23.5 C
Karnataka
April 4, 2025
ಮುಂಬಯಿ

ತುಳುಕೂಟ ಫೌಂಡೇಶನ್ (ರಿ) ನಾಲಾಸೋಪಾರ ಹಾಗೂ ಶ್ರೀದೇವಿ ಯಕ್ಷ ಕಲಾ ನಿಲಯದ ವಾರ್ಷಿಕೋತ್ಸವ, ಸಮಾರೋಪ,




ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಒಂದಾಗೋಣ – ಶಶಿಧರ ಕೆ ಶೆಟ್ಟಿ ಇನ್ನಂಜೆ

ಚಿತ್ರ / ವರದಿ : ಈಶ್ವರ ಎಂ. ಐಲ್

ಮುಂಬಯಿ : ನಿರೀಕ್ಷೆಗೂ ಮೀರಿ ತುಳುನಾಡಿನ ಅಭಿಮಾನಿಗಳು ಇಲ್ಲಿ ಸೇರಿದ್ದಾರೆ. ಇಂದಿನ ಭಜನಾ ಕಾರ್ಯಕ್ರಮದಲ್ಲಿ ಬಾಗವಹಿಸಿದ ಎಲ್ಲಾ 7 ತಂಡಗಳು ವಿಶೇಷ ರೀತಿಯಲ್ಲಿ ಭಜನಾ ಕಾರ್ಯಕ್ರಮ ವನ್ನು ನಡೆಸಿಕೊಟ್ಟಿದ್ದು ತುಳು ನಾಡಿನ ಸಂಸ್ಕೃತಿಯನ್ನು ಉಳಿಸುವ ಇಂತಹ ಕಾರ್ಯದಲ್ಲಿ ನಾವೆಲ್ಲರೂ ಒಂದಾಗೋಣ ಎಂದು ತುಳುಕೂಟ ಫೌಂಡೇಶನ್ (ರಿ )ನಾಲಾಸೋಪಾರ ಹಾಗೂ ಶ್ರೀದೇವಿ ಯಕ್ಷ ಕಲಾ ನಿಲಯದ ನಾಲಾಸೋಪಾರ – ವಿರಾರ್ ಇದರ ಅಧ್ಯಕ್ಷರಾದ ಶಶಿಧರ ಕೆ ಶೆಟ್ಟಿ ಇನ್ನಂಜೆ ನುಡಿದರು.
ತುಳುಕೂಟ ಫೌಂಡೇಶನ್ (ರಿ) ನಾಲಾಸೋಪಾರ ಮತ್ತು ಶ್ರೀದೇವಿ ಯಕ್ಷ ಕಲಾ ನಿಲಯ ನಾಲಾಸೋಪಾರ – ವಿರಾರ್ ಇದರ ಆಶ್ರಯದಲ್ಲಿ ನಾಲಾಸೋಪಾರ ಪಶ್ಚಿಮದ ಗ್ಯಾಲಕ್ಷಿ ಹೋಟೇಲಿನ ಸಭಾಂಗಣದಲ್ಲಿ, ಪಂಚ ಕಲಾ ಸಂಭ್ರಮ, ಕಾರ್ಯಕ್ರಮಗಳು ಫೆ. 8 ರಂದು, ಐಕಳ ಹರೀಶ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಕನ್ಯಾನ ಸದಾಶಿವ ಶೆಟ್ಟಿ ವೇದಿಕೆಯಲ್ಲಿ ಜರಗಿದ್ದು ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಇದೇ ರೀತಿ ನಮ್ಮವರು ಹೆಚ್ಚಿನ ಸಂಖ್ಯೆಯಲ್ಲಿ ಸಮಾರಂಭದಲ್ಲಿ ಉಪಸ್ಥಿತರಿದ್ದು ನಮ್ಮ ಯುವ ಕಲಾವಿದರಿಗೆ ಪ್ರೋತ್ಸಾಹ ನೀಡುವುದರೊಂದಿಗೆ ನಮ್ಮ ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸೋಣ ಎಂದರು.


ಗೌರವ ಅತಿಥಿ ಶಿವಸಾಗರ್ ಗ್ರೂಪ್ ಅಫ್ ಹೋಟೆಲ್ಸ ನ ಎನ್ ಟಿ ಪೂಜಾರಿಯವರು ಮಾತನಾಡುತ್ತಾ ಇವತ್ತಿನ ಎಲ್ಲಾ ಕಲಾವಿದರಿಗೆ ಅಭಿನಂದನೆಗಳು, ಶಶಿಧರ ಕೆ ಶೆಟ್ಟಿ ಇನ್ನಂಜೆಯವರಂತಹ ಮುಂದಾಳುತನದಿಂದಾಗಿ ಇಂದು ಬಹಳ ಸಂಖ್ಯೆಯಲ್ಲಿ ನೀವೆಲ್ಲ ಸೇರಿ ಕಾರ್ಯಕ್ರಮಕ್ಕೆ ಪ್ರೋತ್ಸಾಹಿಸುತ್ತಿದ್ದೀರಿ. ಎಲ್ಲಾ ಸಮುದಾಯದವರನ್ನು ಅವರು ಇಲ್ಲಿ ಸೇರಿಸಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ಇವರೆಲ್ಲರ ನೇತೃತ್ವದಲ್ಲಿ ಸಂಘಟನೆ ಇನ್ನು ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಖ್ಯಾತ ವಾಸ್ತು ತಜ್ಞ ಅಶೋಕ್ ಪುರೋಹಿತ್ ಆಶೀರ್ವಚನ ನೀಡುತ್ತಾ ಇವತ್ತು ಪ್ರಶಸ್ತಿಯನ್ನು ಸ್ವೀಕರಿಸಿದ ಸಾಧಕರಿಗೆ ಅಭಿನಂದನೆಗಳು. ದೊಡ್ಡ ಮನಸ್ಸಿನ ಶಶಿಧರ ಶೆಟ್ಟಿಯವರು ನಲಾಸೋಪಾರದಲ್ಲಿ ಒಂದು ವಜ್ರದಂತೆ. ಭಜನೆ ಮಾಡುವುದರಿಂದ ಮನಸ್ಸಿನಲ್ಲಿ ಉತ್ತಮ ಪರಿವರ್ತನೆ ಆಗುತ್ತದೆ. ಇಂತಹ ಕಾರ್ಯಕ್ರಮಗಳು ಇದೇ ರೀತಿ ನಡೆಯುತ್ತಿರಲಿ ಎಂದರು.
ಗೌರವ ಅತಿಥಿ ಯಾಗಿ ಆಗಮಿಸಿದ ಬಿಲ್ಲವರ ಅಸೋಷಿಯೇಶನಿನ ಅಧ್ಯಕ್ಷ ಹರೀಶ್ ಜಿ ಅಮೀನ್ ಸನ್ಮಾನ ಪಡೆದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತಾ, ಇಂದಿನ ಮಕ್ಕಳ ಯಕ್ಷಗಾನ ನಿಜಕ್ಕೂ ಉತ್ತಮವಾಗಿದೆ. ಇದೇ ರೀತಿ ಎಲ್ಲಾ ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶ ದೊರಕಲಿ ಎಂದರು.
ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರು ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ ಇವರಿಗೆ ತುಳುನಾಡ ಐಸಿರಿ ಪ್ರಶಸ್ತಿ 2025 ಮತ್ತು ಕುಮಾರಿ ನಿಖಿತಾ ಎನ್. ಟಿ. ಪೂಜಾರಿ ಇವರಿಗೆ ತುಳುನಾಡ ರತ್ನ ಪ್ರಶಸ್ತಿ 2025 ನೀಡಿ ಗೌರವಿಸಿದರು. ಮಹಿಳಾ ಕಾರ್ಯದರ್ಶಿ ಮಲ್ಲಿಕಾ ಆರ್ ಪೂಜಾರಿ ಮತ್ತು ವಾಣಿ ರಘುನಾಥ ಪ್ರಶಸ್ತಿ ಪತ್ರವನ್ನು ವಾಚಿಸಿದರು. ಅಲ್ಲದೆ ನಾಗೇಶ್ ಕೋಟ್ಯಾನ್ ಇವರಿಗೆ ಉತ್ತಮ ಕಾರ್ಯಕರ್ತ ಪ್ರಶಸ್ತಿ ನೀಡಲಾಯಿತು.
ಗೌರವ ಅತಿಥಿ ಬಂಟರ ಸಂಘ ಮುಂಬಯಿಯ ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಲ್ಲಾರ್ ಸಮಾರಂಭಕ್ಕೆ ಆಗಮಿಸಿ ಶುಭ ಹಾರೈಸಿದರು.
ಡಾ. ಪ್ರಾಖ್ಯಾತ್ ಶೆಟ್ಟಿಯವರ ಪ್ರಾರ್ಥನೆಯೊಂದಿಗೆ ವೇದಿಕೆಯಲ್ಲಿದ್ದ ಅತಿಥಿಗಳು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯಿತ್ತರು.
ಮುಖ್ಯ ಅತಿಥಿ ಉದ್ಯಮಿ ಪ್ರವೀಣ್ ಶೆಟ್ಟಿ ಬೊಯಿಸರ್, ಹೋಟೆಲ್ ಉದ್ಯಮಿ ರತ್ನಾಕರ್ ಶೆಟ್ಟಿ, ಅಶೋಕ್ ಇಂಡಷ್ಟ್ರೀಸ್ ನ ಅಶೋಕ್ ಶೆಟ್ಟಿ ಪೆರ್ಮುದೆ, ಶಿಕ್ಷಕಿ ಶ್ರೀಮತಿ ವಂದನಾ ರೈ ಉಪಸ್ಥಿತರಿದ್ದರು.
ಉಪಸಮಿಯ ಕಾರ್ಯಾಧ್ಯಕ್ಷ ಗಣೇಶ್ ವಿ ಸುವರ್ಣ ಸ್ವಾಗತಿಸಿ ಪ್ರಸ್ತಾವನೆಯ ಮಾತುಗಳನ್ನಾಡಿದರು.


ಶ್ರೀದೇವಿ ಯಕ್ಷಕಲಾ ನಿಲಯದ ಬಾಲ ಕಲಾವಿದರಿಂದ ಯಕ್ಷಗುರು ನಾಗೇಶ್ ಪೊಲಲಿ ನಿರ್ದೇಶನದಲ್ಲಿ ಕನ್ನಡ ಯಕ್ಷಗಾನ ಬಯಲಾಟ ಕೊಲ್ಲೂರು ಕ್ಷೇತ್ರ ಮಹಾತ್ಮೆ ಪ್ರದರ್ಶನಗೊಂಡಿತು.
ತುಳುಕೂಟ ಫೌಂಡೇಶನ್ ಗೌರವಾಧ್ಯಕ್ಷರಾದ ರಮೇಶ್ ವಿ ಶೆಟ್ಟಿ ಕಾಪು, ಓ. ಪಿ. ಪೂಜಾರಿ, ಮಂಜುನಾಥ ಎನ್ ಶೆಟ್ಟಿ ಕೊಡ್ಲಾಡಿ, ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಶೆಟ್ಟಿ ಗುರ್ಮೆ, ಗೌ. ಪ್ರ. ಕಾರ್ಯದರ್ಶಿ ಜಗನ್ನಾಥ್ ಡಿ. ಶೆಟ್ಟಿ ಪಲ್ಲಿ, ಗೌ. ಕೋಶಾಧಿಕಾರಿ ರಾಜೇಶ್ ವೈ ಕರ್ಕೇರ, ಜೊತೆ ಕಾರ್ಯದರ್ಶಿ ನಾರಾಯಣ ಎಂ ಶೆಟ್ಟಿ, ಜೊತೆ ಕೋಶಾಧಿಕಾರಿ ಸೀತಾರಾಮ್ ಕೋಟ್ಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಸತೀಶ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಹರ್ಷಿತ್ ಕುಂದರ್, ಉಪಸಮಿತಿಗಳ ಕಾರ್ಯಾಧ್ಯಕ್ಷರುಗಳಾದ ಗಣೇಶ್ ವಿ ಸುವರ್ಣ, ದೇವೇಂದ್ರ ಬುನ್ನನ್, ಸತೀಶ್ ಎ ಶೆಟ್ಟಿ, ಉಮೇಶ್ ಕೋಟ್ಯಾನ್, ದಯಾನಂದ ಬೋಂಟ್ರಾ, ದಯಾನಂದ ಶೆಟ್ಟಿ, ವಿಜಯ್ ಎಂ ಶೆಟ್ಟಿ, ನಾಗೇಶ್ ಕೋಟ್ಯಾನ್, ನವೀನ್ ಶೆಟ್ಟಿ ಪಲ್ಲಿ, ವಾಮನ್ ಮೂಲ್ಯ, ಸುಭಾಷ್ ಜೆ ಶೆಟ್ಟಿ ಎರ್ಮಾಳ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲಿ ವಿದ್ಯಾರ್ಥಿ ವೇತನ ಹಾಗೂ ವಿಧವಾ ವೇತನ ಅನುದಾನವನ್ನು ವಿತರಿಸಲಾಯಿತು.
ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಯಶೋಧ ಎಸ್ ಪೂಜಾರಿ, , ಕೋಶಾಧಿಕಾರಿ ನಳಿನಿ ಎಸ್ ಪೂಜಾರಿ, ಸುರೇಖಾ ಬಂಗೇರ, ಜೊತೆ ಕೋಶಾಧಿಕಾರಿ ಶೋಭಾ ಸುವರ್ಣ ಎಲ್ಲಾ ಟ್ರಸ್ಟಿಗಳು ಕಾರ್ಯಕಾರಿ ಸಮಿತಿ ಸದಸ್ಯರು ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಎಲ್ಲ ಸದಸ್ಯರು, ಶ್ರೀದೇವಿ ಯಕ್ಷ ಕಲಾ ನಿಲಯ ನಾಲಾಸೋಪಾರ – ವಿರಾರ್ ಇದರ ಗೌರವಾಧ್ಯಕ್ಷ ಶ್ರೀನಿವಾಸ್ ನಾಯ್ಡು, ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಕಣಂಜಾರು, ಕೋಶಾಧಿಕಾರಿ ಜೆ ಡಿ ಶೆಟ್ಟಿ ಪಲ್ಲಿ ಮೊದಲಾದವರು ಸಹಕರಿಸಿದರು, ಡಾ. ಪ್ರಿಯಾ ಹರೀಶ್ ಶೆಟ್ಟಿ ಕಾರ್ಯಕ್ರಮವನ್ನು ನಿರ್ವಹಿಸಿದರು.

ಸನ್ಮಾನಿತರ ನುಡಿ;
ನನಗೂ ಈ ಪರಿಸರಕ್ಕೂ ಆತ್ಮೀಯ ನಂಟು. ನಾವು ಪ್ರಶಸ್ತಿಯನ್ನು ಹುಡುಕಿಕೊಂಡು ಹೋಗಬಾರದು ಪ್ರಶಸ್ತಿ ನಮ್ಮನ್ನು ಹುಡುಕಿಕೊಂಡು ಬರಬೇಕು. ಪ್ರಶಸ್ತಿಯಿಂದ ದೂರ ಇರುವವಳು ನಾನು. ಶಶಿಧರ ಶೆಟ್ಟಿಯವರ ಮಾತಿಗೆ ಒಪ್ಪಿ, ಡಾ. ಸುನಿತಾ ಶೆಟ್ಟಿ ಯವರ ಹೆಸರಲ್ಲಿ ಸಿಕ್ಕಿದ ಈ ಪ್ರಶಸ್ತಿಯನ್ನು ಗೌರವದಿಂದ ಸ್ವೀಕರಿಸಿದ್ದೇನೆ. -ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ

ನನಗೆ ಸಿಕ್ಕಿದ ಈ ಪ್ರಶಸ್ತಿ ಯುವ ಸಮುದಾಯಕ್ಕೆ ಸ್ಪ್ರೂರ್ತಿದಾಯಕವಾಗಲಿ. ನನ್ನ ಯಶಸ್ವಿಗೆ ನನ್ನ ತಂದೆ ತಾಯಿಯವರು ಕೊಡುಗೆ ಮರೆಯುವಂತಿಲ್ಲ. ಹಿರಿಯರಾದನ್ ಶಶಿಧರ ಕೆ. ಶೆಟ್ಟಿ ಹಾಗೂ ಸಮಾರಂಭದಲ್ಲಿದ್ದ ಎಲ್ಲಾ ಗಣ್ಯರು ನನಗೆ ಪ್ರಶಸ್ತಿಯನ್ನು ನೀಡಿ ಆಶೀರ್ವದಿಸಿದ್ದಕ್ಕೆ ತುಂಬು ಹೃದಯದ ಕೃತಜ್ಞತೆಗಳು. –ಕುಮಾರಿ ನಿಖಿತಾ ಎನ್. ಟಿ. ಪೂಜಾರಿ

ಚಿತ್ರ / ವರದಿ : ಈಶ್ವರ ಎಂ. ಐಲ್

Related posts

ಜಿ.ಎಸ್.ಬಿ.ಎಸ್. ಮೆಡಿಕಲ್ ಟ್ರಸ್ಟ್ ಸುವರ್ಣ ಮಹೋತ್ಸವ ಯೋಜನೆ, ಮಾಹಿಮ್ ಘಟಕದ ವಿಸ್ತರಣೆಯ ಉದ್ಘಾಟನೆ

Mumbai News Desk

ಭಾಯಂದರ್  ಶ್ರೀ ಮೂಕಾಂಬಿಕಾ ಶಾಂತದುರ್ಗಾ ಸೇವಾ ಸಮಿತಿ ಆಶಯದಲ್ಲಿ “ಮಹಾಶಕ್ತಿ ವೀರಭದ್ರ” ಯಕ್ಷಗಾನ ಬಯಲಾಟ,

Mumbai News Desk

ತುಳು ಸಂಘ ಬೊರಿವಲಿ, ಮಹಿಳಾ ವಿಭಾಗದಿಂದ ಅರಸಿನ ಕುಂಕುಮನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯಕ್ರಮ – ಕರುಣಾಕರ ಎಂ. ಶೆಟ್ಟಿ

Mumbai News Desk

ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್ ಇದರ 29ನೇ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ

Mumbai News Desk

ಬಂಟರ ಸಂಘ ಮುಂಬೈ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ವತಿಯಿಂದ ಉಚಿತ ವೈದ್ಯಕೀಯ ಶಿಬಿರ

Mumbai News Desk

ಸಾಯಿನಾಥ ಮಿತ್ರ ಮಂಡಳಿಯಿಂದ ಹೊರೆ ಕಾಣಿಕೆ ಮೆರವಣಿಗೆ

Mumbai News Desk