October 21, 2026
Mumbai News Kannada
ಸುದ್ದಿ

ಮಹಾರಾಷ್ಟ್ರ ದಲ್ಲಿ ಭೀಕರ ರೈಲು ಅಪಘಾತ – ರೈಲಿನಡಿ ಸಿಲುಕಿ 7 ಜನರ ದುರಂತ ಸಾವು



ಮಹಾರಾಷ್ಟ್ರದಲ್ಲಿ ರೈಲಿನಡಿ ಸಿಲುಕಿ 7 ಜನರು ದುರಂತವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಹಾರಾಷ್ಟ್ರದ ಜಲಗಾಂವ್​​ನ ಪರಾಂಡ ನಿಲ್ದಾಣದಲ್ಲಿ ಘಟನೆ ನಡೆದಿದೆ. ಲಕ್ನೋದಿಂದ ಮುಂಬೈಗೆ ತೆರಳುತ್ತಿದ್ದ ಪುಷ್ಪಕ್​ ಎಕ್ಸ್​ಪ್ರೆಸ್​ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ವದಂತಿ ಹರಡಿತ್ತು. ಇದರಿಂದ ಹೆದರಿದ ಪ್ರಯಾಣಿಕರು ಚಲಿಸುತ್ತಿದ್ದ ರೈಲಿನಿಂದ ಜಿಗಿದಿದ್ದರು. ಪಕ್ಕದ ಹಳಿ ಮೇಲೆ ನಿಂತಾಗ ಮತ್ತೊಂದು ರೈಲು ಡಿಕ್ಕಿಯಾಗಿ ದುರಂತ ಸಂಭವಿಸಿದೆ. ಮತ್ತೊಂದು ಹಳಿಯಲ್ಲಿ ಬರುತ್ತಿದ್ದ ಕರ್ನಾಟಕ ಎಕ್ಸ್​ಪ್ರೆಸ್​ ರೈಲು ಡಿಕ್ಕಿಯಾಗಿ 7 ಜನ ಸಾವನ್ನಪ್ಪಿದ್ದಾರೆ.ಬೆಂಕಿ ಕಾಣಿಸಿಕೊಂಡಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಪುಷ್ಪಕ್ ಎಕ್ಸ್​ಪ್ರೆಸ್​ನಲ್ಲಿದ್ದ ಕೆಲವು ಪ್ರಯಾಣಿಕರು ರೈಲಿನ ಚೈನ್​ ಎಳೆದು ರೈಲು ನಿಲ್ಲಿಸಿ ಪಕ್ಕದ ಹಳಿಗೆ ಜಿಗಿದಿದ್ದಾರೆ. ಈ ವೇಳೆ ಮತ್ತೊಂದು ಹಳಿಯಲ್ಲಿ ಬರುತ್ತಿದ್ದ ಕರ್ನಾಟಕ ಎಕ್ಸ್​ಪ್ರೆಸ್ ರೈಲು ಡಿಕ್ಕಿಯಾಗಿದೆ. ಜಲಗಾಂವ್‌ನ ಪಚೋರಾ ರೈಲು ನಿಲ್ದಾಣದಲ್ಲಿ ಪುಷ್ಪಕ್ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿ ಹರಡಿ ಗೊಂದಲ ಸೃಷ್ಟಿಯಾಯಿತು. ಇದರಿಂದ ಚಲಿಸುತ್ತಿದ್ದ ರೈಲಿನಿಂದ ಪ್ರಯಾಣಿಕರು ಹೊರಗೆ ಹಾರಿದರು, ಆಗ ಪಕ್ಕದ ಹಳಿಯಲ್ಲಿ ಕರ್ನಾಟಕ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದಿದೆ.ಬೆಂಕಿ ಹರಡಿದೆ ಎಂಬ ಸುಳ್ಳು ಸುದ್ದಿಯನ್ನು ನಂಬಿ 30-40 ಜನ ರೈಲಿನಿಂದ ಕೆಳಗೆ ಜಿಗಿದಿದ್ದರು. ಕೆಲವರು ದೂರ ಓಡಿಹೋದರೆ ಇನ್ನು ಕೆಲವರು ಪಕ್ಕದ ಹಳಿ ಮೇಲೆ ನಿಂತಿದ್ದರು. ಈ ವೇಳೆ ವೇಗವಾಗಿ ಬಂದ ರೈಲು ಹರಿದು ಅವರು ಮೃತಪಟ್ಟಿದ್ದಾರೆ. ಆ ಪ್ರದೇಶದಲ್ಲಿ ಹಳಿಯ ಕೆಲಸ ನಡೆಯುತ್ತಿರುವ ಕಾರಣ ರೈಲಿಗೆ ಎಚ್ಚರಿಕೆಯ ಆದೇಶ ನೀಡಲಾಗಿತ್ತು. ಹೀಗಾಗಿ, ಬ್ರೇಕ್‌ಗಳನ್ನು ಹಾಕುತ್ತಿದ್ದಂತೆ, ರೈಲಿನ ಚಕ್ರಗಳಿಂದ ಕಿಡಿಗಳು ಹೊರಹೊಮ್ಮಿದವು. ಇದರಿಂದ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿ ಹರಡಿತು.

ಚಲಿಸುವ ರೈಲಿನಿಂದ ಜಿಗಿದಿದ್ದರಿಂದ ಹಲವರಿಗೆ ಗಾಯಗಳಾಗಿವೆ. ಗಾಯಾಳು ಪ್ರಯಾಣಿಕರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಗ್ರಾಮೀಣ ಆಸ್ಪತ್ರೆಗೆ ಸಾಗಿಸಲಾಯಿತು.



Related posts

ಮಂಗಳೂರಿನ ಕುಲಾಲ ಭವನ ಲೋಕಾರ್ಪಣೆ; 

Mumbai News Desk

ಶ್ರೀ ಲಕ್ಕಮ್ಮಾ ದೇವಿ ಕಲಾ ಪೋಷಕ ಸಂಘ (ರಿ) ಬ್ಯಾಕೂಡ ವತಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭ

Mumbai News Desk

ಶಶಿರೇಖಾ ಆನಂದ ಶೆಟ್ಟಿ ಓಪನ್ ಏರ್ ಗಾರ್ಡನ್ ಗೆ ಶಿಲಾನ್ಯಾಸ* ಉತ್ತಮ ನಾಯಕತ್ವ ಇದ್ದರೆ ಎಲ್ಲವೂ ಸಾಧ್ಯ: ತೋನ್ಸೆ ಆನಂದ ಶೆಟ್ಟಿ*

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ, ಜಾರ್ಜ್ ಫರ್ನಾಂಡಿಸ್ ಸಂಸ್ಮರಣಾ ರಾಷ್ಟ್ರೀಯ ಪ್ರಶಸ್ತಿ ನಿಮಿತ್ತ ಪೂರ್ವಬಾವೀ ಸಭೆ

Mumbai News Desk

ಮಂಗಳೂರು ವಿವಿ ಘಟಿಕೋತ್ಸವ : ರೋಹನ್ ಮೊಂತೇರೋ, ಕನ್ಯಾನ ಸದಾಶಿವ ಶೆಟ್ಟಿ, ಎಂ. ಎನ್ ರಾಜೇಂದ್ರಕುಮಾರ್ ಗೆ ಗೌರವ ಡಾಕ್ಟರೇಟ್

Mumbai News Desk

ಮೋಹನ್ ಬಿ. ಎಂ. ನಿಧನ

Mumbai News Desk