28 C
Mumbai
September 19, 2026
Mumbai News Kannada
ಪ್ರಕಟಣೆ

ಕುಮಾರ  ಕ್ಷತ್ರಿಯ ಸಂಘ  59 ನೇ ವಾರ್ಷಿಕ ಮಹಾಸಭೆ, ಪೆ.16 :   ಸತ್ಯನಾರಾಯಣ ಮಹಾಪೂಜೆ, ಹಳದಿ ಕುಂಕುಮ





ಮುಂಬಯಿ, ಫೆ.14 : ಮಹಾ ನಗರದಲ್ಲಿರುವ ಪ್ರತಿಷ್ಠಿತ ಜಾತೀಯ ಸಂಸ್ಥೆಯಲ್ಲೊಂದಾದ ಕುಮಾರ ಕ್ಷತ್ರಿಯ ಸಂಘ, ಮುಂಬಯಿ ಇದರ ವಾರ್ಷಿಕ ಮಹಾಸಭೆ ಮತ್ತು ಶ್ರೀ ಸತ್ಯ ನಾರಾಯಣ ಮಹಾಪೂಜೆ  ಫೆಬ್ರವರಿ , ರವಿವಾರ ದಿನಾಂಕ 16ರಂದು ಸಾಂತಕ್ರೂಜ್ ಪೂರ್ವದ ಪೇಜಾವರ ಮಠದ ಮಧ್ವಭವನ ಸಭಾಗೃಹದಲ್ಲಿ ಸಂಘದ ಅಧ್ಯಕ್ಷ ಎಂ.ಡಿ. ರಾವ್ ಮತ್ತು  ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಲು ಎಂ. ರಾವ್ ಅವರ ನೇತೃತ್ವದಲ್ಲಿ  ಬೆಳಿಗ್ಗೆ 10.00 ಗಂಟೆಗೆ  ಸರಿಯಾಗಿ ಶ್ರೀ ಸತ್ಯನಾರಾಯಣ ಮಹಾಪೂಜೆ  ನಂತರ  ಮಹಿಳೆಯರಿಂದ ಹಳದಿ ಕುಂಕುಮ ಕಾರ್ಯಕ್ರಮ  ನೆರವೇರಲಿದೆ. ಮಧ್ಯಾಹ್ನ 12.15 ಗಂಟೆಗೆ ಕುಮಾರ ಕ್ಷತ್ರಿಯ ಸಂಘ, ಮುಂಬಯಿಯ ಅಧ್ಯಕ್ಷ ಎಂ ಡಿ ರಾವ್ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ  ಶಾಲು ಎಂ. ರಾವ್ ಇವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆಯು ನೆರವೇರಲಿದೆ.  ಇದೇ ಸಂದರ್ಭದಲ್ಲಿ ಸಮಾಜ ಮತ್ತು ಸಂಘದ  ಪ್ರಗತಿಗೋಸ್ಕರ ಶ್ರಮಿಸಿದ ದಿವಂಗತ ಕಾರ್ಯಕರ್ತರ ಕುಟುಂಬದವರನ್ನು ಮತ್ತು ಸಂಸ್ಥೆಯಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸದಸ್ಯರನ್ನು ಸನ್ಮಾನಿಸಲಾಗುವದು.  

     ಈ ಸಂದರ್ಭದಲ್ಲಿ ಲಘು ಉಪಹಾರ ಹಾಗೂ ಮಧ್ಯಾಹ್ನ ಪ್ರೀತಿ ಭೊಜನದ ವ್ಯವಸ್ಥೆಯನ್ನು ಮಾಡಲಾಗಿದೆ.

    ಈ ಎಲ್ಲಾ ಕಾರ್ಯಕ್ರಮಗಳಿಗೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಕುಮಾರ ಕ್ಷತ್ರಿಯ ಸಂಘ ಮುಂಬಯಿವತಿಯಿಂದ ಉಪಾಧ್ಯಕ್ಷ  ರವಿ ಜಿ. ಚಂದ್ರಗಿರಿ, ಗೌ. ಪ್ರ. ಕಾರ್ಯದರ್ಶಿ    ಉಮಾನಾಥ ವಿ. ರಾವ್, ಕೋಶಾಧಿಕಾರಿ ಶಾಂತಾರಾಮ್ ಜೆ. ಮಾಂಗಾಡ್, ಜೊತೆ ಕೋಶಾಧಿಕಾರಿ ಸುರೇಂದ್ರ ಎಚ್. ಎ. ಮತ್ತು ಜೊತೆ ಕಾರ್ಯದರ್ಶಿ ಸುರೇಂದ್ರ ಎಚ್ ಎ ಜೊತೆ ಕೋಶಾಧಿಕಾರಿ ಸಾಗರ  ಪಿ. ರಾವ್ ಮತ್ತು  ಸಮಿತಿ ಸದಸ್ಯರಾದ ಕೆ. ಎಂ. ರಾವ್,  ರವಿ ಎಸ್. ಕಲ್ನಾಡ್, ವಿವೇಕ್ ಜಿ. ರಾವ್, ಅನಿಲ್ ಜಿ. ರಾವ್,  ಪ್ರಶಾಂತ್ ನಾಥ್, ಪ್ರಶಾಂತ ಆರ್. ರಾವ್, ಅನುಪ್ ಜೆ.ರಾವ್ ಮಹಿಳಾ ವಿಭಾಗದವತಿಯಿಂದ  ಕಾರ್ಯಾಧ್ಯಕ್ಷೆ ಶಾಲು ಎಂ.‌ ರಾವ್, ಉಪ ಕಾರ್ಯಾಧ್ಯಕ್ಷೆ  ಉಮಾ ಎಸ್. ರಾವ್,  ಕಾರ್ಯದರ್ಶಿ ಕವಿತಾ ರೋಹನ್, ಜೊತೆ ಕಾರ್ಯದರ್ಶಿ ಕಲ್ಪನಾ ಎಸ್. ರಾವ್, ಸಲಹೆಗಾರರಾದ ಪ್ರಭಾ ಎಂ. ರಾವ್  ಮತ್ತು ಕೋಶಾಧಿಕಾರಿ ಇಂದುಮತಿ ಎ. ರಾವ್ ಹಾಗೂ  ಮಹಿಳಾ ಸಮಿತಿ ಸದಸ್ಯರಾದ ವಿಶಾಲಾಕ್ಷಿ ಎ. ಚಂದ್ರಗಿರಿ, ಛಾಯಾ ಯತೀಶ್ ಕುಮಾರ್, ಬಿಂದು ಕುಂದರ್ ,‌ ರಮ್ಯಾ ಎಸ್. ಮಾಂಗಾಡ್ , ಶಯಾತ್ರಿ ವಿ. ರಾವ್ ಮತ್ತು ರೇಖಾ ಸಾವಂತ್ ಇವರೆಲ್ಲರೂ ಪತ್ರಿಕಾ ಪ್ರಕಟನೆಯ ಮೂಲಕ ವಿನಂತಿಸಿ ಕೊಂಡಿದ್ದಾರೆ.

   



Related posts

ಬಂಟರ ಸಂಘ ಮುಂಬಯಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ವತಿಯಿಂದ ಆರ್ಥಿಕ ಸಹಾಯ, ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯಿಂದ ಮಾ. 23 ಕ್ಕೆ ಅರ್ಜಿ ವಿತರಣೆ

Mumbai News Desk

ಶ್ರೀ ನಾಗಬ್ರಹ್ಮ ಕ್ಷೇತ್ರ ಪುತ್ರನ್ ಆದಿ ಮೂಲಸ್ಥಾನ ಗೋಂಟು, ಮುಲ್ಕಿ : ಎ. 22ರಿಂದ ಎ. 26ರ ತನಕ ಬ್ರಹ್ಮ ಕಲಶೋತ್ಸವ ಮತ್ತು ವರ್ಧಂತ್ಯೋತ್ಸವ

Mumbai News Desk

ಮಲಾಡ್: ಶ್ರೀ ದೇವಿ ಮಹಮ್ಮಾಯಿ ದೇವಸ್ಥಾನದಲ್ಲಿ ಇಂದು (ಏಪ್ರಿಲ್ 11) ಧರ್ಮ ದೈವಗಳ ಗಗ್ಗರ ಸೇವೆ (ಕೋಲ)

Mumbai News Desk

ಮೀರಾ ರೋಡ್   ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೂ.14 : 35ನೇ ವಾರ್ಷಿಕ ಮಹಾಪೂಜೆ

Mumbai News Desk

ಶ್ರೀ ರಜಕ ಸಂಘ ಮುಂಬಯಿ (ರಿ), ಜು. 21 ರಂದು 85ನೇ ವಾರ್ಷಿಕ ಮಹಾಸಭೆ

Mumbai News Desk

ಬೆಂಗ್ರೆಯಲ್ಲಿ ಭಕ್ತಿ-ಸಂಸ್ಕೃತಿಯ ಸಂಗಮ: ಶ್ರೀ ವೀರಭಾರತಿ ವ್ಯಾಯಾಮ ಶಾಲೆಯ ಶತಮಾನೋತ್ಸವ ಹಾಗೂ ಶ್ರೀ ಪಟ್ಟಾಭಿರಾಮ ದೇವರ ಪುನರ್ ಪ್ರತಿಷ್ಠಾಪನಾ ಮಹೋತ್ಸವ

Mumbai News Desk