



ಮುಂಬಯಿ : ಕರ್ನಾಟಕದ ಕರಾವಳಿಯ ಮೊಯಾ (ಬೋವಿ) ಸಮಾಜದ ಅಂತರಾಷ್ಟ್ರೀಯ ಮಟ್ಟದ ಏಕೈಕ ಸಂಘಟನೆ ನಮೋ ಮೊಯರ್ ಗ್ಲೋಬಲ್ ಫೌಂಡೇಶನ್ ಮಹಾರಾಷ್ಟ್ರ, ಮಾತ್ರವಲ್ಲದೆ ಕರ್ನಾಟಕ ಹಾಗೂ ಕೇರಳದ ಕರಾವಳಿ ಜಿಲ್ಲೆಗಳಲ್ಲಿ ಸಮಾಜಪರ ಸೇವಾ ನಿರತವಾಗಿದ್ದು ಇದೀಗ ಹೊಸ ವರ್ಷದ ಆರಂಭದಲ್ಲೇ ಚೆನ್ನೈಯಲ್ಲಿ ಅಧ್ಯಕ್ಷರಾದ ರವಿ ಉಚ್ಚಿಲ್ ಅವರ ತಂಡವು ಪಿ.ಅರ್. ಎ. ರಾಮಕೃಷ್ಣನ್ ಅವರ ತಂಡದೊಂದಿಗೆ ಜ. 2 ರಂದು ಕಾಕ್ಕುಂ ಕರಂಗಲ್ ಮಹಿಳಾ ವೃದ್ಧಾಶ್ರಮಕ್ಕೆ ಭೇಟಿ ನೀಡಿತು.
ಸಂಸ್ಥೆಯ ಚೆನ್ನೈ ತಂಡವು ಈ ಕೇಂದ್ರದ ನಿರ್ಗತಿಕ ಮಹಿಳೆಯರಿಗೆ ಬೆಂಬಲಿಸಲು ಅಗತ್ಯ ದ ವಸ್ತುಗಳನ್ನು ವಿತರಿಸಿದೆ. ಅಲ್ಲಿನ ಮಹಿಳೆಯರು ಈ ತಂಡಕ್ಕೆ ಆಶೀರ್ವಾದದ ನುಡಿಗಳನ್ನಾಡಿದರು.




ಜ. 4 ರಂದು ಥಾಣೆಯಲ್ಲಿರುವ ನವಜೀವನ ಹಿಂದುಳಿದ ಶಾಲೆಗೆ ಭೇಟಿ ನೀಡುವ ಮೂಲಕ ನಿರ್ಗತಿಕ ವಿದ್ಯಾರ್ಥಿಗಳ ಜೀವನೋಪಾಯಕ್ಕೆ ಅಗತ್ಯ ಆಹಾರ ಮತ್ತು ಬಟ್ಟೆಗಳನ್ನು ವಿತರಿಸಿದರು. ಮಕ್ಕಳು ಕೃತಜ್ಞತೆ ಅರ್ಪಿಸಿದರು. ಈ ಕಾರ್ಯದಲ್ಲಿ ಲಕ್ಷ್ಮೀನಾರಾಯಣ ಮಾತ್ರವಲ್ಲದೆ ನಮೋ ಮೊಯರ್ ಗ್ಲೋಬಲ್ ಫೌಂಡೇಶನ್ ಮುಖ್ಯ ಸಲಹೆಗಾರ ಈಶ್ವರ್ ಕೆ. ಐಲ್, ಸಮಿತಿಯ ಪ್ರಮುಖರಾದ ಪ್ರೀತಿ ಉಚ್ಚಿಲ್, ಚಂದ್ರಕಲಾ ಉಚ್ಚಿಲ್, ರವೀಂದ್ರ ಬತ್ತೇರಿ, ಸರೋಜ ವಿಟ್ಠಲ್ ಮತ್ತಿತರರು ಉಪಸ್ಥಿತರಿದ್ದು ಸಹಕರಿಸಿದರು.
ಮುಂಬಯಿಯ ಕೋರ್ ಕಮಿಟಿಯು, ದಾನಿಗಳು ನೀಡಿದ ಮೊತ್ತವನ್ನು ನಿರ್ಗತಿಕ ಹಾಗೂ ಅಸಾಯಕರಿಗಾಗಿ ಉಪಯೋಗಿಸಲು, ವಿಶೇಷವಾಗಿ ಅಗತ್ಯವಿರುವ ಮಕ್ಕಳ ಉನ್ನತ ಶಿಕ್ಷಣ ಕ್ಕಾಗಿ ಸಹಕರಿಸುವ ಅಗತ್ಯವಿದೆ ಎಂಬುದಾಗಿ ನಿರ್ಧರಿಸಿದೆ.