ಬ್ರಹನ್ ಮುಂಬೈ ಮುನಿಸಿಪಲ್ ಕಾರ್ಪೊರೇಷನ್(BMC) ಫೆಬ್ರವರಿ 5ರ ಬುಧವಾರ ಬೆಳಗ್ಗೆ 11 ಗಂಟೆಗೆ ಪೊವೈ ಆಂಕರ್ ಬ್ಲಾಕ್ ಮತ್ತು ಮರೋಶಿ ವಾಟರ್ ಟನಲ್ ನಡುವೆ 2400 ಮಿಲಿ ಮೀಟರ್ ವ್ಯಾಸದ ಹೊಸ ನೀರಿನ ಪೈಪ್ ಅನ್ನು ಹಾಕಲಿದೆ. ಈ ಕೆಲಸವು ಫೆಬ್ರವರಿ 6ರ ಗುರುವಾರ ಸಂಜೆ 5 ಗಂಟೆಗೆ ಕೊನೆಗೊಳ್ಳುವ ನಿರೀಕ್ಷೆ ಇದೆ. ಈ ಅವಧಿಯಲ್ಲಿ ತಾನ್ಸ ಮತ್ತು ಪಶ್ಚಿಮದಿಂದ ಬರುವ 1800 ಮೀ ಮೀ ವ್ಯಾಸದ ಎರಡು ಪೈಪ್ ಗಳಿಂದ ನೀರು ಸರಬರಾಜು ಸ್ಥಗಿತಗೊಳ್ಳಲಿದ್ದು ನಗರದ ವಿವಿಧ ಪ್ರದೇಶಗಳಲ್ಲಿ ನೀರಿನ ಕಡತಕ್ಕೆ ಕಾರಣವಾಗುತ್ತದೆ.
ನೀರು ಸರಬರಾಜು ಕಡಿತಗೊಳ್ಳುವ ಪ್ರದೇಶಗಳು :
ಎಸ್ ವಾರ್ಡ್: ಶ್ರೀ ರಾಮ್ ಪಾಡ , ಖಿಂಡಿ ಪಾಡ , ಮಿಲಿಂದ್ ನಗರ, ಶಿವಾಜಿ ನಗರ, ಭಯಂದರ್ ಬೆಟ್ಟ, ಗೌತಮ್ ನಗರ ಮತ್ತು ಇತರ ಪ್ರದೇಶಗಳು ಫೆಬ್ರವರಿ 5 ಮತ್ತು 6, 2025 ರಂದು ಸಂಪೂರ್ಣ ನೀರು ಸರಬರಾಜು ಸ್ಥಗಿತಗೊಳಿಸಲಾಗುವುದು.
ಎಲ್ ವಾರ್ಡ್: ಕುರ್ಲಾ ದಕ್ಷಿಣದ ಕಾಜುಪಾಡ, ಸುಂದರ್‌ಬಾಗ್ ಮತ್ತು ಮಹಾರಾಷ್ಟ್ರ ಕಾಟ, ಈ ಪ್ರದೇಶಗಳಲ್ಲಿ ಫೆಬ್ರವರಿ 5, 2025 ರಂದು ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಕುರ್ಲಾ ಉತ್ತರದಲ್ಲಿ ಫೆಬ್ರವರಿ 6, 2025 ರಂದು ನೀರು ಸರಬರಾಜು ಸ್ಥಗಿತಗೊಳಿಸಲಾಗುವುದು.
ಜಿ ನಾರ್ತ್ ವಾರ್ಡ್: ಧಾರಾವಿ ಮುಖ್ಯ ರಸ್ತೆ, ಗಣೇಶ ಮಂದಿರ ರಸ್ತೆ ಮತ್ತು ಎಕೆಜಿ ನಗರದಂತಹ ಪ್ರದೇಶಗಳಲ್ಲಿ ಫೆಬ್ರವರಿ 5, 2025 ರಂದು ನೀರಿನ ಕಡಿತವಾಗಲಿದೆ. ಫೆಬ್ರವರಿ 6, 2025 ರಂದು ವಾರ್ಡ್‌ನ ಇತರ ಭಾಗಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಕೆ ಈಸ್ಟ್ ವಾರ್ಡ್: ಫೆಬ್ರವರಿ 5, 2025 ರಂದು ಮರೋಲ್, ವಿಹಾರ್ ರೋಡ್ ಮತ್ತು ಇತರ ಪ್ರದೇಶಗಳಲ್ಲಿ ನೀರು ಸರಬರಾಜು ಕಡಿತಗೊಳ್ಳಲಿದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಫೆಬ್ರವರಿ 5 ಮತ್ತು 6, 2025 ರಂದು ನೀರು ಸರಬರಾಜು ವ್ಯತ್ಯಯವನ್ನು ಎದುರಿಸಲಿವೆ.
ಎಚ್ ಈಸ್ಟ್ ವಾರ್ಡ್: ಫೆಬ್ರವರಿ 5 ಮತ್ತು 6, 2025 ರಂದು ಬಾಂದ್ರಾ ಟರ್ಮಿನಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಸರಬರಾಜು ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ.
“ಪೂರೈಕೆ ಸ್ಥಗಿತಗೊಳ್ಳುವ ಮೊದಲು ನಿವಾಸಿಗಳು ಸಾಕಷ್ಟು ನೀರನ್ನು ಮುಂಚಿತವಾಗಿ ಸಂಗ್ರಹಿಸಿಕೊಳ್ಳುವಂತೆ ಸೂಚಿಸಲಾಗಿದೆ. ಅಡಚಣೆಯ ಸಮಯದಲ್ಲಿ, ಜನರು ನೀರನ್ನು ಮಿತವಾಗಿ ಬಳಸುವಂತೆ ಕೋರಲಾಗಿದೆ. ಕೆಲಸ ಪೂರ್ಣಗೊಂಡ ನಂತರ, ತಾತ್ಕಾಲಿಕವಾಗಿ ಮಂದ ನೀರಿನ ಪೂರೈಕೆ ಇರಬಹುದು. ಸುರಕ್ಷತೆಗಾಗಿ, ಬಳಕೆಗೆ ಮೊದಲು ನೀರನ್ನು ಫಿಲ್ಟರ್ ಮಾಡಿ ಕುದಿಸಿ ಕುಡಿಯಲು ಶಿಫಾರಸು ಮಾಡಲಾಗಿದೆ,” ಎಂದು ಬಿಎಂಸಿ ತಿಳಿಸಿದೆ.