ವಸಾಯಿ, ಜ.19- ಗ್ರಾಮೀಣ ಭಾಗವಾದ ವಸಾಯಿ ಪರಿಸರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತುಳು ಕನ್ನಡಿಗರ ಹೆಮ್ಮೆಯ ಸಂಸ್ಥೆ ವಸಾಯಿ ಕರ್ನಾಟಕ ಸಂಘದ 38ನೇ ವಾರ್ಷಿಕ ಮಹಾಸಭೆಯನ್ನು ಸಂಘದ ಅಧ್ಯಕ್ಷ ದೇವೇಂದ್ರ ಬಿ. ಬುನ್ನನ್‌ರವರ ಅಧ್ಯಕ್ಷತೆಯಲ್ಲಿ ಜ.26 ರಂದು ರವಿವಾರ ದಂದು ಸಂಘದ ಕಚೇರಿ ಸಂಖ್ಯೆ 3 ಮತ್ತು 4, ಹ್ಯಾಪಿ ಜೀವನ್ ಸೊಸೈಟಿ ಪಾರ್ವತಿ, ಸಿನೆಮಾದ ಎದುರುಗಡೆ, ವಸಾಯಿ (ಪ) ಇಲ್ಲಿ
ಬೆಳಿಗ್ಗೆ 7.30ಕ್ಕೆ ಸತ್ಯ ನಾರಾಯಣ ಮಹಾಪೂಜೆ, ಅನಂತರ ದ್ವಜಾರೋಹಣ, ಬಳಿಕ 10.30 ಕ್ಕೆ ವಾರ್ಷಿಕ ಮಹಾಸಭೆಯು ಸಂಘದ ಕಚೇರಿ ಎದುರುಗಡೆಯಿರುವ ಸ್ವಾಮಿ ನಾರಾಯಣ ಮಂದಿರದ ಮೊದಲನೇ ಮಹಡಿಯ ಸಭಾಂಗಣ ಪಾರ್ವತಿ ಸಿನಿಮಾ ಹತ್ತಿರ ವಸಯಿ (ಪ)ಇಲ್ಲಿ
ದೇವತಾ ಪ್ರಾರ್ಥನೆಯೊಂದಿಗೆ , ಗತ ಮಹಾಸಭೆಯ ಟಿಪ್ಪಣಿಯನ್ನು ಮಂಜೂರು ಮಾಡುವುದು, ವಾರ್ಷಿಕ ವರದಿಯನ್ನು ಮಂಜೂರು ಮಾಡುವುದು, 2025-26ರ ಅವಧಿಗೆ ಲೆಕ್ಕಪರಿಶೋಧಕರ ನೇಮಕ, ಅಧ್ಯಕ್ಷರ ಅನುಮತಿ ಮೇರೆಗೆ ಸಂಘದ ಸದಸ್ಯರು ಮಂಡಿಸಿರುವ ವಿಷಯಗಳ ಬಗ್ಗೆ ಚರ್ಚೆ, ಮತ್ತು 2025 -2027 ಕಾರ್ಯವಧಿಗೆ ಸಂಘದ ಕಾರ್ಯಕಾರಿ ಸಮಿತಿ ನೇಮಕ ಮಾಡುವ ಪ್ರಕ್ರಿಯೆ ನಡೆಯಲಿದೆ
ಆ ಬಳಿಕ ಅಧ್ಯಕ್ಷರ ಭಾಷಣ, ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಸೂಚಿಯ ಪ್ರಕಾರ ನಡೆಯಲಿದೆ.
ಸಂಘದ ಸದಸ್ಯರಿಗೆ ವಿವರಗಳನ್ನು ವಾಟ್ಸ್‌ಆ್ಯಪ್, ಇ- ಮೇಲ್‌ಗಳಲ್ಲಿ ವಾರ್ಷಿಕ ವರದಿಯನ್ನು ಕಳುಹಿಸಲಾಗುವುದು. ವರದಿ ಲಭಿಸದ ಸದಸ್ಯರು ಸಂಘದ ಕಚೇರಿಯನ್ನು ಸಂಪರ್ಕಿಸಿ ಪಡೆಯಬಹುದು. ಸದಸ್ಯರು ಕ್ಲಪ್ತ ಸಮಯದಲ್ಲಿ ಹಾಜರಿರಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಮಯಕ್ಕೆ ಸರಿಯಾಗಿ ಹಾಜರಾಗದೇ ಇದ್ದಲ್ಲಿ ಅರ್ಧ ತಾಸಿನ ನಂತರ ಅದೇ ಸ್ಥಳದಲ್ಲಿ ಮುಂದುವರಿಸಿದ ಸಭೆಯೆಂದು ಪರಿಗಣಿಸಲಾಗುವುದು.
ಸಂಘದ ಸದಸ್ಯರು ಕ್ಲಪ್ತ ಸಮಯದಲ್ಲಿ ಸಭೆಯಲ್ಲಿ ಪಾಲ್ಗೊಳ್ಳಬೇಕಾಗಿ ಗೌರವ ಪ್ರಧಾನ ಕಾರ್ಯದರ್ಶಿ, ರವೀಂದ್ರ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ