
ಬಿಲ್ಲವರ ಅಸೋಸಿಯೇಶನ್ ಮುಂಬಯಿ, ಡೊಂಬಿವಲಿ
ಸ್ಥಳೀಯ ಕಛೇರಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮವು ತಾರೀಕು
26.01.2025 ರಂದು ಬೆಳಿಗ್ಗೆ ಗಂಟೆ 8.00 ಕ್ಕೆ ಸರಿಯಾಗಿ ಜರಗಿತು.
ಆರ್ಚಕರಾದ ಐತಪ್ಪ ಸುವರ್ಣರಿಂದ ಗುರು ಪೂಜೆಯಾದ ನಂತರ ರಾಷ್ಟ್ರ ಧ್ವಜಕ್ಕೆ ನಮನ ಮತ್ತು ಧ್ವಜಾರೋಹಣ ಕಾರ್ಯಕ್ರಮ ಜರಗಿತು.
ಈ ಕಾರ್ಯಕ್ರಮಕ್ಕೆ ಮುನ್ನ ಅತಿಥಿಯಾಗಿ ಆಗಮಿಸಿದ ಮಹಾ ವಿಷ್ಣು
ಮಂದಿರ ಡೊಂಬಿವಲಿ ಇದರ ಗೌ. ಅಧ್ಯಕ್ಷರಾದ ನಿತಿನ್ ಪ್ರಕಾಶ್ ಪುತ್ರನ್ ಇವರು ಧ್ವಜಾರೋಹಣ ನೆರವೇರಿಸಿದರು.








ತದನಂತರದ ಜರಗಿದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಕಛೇರಿಯ ಕಾರ್ಯಾಧ್ಯಕ್ಷರಾದ ಶ್ರೀಧರ್ ಬಿ ಅಮೀನ್ ರವರು ವಹಿಸಿದರು.
ಮುಖ್ಯ ಅತಿಥಿಯಾಗಿ ನಿತಿನ್ ಪ್ರಕಾಶ್ ಪುತ್ರನ್ ಇವರು ಉಪಸ್ಥಿತರಿದ್ದರು .
ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಸದಸ್ಯರು ಮತ್ತು ಯುವವಿಭಾಗದವರು ಗಣರಾಜೋಸ್ತವದ ಬಗ್ಗೆ ಮಾತನಾಡಿದರು. ಯುವ ವಿಭಾಗದವರ ಸಂಪೂರ್ಣ ಸಹಾಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ .
ವೇದಿಕೆಯಲ್ಲಿ ಉಪಾಧ್ಯಕ್ಷರಾದ ಚಂದ್ರಹಾಸ್ ಎಸ್ ಪಾಲನ್, ಸಚಿನ್ ಜಿ ಪೂಜಾರಿ, ಕೋಶಾಧಿಕಾರಿ ಆನಂದ್ ಪೂಜಾರಿ, ಗೌ.ಕಾರ್ಯಾಧ್ಯಕ್ಷರಾದ ಮಂಜಪ್ಪ ಪೂಜಾರಿಯವರು ಮತ್ತು ಮಾಜಿ ಕಾರ್ಯಾಧ್ಯಕ್ಷರಾದ ದೇವರಾಜ್ ಪೂಜಾರಿಯವರು ವೇದಿಕೆಯಲ್ಲಿ ಉಪಸ್ತಿತರಿದ್ದರು.
ಸುನೀತಾ ಪೂಜಾರಿ ಮತ್ತು ಜ್ಯೋತಿ ಪೂಜಾರಿಯವರು ಪ್ರಾರ್ಥನೆ ಗೈದರೆ ಗೌ. ಕಾರ್ಯದರ್ಶಿ ಜಗದೀಶ್ ಜೇ ಕೊಟ್ಯನ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಗೌ. ಕೋಶಾಧಿಕಾರಿ ಆನಂದ್ ಪೂಜಾರಿಯವರು ವಂದಿಸಿದರು.