
ಕುಂದರ್ ಮೂಲಸ್ಥಾನದ ಯುವ ಪೀಳಿಗೆಯವರಲ್ಲಿ ಶಿಕ್ಷಣದೊಂದಿಗೆ ಕ್ರೀಡಾ ಆಸಕ್ತಿ ಮೂಡಿಸಲು ಕ್ರೀಡಾ ಪ್ರತಿಭೆಯನ್ನು ಅನಾವರಣಗೊಳಿಸುವ ಸಲುವಾಗಿ ಜನವರಿ 19ರಂದು ಚೆಂಬೂರು ಚೆಡ್ಡ ನಗರದ ಜಿಮ್ಕಾನದಲ್ಲಿ ಟೆನಿಸ್ ಚೆಂಡಿನ ಕ್ರಿಕೆಟ್ ಟೂರ್ನಮೆಂಟ್ ಪ್ರೀಮಿಯರ್ ಲೀಗ್ 2025 ಆಯೋಜಿಸಲಾಯಿತು.

ಬೆಳಿಗ್ಗೆ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಪಾರುಪತ್ಯಗಾರರಾದ ಅಜಿತ್ ಸುವರ್ಣರು ಮುಖ್ಯ ಅತಿಥಿಯಾಗಿ ಹಾಗೂ ಚೆಂಬೂರು ಕನ್ನಡ ಸಂಘದ ಮಾಜಿ ಅಧ್ಯಕ್ಷ ನ್ಯಾಯವಾದಿ ಎಚ್ ಸುಧಾಕರ್ ಗೌರವ ಅತಿಥಿಯಾಗಿ ಉಪಸ್ತಿತರಿದ್ದು, ದೀಪ ಪ್ರಜ್ವಲಿಸಿ ಕುಂದರ್ ಮೂಲಸ್ಥಾನ ಸಭಾ ಮುಂಬಯಿ, ಕ್ರಿಕೆಟ್ ಟೂರ್ನಮೆಂಟಿಗೆ ಚಾಲನೆಯನ್ನು ನೀಡಿದರು.
ಕುಂದರ್ ಮೂಲಸ್ಥಾನದ ಮುಂಬಯಿ ಶಾಖೆಯ ಅಧ್ಯಕ್ಷ ಹೇಮಾನಂದ ಕುಂದರ್, ಉಪಾಧ್ಯಕ್ಷ ಗಣೇಶ್ ಕಾಂಚನ್, ಪ್ರಧಾನ ಕಾರ್ಯದರ್ಶಿ ನೀಲಾಧರ ಕುಂದರ್, ಪ್ರಧಾನ ಕೋಶಾಧಿಕಾರಿ ಸಂತೋಷ ಸುವರ್ಣ, ಜೊತೆ ಕಾರ್ಯದರ್ಶಿ ನಾಗೇಶ್ ಕುಂದರ್, ಸದಸ್ಯ ಪುರಂದರ ಕಾಂಚನ್, ಪುರುಷೋತ್ತಮ್ ಕಾಂಚನ್, ಸೂರಪ್ಪ ಕುಂದರ್, ಹಾಗೂ ಮಹಿಳಾ ವಿಭಾಗದ ಅಧ್ಯಕ್ಷೆ ವೇದ ಕೆ ಪುತ್ರನ್, ಸದಸ್ಯೆ ಕಲ್ಪನಾ ಸುರತ್ಕಲ್ ಕಾರ್ಯಕ್ರಮದಲ್ಲಿ ಸಹಕರಿಸಿದರು . ಸದಸ್ಯೆ ಸುನೀತಾ ಜೆ ಬಂಗೇರ ಪ್ರಾರ್ಥನೆಗೈದರು. ಸ್ವಾತಿ ಸುವರ್ಣರು ಕಾರ್ಯಕ್ರಮ ನಿರೂಪಿಸಿದರು.




ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಒಟ್ಟು ಐದು ತಂಡಗಳು ಭಾಗವಹಿಸಿದ್ದವು, ಮಹಿಳೆಯರಿಗೂ ಕ್ರಿಕೆಟ್ನಲ್ಲಿ ಆಡುವ ಅವಕಾಶ ನೀಡುವ ಉದ್ದೇಶದಿಂದ ಪ್ರತಿ ತಂಡದಲ್ಲಿ ಎರಡು ಮಹಿಳೆಯರ ಭಾಗವಹಿಸಿಕೆ ಕಡ್ಡಾಯ ಮಾಡಲಾಗಿತ್ತು.
ಕುಂದರ್ ನೈಟ್ ರೈಡರ್ಸ್ ನ ನಾಯಕನಾಗಿ ಹೇಮಾನಂದ ಕುಂದರ್, ಕುಂದರ್ ಡೇರ್ ಡೆವಿಲ್ಸ್ ನ ನಾಯಕನಾಗಿ ಪುರಂದರ ಕಾಂಚನ್, ಕುಂದರ್ ಸೂಪರ್ ಕಿಂಗ್ಸ್ನ ನ ನಾಯಕನಾಗಿ ಪುರುಷೋತ್ತಮ ಕಾಂಚನ್, ಕುಂದರ್ ಸೂಪರ್ ಜೈನ್ಟ್ಸ್ ನ ನಾಯಕನಾಗಿ ಪ್ರಶಾಂತ್ ಮುಲ್ಕಿ, ಹಾಗೂ ಕುಂದರ್ ಚಾಲೆಂಜರ್ಸ್ ನಾಯಕನಾಗಿ ಗಣೇಶ್ ಕಾಂಚನ್ ಅವರವರ ತಂಡದ ಮುಖಾಂತರ ಉತ್ತಮ ಸ್ಪರ್ಧೆ ನೀಡಿದರು.




ಫೈನಲಿನಲ್ಲಿ ಕುಂದರ್ ಚಾಲೆಂಜರ್ಸ್ ತಂಡ ಪ್ರಥಮ ಸ್ಥಾನ ಹಾಗೂ ಕುಂದರ್ ಸೂಪರ್ ಜೈನ್ಟ್ಸ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಸರ್ವಾಂಗೀಣ ಪ್ರದರ್ಶನ ಮಾಡಿದ ನಟರಾಜ್ ಕುಂದರ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಮಹಿಳಾ ವಿಭಾಗದ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಸ್ವಾತಿ ಸುವರ್ಣರು ಪಡೆದರು.
ಸಮಾರೋಪ ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಮೊಗವೀರ ಕನ್ನಡ ಮಾಸಿಕೆಯ ಸಂಪಾದಕ ಅಶೋಕ್ ಸುವರ್ಣ, ಮೊಗವೀರ ವ್ಯವಸ್ಥಾಪಕ ಮಂಡಳಿಯ ಪಾರುಪತ್ಯಗಾರರಾದ ಹರೀಶ್ ಪುತ್ರನ್, ದೇವರಾಜ್ ಬಂಗೇರ, ಮಾಜಿ ಪಾರುಪತ್ಯಗಾರರಾದ ಬಿ ಕೆ ಪ್ರಕಾಶ್ ಹಾಗೂ ಉದ್ಯಮಿ ಮಹಾಬಲ ಕುಂದರ್ ಉಪಸ್ಥಿತರಿದ್ದು ಟ್ರೋಪಿ ಹಾಗೂ ಬಹುಮಾನ ವಿತರಿಸಿದರು.