23.5 C
Karnataka
April 4, 2025
ಮುಂಬಯಿ

ಕರ್ನಾಟಕ ಸಂಘ ಡೊಂಬಿವಲಿ: ಪುರಂದರ ದಾಸರ ಆರಾಧನಾ ಮಹೋತ್ಸವ ಹಾಗೂ ಪುರಂದರದಾಸರ ಭಜನಾ ಸ್ಪರ್ಧೆ



ಕರ್ನಾಟಕ ಸಂಘ ಡೊಂಬಿವಲಿ ಪರಿಸರದ  ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿಯನ್ನು  ಬೆಳೆಸಲು ಸಹಕಾರ ನೀಡುತ್ತಿದೆ – ಸುಕುಮಾರ ಶೆಟ್ಟಿ

ಚಿತ್ರ ವರದಿ : ರವಿ ಬಿ. ಅಂಚನ್ ಪಡುಬಿದ್ರಿ


ಡೊಂಬಿವಲಿ ಫೆ 24: ಕೇವಲ ಎಂಟು ವರ್ಷದ ಹಿಂದೆ ಸಂಘದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಪುರಂದರದಾಸರ ಭಜನಾ ಸ್ಪರ್ಧೆಯನ್ನು 8 ತಂಡದೊಂದಿಗೆ ಪ್ರಾರಂಭಿಸಿ ಇಂದು 14 ವಯಸ್ಕರ ತಂಡ ಹಾಗೂ 9 ಮಕ್ಕಳ ಕುಣಿತ ಭಜನಾ ತಂಡದೊಂದಿಗೆ ಅತ್ಯುತ್ತಮ ರೀತಿಯಲ್ಲಿ ಭಜನಾ ಸ್ಪರ್ಧೆಯನ್ನು ಅಯೋಜಿಸಿದೆ ಎನ್ನಲು ಅಭಿಮಾನವಾಗುತ್ತಿದೆ. ಡೊಂಬಿವಲಿಯಲ್ಲಿ ಪ್ರಾರಂಭವಾದ ಭಜನಾ ಸ್ಪರ್ಧೆಯಿಂದಾಗಿ ಡೊಂಬಿವಲಿ ಪರಿಸರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಜನಾ ತಂಡಗಳು ಪ್ರಾರಂಭವಾಯಿತು ಮಕ್ಕಳ ಕುಣಿತ ಭಜನೆಯ 9 ತಂಡಗಳು ಅತ್ಯುತ್ತಮ ರೀತಿಯಲ್ಲಿ ಕುಣಿತ ಭಜನೆಯನ್ನು ಸಾದರ ಪಡಿಸಿ ಭಜನಾ ಪ್ರೀಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮಕ್ಕಳು ನಿತ್ಯ ಅಥವಾ ಕಡಿಮೆ ಪಕ್ಷ ವಾರದಲ್ಲಿ ಎರಡು ದಿನವಾದರೂ ಭಜನೆಯನ್ನು ಮಾಡುವ ರೂಢಿಯನ್ನು ಬೆಳೆಸಿಕೊಳ್ಳ ಬೇಕು, ಇಲ್ಲಿಯ ತೀರ್ಪುಗಾರರು ತಾರತಮ್ಯವನ್ನು ಮಾಡುತ್ತಾರೆ ಎನ್ನುವ ಮಾತು ಕೇಳಿ ಬಂದಾಗ ನಾವು ಕಳೆದ 5  ವರ್ಷದಿಂದ ತಾಯ್ನಾಡಿನ ಅತ್ಯುತ್ತಮ ಭಜನಾ ಬೋಧಕರನ್ನು, ದಾಸರನ್ನು  ಕರೆಸಿ ಮುಂಬಯಿಯ ಭಜನಾ  ತಂಡಗಳಿಗೆ ತೀರ್ಫು ನೀಡುಲು ಪ್ರಾರಂಭಿಸಿದ್ದೇವೆ. ಕರ್ನಾಟಕ ಸಂಘ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಪರಿಸರದ ಎಲ್ಲಾ ಜಾತೀಯ ಸಂಘ- ಸಂಸ್ಥೆಗಳನ್ನು ಒಗ್ಗೂಡಿಸಿ ಅತ್ಯುತ್ತಮ ಕ್ರೀಡಾಕೂಟ, ಸಾಹಿತ್ಯ ಕಾರ್ಯಕ್ರಮ, ಭಜನಾ ಸ್ಪರ್ದೇಯನ್ನು ಅಯೋಜಿಸುವುದರೊಂದಿಗೆ  ಡೊಂಬಿವಲಿ ಪರಿಸರದಲ್ಲಿ ನಮ್ಮ ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿಯನ್ನು ಬೆಳೆಸಲು ಸಹಕಾರ ನೀಡುತ್ತಿದೆ ಇದೇ ರೀತಿ ಪರಿಸರದ ಎಲ್ಲಾ ಸಂಘ- ಸಂಸ್ಥೆಗಳು ಮಕ್ಕಳಿಗೆ ಭಜನೆ, ಯಕ್ಷಗಾನ ಕಲಿಕಾ ತರಬೇತಿ ಗಳನ್ನು ನಡೆಸಿದಲ್ಲಿ ಮಕ್ಕಳು ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳ ಬಹುದು ಎಂದು ಕರ್ನಾಟಕ ಸಂಘ ಡೊಂಬಿವಲಿ ಇದರ ಅಧ್ಯಕ್ಷರಾದ ಸುಕುಮಾರ ಶೆಟ್ಟಿ ನುಡಿದರು.
ಅವರು ಫೆಬ್ರವರಿ 23 ರ ರವಿವಾರ ಡೊಂಬಿವಲಿ ಪೂರ್ವದ ಶಿವಂ ಹೋಟೆಲ್ ನ ಸಭಾಗ್ರಹದಲ್ಲಿ ಹೊರನಾಡ ಕನ್ನಡಿಗರ ಪ್ರತಿಷ್ಠಿತ ಸಂಸ್ಥೆಯಾದ ಕರ್ನಾಟಕ ಸಂಘ ಡೊಂಬಿವಲಿ ಇದರ ಲಲಿತ ಕಲಾ ವಿಭಾಗದ  ವತಿಯಿಂದ ಜರಗಿದ ಪುರಂದರದಾಸರ  ಆರಾಧನಾ ಮಹೋತ್ಸವ ಹಾಗೂ ಪುರಂದರದಾಸರ ಭಜನಾ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.


ಕರ್ನಾಟಕ ಸಂಘದ ಕಾರ್ಯಾಧ್ಯಕ್ಷರಾದ ಡಾ. ದಿವಾಕರ ಟಿ. ಶೆಟ್ಟಿ ಇಂದ್ರಾಳಿ ಮಾತನಾಡುತ್ತಾ ಇಂದಿನ ಪುರಂದರದಾಸರ ಆರಾಧನಾ ಮಹೋತ್ಸವ ಹಾಗೂ ಭಜನಾ ಸ್ಫರ್ದೆಯಲ್ಲಿ 9 ಕುಣಿತ ಭಜನಾ ತಂಡ ಹಾಗೂ14 ವಯಸ್ಕರ ಭಜನಾ ತಂಡ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ಸಿಗೊಳಿಸಿದ್ದಾರೆ. ಮಕ್ಕಳ ಕುಣಿತ ಭಜನಾ ತಂಡ ಅಭೂತಪೂರ್ವ ಪ್ರದರ್ಶನ ನೀಡಿ ನಾವು ಯಾವುದಕ್ಕೂ ಕಡಿಮೆ ಇಲ್ಲ ಎಂದು ತೋರಿಸಿ ಕೊಟ್ಟಿದ್ದಾರೆ. ಭಜನೆ ಹಾಡಿದಾಗ , ಕೇಳಿಸಿಕೊಂಡಾಗ ಮನಸ್ಸಿನ ಗೊಂದಲ, ತಳಮಲಗಳು ನಿವಾರಣೆಯಾಗಿ ಮನಸ್ಸಿಗೆ ಮುದ ಲಭಿಸುತ್ತದೆ, ಮನೆ ಮನೆಗಳಲ್ಲಿ ಭಜನೆ ಹಾಡಿದಾಗ ಪ್ರತಿಯೊಂದು ಮನೆಯ ಸಂಕಷ್ಟಗಳು ಪರಿಹಾರ ಗೊಳ್ಳುವುದರಲ್ಲಿ ಸಂದೇಹವಿಲ್ಲ, ಡೊಂಬಿವಲಿ ನಗರ ಮಹಾರಾಷ್ಟ್ರದ ತುಳುನಾಡು ಇಲ್ಲಿಯ ತುಳು- ಕನ್ನಡಿಗರು ಪ್ರತಿಯೊಂದು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾರೆ, ಕರ್ನಾಟಕ ಸಂಘ ಡೊಂಬಿವಲಿಯಲ್ಲಿ ಶಾಲೆ, ಮಹಾವಿದ್ಯಾಲಯವನ್ನು ನಡೆಸುವ ಸಂಸ್ಥೆಯಾಗಿದ್ದು ನಮ್ಮ ಸಂಸ್ಥೆಗೆ ಶೈಕ್ಷಣಿಕ  ವರ್ಷದಿಂದ ವಿಜ್ಞಾನ ವಿಭಾಗಕ್ಕೆ ಅನುಮತಿ ದೊರಕಿದ್ದು ಇದರ ಲಾಭವನ್ನು ಕನ್ನಡಿಗರು ಪಡೆಯ ಬೇಕೆಂದರು.


ಲಲಿತಾ ಕಲಾ ವಿಭಾಗದ ಕಾರ್ಯಾಧ್ಯಕ್ಷೆ ಸುಷ್ಮಾ ಶೆಟ್ಟಿ ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ಲಲಿತ ಕಲಾ ವಿಭಾಗ ವಾರ್ಷಿಕ ವಿಹಾರ ಕೂಟ, ಚಿತ್ರಕಲಾ ಸ್ಪರ್ಧೆ, ನಾಡಹಬ್ಬ ಭಜನಾ ಸ್ಪರ್ಧೆಯನ್ನು ಯಶಸ್ವಿಯಾಗಿ ಅಯೋಜಿಸುತ್ತಿದೆ ಎನ್ನಲು ಸಂತೋಷವಾಗುತ್ತಿದೆ ಈ ಎಲ್ಲಾ ಕಾರ್ಯಕ್ರಮಗಳಿಗೆ ಸಂಘದ ಕಾರ್ಯಕಾರಿ ಸಮಿತಿಯ ಸಂಪೂರ್ಣ ಸಹಕಾರ ಹಾಗೂ ಸರ್ವ ಸದಸ್ಯರ ಬೆಂಬಲ ವ್ಯಕ್ತವಾಗುತ್ತಿದೆ  ನಿಮ್ಮೆಲ್ಲರ ಸಹಕಾರ ಇದೇ ರೀತಿ ಮುಂದುವರಿದರೆ ನಾವು ಇನ್ನಷ್ಟು ಕಾರ್ಯಕ್ರಮವನ್ನು ನೀಡಲು ತಯಾರಿದ್ದೇವೆ ಎಂದರು.


ಇದಕ್ಕೂ ಮೊದಲು ಬೆಳಿಗ್ಗೆ  ಸುನಂದಾ ಶೆಟ್ಟಿಯವರ ಪ್ರಾರ್ಥನೆಯೊಂದಿಗೆ ಕರ್ನಾಟಕ ಸಂಘದ ಕಾರ್ಯಾಧ್ಯಕ್ಷರಾದ ಡಾ. ದಿವಾಕರ ಶೆಟ್ಟಿ ಇಂದ್ರಾಳಿ ದೀಪ ಪ್ರಜ್ವಲಿಸಿ ಭಜನಾ ಸ್ಪರ್ಧೆಗೆ ಚಾಲನೆಯನ್ನು ನೀಡಿದರು.
ಬೆಳಿಗ್ಗೆ 11.00 ಗಂಟೆಯಿಂದ ಮಕ್ಕಳ 9 ತಂಡಗಳಿಂದ ಕುಣಿತ ಭಜನಾ ಸ್ಪರ್ಧೆ ತದನಂತರ ವಯಸ್ಕರ 14 ತಂಡದಿಂದ ಭಜನಾ ಸ್ಪರ್ಧೆ ನಡೆಯಿತು.
ಮಕ್ಕಳ ಕುಣಿತ ಭಜನೆಯಲ್ಲಿ ವಿಜೇತ ತಂಡಗಳಾಗಿ ಪ್ರಥಮ ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ ಪ್ರಥಮ ಬಹುಮಾನ 12000 ಸಾವಿರ ನಗದು ಮತ್ತು ಫಲಕ, ದ್ವೀತಿಯ ಬಹುಮಾನ ಶ್ರೀ ದುರ್ಗಾಂಬಿಕ ಮಕ್ಕಳ ತಂಡ ಅಸಲ್ಪಾ 10000 ಸಾವಿರ ನಗದು  ಮತ್ತು ಫಲಕ, ತೃತೀಯ ಬಹುಮಾನ ಬಂಟರ ಸಂಘ ಮುಂಬಯಿ ಅಂಧೇರಿ- ಬಾಂದ್ರಾ ಪ್ರಾದೇಶಿಕ ಸಮಿತಿ 8000 ಸಾವಿರ ನಗದು ಮತ್ತು ಫಲಕ ಸಮಾಧಾನಕರ ಬಹುಮಾನ 5000 ಸಾವಿರ ನಗದು ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ, ವಯಸ್ಕರ ಭಜನಾ ತಂಡದ ಫಲಿತಾಂಶ ಪ್ರಥಮ ಬಹುಮಾನ ಶ್ರೀ ಜಗದಂಬಾ ಭಜನಾ ಮಂದಿರ 20000 ಸಾವಿರ ನಗದು ಮತ್ತು ಫಲಕ, ದ್ವಿತೀಯ ಬಹುಮಾನ ಶ್ರೀ ಮಹಾವಿಷ್ಣು ಮಂದಿರಗಳು ಡೊಂಬಿವಲಿ 17000 ಸಾವಿರ ನಗದು ಮತ್ತು ಫಲಕ, ತೃತೀಯ ಬಹುಮಾನ ಭ್ರಮರಾಂಬಿಕೆ ಭಜನಾ ಮಂಡಳಿ ಮತ್ತು ನವೋದಯ ಕನ್ನಡ ಸೇವಾ ಸಂಘ ಥಾಣೆ ತಲಾ 14000 ಸಾವಿರ ನಗದು ಮತ್ತು ಫಲಕ, ಸಮಾಧಾನಕರ ಬಹುಮಾನ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಡೊಂಬಿವಲಿ 8000 ಸಾವಿರ ನಗದು ಬಹುಮಾನ ಸ್ವೀಕರಿಸಿದರು ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೆ ಪ್ರೋತ್ಸಾಹ ಧನ ಹಾಗೂ ಪುಪ್ಫ ಗೌರವ ನೀಡಿ ಸತ್ಕರಿಸಲಾಯಿತು.
ಸ್ಪರ್ಧೆಯ ತೀರ್ಪುಗಾರರಾಗಿ ಚಂದ್ರಕಾಂತ ಭಟ್, ಪ್ರದೀಪ್ ಉಪಾಧ್ಯಾಯ, ವೆಂಕಟರಾಜ್ ಜೋಯಿಷ ಸಹಕರಿಸಿದರು.

ವೇದಿಕೆಯಲ್ಲಿ ಸುಕುಮಾರ ಎನ್. ಶೆಟ್ಟಿ, ಡಾ. ದಿವಾಕರ ಟಿ. ಶೆಟ್ಟಿ ಇಂದ್ರಾಳಿ, ಲೋಕನಾಥ್ ಎ. ಶೆಟ್ಟಿ, ದೇವದಾಸ್ ಕುಲಾಲ್, ಪ್ರೊ ಅಜಿತ್. ಉಮ್ರಾಣಿ, ತಾರಾನಾಥ ಅಮೀನ್, ವಿಮಾಲ ಶೆಟ್ಟಿ, ಸುಷ್ಮಾ ಡಿ. ಶೆಟ್ಟಿ, ರಮೇಶ್ ಶೆಟ್ಟಿ, ಚಂದ್ರಕಾಂತ್ ಭಟ್, ಪ್ರದೀಪ್ ಉಪಾಧ್ಯಾಯ, ವೆಂಕಟರಾಜ್ ಜೋಯಿಷ,
  ಅತಿಥಿಗಳನ್ನು  ವಸಂತ ಸುವರ್ಣ, ರಮೇಶ್ ಶೆಟ್ಟಿ, ರವಿ ಸನಿಲ್, ಮಾಧುರೀಕಾ ಬಂಗೇರ ಪರಿಚಯಿಸಿದರು.
ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿದ ತಂಡಗಳ ಯಾದಿಯನ್ನು ಮತ್ತು ವಿಜೇತ ತಂಡದ ಯಾದಿಯನ್ನು ಸಂಘದ ಉಪಕಾರ್ಯಾಧ್ಯಕ್ಷ ದೇವದಾಸ ಕುಲಾಲ್ ನೀಡಿದರು
ವಸಂತ ಸುವರ್ಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

—-ಪುರಂದರದಾಸರ ಬಗ್ಗೆ ಉಪನ್ಯಾಸ

ದೇಶ ಕಾಲ ಚಕ್ರದಲ್ಲಿ ಹಲವು ಬದಲಾವಣೆ ಕಂಡಿದೆ, ಮೂರು ಕಾಲಕ್ಕೂ ನಡೆಯುವ ಧರ್ಮ ಸನಾತನ ಧರ್ಮ, 14-15 ನೇ ಶತಮಾನದಲ್ಲಿ ನವಕೋಟಿ ನರಾಯಣ ಬಿರುದಾಂಕಿತ ಪುರಂದರದಾಸರು ಕರ್ನಾಟಕದಲ್ಲಿ ದಾಸ ಸಾಹಿತ್ಯದ ಕ್ರಾಂತಿಯನ್ನು ಮಾಡಿದವರು ತನ್ನ ಕೀರ್ತನೆಯ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ಧಿದವರು, ದಾಸರು ಭಗವಂತನನ್ನು ಹೃದಯದಲ್ಲಿ ಇಟ್ಟು ಪೂಜಿಸಿದಾಗ ಸಿಗುವ ಅನಂದ ಬೇರೆಲ್ಲೂ ಲಭಿಸುವುದಿಲ್ಲ ಎಂದು ಮೊದಲೆ ತಿಳಿಸಿದ್ದಾರೆ. ಹುಟ್ಟು ಅಕಸ್ಮಿಕ ಅದರೆ ಸಾವು ನಿಶ್ಚಿತ ಹುಟ್ಟು ಸಾವಿನ ಮಧ್ಯೆ ನಡೆಸುವ ಜೀವನ ಅನಂದಮಯವಾಗಿರಲು ಭಗವಂತನ ನಾಮ ಸ್ಮರಣೆ ಅಗತ್ಯವಿದೆ, ಭಗವಂತನ ಮೇಲೆ ನಂಬಿಕೆ ಇಟ್ಟು ಯಾವುದೇ ಕೆಲಸ ಮಾಡಿದರೆ ಅ ಕೆಲಸ ಅಗುವುದು ನಿಶ್ಚಿತ, ಪ್ರಪಂಚದ ಎಲ್ಲಾ ಎರಿಳಿತಗಳಿಗೆ ಪುರಂದರದಾಸರು ನಾಲ್ಕು ಲಕ್ಷ ಐವತ್ತಾರು ಸಾವಿರ ಕೀರ್ತನೆಗಳನ್ನು ಬರೆದು ಅದನ್ನು ತಿದ್ದುವ ಕೆಲಸವನ್ನು ಮಾಡಿದ್ದಾರೆ,  ಕರ್ನಾಟಕ ಸಂಗೀತದ ಪಿತಾಮಹ ಪುರಂದರದಾಸರು  —- ಚಂದ್ರಕಾಂತ ಭಟ್ ( ಖ್ಯಾತ ಹರಿದಾಸರು, ಕಾರ್ಕಳ)

:——ತೀರ್ಪುಗಾರರ ಅನಿಸಿಕೆಗಳು—-:

ಭಜನೆಯ ಮೂಲಕ ನಾವು ದೇವರನ್ನು ಕಾಣಬಹುದು, ಡೊಂಬಿವಲಿ ಕರ್ನಾಟಕ ಸಂಘ ವಿದ್ಯಾರ್ಜನೆಯೊಂದಿಗೆ ನಮ್ಮ ಸುಸಂಸ್ಕೃತ ಭಜನೆಗೆ ಸಹಕಾರ ನೀಡುವುದನ್ನು ಕಂಡು ಬಹಳ ಸಂತೋಷವಾಗುತ್ತಿದೆ. ಮುಂಬಯಿ ಮಹಾನಗರದಲ್ಲಿ ಕುಣಿತ ಭಜನೆಯ ಸ್ಪರ್ಧೆ ಯನ್ನು ಅಯೋಜಿಸಿದ ನೀವು ಅಭಿನಂದನೆಗೆ ಅರ್ಹರು, ಎಲ್ಲಾ ತಂಡಗಳು ಉತ್ತಮವಾಗಿ ಹಾಡಿದ್ದಾರೆ ನಾವು ಪ್ರಾಮಾಣಿಕ ತೀರ್ಪನ್ನು ನೀಡಿದ್ದೇವೆ ನಮಗಿಂತಲೂ ದೇವರ ತೀರ್ಪು ತಮಗೆ ಲಭಿಸಲಿದೆ.— ಎಸ್. ವೆಂಕಟರಾಜ್ ಜೋಯಿಸರು

ಭಜನೆಯಿಂದ ಮಕ್ಕಳಿಗೆ ಉತ್ತಮ ಸಂಸ್ಕಾರ ಸಿಗುತ್ತದೆ ಪ್ರತಿಯೊಂದು ಭಜನೆಯೂ ಭಗವಂತನಿಗೆ ಶರಣಾಗಲು ಕಲಿಸುತ್ತದೆ ಉತ್ತಮ ಸಂಸ್ಕಾರಕ್ಕಾಗಿ ಪ್ರೇರಣೆ ನೀಡುತ್ತಿರುವ ಕರ್ನಾಟಕ ಸಂಘದ ಪದಾಧಿಕಾರಿಗಳು ಅಬಿನಂದನೆಗೆ ಅರ್ಹರು ನಾವು ಪ್ರಾಮಾಣಿಕ ತೀರ್ಪು ನೀಡಿದ್ದೇವೆ — ಪ್ರದೀಪ್ ಉಪಾಧ್ಯಾಯ

ಅಮೇರಿಕದ ನಾಸ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ವುಠಲನ ನಾಮಸ್ಮರಣೆಯಿಂದ ಹೃದಯಾಘಾತ ಬರುವ ಲಕ್ಷಣಗಳು ಕಡಿಮೆ ಎಂದು ಕಂಡು ಹಿಡಿದಿದ್ದಾರೆ. ಸಂಘದ ವತಿಯಿಂದ ಭಗವಮನತನ ನಾಮಸ್ಮರಣೆ, ಇಂತಹ ಕಮ್ಮಟಗಳು ಸದಾ ನಡೆಯುತ್ತಿರಲಿ ನಾವು ಇಂದು ಪ್ರಾಮಾಣಿಕವಾಗಿ ತೀರ್ಪು ನೀಡಿದ್ದೇವೆ, ನಾವು ಭಗವಂತನ ತೀರ್ಪುಗಾರರು, —- ಚಂದ್ರಕಾಂತ ಭಟ್

ಪುರಂದರ ದಾಸರ ಮಕ್ಕಳ ಕುಣಿತ ಭಜನೆ ಸ್ಪರ್ಧೆ
ಪ್ರಥಮ ಬಹುಮಾನ
ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ 12000 ಸಾವಿರ ನಗದು ಮತ್ತು ಫಲಕ

ದ್ವಿತೀಯ ಬಹುಮಾನ
ಶ್ರೀ ದುರ್ಗಾಂಬಿಕ ಮಕ್ಕಳ ತಂಡ ಅಸಲ್ಪಾ ಘಾಟ್ಕೋಪರ್ 10000 ಸಾವಿರ ನಗದು ಮತ್ತು ಫಲಕ

ತೃತೀಯ ಬಹುಮಾನ
ಬಂಟರ ಸಂಘ ಮುಂಬಯಿ ಅಂಧೇರಿ- ಬಾಂದ್ರಾ ಪ್ರದೇಶಿಕ ಸಮಿತಿ  8000 ಸಾವಿರ ನಗದು ಮತ್ತು ಫಲಕ

ಸಮಾಧಾನಕರ ಬಹುಮಾನ
ಪಶ್ಚಿಮ ವಿಭಾಗ ಸಾರ್ವಜನಿಕ ನವರತ್ರೋತ್ಸವ ಭಜನಾ ಮಂಡಳಿ ಡೊಂಬಿವಲಿ 5000 ಸಾವಿರ ನಗದು

ಪುರಂದರ ದಾಸರ ವಯಸ್ಕರ ಭಜನಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ
ಶ್ರೀ.ಜಗದಂಬಾ ಭಜನಾ ಮಂದಿರ ಡೊಂಬಿವಲಿ,
20000 ಸಾವಿರ ನಗದು ಮತ್ತು ಫಲಕ

ದ್ವಿತೀಯ ಬಹುಮಾನ
ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ  17000 ಸಾವಿರ ನಗದು ಮತ್ತು ಫಲಕ

ತೃತೀಯ ಬಹುಮಾನ ( ಎರಡು ತಂಡಗಳು )
ಶ್ರೀ ಭ್ರಮರಾಂಬಿಕೆ ಭಜನಾ ಮಂಡಳಿ ಡೊಂಬಿವಲಿ
14000 ಸಾವಿರ ನಗದು ಮತ್ತು ಫಲಕ

ತೃತೀಯ ಬಹುಮಾನ
ನವೋದಯ ಕನ್ನಡ  ಸೇವಾ ಸಂಘ ಥಾಣೆ  14000 ಸಾವಿರ ನಗದು ಮತ್ತು ಫಲಕ

ಸಮಾಧಾನಕರ ಬಹುಮಾನ
ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೊತ್ಸವ ಭಜನಾ ಮಂಡಳಿ ಡೊಂಬಿವಲಿ 8000 ಸಾವಿರ ನಗದು ಮತ್ತು ಫಲಕ

Related posts

ಕನ್ನಡ ಸಂಘ ಸಾಂತಾಕ್ರೂಜ್ ನ ಶೈಕ್ಷಣಿಕ ಆರ್ಥಿಕ ನೆರವು ವಿತರಣಾ, ದತ್ತು ಸ್ವೀಕರ,

Mumbai News Desk

ಕರ್ನಿರೆ ಗಂಗಾಧರ್ ಅಮೀನ್ ಅವರ “ಕೊಂಕಣ್ ಸ್ವಾದ್” ಗೆ ಟೈಮ್ಸ್ ಪುಡ್ ಪ್ರಶಸ್ತಿ.

Mumbai News Desk

ಬಿಲ್ಲವರ ಅಸೋಸಿಯೇಷನಿನ ಭಾಯಂದರ್ ಸ್ಥಳೀಯ ಕಚೇರಿಯ ಹಳದಿಕುಂಕುಮ ಕಾರ್ಯಕ್ರಮ.

Mumbai News Desk

ಗೋವಂಡಿ ಬೈಂಗನ್‌ವಾಡಿ ಶ್ರೀ ದುರ್ಗಾಪರಮೇಶ್ವರಿ ಮಾತಾ ಮಂದಿರದ 46 ನೇ ವಾರ್ಷಿಕೋತ್ಸವ

Mumbai News Desk

PVSNM ಮಹಿಳಾ ವಿಭಾಗದ ಹಳದಿ ಕುಂಕುಮ.

Mumbai News Desk

ವಿಶ್ವ ರಂಗ ದಿನಾಚರಣೆ- 2024ರ ಅಂಗವಾಗಿನಾಟಕ ರಚನಾ ಕಮ್ಮಟ ಮತ್ತು ರಂಗ ನಿರ್ದೇಶಕರ ಸಮ್ಮಿಲನ

Mumbai News Desk