
ಚಿತ್ರ, ವರದಿ: ಉಮೇಶ್ ಕೆ. ಅಂಚನ್.
ಮುಂಬಯಿ, ಫೆ. 5: ಮೀರಾಭಾಯಂದರ್ ಹೋಟೆಲ್ಸ್ ಅಸೋಸಿಯೇಷನ್ ಇದರ ವಿಶೇಷ ಸರ್ವಸಾಮಾನ್ಯ ಸಭೆಯು ಫೆ. 4 ರಂದು ಮೀರಾಭಾಯಂದರ್ ಫಾಟಕ್ ರಸ್ತೆಯಲ್ಲಿರುವ ಕ್ರೌನ್ ಬಿಸಿನೆಸ್ ಹೋಟೇಲಿನ ಅಶ್ವಿನ್ ಬ್ಯಾಂಕ್ವೆಟ್ ಹಾಲ್ ನಲ್ಲಿ ಜರಗಿತು.
ಅಸೋಸಿಯೇಷನಿನ ಅದ್ಯಕ್ಷ ರಂಜನ್ ಎಲ್ ಶೆಟ್ಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಸಂಘಟನೆಯು ಹೋಟೆಲಿಗರ ಯಾವುದೇ ಸಮಸ್ಯೆ ಅಥವಾ ತೊಂದರೆಗಳನ್ನು ನಿವಾರಿಸಲು ಸದಾ ಶ್ರಮಿಸುತ್ತಿದೆ. ಆದರೆ ಹೋಟೇಲಿಗರ ಬೆಂಬಲ, ಸಹಕಾರ ಇದ್ದರೆ ಮಾತ್ರ ಸಾಧ್ಯ. ಇಂದು ಹೋಟೇಲಿಗರ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ವೆದರ್ ಶೆಡ್ಡಿಂಗ್ ಸಮಸ್ಯೆ, ಏರಿದ ಅಬಕಾರಿ ತೆರಿಗೆ, ಆಸ್ತಿ ತೆರಿಗೆ, ತಿಂಡಿತಿನಿಸುಗಳ ಮೇಲಿನ ಜಿ.ಎಸ್.ಟಿ ಶುಲ್ಕ, ಈಗಾಗಲೇ ಲಗುವಾದ ಆಲ್ಕೋಹಾಲ್ ಮೇಲಿನ ವ್ಯಾಟ್ ಶುಲ್ಕ, ಹತ್ತು ವರ್ಷದ ಹಿಂದೆ ಮುಚ್ಚಿದ್ದ ಎಲ್.ಬಿ.ಟಿಯ ಕಿರುಕುಳ, ಠೇವಣಿ ಹಾಗೂ ನಿರ್ವಾಹಣಾ ಶುಲ್ಕದೊಂದಿಗೆ ನೀರಿನ ಎಲೆಕ್ಟ್ರಾನಿಕ್ ಮೀಟರ್ ಅಳವಡಿಕೆಯ ಪ್ರಸ್ಥಾವ,ಡಾಬಾ ಮತ್ತು ಪರವಾನಿಗೆ ಇಲ್ಲದ ಜಾಗದಲ್ಲಿ ಮದ್ಯ ಮಾರಾಟ ಹಾಗೂ ಪ್ರತೀ ವರ್ಷ ಏರುತ್ತಿರುವ ವಿವಿಧ ಶುಲ್ಕಗಳಿಂದ ಹೋಟೇಲ್ ವ್ಯಪಾರವು ಕುಸಿಯುತ್ತಿದೆ. ಸದ್ಯಕ್ಕೆ ಬಾರ್ ಮತ್ತು ರೆಸ್ಟೋರೆಂಟಿಗೆ ಮಾತ್ರ ರಾತ್ರಿ ಒಂದುವರೆ ಗಂಟೆ ತನಕ ಮಾತ್ರ ಪರವಾನಿಗೆ ಇದ್ದು ರೆಸ್ಟೋರೆಂಟುಗಳಿಗೆ ಯಾವುದೇ ಆದೇಶ ಪ್ರತಿ ಇಲ್ಲದ ಕಾರಣ ಪೋಲೀಸು ಅಥವಾ ಇತರ ಸರಕಾರಿ ಅಧಿಕಾರಿಗಳಿಂದ ತೊಂದರೆ ಸಿಗುತ್ತಿತ್ತು. ಆದರೆ ಸದ್ಯಕ್ಕೆ ಲೇಬರ್ ಡಿಪಾರ್ಟ್ಮೆಂಟ್ ಹೊಸ ಸಮಯದ ಬಗ್ಗೆ ಕಾನೂನು ಹೊರಡಿಸಿದ್ದು ಬೇಗನೆ ಪೋಲೀಸ್ ವಿಭಾಗದಿಂದ ಒಪ್ಪಿಗೆ ಪತ್ರ ಸಿಗಲಿದೆ ಹಾಗೂ ಈ ಎಲ್ಲಾ ತೊಂದರೆಗಳನ್ನು ಸರಕಾರದ ಗಮನಕ್ಕೆ ತರುವ ಸಲುವಾಗಿ ಪರಿಸರದ ಶಾಸಕರಿಗೆ ಮನವಿ ಸಲ್ಲಿಸಬೇಕು ಎಂದರು.
ಸಮಸ್ಯೆಗಳ ಪರವಾಗಿ ಮಾಜಿ ನಗರ ಸೇವಕರಾದ ಅರವಿಂದ ಎ. ಶೆಟ್ಟಿ, ರಾಕೇಶ್ ಶಾಹ, ರಾಜಕೀಯ ನೇತಾರರಾದ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು ಮತ್ತು ಉದಯ ಶೆಟ್ಟಿ ಪೆಲತ್ತೂರು ಮಾತನಾಡಿ ಸಲಹೆ ಸೂಚನೆ ನೀಡಿದರು.




ಈ ಸಂದರ್ಭದಲ್ಲಿ ಇತ್ತೀಚೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ವಿಜೇತರಾದ ಪರಿಸರದ ಶಾಸಕ ನರೇಂದ್ರ ಎಲ್. ಮೆಹತಾರವರನ್ನು ಸನ್ಮಾನಿಸಲಾಯಿತು ಹಾಗೂ ಹೋಟೇಲಿಗರ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಲಾಯಿತು. ಶಾಸಕರು ಇದರ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಶೀಘ್ರ ಕ್ರಮ ಕೈಗೊಳ್ಳುವ ಹಾಗೂ ಸರಕಾರದ ಗಮನಕ್ಕೆ ತರುವ ಭರವಸೆ ನೀಡಿದರು.

ಹೋಟೇಲು ಮಾಲಕರು ಹಾಗೂ ಚಾಲಕರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಸಂಘಟನೆಯ ಉಪಾದ್ಯಕ್ಷರುಗಳಾದ ವಿನಿತ್ ಶೆಟ್ಟಿ, ಸೋಯಲ್ ಸೇಲಿಯಾ, ಹಸ್ಸನ್ ನದೇರಿಯಾ, ಧೀರಜ್ ಶೆಟ್ಟಿ, ಕಾರ್ಯದರ್ಶಿ ಪ್ರಶಾಂತ್ ಪೂಜಾರಿ, ಕೋಶಾಧಿಕಾರಿ ಅನಿಲ್ ಆರ್. ಶೆಟ್ಟಿ ಉಪಸ್ಥಿತರಿದ್ದರು.
ಉಪಾಧ್ಯಕ್ಷರುಗಳಾದ ಜೀವನ್ ಶೆಟ್ಟಿ, ಪ್ರಶಾಂತ್ ಸಮಾನಿ, ಜೊತೆ ಕಾರ್ಯದರ್ಶಿಗಳಾದ ಚಂದ್ರಕಾಂತ್ ಶೆಟ್ಟಿ, ಹರೀಶ್ ಶೆಟ್ಟಿ, ಆಡಳಿತ ಸಮಿತಿಯ ಸದಸ್ಯರಾದ ಉದಯ ಶೆಟ್ಟಿ ಮಲಾರ್ ಬೀಡು, ಹರೀಶ್ ಶೆಟ್ಟಿ ಕಾಪು, ಶೈಲೇಶ್ ಪೂಜಾರಿ ಹಾಗೂ ಮುಖ್ಯ ಸಲಹೆಗಾರರಾದ ಮಧುಕರ್ ಎಸ್. ಶೆಟ್ಟಿ ಉಪಸ್ಥಿತರಿದ್ದು ಸಹಕರಿಸಿದ್ದರು.
ಆರಂಭದಲ್ಲಿ ಹೋಟೇಲು ಸಿ ಮಾಲಕರು, ಚಾಲಕರು ಹಾಗೂ ಸಿಬ್ಬಂದಿಗಳಿಗೆ ಆಹಾರ ಸುರಕ್ಷತೆ ತರಬೇತಿ ಮತ್ತು ಪ್ರಮಾಣೀಕರಣ (FOSTAC) ತರಬೇತಿ ಆಯೋಜಿಸಲಾಗಿತ್ತು.