September 6, 2026
Mumbai News Kannada
ಸುದ್ದಿ

ಮಜ್ ಗಾಂವ್ ನ ರಾಜ್ ಕಮಲ್ ಟೈಲರ್ಸ್ ನ ಮಾಲಕ ದೇವಪ್ಪ ಪೂಜಾರಿ ನಿಧನ






ಮುಂಬಯಿ ಉಪನಗರ ಸಾಂತಾಕ್ರೂಜ್ ಪೂರ್ವ ವಕೋಲದ ಸಹಜೀವನ ಸಂಕಿರ್ಣದ ನಿವಾಸಿ ದೇವಪ್ಪ ಎನ್ ಪೂಜಾರಿ ( 88) ಅವರು ಜನವರಿ 18ರಂದು ಶನಿವಾರ ರಾತ್ರಿ ಅವರ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮುಂಬೈಯ ಮಜ್ ಗಾಂವ್ ನಲ್ಲಿ ರಾಜ್ ಕಮಲ್ ಟೈಲರ್ಸ್ ಮೂಲಕ ಖ್ಯಾತರಾಗಿದ್ದ ದೇವಪ್ಪ ಪೂಜಾರಿ ಅವರು ಮೂಲತಃ ಉಡುಪಿ ಜಿಲ್ಲೆಯ ಉದ್ಯಾವರದ ಪರಾರಿತೋಟ ಬೊಲ್ಜೆಯವರು. ಮೃತರು ಪುತ್ರಿಯರಾದ ಸುನೀತಾ ವಿಠಲ್, ರೇಖಾ ಉದಯ್, ಜಯಶ್ರೀ ಸುದೇಶ್ ಪುತ್ರ ಸುರೇಶ್, ಸೊಸೆ ಶಶಿಕಲಾ, ಅಳಿಯಂದಿರು, ಸೊಸೆಯಂದಿರು ಹಾಗೂ ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ.
ಸರಳ ಮತ್ತು ಕಠಿಣ ಪರಿಶ್ರಮದವರಾದ, ದೇವಪ್ಪ ಪೂಜಾರಿ ಅವರು ಮುಂಬಯಿಯ ಜನಪ್ರಿಯ ದೈನಿಕ ಕರ್ನಾಟಕ ಮಲ್ಲದ ಆರಂಭದ ದಿನಗಳಲ್ಲಿ ಪತ್ರಿಕೆಯ ಮಾಲಕರಿಗೆ ಮತ್ತು ಸಿಬ್ಬಂದಿಗಳಿಗೆ ಮಜ್ ಗಾಂವ್ ನ ತನ್ನ ನಿವಾಸವನ್ನು ವಾಸ್ತವ್ಯಕ್ಕೆ ನೀಡಿ ಉದಾರತೆಯನ್ನು ಮೆರೆದು, ಪತ್ರಿಕೆಯ ಬೆಳವಣಿಗೆಗೆ ಸಹಕಾರ ನೀಡಿದ್ದರು. ದೇವಪ್ಪ ಪೂಜಾರಿ ಅವರ ನಿಧನಕ್ಕೆ ಮುಂಬೈ ನ್ಯೂಸ್ ಪರಿವಾರ ಸಂತಾಪ ವ್ಯಕ್ತಪಡಿಸುತ್ತದೆ.



Related posts

ದೆಹಲಿಯ ದಲಿತ ಕಾಲನಿಗೆ ಪೇಜಾವರ ಶ್ರೀಗಳ ಭೇಟಿ: ಏಕತೆ ಮತ್ತು ಸಾಮರಸ್ಯಕ್ಕೆ ಕರೆ

Mumbai News Desk

ಶ್ರೀ ಗುರುರಾಜ ಮಾನವ ಜಾಗೃತಿ ಕೇಂದ್ರ  ವಸಯಿ. ಇವರಿಂದ ಕಜೆ ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಬ್ರಹ್ಮ ಕಳಶದ ಪ್ರಯುಕ್ತ ಹರಿದಾಸರ ಕೀರ್ತನೆ

Mumbai News Desk

ತೀಯಾ ಫ್ಯಾಮಿಲಿ ಯು.ಎ.ಇ. ಅಧ್ಯಕ್ಷರಾಗಿ ಜಸ್ಮಿತಾ ವಿವೇಕಾನಂದ್

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (01/07/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ಮುಂಬೈಯ ಬಾಂದ್ರ ಟರ್ಮಿನಸ್ ನಲ್ಲಿ ನೂಕುನುಗ್ಗಲು, ಕಾಲ್ತುಳಿತ; 9 ಮಂದಿಗೆ ಗಾಯ

Mumbai News Desk

ಬಂಟ್ವಾಳ ವೀರ ವಿಕ್ರಮ ಜೋಡುಕರೆ ಕಂಬಳ,ಧಾರ್ಮಿಕ ಮುಖಂಡ ಡಾ. ಎಮ್ ‌ಜೆ ಪ್ರವೀಣ್ ಭಟ್ ಅವರಿಗೆ ಸನ್ಮಾನ,

Mumbai News Desk