
ಚಿತ್ರ ವರದಿ ದಿನೇಶ್ ಕುಲಾಲ್
ಮುಂಬಯಿ, ಜ.28.ಬೊರಿವಲಿ ಪೂರ್ವದ ದೇವುಲ್ನಾಡಾದ ಮಾಗಾಠಾಣೆ ಮೆಟ್ರೋ ಸ್ಟೇಷನ್ನ ಮುಂಭಾಗದಲ್ಲಿರುವ ತುಳುನಾಡಿನ ವೀರ ದೈವಗಳಾದ ಕೋಟಿ-ಚೆನ್ನಯರನ್ನು ಒಳಗೊಂಡಿರುವ ಓಂ ಶ್ರೀ ಜಗಧೀಶ್ವರೀ ಸೇವಾ ಸಮಿತಿಯ ಸಂಚಾಲಕತ್ವದ ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯಲ್ಲಿ 51 ನೇ ವಾರ್ಷಿಕ ಮಹಾಪೂಜೆ ಮತ್ತು ಬ್ರಹ್ಮ ಬೈದರ್ಕಳ ನೇಮೋತ್ಸವವು ಜ. 25ರಂದು ಸಂಜೆ ಕ್ಷೇತ್ರದ ಸೇವಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಶೇಖರ್ ಇಂದು ಸಾಲ್ಯಾನ್ ಅವರು ಮಾರ್ಗದರ್ಶನದಲ್ಲಿ ಭಕ್ತಿ ಸಂಭ್ರಮದೊಂದಿಗೆ ಸಂಪನ್ನಗೊಂಡಿದೆ,
ಜ. 24ರಂದು ಅಪರಾಹ್ನ ಕಲಶ ಪ್ರತಿಷ್ಠೆ ರಾತ್ರಿ ಅಗೆಲ ತಂಬಿಲ ಅನಂತರ ಬೈದರ್ಕಳ ದರ್ಶನ ಸೇವೆಯ ಮೂಲಕ ವಾರ್ಷಿಕ ಪೂಜೆ ಪ್ರಾರಂಭಗೊಂಡಿತು,
. ಜ. 25ರಂದು ಬೆಳಗ್ಗೆ ಗಣಪತಿ ಹೋಮ, ದುರ್ಗಾಪೂಜೆ ಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಮಧ್ಯಾಹ್ನದ ಮಹಾಪ್ರಸಾದ ಅನ್ನಸಂತರ್ಪಣೆಯನ್ನು ಸ್ವೀಕರಿಸಿದರು
ಸಂಜೆ ದೇವಸ್ಥಾನದಲ್ಲಿ ಪ್ರಸಾದ್ ಸಾಲಿಯನ್ ಕಲ್ಯಾ ಅವರಿಂದ ದೇವಿ ದರ್ಶನ ನಡೆದು ಭಕ್ತರಿಗೆ ಪ್ರಸಾದವನ್ನು ನೀಡಿದರು,

ಅನಂತರ ದೇವಸ್ಥಾನದ ಪಕ್ಕದಲ್ಲಿ ರುವ ಮೈದಾನದಲ್ಲಿ ಬೈದರ್ಕಳ ನೇಮ, ಅನಂತರ ಜೋಗಿ ಪುರುಷರ ನೇಮೋತ್ಸವ ಮತ್ತು ಮಾಯಂದಾಲಮ್ಮನ ನೇಮ ನಡೆದವು.
, ಪೂಜಾ ಕಾರ್ಯಗಳು ವಿದ್ವಾನ್ ಸುಕುಮಾರ್ ಭಟ್ ಬೈಕಳ ಅವರಿಂದ ನಡೆದವು
ತುಳುನಾಡಿನ ವೀರ ದೈವಗಳಾದ ಕೋಟಿ-ಚೆನ್ನಯರನ್ನು ಒಳಗೊಂಡಿರುವ ದೇವುಲ್ನಾಡಾ ಅಶ್ವತ್ವದಡಿ ಕ್ಷೇತ್ರದಲ್ಲಿ ಜಗನ್ಮಾತೆಯು ಓಂ ಶ್ರೀ ಜಗದೀಶ್ವರೀ ಎಂಬ ನಾಮದಿಂದ ನೆಲೆಯಾಗಿ ಭಕ್ತರ ಸಂಕಷ್ಟಗಳನ್ನು ಪರಿಹರಿಸಿ ಮೆರೆಯುತ್ತಿದ್ದು, ಗರೋಡಿಯಲ್ಲಿ ಮಾಯಂದಾಳ್ ಮತ್ತು ಜೋಗಿ ಪುರುಷರ ನೇಮೋತ್ಸವವು ಪ್ರತೀ ವರ್ಷ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಮಹಾನಗರದಲ್ಲಿನ ಸಮಗ್ರ ತುಳುನಾಡ ಭಕ್ತಾದಿಗಳು ಪಾಲ್ಗೊಂಡಿದ್ದರು,

ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ನಿರ್ದೇಶಕ ರಾದ ಭಾಸ್ಕರ್ ಸಾಲಿಯಾನ್ ,ಗಂಗಾಧರ್ ಜೆ ಪೂಜಾರಿ, ಸಂತೋಷ್ ಕೆ ಪೂಜಾರಿ ,ನರೇಶ್ ಪೂಜಾರಿ , ಉದ್ಯಮಿ ಮಹೇಶ್ ಕರ್ಕೇರ. ಹೋಟೆಲ್ ಉದ್ಯಮಿಗಳಾದ ಮುಂಡಪ್ಪ ಪೈಯಾಡೆ, ಪ್ರೇಮ್ ನಾಥ್ ಪಿ ಕೋಟ್ಯಾನ್, ಧನಂಜಯ್ ಕೋಟ್ಯಾನ್, ಮತ್ತಿತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ರಾಜಕೀಯ ಮುಖಂಡರು ಪಾಲ್ಗೊಂಡು ಪ್ರಸಾದವನ್ನು ಸ್ವೀಕರಿಸಿದರು

ಪೂಜಾ ಕಾರ್ಯ ಯಶಸ್ವಿಯಾಗುವಲ್ಲಿ ಸಮಿತಿಯ ಅಧ್ಯಕ್ಷ ಲಕ್ಷ್ಮಣ್ ಎಸ್. ಸಾಲ್ಯಾನ್, ಉಪಾಧ್ಯಕ್ಷರಾದ ನರಸಪ್ಪ ಕೆ ಮಾರ್ನಾಡು, ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಅಭಿಜಿತ್ ಜೆ. ಶೆಟ್ಟಿ ಮತ್ತು ಗೌರವ ಕೋಶಾಧಿಕಾರಿ ಆಶೀಷ್ ಆರ್. ಕೋಟ್ಯಾನ್, ಜೊತೆ ಕಾರ್ಯದರ್ಶಿ ಸದಾಶಿವ ಸಾಲ್ಯಾನ್ ,ಜೊತೆ ಕೋಶಧಿಕಾರಿ ಉಷಾ ಎಸ್ ಮೆಂಡನ್, ಸಮಿತಿಯ ಸಲಹೆಗಾರರ ದಯಾನಂದ ಪೂಜಾರಿ ಮಾರಂಗ, ಕರುಣಾಕರ ಕಾಪು ,ವಿಶ್ವನಾಥ್ ಬಿ ಬಂಗೇರ, ರಂಜಿತ ಸುವರ್ಣ ಮತ್ತಿತರ ಸದಸ್ಯರು ಸಹಕರಿಸಿದರು.