್ ಹೊಡೆತದಿಂದ,ತಂಡ ಟಾಪ್ 3ರ ಸ್ಥಾನಕ್ಕೆ

Mumbai News Desk

ಉಷಾ ಶ್ರೀಧರ ಶೆಟ್ಟಿ ಇವರ ನಾಯಕತ್ವ ತಂಡಕ್ಕೆ  ಟ್ರೋಪಿ ಯೊಂದಿಗೆ 50,000 ನಗದ ಬಹುಮಾನ

Mumbai News Desk