
ಮಹಿಳಾ ಶಕ್ತಿಯಿಂದ ಸಂಘ ಇನ್ನಷ್ಟು ಬಲಿಷ್ಥಗೊಳ್ಳಲಿ – ಹರೀಶ್ ಮೈಂದನ್
ಮುಂಬಯು : ಇಂದಿನ ಕಾರ್ಯಕ್ರಮದಲ್ಲಿ ಮಹಿಳೆಯರು ಬಹಳ ಉತ್ಸಾಹದಿಂದ ಅಧಿಕ ಸಂಖ್ಯೆಯಲ್ಲಿ ಸೇರಿದ್ದು ತುಳು ಸಂಘ ಬೊರಿವಲಿಯ ಮಹಿಳಾ ವಿಭಾಗವು ಒಗ್ಗಟ್ಟಿನಿಂದ ಶಕ್ತಿಯುತವಾಗಿ ಬೆಳೆಯುತ್ತಿದೆ ಎಂಬುದನ್ನು ತೋರಿಸಿಕೊಟ್ಟಿದೆ. ಇದೇ ರೀತಿ ನಮ್ಮ ಸಂಘವು ಮಹಿಳಾ ಶಕ್ತಿಯಿಂದ ಇನ್ನಷ್ಟು ಬಲಿಷ್ಥಗೊಳ್ಳಲ್ಲಿ ಎಂದು ತುಳು ಸಂಘ ಬೊರಿವಲಿಯ ಅಧ್ಯಕ್ಷ ಹರೀಶ್ ಮೈಂದನ್ ನುಡಿದರು.

ಫೆ. 2 ರಂದು ತುಳು ಸಂಘ ಬೊರಿವಲಿ, ಮಹಿಳಾ ವಿಭಾಗದ ವತಿಯಿಂದ ಮಹಿಳಾ ಕಾರ್ಯಾಧ್ಯಕ್ಷೆ ಶೋಭಾ ಶೆಟ್ಟಿ ಇವರ ನೇತೃತ್ವದಲ್ಲಿ ಬೊರಿವಲಿ ಪಶ್ಚಿಮ ಜಯರಾಜ ನಗರ ಮಹಿಷ ಮರ್ಧಿನಿ ದೇವಸ್ಥಾನದಲ್ಲಿ ನಡೆದ ಅರಸಿನ ಕುಂಕುಮ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ತುಳು ಬಾಷೆ ಹಾಗೂ ಸಂಸ್ಕೃತಿಯನ್ನು ಉಳಿಸುದರೊಂದಿಗೆ ಮುಂದಿನ ಪೀಳಿಗೆಗೆ ನಮ್ಮ ನಾಡಿನ ಸಂಸ್ಕೃತಿಯ ಅರಿವು ಉಂಟು ಮಾಡುವುದು ನಮ್ಮೆಲ್ಲರ ಕರ್ತ್ಯವ್ಯ. ಇದಕ್ಕಾಗಿ ನಮ್ಮ ಸಂಘವು ನಿಮ್ಮೆಲ್ಲರ ಸಹಕಾರದಿಂದ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸಮಾಜ ಸೇವಕಿ ವಸಂತಿ ಶೆಟ್ಟಿಯವರು ಉಪಸ್ಥಿತರಿದ್ದು ಮಾತನಾಡುತ್ತಾ ತುಳು ಸಂಘದಲ್ಲಿರುವ ಹೆಚ್ಚಿನವರು ಪ್ರತಿಭಾವಂತರಾಗಿದ್ದು, ಮಕ್ಕಳು ಉತ್ತಮ ಭವಿಷ್ಯ ರೂಪಿಸುವಲ್ಲಿ ಇಂತಹ ಸಂಘಟನೆಗಳು ಸಹಕಾರಿಯಾಗಲಿ. ಅರಸಿನ ಕುಂಕುಮ ಹೆಣ್ಣಾಗಿ ಹುಟ್ಟಿದವಳಿಗೆ ಸೌಭಾಗ್ಯ ತರಲಿ. ನಾವು ನಮ್ಮಲ್ಲಿನ ಪ್ರತಿಭೆಗಳಿಗೆ ಅವಕಾಶ ನೀಡೋಣ ಎನ್ನುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮಹಿಳೆಯರಿಂದ ಅರಸಿನ ಕುಂಕುಮ ಕಾರ್ಯಕ್ರಮ ನಡೆಯಿತು.
ಕಾರ್ಯದರ್ಶಿ ವಿಜಯಲಕ್ಷ್ಮಿ ದೇವಾಡಿಗ ಅತಿಥಿಗಳನ್ನು ಪರಿಚಯಿಸಿದರು. ತಿಲೋತ್ತಮ ವೈದ್ಯ ಮತ್ತು ವಿಜಯಲಕ್ಷ್ಮಿ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.
ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಕೃಷ್ಣರಾಜ್ ಸುವರ್ಣ ವಂದಿಸಿದರು.
ವೇದಿಕೆಯಲ್ಲಿ ಹರೀಶ್ ಮೈಂದನ್, ವಸಂತಿ ಶೆಟ್ಟಿ, ಶೋಭಾ ಶೆಟ್ಟಿ, ಕೃಷ್ಣರಾಜ್ ಸುವರ್ಣ,
ರತಿ ವೀರಾರ್ ಶಂಕರ್ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಂಘದ ಸಲಹೆಗಾರರಾದ ಪ್ರದೀಪ್ ಶೆಟ್ಟಿ, ಉಪಾಧ್ಯಕ್ಷ ರಜಿತ್ ಸುವರ್ಣ, ಕೋಶಾಧಿಕಾರಿ ದಿವಾಕರ ಕರ್ಕೇರ, ಮಾಜಿ ಅಧ್ಯಕ್ಷರುಗಳಾದ ವಾಸು ಪುತ್ರನ್ ಮತ್ತು ಪ್ರಕಾಶ್ ಶೆಟ್ಟಿ ಪೇಟೆಮನೆ, ಯುವ ವಿಭಾಗದ ಕಾರ್ಯಧ್ಯಕ್ಷ ನ್ಯಾ. ರಾಘವ ಎಂ. ಸಂಘದ ಸದಸ್ಯರಾದ ಚಂದ್ರಹಾಸ ಬೆಳ್ಚಡ, ಅಶೋಕ್ ಪೂಜಾರಿ, ಮಹಿಳಾ ವಿಭಾಗದ ಪೂರ್ಣಿಮಾ ಪೂಜಾರಿ, ಕುಸುಮಾ ಶೆಟ್ಟಿ, ಸವಿತಾ ಸಿ ಶೆಟ್ಟಿ, ರಾಜೇಶ್ವರಿ ಸುವರ್ಣ, ಸುನಂದಾ ಶೆಟ್ಟಿ, ಸುಮತಿ ಪುತ್ರನ್, ಸರಸ್ವತಿ ರಾವ್, ಪ್ರಿಯಾ ಲಕ್ಷ್ಮಿ ಉಪ್ಪೂರ್, ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದರು. ಮಹಿಷಮರ್ದಿನಿ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮವಿತ್ತು.