
ಮುಂಬಯಿ ಉಪನಗರದ ಪ್ರತಿಷ್ಠಿತ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಭಾಂಡುಪ್ ಪಶ್ಚಿಮದ ಭಟ್ಟಿಪಾಡ ದಲ್ಲಿ
ಶ್ರೀ ಶನೇಶ್ವರ ಸೇವಾ ಸಮಿತಿ ಸಂಚಾಲಕತ್ವದ, ದಿ. ಶ್ರೀರಾಮ ಸ್ವಾಮೀಜಿಯವರಿಂದ ಸ್ಥಾಪನೆಗೊಂಡ ಶ್ರೀ ಶನೀಶ್ವರ ಮಂದಿರ ಭಟ್ಟಿಪಾಡ, ಇದರ 41ನೇ ವಾರ್ಷಿಕ ಮಹಪೂಜೆಯು ಜ. 30 ರಿಂದ ಫೆ. 1ರ ತನಕ ವೇದಮೂರ್ತಿ ಗುರುಪ್ರಸಾದ್ ಭಟ್ ಇವರ ದಿವ್ಯ ಹಸ್ತದಲ್ಲಿ ಶಾಸೋಕ್ತವಾಗಿ ಶ್ರದ್ಧೆ ಭಕ್ತಿಯೊಂದಿಗೆ ವಿಜೃಂಭಣೆಯಿಂದ ಜರುಗಿತು.

ಫೆಬ್ರವರಿ 1 ರ ಬೆಳಿಗ್ಗೆ ಸ್ವಸ್ತಿ ಪುಣ್ಯಾಹವಾಚನ, ಪ್ರಧಾನ ಹೋಮ, ನಡೆದು ಶ್ರೀ ಸತ್ಯನಾರಯಣ ಮಹಾಪೂಜೆ ನಡೆಯಿತು.
ಮಧ್ಯಾಹ್ನ ಶ್ರೀ ಮಹಾಕಾಳಿ ಕ್ಷೇತ್ರ ಕಿಂಡಿ ಪಾಡ, ಅಮರ್ ನಗರ್ ಮುಲಂಡ್ ನ ಜಯಂತ್ ಎನ್ ಪೂಜಾರಿ ಅವರಿಂದ ದೀಪ ಪ್ರಜ್ವಲನೆ ನಡೆದು ಶ್ರೀ ಶನಿಗ್ರಂಥ ಪಾರಾಯಣ ಆರಂಭ ಗೊಂಡಿತು. ಮೊದಲಿಗೆ ಯಕ್ಷಗಾನ ತಾಳಮದ್ದಲೆ ರೂಪದಲ್ಲಿ ಗ್ರಂಥ ಪಾರಾಯಣ ನಡೆಯಿತು.ನಂತರ ಪಾರಾಯಣ ರೂಪದಲ್ಲಿ ಗ್ರಂಥ ಪಾರಾಯಣ ನಡೆಯಿತು.
ತದನಂತರ ಭಜನೆ ನಡೆದು ಮಹಾ ಮಂಗಳಾರತಿ ನಡೆಯಿತು.






ರಾಜಕೀಯ ನೇತಾರರು, ಧಾರ್ಮಿಕ ಮುಖಂಡರು, ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ನೂರಾರು ಭಕ್ತರು, ತೀರ್ಥ ಪ್ರಸಾದ ಸ್ವೀಕರಿಸಿ ಅನ್ನ ಪ್ರಸಾದ ಸ್ವೀಕರಿಸಿ ದರು.








ಶ್ರೀ ಶನೇಶ್ವರ ಮಂದಿರ ಭಟ್ಟಿಪಾಡ ಇದರ 41ನೇ ವಾರ್ಷಿಕ ಮಹಾಪೂಜೆಯು ಗೌರವ ಅಧ್ಯಕ್ಷರಾದ ಎಚ್. ಜಿ. ಕರ್ಕಿ ಅಧ್ಯಕ್ಷರಾದ ದಯಾನಂದ ಡಿ ಶೆಟ್ಟಿ, ಉಪಾಧ್ಯಕ್ಷರಾದ ರಾಜು ಎನ್ ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಸದಾನಂದ ಎಂ ಅಮಿನ್, ಗೌರವ ಕೋಶಾಧಿಕಾರಿ ಅರುಣ್ ಜಿ. ಸುವರ್ಣ, ಜೊತೆ ಕಾರ್ಯದರ್ಶಿಗಳದ ಸುರೇಶ್ ಡಿ. ಕುಂದರ್, ದಯಾನಂದ್ ಬಿ ಕುಂದರ್ ಜೊತೆ ಕೋಶಾಧಿಕಾರಿಗಳಾದ ಜಯಂತ್ ವಿ ಪೂಜಾರಿ, ಬಾಲಕೃಷ್ಣ ಎನ್. ಸುವರ್ಣ, ಪ್ರಧಾನ ಅರ್ಚಕರಾದ ಸೀತಾರಾಮ್ ಜಿ ಕರ್ಕೆರ, ಅರ್ಚಕರಾದ ಸತೀಶ್ ವಿ ಪೂಜಾರಿ, ಪುಷ್ಪರಾಜ್ ಪೂಜಾರಿ ಹಾಗೂ ಶ್ರೀ ಶನೇಶ್ವರ ಸೇವಾ ಸಮಿತಿಯ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗ ಮತ್ತು ಸರ್ವ ಸದಸ್ಯರ ಸಹಕಾರದೊಂದಿಗೆ ವಿಜೃಂಭಣೆಯಿಂದ ಜರುಗಿತು.





ಶ್ರೀ ಶನೀಶ್ವರ ಮಂದಿರ ಭಟ್ಟಿಪಾಡ ಇದರ 45ನೇ ವಾರ್ಷಿಕ ಸಂಭ್ರಮ 2030 ರಲ್ಲಿ ನಡೆಯಲಿದ್ದು, ಅ ಸಂದರ್ಭದಲ್ಲಿ ಶ್ರೀ ಶನೇಶ್ವರ ದೇವರಿಗೆ ಚಿನ್ನದ ಕವಚವನ್ನು ಮಾಡಿಸುವ ಬಗ್ಗೆ ಇಚ್ಚುಕರಾಗಿದ್ದು, ಭಕ್ತಾದಿಗಳು ಚಿನ್ನದ ಕವಚಕ್ಕೆ ಸೇವಾ ರೂಪದಲ್ಲಿ ಕೈ ಜೋಡಿಸಿ ಕೃತರ್ತರಾಗಬೇಕಾಗಿದ್ದು ತಮ್ಮೆಲ್ಲರ ನಲ್ಮೆಯ ಒಲುಮೆಯು ಈ ಸಮಿತಿಯ ಮೇಲಿರಲಿ ಎಂಬ ಆಶಯ ನಮ್ಮದು.