ಆಟೋರಿಕ್ಷಾ ಮತ್ತು ಕಪ್ಪು -ಹಳದಿ ಟ್ಯಾಕ್ಸಿಯಲ್ಲಿ ನಿಮ್ಮ ಪ್ರಯಾಣವು ಫೆಬ್ರವರಿ ಒಂದರಿಂದ ದುಬಾರಿಯಾಗಲಿದೆ.
ಮುಂಬೈ ಮಹಾನಗರ ಪ್ರದೇಶ ಸಾರಿಗೆ ಪ್ರಾಧಿಕಾರ ( MMRTA) ಜನವರಿ 23 ರಂದು ಆಟೋ ರಿಕ್ಷಗಳು ಮತ್ತು ಟ್ಯಾಕ್ಸಿಗಳ ದರ ಹೆಚ್ಚಳದ ಪ್ರಸ್ತಾವನೆಯನ್ನು ಶುಕ್ರವಾರ ಘೋಷಿಸಿದೆ.
ಮುಂಬೈ ಮಹಾನಗರ ಪ್ರದೇಶ ಸಾರಿಗೆ ಪ್ರಾಧಿಕಾರವು ಹೊರಡಿಸಿದ ಆಧಿ ಸೂಚನೆಯ ಪ್ರಕಾರ ಆರ್‌ಟಿಓ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳನ್ನು ಒಳಗೊಂಡಿರುವ ಸರ್ಕಾರಿ ಸಂಸ್ಥೆ, ಹೆಚ್ಚಿದ ಜೀವನ ವೆಚ್ಚ, ವಾಹನಗಳು, ಇಂಧನ ಕಾರ್ಯಚರಣೆಯ ವೆಚ್ಚಗಳು, ನಿರ್ವಹಣ ವೆಚ್ಚ ಮತ್ತು ಇತರ ಅಂಶಗಳ ಕಾರಣ ಪ್ರಯಾಣ ದರವನ್ನು ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ. ಕನಿಷ್ಠ ಆಟೋ ರಿಕ್ಷಾ ದರ ಈಗ 23ರಿಂದ 26 ಆಗಲಿದ್ದು ಕನಿಷ್ಠ ಟ್ಯಾಕ್ಸಿ ದರ 28ರಿಂದ 31ಕ್ಕೆ ಏರಿಕೆಯಾಗಲಿದೆ, ಕೂಲ್ ಕ್ಯಾಬ್ ದರವು ಪ್ರಸ್ತುತ 40 ರಿಂದ 48ಕ್ಕೆ ಏರಿಕೆಯಾಗಲಿದೆ .
ಮುಂಬೈ ಮೆಟ್ರೋ ಪಾಲಿಟಿನ್ ಪ್ರದೇಶದಲ್ಲಿ 4,50,000 ಆಟೋರಿಕ್ಷಾಗಳಿವೆ ಅವುಗಳಲ್ಲಿ 3,50,000 ಮುಂಬೈಯಲ್ಲಿಯೇ ಇವೆ ಹಾಗೂ ನಗರದಲ್ಲಿ ಸುಮಾರು 15,000 ಟ್ಯಾಕ್ಸಿ ಇದೆ. ಪ್ರಯಾಣದರ ಏರಿಕೆ ಪ್ರಸ್ತಾಪದ ಜೊತೆ ಸಂಪರ್ಕ ಹೆಚ್ಚಿಸುವ ಯೋಜನೆಗಳನ್ನು ಸಾರಿಗೆ ಇಲಾಖೆ ಮುಂದಿಟ್ಟಿದೆ. ಟ್ಯಾಕ್ಸಿ ಮತ್ತು ಆಟೋರಿಕ್ಷಾದ ಕೊನೆಯ ದರ ಪರಿಷ್ಕರಣೆಯು ಅಕ್ಟೋಬರ್ 2022ರಲ್ಲಿ ನಡೆದಿತ್ತು.
