ಭಾರತೀಯ ರಿಸರ್ವ್ ಬ್ಯಾಂಕ್ ಫೆ. 13ರಂದು ಮುಂಬೈ ಮೂಲದ ನ್ಯೂ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕಿಗೆ ಕಟ್ಟುನಿಟ್ಟಿನ ನಿರ್ಬಂಧ ಹೇರಿದ್ದು ಗ್ರಾಹಕರು ಅಘಾತ ಮತ್ತು ಅನಿಶ್ಚಿತತೆಗೆ ಒಳಗಾಗಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ನ ಪೂರ್ವನ್ಮತಿ ಇಲ್ಲದೆ ಬ್ಯಾಂಕ್ ಸಾಲಗಳನ್ನು ನೀಡುವುದು, ಹೊಸ ಠೇವಣಿಗಳನ್ನು ಸ್ವೀಕರಿಸುವುದು, ಹೂಡಿಕೆ ಮಾಡುವುದು ಅಥವಾ ಯಾವುದೇ ಪಾವತಿಗಳನ್ನು ವಿತರಿಸುವುದನ್ನು ನಿನ್ನೆಯಿಂದ ನಿಷೇಧಿಸಿರುತ್ತದೆ .
ಪ್ರಕಟನೆಯ ನಂತರ ಬ್ಯಾಂಕಿನ ಹಲವಾರು ಶಾಖೆಗಳ ಹೊರಗೆ ಉದ್ದನೆಯ ಸರತಿ ಸಾಲುಗಳು ರೂಪುಗ್ಗೊಂಡಿದ್ದು ಗ್ರಾಹಕರು ಹತಾಶರಾಗಿ ಉತ್ತರಗಳನ್ನು ಹುಡುಕುತ್ತಿದ್ದರು.
ಮುಂಬೈನ ಅಂಧೇರಿಯಲ್ಲಿ ಇರುವ ವಿಜಯನಗರ ಶಾಖೆಯಲ್ಲಿ ಹೆಚ್ಚಿನ ಸಂಖ್ಯೆಯ ಖಾತೆದಾರರು ಅದರಲ್ಲೂ ಹಿರಿಯ ನಾಗರಿಕರು ತಮ್ಮ ಉಳಿತಾಯದ ಬಗ್ಗೆ ಆತಂಕದಿಂದ ಹೊರಗೆ ಜಮಾಯಿಸಿದ್ದರು. ಗ್ರಾಹಕರಿಗೆ ಈಗ ಇರುವ ದೊಡ್ಡ ಕಾಳಜಿ ಎಂದರೆ ಅವರ ಹಣದ ಲಭ್ಯತೆ. ಬ್ಯಾಂಕಿನಿಂದ ಸಂವಹನದ ಕೊರತೆಯ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದರು. ಬ್ಯಾಂಕಿನ ಗ್ರಾಹಕರ ಬೆಂಬಲ ಸೇವೆಗಳು ಮತ್ತು ಮೊಬೈಲ್ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ಮತ್ತೆ ಕೆಲವರು ದೂರಿದ್ದಾರೆ.
ಆರ್ ಬಿ ಐ ಠೇವಣಿದಾರರಿಗೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವುದಾಗಿ ಮತ್ತು ಅವರ ಹಿತ ದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದೆ,ಆದರೆ ಬ್ಯಾಂಕಿನ ಆರ್ಥಿಕ ಆರೋಗ್ಯದ ಸುತ್ತಲಿನ ಅನಿಶ್ಚತೆಯು ಗ್ರಾಹಕರು ತಮ್ಮ ಹಣವನ್ನು ಮರಳಿ ಪಡೆಯಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬ ಬಗ್ಗೆ ಕಳವಳನ್ನು ಹುಟ್ಟು ಹಾಕಿದೆ.
ನಿರ್ಬಂಧದ ಪ್ರಮುಖ ಅಂಶಗಳು :
1) ಬ್ಯಾಂಕ್ ಸಾಲಗಳನ್ನು ನೀಡಲು ಅಥವಾ ನವೀಕರಿಸಲು, ಹೂಡಿಕೆ ಮಾಡಲು ಅಥವಾ ಹೊಣೆಗಾರಿಕೆಯನ್ನು ಹೊಂದಲು ಸಾಧ್ಯವಿಲ್ಲ
2) ಉಳಿತಾಯ, ಕರೆಂಟ್ ಅಥವಾ ಇತರ ಖಾತೆಗಳಿಂದ ಗ್ರಾಹಕರು ಹಣ ಹಿಂಪಡೆಯಲು ಸಾಧ್ಯವಿಲ್ಲ
3) ಠೇವಣಿದಾರರು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (DICGC)ಅಡಿಯಲ್ಲಿ 5 ಲಕ್ಷ ರೂಪಾಯಿ ವರೆಗಿನ ಠೇವಣಿ ವಿಮಾ ತೆಗೆದುಕೊಳ್ಳಲು ಅರ್ಹರಾಗಬಹುದು.
4) ಕೆಲವು ಷರತ್ತುಗಳ ಅಡಿಯಲ್ಲಿ ಠೇವಣಿಗಳ ಮೇಲೆ ಸಾಲಗಳನ್ನು ಹೊಂದಿಸಲು ಬ್ಯಾಂಕಿಗೆ ಅನುಮತಿ ಇದೆ
5) ಸಂಬಳ, ಬಾಡಿಗೆ ಮತ್ತು ವಿದ್ಯುತ್ ಬಿಲ್ಲುಗಳಂತ ಅಗತ್ಯ ವೆಚ್ಚಗಳನ್ನು ಪಾವತಿಸಬಹುದು.
ಈ ನಿರ್ಬಂಧಗಳು ಆರು ತಿಂಗಳವರೆಗೆ ಜಾರಿಯಲ್ಲಿರುತ್ತವೆ ಹಾಗೂ ಪರಿಶೀಲನೆಗೆ ಒಳಪಟ್ಟಿರುತ್ತವೆ, ಈ ಕ್ರಮಗಳನ್ನು ಬ್ಯಾಂಕಿನ ಪರವಾನಿಗೆ ರದ್ಧತಿ ಎಂದು ಪರಿಗಣಿಸಬಾರದು ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.
ಸಹಕಾರಿ ಬ್ಯಾಂಕುಗಳ ವೈಫಲ್ಯದ ಕಾರಣಗಳು :
- ಬ್ಯಾಂಕಿಂಗ್ ಕಾರ್ಯಗಳಲ್ಲಿ ಆರ್ ಬಿ ಐ ಬ್ಯಾಂಕುಗಳನ್ನು ಮತ್ತು ನಿರ್ವಹಣಾ ಕಾರ್ಯಗಳಲ್ಲಿ ರಾಜ್ಯ ಸರ್ಕಾರವನ್ನು ನಿಯಂತ್ರಿಸುತ್ತದೆ ಇದು ಕಾರ್ಯಾಚರಣೆಯಲ್ಲಿ ಅಸ್ಪಷ್ಟತೆಗೆ ಕಾರಣವಾಗಬಹುದು.
- ಪಾರದರ್ಶಕತೆಯ ಕೊರತೆ ಮತ್ತು ವಿಶ್ವಾಸಾರ್ಹವಲ್ಲದ ಲೆಕ್ಕ ಪರಿಶೋಧನೆಯು ಮತ್ತೊಂದು ಅಂಶವಾಗಿದೆ.ರಾಜ್ಯ ಸರ್ಕಾರಿ ಅಧಿಕಾರಿಗಳು ನಡೆಸುವ ಲೆಕ್ಕ ಪರಿಶೋಧನೆಗಳು ಅನಿಯಮಿತವಾಗಿರುತ್ತದೆ ಮತ್ತು ಕೆಲವರ ಪ್ರಕಾರ ಇಲ್ಲಿ ಸಮಗ್ರತೆಯ ಕೊರತೆ ಇದೆ.
- ಆಗಸ್ಟ್ 2024ರಲ್ಲಿ ಸಾಲ ಮಾರ್ಗಸೂಚಿಗಳನ್ನು ಉಲ್ಲಂಘಿಸಿದಕ್ಕಾಗಿ ನಿಧಿ ಸಹಕಾರಿ ಬ್ಯಾಂಕಿಗೆ ಆರ್‌ಬಿಐ ದಂಡ ವಿಧಿಸಿದೆ.
- ಅದೇ ವರ್ಷದ ಜುಲೈನಲ್ಲಿ ಕೇಂದ್ರ ಬ್ಯಾಂಕ್ ಪೂರ್ವಂಚಲ ಸಹಕಾರಿ ಬ್ಯಾಂಕಿನ ಪರವಾನಿಗೆಯನ್ನು ರದ್ದುಗೊಳಿಸಿತು.
- ಈ ಬೆಳವಣಿಗೆಗಳು ಆಗಾಗ್ಗೆ ಅಂತಹ ಬ್ಯಾಂಕುಗಳ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಗಳನ್ನು ಎತ್ತುತವೆ. ಆರ್ ಬಿ ಐ ಮತ್ತು ಅಧಿಕಾರಿಗಳು ಈ ವಲಯದ ಮೇಲೆ ತಮ್ಮ ಹಿಡಿತವನ್ನು ಬಿಗಿಗೊಳಿಸಬೇಕಾಗಿದೆ ಏಕೆಂದರೆ ಯಾವಾಗಲೂ ತಡೆಗಟ್ಟುವಿಕೆ ಚಿಕಿತ್ಸೆಗಿಂತ ಉತ್ತಮವಾಗಿದೆ( Prevention s better than cure )