24.7 C
Karnataka
April 3, 2025
ಸುದ್ದಿ

ತಿರುಮಲದಲ್ಲಿ ವಿಜೃಂಭಣೆಯಿಂದ ನಡೆದ ಪುರಂದರ ದಾಸರ ಆರಾಧನ ಮಹೋತ್ಸವ



ಮುಂಬಯಿಯ ಶ್ರೀ ಉಮಾ ಮಹೇಶ್ವರಿ ಭಜನಾ ಮಂಡಳಿ ಬಾಗಿ.

ಶ್ರೀ ಉಮಾ ಮಹೇಶ್ವರಿ ಭಜನ ಮಂಡಳಿ, ಜರಿಮರಿ ಮುಂಬಯಿ ಇವರು ಸತತ 10 ನೇ ವರ್ಷದ ತಿರುಪತಿ ಯಲ್ಲಿ ಹರಿನಾಮ ಸಂಕೀರ್ತನೆಯಲ್ಲಿ ತಾರೀಕು 28,29 ಹಾಗೂ 30 ರಂದು ತಿರುಪತಿ, ತಿರುಮಲ ದಲ್ಲಿ ದಾಸ ಸಾಹಿತ್ಯ ಪ್ರೊಜೆಕ್ಟ್ ನ ಅಡಿಯಲ್ಲಿ ನಡೆದ ಪುರಂದರದಾಸರ ಆರಾಧನಾ ಮಹೋತ್ಸವದಲ್ಲಿ ಮೂರು ದಿವಸ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡುರು.

ಶ್ರೀ ಬಗಡಾಲ ಆನಂದತೀರ್ಥ ಆಚಾರ್ಯ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 150 ಕಿಂತಲು ಅಧಿಕ ತಂಡಗಳು 5000 ಕಿಂತಲೂ ಅಧಿಕ ಭಜಕರು ದೇಶದ ವಿವಿಧ ಕಡೆಗಳಿಂದ ಆಗಮಿಸಿದ್ದರು.

ವಿವಿಧ ಗಣ್ಯರು, ಯತಿಗಳು, ಭಾಗವಹಿಸಿದ್ದ ಈ 3 ದಿನಗಳಲ್ಲಿ ಕುಕ್ಕೆ ಸುಬ್ರಮಣ್ಯ ಮಠದೀಶರು, ಮಂತ್ರಾಲಯ ಮಠದೀಶರು, ಪಲಿಮಾರು ಮಠ ಹಾಗೂ ಅದಮಾರು ಸ್ವಾಮೀಜಿಗಳು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು. ದೇಶದ ಸುಪ್ರಸಿದ್ದ ಕಲಾವಿದರು ಸಂಗೀತ ಹಾಗೂ ನೃತ್ಯ ಕಾರ್ಯಕ್ರಮ ನೀಡಿದರು.

ಸುಮಾರು 20 ಸದಸ್ಯರ ತಂಡ ಭುವಾಜಿ ರವೀಂದ್ರ ಶಾಂತಿ ಯವರ ನೇತೃತ್ವದಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸ್ವಾಮೀಜಿಗಳ ಆಶೀರ್ವಾದ ಪಡೆದು, 3 ದಿವಸ ವಿವಿಧ ಕಾರ್ಯಕ್ರಮಗಳಲ್ಲಿ, ಹಾಗೂ ಆರಾಧನ ಮಹೋತ್ಸವ, ಭಜನೆ, ಮೆರವಣಿಗೆ ಹಾಗೂ ಪೂಜೆಯಲ್ಲಿ ಪಾಲ್ಗೊಂಡು, ದೇವರ ದರ್ಶನ ಪಡೆದರು.

Related posts

ಸುರತ್ಕಲ್: ಸಿಲಿಂಡರ್ ಸ್ಫೋಟ ಪ್ರಕರಣ ತೀವ್ರವಾಗಿ ಗಾಯಗೊಂಡ ಮಹಿಳೆಯರಿಬ್ಬರ ಸಾವು

Mumbai News Desk

ದರ್ಶನ್ ಗೆ 6 ವಾರ ಕಾಲ ಶರತ್ತು ಬದ್ದ ಜಾಮೀನು

Mumbai News Desk

ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾ ಗೇಟ್ ಶಹಾಡ್ ಇದರ ನೂತನ ಅಧ್ಯಕ್ಷರಾಗಿ ಶ್ರೀ ರಾಜೇಶ್ ಜೆ ಶೆಟ್ಟಿ ಆಯ್ಕೆ

Mumbai News Desk

ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ   ‘ಸುವರ್ಣಯುಗ’ ಕೃತಿ ಬಿಡುಗಡೆ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯಕ್ರಮಕ್ಕೆ ಮಹಾರಾಷ್ಟ್ರದ   ಮುಖ್ಯಮಂತ್ರಿ  ದೇವೇಂದ್ರ ಫಡ್ನವಿಸ್  ಗೆ ಆಹ್ವಾನ

Mumbai News Desk

ಥಾಣೆ  :ಜಯರಾಮ ಸಾಂತ ನಿಧನ

Mumbai News Desk