
ಮಹಾವಿಷ್ಣು ಮಂದಿರ ಡೊಂಬಿವಲಿ, ಇದರ ವತಿಯಿಂದ ತೃತೀಯ ಬಾರಿಗೆ ನಡೆದ ರಕ್ತದಾನ ಶಿಬಿರದಲ್ಲಿ ದಾಖಲೆ ನಿರ್ಮಿಸಿದ ಕೀರ್ತಿ (129 UNIT).
ಶ್ರೀ ಮಹಾವಿಷ್ಣು ಮಂದಿರ, ಸಂಚಾಲಕರು ಮುಂಬ್ರಾ ಮಿತ್ರ ಭಜನಾ ಮಂಡಳಿ ಇದರ ವತಿಯಿಂದ ರಕ್ತ ದಾನ ಹಾಗೂ ಉಚಿತ ವೈದ್ಯಕೀಯ ಆರೋಗ್ಯ ತಪಾಸಣಾ ಶಿಬಿರವು ರವಿವಾರ ದಿನಾಂಕ 02.02.2025 ರಂದು ಬೆಳಿಗ್ಗೆ ಗಂಟೆ 8 ರಿಂದ ಸಂಜೆ 4 ರ ಗಂಟೆಯ ತನಕ ನಡೆಯಿತು ಹಾಗು ತೃತೀಯ ಬಾರಿಗೆ ನಡೆದ ರಕ್ತದಾನ ಶಿಬಿರದಲ್ಲಿ ಸುಮಾರು 129 ಕ್ಕಿಂತ ಹೆಚ್ಚಿನ ಜನರು ರಕ್ತದಾನ ಮಾಡಿ ದಾಖಲೆ ನಿರ್ಮಿಸಿದೆ. ವೈದ್ಯಕೀಯ ಆರೋಗ್ಯ ತಪಾಸಣಾ ಶಿಬಿರ ದಲ್ಲಿ ಒಟ್ಟು ನೂರಾ ಐವತ್ತಕ್ಕೂ ಹೆಚ್ಚಿನ ಜನರು ತಪಾಸಣೆ ಗೈದರು.





ಈ ಸಂದರ್ಭದಲ್ಲಿ ದೀಪ ಪ್ರಜ್ವಲಿಸಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಲಾಯಿತು, ಮಂದಿರದ ಅಧ್ಯಕ್ಷರಾದ ಶ್ರೀ ಇಂದುಶೇಖರ್ ಸುವರ್ಣ, ಗೌರವ ಅಧ್ಯಕ್ಷರಾದ ಶ್ರೀ ನಿತಿನ್ ಪ್ರಕಾಶ್ ಪುತ್ರನ್, ಅತಿಥಿ ಗಣ್ಯರಾಗಿ ಡಾ. ದಿವಾಕರ್ ಶೆಟ್ಟಿ, ಇಂದ್ರಾಳಿ (ಕಾರ್ಯಾಧ್ಯಕ್ಷರು , ಕರ್ನಾಟಕ ಸಂಘ ಡೊಂಬಿವಲಿ), ಶ್ರೀ ತಾರಾನಾಥ್ ಅಮೀನ್ (ಗೌರವ ಕೋಶಾಧಿಕಾರಿ , ಕರ್ನಾಟಕ ಸಂಘ, ಡೊಂಬಿವಲಿ) ಶ್ರೀ ರಾಜೀವ್ ಭಂಡಾರಿ (ಮಾಜಿ ಕಾರ್ಯಾಧ್ಯಎಕ್ಷರು , ಕ್ರೀಡಾ ಸಮಿತಿ , ಕರ್ನಾಟಕ ಸಂಘ, ಡೊಂಬಿವಲಿ) ಶ್ರೀ ರಮೇಶ್ ಶೆಟ್ಟಿ (ಅಧ್ಯಕ್ಷರು , ಜಗಜ್ಯೋತಿ ಕಲಾವೃಂದ , ಡೊಂಬಿವಲಿ) ಶ್ರೀ ವಸಂತ್ ಸುವರ್ಣ (ಉಪಾಧ್ಯಕ್ಷರು ,ತುಳು ವೆಲ್ಫೇರ್ ಅಸೋಸಿಯೇಷನ್ , ಡೊಂಬಿವಲಿ) ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಸವಿತಾ ಸಿ. ಸಾಲಿಯಾನ್, ಉಪಾಧ್ಯಕ್ಷರಾದ ಅರವಿಂದ್ ಪದ್ಮಶಾಲಿ, ಕೋಶಾಧಿಕಾರಿ ಪ್ರವೀಣ್ ಶೆಟ್ಟಿ , ಕಾರ್ಯದರ್ಶಿ ಸಚಿನ್ ಪೂಜಾರಿ ದೀಪ ಪ್ರಜ್ವಲಿಸಿ ಶಿಬಿರಕ್ಕೆ ಚಾಲನೆ ನೀಡಿದರು.




ಡಾ. ದಿವಾಕರ್ ಶೆಟ್ಟಿ, ಇಂದ್ರಾಳಿ ಮಾತನಾಡುತ್ತಾ ದಾನಗಳಲ್ಲಿ ಶ್ರೇಷ್ಟ್ರ ದಾನ ರಕ್ತ ದಾನ , ರಕ್ತವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ, ರಕ್ತದಾನದ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಮೊದಲಿಗೆ ಆಗಬೇಕು ಹಾಗು ರಕ್ತ ದಾನ ಮಾಡುವುದರಿಂದ ಆಗುವ ಪ್ರಯೋಜನದ ಬಗ್ಗೆ ಸವಿಸ್ತಾರವಾಗಿ ವಿವರಣೆ ನೀಡಿದರು,ಇನ್ನೊರ್ವ ಅತಿಥಿ ಶ್ರೀ ವಸಂತ್ ಸುವರ್ಣ ಮಾತನಾಡುತ್ತ ರಕ್ತ ದಾನ ಎಂಬ ಈ ಸೇವೆಯನ್ನು ಮಾಡಲು ಚಾಲನೆ ನೀಡಿದ ಆ ಸದಸ್ಯರುಗಳನ್ನು ಈ ಸಂಧರ್ಭದಲ್ಲಿ ಗೌರವಿಸುವುದು ಅತಿ ಮುಖ್ಯ ಎನ್ನುತ ಮಹಾವಿಷ್ಣು ಮಂದಿರದ ಸದಸ್ಯರು ಮಾಡುತ್ತಿರುವ ಜನಪರ ಕಾರ್ಯ ಪ್ರಶಂಸನೀಯ ಎಂದರು ಯುವಕರ ತಂಡವನ್ನು ಹೊಂದಿದ ಮಹಾವಿಷ್ಣು ಮಂದಿರ ಇನ್ನಷ್ಟು ಸಮಾಜ ಪರ ಸೇವೆ ನೆರವೇರಲಿ ಎಂದರು. ರಕ್ತದಾನ ಅತ್ಯಂತ ಶ್ರೇಷ್ಠ ದಾನ, ರಕ್ತವನ್ನು ನೀಡುವುದರಿಂದ ಇನೊಬ್ಬರ ಜೀವವನ್ನು ಉಳಿಸಬಹುದು, ಆ ತೃಪ್ತಿಯು ನಮಗೆ ಸಿಗುತ್ತದೆ ಎಂದರು. ಕೊನೆಯಲ್ಲಿ ಅಧ್ಯಕ್ಷರು ಮಾತನಾಡುತ್ತಾ ನಮ್ಮ ಮಂದಿರದ ವತಿಯಿಂದ ಜರಗುವ ಪ್ರತಿಯೊಂದು ಕಾರ್ಯಕ್ರಮವು ವೇದಿಕೆಯಲ್ಲಿ ಇದ್ದ ಗಣ್ಯರು ಹಾಗು ಭಕ್ತರು ದಾನಿಗಳ ಸಹಕಾರದಿಂದ ನೆರವೇರುತ್ತಿದೆ ಎಂದರು. ಮಂದಿರದ ಗೌರವಧಕ್ಷರಾದ ನಿತಿನ್ ಪ್ರಕಾಶ್ ಪುತ್ರನ್ ರವರ ಮುಂದಾಲೋಚನೆಯಿಂದ ತೃತೀಯ ವರ್ಷ ಈ ರಕ್ತ ದಾನ ಶಿಬಿರವು ನೆರವೇರುತ್ತಿದೆ ಎಂದರು ನಮ್ಮ ಸಂಸ್ಥೆಯು ನಿರಂತರ ಸಾಮಾಜಿಕ , ಧಾರ್ಮಿಕ , ವೈದ್ಯಕೀಯ ಚಟುವಟಿಕೆಯಲ್ಲಿ ತೊಡಗಿ ಕೊಂಡಿದೆ ಹಾಗು ಇಂತಹ ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತಿರುವ ಪ್ರತಿಯೊಬ್ಬರಿಗೂ ವಂದಿಸಿದರು.
ಈ ಸಂದರ್ಭದಲ್ಲಿ ರಕ್ತದಾನ ಶಿಬಿರಕ್ಕೆ ಮಹಾರಾಷ್ಟ್ರ ರಾಜ್ಯ ಘನ ಸರಕಾರದ ಗೌರವಾನ್ವಿತ ಶಾಸಕರಾದ ಶ್ರೀ ರವೀಂದ್ರ ಚೌವಾಣ್ ಮಾತನಾಡುತ್ತ ಶ್ರೀ ಮಹಾವಿಷ್ಣು ಮಂದಿರದ ಸದಸ್ಯರುಗಳು ಮೂರನೇ ವರ್ಷದ ರಕ್ತದಾನ ಶಿಬಿರ ದಲ್ಲಿ 100 ಕ್ಕೂ ಹೆಚ್ಚಿನ ಯೂನಿಟ್ ಸಂಗ್ರಹಿಸಿ ಸತತ ಮೂರನೇ ವರ್ಷ 150 ಕ್ಕೂ ಹೆಚ್ಚಿನ ಯೂನಿಟ್ ಸಂಗ್ರಹಣೆ ಮಾಡುವ ಬಹುದೊಡ್ಡ ಸಮಾಜ ಸೇವೆಗೆ ಪಣತೊಟ್ಟಿರುತ್ತಾರೆ ಈ ಕಾರ್ಯ ಜಯ ವಾಗಲೆಂದು ಶುಭ ಕೋರಿದರು.
ರಕ್ತ ದಾನ ಹಾಗೂ ಉಚಿತ ವೈದ್ಯಕೀಯ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ ಗೊಳಿಸಲು ದೂರ ದೂರದಿಂದಲು ದಾನಿಗಳು ಬಂದು ರಕ್ತ ದಾನ ಮಾಡಿರುವುದಲ್ಲದೆ ವಿಶೇಷವಾಗಿ ಖಾಡಿ ಕ್ರಿಕೆಟರ್ಸ್ ನ ಸದಸ್ಯರುಗಳು , ಸಮಾಜ ಬಾಂದವರು , ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು , ಹಾಗೂ ಸಮಿತಿ ಸದಸ್ಯರು, ಮತ್ತು ಸಕ್ರಿಯ ಕಾರ್ಯಕರ್ತರು, ಸದಸ್ಯರುಗಳು, ಹಾಗೂ ಮಹಿಳಾ ವಿಭಾಗದವರು ಶ್ರಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು. ಗೌರವ ಪ್ರದಾನ ಕಾರ್ಯದರ್ಶಿ ಶ್ರೀ ಸಚಿನ್ ಪೂಜಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.