23.5 C
Karnataka
April 4, 2025
ಪ್ರಕಟಣೆ

ಬಿಲ್ಲವ ಸೇವಾ ಸಂಘ ಕುಂದಾಪುರ(ರಿ) ಮುಂಬಯಿ : ಫೆ. 16 ರಂದು “ಅರಸಿನ ಕುಂಕುಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ”



ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ ಇದರ ಉಪ ಸಮಿತಿಗಳಲ್ಲಿ ಒಂದಾದ ಮಹಿಳಾ ಸಂಪದದ ಆಯೋಜನೆಯಲ್ಲಿ ದಿನಾಂಕ 16.02.2025 ರ ಅಪರಾಹ್ನ 3.30ಕ್ಕೆ ಸರಿಯಾಗಿ ವಸಂತ್ ರಾವ್ ನಾಯಕ್ ಹಾಲ್, ಶಿವಕ್ರಪಾ ಪ್ರಿಮೈಸೈಸ್, ವಾಮನ ಹರಿಪೇಟೆ ಸನ್ಸ್ ಮೇಲ್ಗಡೆ, ದಾದಾ ಪಾಟೀಲ ವಾಡಿ, ಥಾಣೆ(ಪಶ್ಚಿಮ) (ರೈಲ್ವೆ ನಿಲ್ದಾಣದ ಸಮೀಪ) ಇಲ್ಲಿ ʻಅರಸಿನ ಕುಂಕುಮ ಹಾಗೂ ಸಾಂಸ್ಕೃತಿಕʼ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮುಂಬಯಿ ಮಹಾನಗರದಲ್ಲಿ ಹಲವಾರು ವರ್ಷಗಳಿಂದ ಎಲೆಯ ಮರೆಯ ಕಾಯಿಯಂತೆ ತನ್ನ ಸದಸ್ಯ ಬಾಂಧವರ ಶ್ರೇಯೋಭಿವೃದ್ಧಿಗಾಗಿ ಸಮಾಜ ಸೇವೆ ಮಾಡುತ್ತ ಬಂದಿರುವ ಧೀಮಂತ ಸಂಸ್ಥೆ ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ.
ಸಂಘದ ಅಧ್ಯಕ್ಷರಾದ ಮಾನ್ಯ ಸಿ ಎ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜರಗುವ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಥಾಣೆಯ ಮಾಜಿ ಮಹಾಪೌರೆ ಶ್ರೀಮತಿ ಮೀನಾಕ್ಷಿ ರಾಜೇಂದ್ರ ಶಿಂಧೆ(ಪೂಜಾರಿ), ಕಾರ್ಯಕ್ರಮದ ಉದ್ಘಾಟಕರಾಗಿ ಲೇಖಕಿ, ಸಮಾಜ ಸೇವಕಿ ಶ್ರೀಮತಿ ಗುಲಾಬಿ ಬಾಬು ಪೂಜಾರಿಯವರು ಹಾಗೂ ಗೌರವ ಅತಿಥಿಗಳಾಗಿ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ, ಮುಂಬಯಿ ಮಹಿಳಾ ವಿಭಾಗ ಇದರ ಕಾರ್ಯಾಧ್ಯಕ್ಷೆ ಡಾ. ಸುದೀಪಾ ಮಹಾಬಲ ಕುಂದರ್ ಮತ್ತು ಸಮಾಜ ಸೇವಕಿಯರಾದ ಶ್ರೀಮತಿ ಕಂಚನ ಕಿಶೋರ್ ಶಾ, ಶ್ರೀಮತಿ ಸುಜಾತಾ ವಿಶ್ವನಾಥ ಪೂಜಾರಿ, ಶ್ರೀಮತಿ ಕವಿತಾ ಅಶೋಕ ಪೂಜಾರಿ ಉಪಸ್ಥಿತರಿರುವರು.

ಕಾರ್ಯಕ್ರಮದ ಮಧ್ಯಂತರದಲ್ಲಿ ಸಮಾಜದ ಯುವ ಪ್ರತಿಭಾವಂತರನ್ನು ಗುರುತಿಸಿ ಸನ್ಮಾನ ನೀಡಿ ಗೌರವಿಸಲಾಗುವುದು. ಮನೋರಂಜನೆಯ ಅಂಗವಾಗಿ ಸದಸ್ಯರು ಮತ್ತು ಮಕ್ಕಳಿಂದ ಗಾನ, ನ್ರತ್ಯ ವೈಭವ ಜರಗಲಿದೆ. ಹಾಗೂ ನಗರದ ಖ್ಯಾತ ರಂಗ ಕಲಾವಿದೆಯರಾದ ಕುಮಾರಿ ಅಂಕಿತಾ ನಾಯಕ್ ಮತ್ತು ಕುಮಾರಿ ಸೌಜನ್ಯ ಬಿಲ್ಲವ ತಂಡದವರಿಂದ ಪೌರಾಣಿಕ ಯಕ್ಷಗಾನ ಆಖ್ಯಾನ “ಜಾಂಬವತಿ ಕಲ್ಯಾಣ” ಎಂಬ ತುಣುಕು ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸಮಾಜ ಬಾಂಧವರಾದ ತಾವೆಲ್ಲರೂ ಈ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಬೇಕೆಂದು ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸುಧಾಕರ ಸಿ ಪೂಜಾರಿಯವರು ಪ್ರಕಟಣೆಯಲ್ಲಿ ತಿಳಿಸಿದರು. ಕೊನೆಯಲ್ಲಿ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿದೆ.

Related posts

ಬಾಂಬೆ ಬಂಟ್ಸ್ ಅಸೋಸಿಯೇಶನ್ ನ ಉನ್ನತ ಶಿಕ್ಷಣ ಸಂಸ್ಥೆ,ಫೆ. 26. ವಾರ್ಷಿಕೋತ್ಸವ, ಪದವಿ ಪ್ರಧಾನ ಸಮಾರಂಭ

Mumbai News Desk

ಮಹತೋಭಾರ ಶನೀಶ್ವರ ದೇವಸ್ಥಾನ – ಸುವರ್ಣ ಸಂಭ್ರಮದ ಸರಣಿ ಕಾರ್ಯಕ್ರಮ 

Mumbai News Desk

ಶ್ರೀ ಸೀತಾರಾಮ ಭಜನಾ ಮಂದಿರ,ಹೆಜಮಾಡಿ, ಜುಲೈ 16ರಿಂದ “ಕುಮಾರವ್ಯಾಸ ಭಾರತ”, ಕಥಾ ವಾಚನ.

Mumbai News Desk

ಕರುನಾಡ ಸಿರಿ – ಏಪ್ರಿಲ್ 14ಕ್ಕೆ ವಾರ್ಷಿಕ ಕ್ರೀಡಾಕೂಟ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ : ದೀಪಾವಳಿ ಹಬ್ಬದ ಪ್ರಯುಕ್ತ ಭಜನಾ ಸಂಕೀರ್ತನೆ

Mumbai News Desk

ಮೀರಾ ರೋಡ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಜ1 ರಂದು, ಶ್ರೀ  ಸಾರ್ವಜನಿಕ ಸತ್ಯ ನಾರಾಯಣ ಮಹಾಪೂಜೆ.

Mumbai News Desk