ಮುಂಬಯಿ ಮಹಾನಗರ ಮತ್ತು ಉಪನಗರಗಳಲ್ಲಿ ನೆಲೆಸಿರುವ ಬೈಂದೂರು – ಕುಂದಾಪುರ ಬಿಲ್ಲವರ ಶ್ರೇಯೋಭಿವೃದ್ಧಿಗೆ ಪೂರಕವಾಗಿ ಸಮುದಾಯ ಬಾಂಧವರ ಚಿಂತನೆಗಳನ್ನು ಹಂಚಿಕೊಳ್ಳಲು ನಿಸ್ವಾರ್ಥ ಮನೋಭಾವದ ಸಮಾನ ಮನಸ್ಕ ಬಿಲ್ಲವ ಸಮುದಾಯ ಬಾಂಧವರು ಒಂದೆಡೆ ಸೇರಿ ತಮ್ಮ ಆತ್ಮಾಭಿಮಾನದ ಪ್ರತೀಕ ಎಂಬಂತೆ ಯಾವುದೇ ಪ್ರತಿಫಲಾಪೇಕ್ಷೆ ಬಯಸದ ಸ್ವಾಭಿಮಾನಿ ಬಿಲ್ಲವರ ತಂಡವು ಸಮುದಾಯದ ಸೇವೆ ಮಾಡುವ ಸದುದ್ದೇಶದಿಂದ ಬೈಂದೂರು-ಕುಂದಾಪುರ ಬಿಲ್ಲವರು ಮುಂಬಯಿ ಎಂಬ ನಾಮಧೇಯದಲ್ಲಿ ಸಮುದಾಯದ ಸೇವೆಗೆಂದೆ ಕಾರ್ಯ ನಿರತರಾಗಿದ್ದು ಆ ನಿಟ್ಟಿನಲ್ಲಿ ಮುಂಬಯಿ ಮಹಾನಗರ ಮತ್ತು ಉಪನಗರಗಳಲ್ಲಿ ನೆಲೆಸಿರುವ ಬೈಂದೂರು-ಕುಂದಾಪುರ ಬಿಲ್ಲವರಿಗಾಗಿ ಸ್ನೇಹ ಸಮ್ಮಿಲನ, ಅರಸಿನ ಕುಂಕುಮ ಮತ್ತು ಮನೋರಂಜನಾ ಕಾರ್ಯಕ್ರಮವನ್ನು ಜನವರಿ 19 ರಂದು ರವಿವಾರ ಅಪರಾಹ್ನ ಗಂಟೆ 3-00 ರಿಂದ ಮೋತಿಲಾಲ್ ಹರಗೋವಿಂದ ದಾಸ್ ವಿದ್ಯಾಲಯ ಸಭಾಂಗಣ (ಎಮ್. ಹೆಚ್. ಹೈಸ್ಕೂಲ್), ಪ್ರಥಮ ಮಹಡಿ, ಶಿವಾಜಿ ಪಥ್, ಥಾಣೆ (ಪಶ್ಚಿಮ) ಇಲ್ಲಿ ಹಮ್ಮಿಕೊಳ್ಳಲಾಗಿದೆ.
ಮುಂಬಯಿ ಹೈಕೋರ್ಟ್ ನ್ಯಾಯವಾದಿ ಶಕುಂತಲಾ ಎ. ಪೂಜಾರಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಿದ್ದು ಮುಂಬಯಿ ಹೈಕೋರ್ಟ್ ನ್ಯಾಯವಾದಿ ಆನಂದ ಎಮ್. ಪೂಜಾರಿ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಹಲವಾರು ವರ್ಷಗಳಿಂದ ಸಮುದಾಯ ಸೇವೆ ಸಲ್ಲಿಸುತ್ತಾ ಬಂದಿರುವ ಎನ್. ಜಿ. ಪೂಜಾರಿ, ನರಸಿಂಹ ಎಮ್. ಬಿಲ್ಲವ ಹಾಗೂ ಹಿರಿಯ ಸಮುದಾಯ ಬಾಂಧವರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ಜರಗಲಿದೆ.
ಆ ಪ್ರಯುಕ್ತ ಮುಂಬಯಿ ಮಹಾನಗರ ಮತ್ತು ಉಪನಗರಗಳಲ್ಲಿ ನೆಲೆಸಿರುವ ಬೈಂದೂರು – ಕುಂದಾಪುರ ಬಿಲ್ಲವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಯಶಸ್ವಿಗೊಳಿಸುವುದರೊಂದಿಗೆ ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಮೊಬೈಲ್ ನಂಬರ್‌ಗಳಿಗೆ ಕರೆ ಮಾಡಬಹುದೆಂದು 9869071413 /9867811733/9820718785 /9820463761 ಕಾರ್ಯಕ್ರಮದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
