ಡೊಂಬಿವಲಿ ಪಶ್ಚಿಮ, ವಿವೇಕಾನಂದ ಶಾಲೆ ಬಳಿಯ, ಪಂಚಮ್ ಸಂಕಿರ್ಣದ ಜಗಜ್ಯೋತಿ ಕಲಾವೃಂದದ ಆಶ್ರಯದಲ್ಲಿ ಮಹಾಶಿವರಾತ್ರಿ ಪೂಜೆಯು,ಫೆಬ್ರವರಿ 26ರಂದು ಸಂಸ್ಥೆಯ ಕಚೇರಿಯಲ್ಲಿ ಜರಗಲಿದೆ.
ಅಂದು ಮಧ್ಯಾಹ್ನ 4ರಿಂದ ಸಂಜೆ 7ರ ತನಕ ಭಜನೆ, 7.15ಕ್ಕೆ ಮಂಗಳಾರತಿ, ಅಬಳಿಕ ತೀರ್ಥ ಪ್ರಸಾದ ವಿತರಣೆ.
ಭಕ್ತಾದಿಗಳು, ಸಂಘದ ಹಿತೈಷಿಗಳು ಅಂದಿನ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ, ಜಗಜ್ಯೋತಿ ಕಲಾ ವೃಂದದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸರ್ವ ಸದಸ್ಯರು ವಿನಂತಿಸಿದ್ದಾರೆ.