24.7 C
Karnataka
April 3, 2025
ಮುಂಬಯಿ

ಗೋವಂಡಿ ಬೈಂಗನ್‌ವಾಡಿ ಶ್ರೀ ದುರ್ಗಾಪರಮೇಶ್ವರಿ ಮಾತಾ ಮಂದಿರದ 46 ನೇ ವಾರ್ಷಿಕೋತ್ಸವ



ವರದಿ: ಸೋಮನಾಥ ಎಸ್‌.ಕರ್ಕೇರ


ಮುಂಬಯಿಯ ಹಾರ್ಬರ್‌ ಮಾರ್ಗದಲ್ಲಿ ಬರುವ ಗೋವಂಡಿ [ಪಶ್ಚಿಮ] ಮುಸ್ಲಿಂ ಬಾಹುಳ್ಯವಿರುವ ಪ್ರದೇಶ. ಇಲ್ಲಿ ಅತ್ತ ಇತ್ತ ಕತ್ತು ತಿರುಗಿಸಿದತ್ತ ಕಾಣಿಸುವುದು ನೂರಾರು ಚಾಳ್‌ಗಳು. ಪ್ರತಿಯೊಂದು ಚಾಳ್‌ನಲ್ಲೂ ನೂರಾರು ಮನೆಗಳು. ಇಲ್ಲಿ ವಾಸಿಸುವವರಲ್ಲಿ ಶೇಕಾಡಾ 80 ನಿವಾಸಿಗಳು ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂದು ಅಂದಾಜಿಸಲಾಗಿದೆ. ಗೋವಂಡಿ ಸ್ಟೇಶನ್‌ನಲ್ಲಿ ಇಳಿದು ಪಶ್ಚಿಮದಲ್ಲಿ ಅಗಲ ಕಿರಿದಾದ ರಸ್ತೆಯಲ್ಲಿ ಮುಂದಕ್ಕೆ ಸಾಗಿದರೆ ರೋಡ್‌ ನಂ.8ರಲ್ಲಿ ಬೈಂಗನ್‌ವಾಡಿ ಎಂಬ ಜಾಗವನ್ನು ತಲುಪಬಹುದು. ಇಲ್ಲಿ 46 ವರ್ಷಗಳ ಹಿಂದೆ ಧರ್ಮದರ್ಶಿ ಭವಾನಿ ಶಂಕರ ಶೆಟ್ಟಿಯವರು ಶ್ರೀ ದುರ್ಗಾಪರಮೇಶ್ವರಿಮಾತಾ ಮಂದಿರವನ್ನು ನಿರ್ಮಿಸಿದ್ದರು. ಅವರ ನಿಧನಾನಂತರ ಅವರ ಧರ್ಮಪತ್ನಿ ಶ್ರೀಮತಿ ಸುಚಿತಾ ಭವಾನಿ ಶಂಕರ ಶೆಟ್ಟಿಯವರು ಮಂದಿರದ ಆಡಳಿತ ಮೊಕ್ತೇಸರರಾಗಿ ತಮ್ಮ ಕುಟುಂಬಸ್ಥರು ಹಾಗೂ ಭಕ್ತಾದಿಗಳ ಸಹಕಾರದಿಂದ ಮುಂದಿರದ ಕೆಲಸ ಕಾರ್ಯಗಳನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಅಂದಿನಿಂದ ಇಂದಿನ ವರೆಗೆ ಈ ಮಂದಿರದ ವಾರ್ಷಿಕೋತ್ಸವವನ್ನು ಬಹಳ ವಿಜ್ರಂಭಣೆಯಿಂದ ಜರಗಿಸಲಾಗುತ್ತಿದೆ. ಈ ಸಮಯದಲ್ಲಿ ಇತರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಕಲ್ಕುಡ-ಕಲ್ಲುರ್ಟಿ-ಗುಳಿಗ ದೈವಗಳ ಕೋಲವನ್ನೂ ನಡೆಸಲಾಗುತ್ತಿದೆ. ಇದಕ್ಕೆ ಮುಂಬಯಿಯ ತುಳು ಕನ್ನಡಿಗರು ಮಾತ್ರವಲ್ಲದೆ ಪರಿಸರದಲ್ಲಿ ವಾಸಿಸುತ್ತಿರುವ ಮರಾಠಿ, ಗುಜರಾತಿಗಳು ಹಾಗೂ ಅನ್ಯ ಕೋಮಿನವರು ಕೂಡಾ ತನು-ಮನ-ಧನದಿಂದ ಸಹಾಯ ನೀಡಿ ಈ ಮುಂದಿರವು ತಮ್ಮದೆ ಎಂಬಂತೆ ನೋಡಿಕೊಳ್ಳುತ್ತಿರುವುದನ್ನು ಕಂಡು ನನಗೆ ಸಂತೋಷವಾಯ್ತು.
ಮಂದಿರದ 46 ವಾರ್ಷಿಕೋತ್ಸವವು ಫ್ರೆಬ್ರವರಿ 13 ರಿಂದ 15ರ ವರೆಗೆ ಜರಗಿತು, ಈ ಸಂದರ್ಭದಲ್ಲಿ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಗಣಪತಿ ಹೋಮ, ನವಗ್ರಹ ಶಾಂತಿ, ಕಲಶಾಭಿಷೇಕ, ದುರ್ಗಾಹೊಮ, ಸತ್ಯನಾರಾಯಣ ಮಹಾ ಪೂಜೆ ಮುಂತಾದ ದೇವತಾ ಕಾರ್ಯಕ್ರಮಗಳು ಜರಗಿ ಕೊನೆಯ ದಿನ ರಾತ್ರಿ ಗಂಟೆ 9 ರಿಂದ ಬೆಳಗ್ಗಿನ ಜಾವದ ವರೆಗೆ ಕಲ್ಕುಡ-ಕಲ್ಲುರ್ಟಿ-ಗುಳಿಗ ದೈವಗಳ ನೇಮೋತ್ಸವು ಬಹಳ ವಿಜ್ರಂಭಣೆಯಿಂದ ಜರಗಿತು. ಕೋಲಕ್ಕೆ ಬೇಕಾದ ಎಲ್ಲಾ ಸಲಕರಣೆಗಳನ್ನೂ ಪ್ರತಿ ವರ್ಷವೂ ಊರಿನಿಂದಲೇ ತರಿಸಲಾಗುತ್ತಿರುವುದು ಮಾತ್ರವಲ್ಲದೆ ಈ ವರ್ಷವೂ ಹುಲಿವೇಷಧಾರಿಗಳ ಸಹಿತ ದೈವ ನರ್ತನ ಸೇವೆಗೈಯುವವರು, ದರ್ಶನ ಮಾಡುವವರು, ದಿವಟಿಕೆ ಹಿಡಿಯುವವರು, ವಾದ್ಯ ವಾಲಗದವರು ಮುಂತಾದ 35 ಕ್ಕೂ ಮಿಕ್ಕಿ ಕಲಾಕಾರರು ಊರಿನಿಂದಲೇ ಬಂದಿದ್ದರು. ಉತ್ಸವದ ಮೂರೂ ದಿನಗಳಲ್ಲಿ ಅನ್ನ ಸಂತರ್ಪಣೆ ಜರಗಿತು.
ನೇಮೋತ್ಸವದಲ್ಲಿ ಥಾಣೆಯ ಮಾಜೀ ಮೇಯರ್‌ ಮತ್ತು ಹಾಲಿ ನಗರ ಸೇವಕಿ ಮೀನಾಕ್ಷಿ ಶಿಂದೆ [ಪೂಜಾರಿ], ಶಾಸಕ ಸುನಿಲ್‌ ಪ್ರಭು, ವಿಕ್ರೋಲಿಯ ಶ್ರೀ ಮೂಕಾಂಬಿಕ ದೇವಾಲಯದ ಚಂದ್ರಸ್ವಾಮಿ ಅಲ್ಲದೆ ಮುಂಬಯಿಯ ವಿವಿಧ ಸಾಮಾಜಿಕ ಹಾಗೂ ಧಾರ್ಮಿಕ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.


ವರದಿ: ಸೋಮನಾಥ ಎಸ್‌.ಕರ್ಕೇರ

Related posts

ಶ್ರೀ ಉಮಾ ಮಹೇಶ್ವರಿ ದೇವಸ್ಥಾನ ಜರಿಮರಿಯಲ್ಲಿ ರಾಮ ನಾಮ ಜಪ ಯಜ್ಞ ಸಂಪನ್ನ.

Mumbai News Desk

ಸಾಫಲ್ಯ ಸೇವಾ ಸಂಘದ ಸ್ತ್ರೀ ಶಕ್ತಿ ಕಾರ್ಯಕ್ರಮ

Mumbai News Desk

ಭಾರತೀಯ ಜನತಾ ಪಕ್ಷ ಡೊಂಬಿವಲಿ ಘಟಕದ ಆಶ್ರಯದಲ್ಲಿ ಜನ ಆರೋಗ್ಯ ಯೋಜನೆ.

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಟ್ವಿಷಾ ಲಲಿತ್ ಸುವರ್ಣ ಗೆ ಶೇ 89.60 ಅಂಕ.

Mumbai News Desk

ಕರ್ನಿರೆ ಗಂಗಾಧರ್ ಅಮೀನ್ ಅವರ “ಕೊಂಕಣ್ ಸ್ವಾದ್” ಗೆ ಟೈಮ್ಸ್ ಪುಡ್ ಪ್ರಶಸ್ತಿ.

Mumbai News Desk

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ವತಿಯಿಂದ ಮಲಾಡ್ ಪೂರ್ವದ ತುಳು  ಕನ್ನಡಿಗರ ಮನೆ ಮನೆಯಲ್ಲಿ ರಾಮ ನಾಮಸ್ಮರಣೆ ಅಭಿಯಾನ: 

Mumbai News Desk