ಸಮಾಜ ಬಾಂಧವರನ್ನು ಒಗ್ಗೂಡಿಸಿ ಸಂಸ್ಥೆಯನ್ನು ಬಲಪಡಿಸುವ ಧ್ಯೇಯ ನಮ್ಮದಾಗಬೇಕು- ಮೋಹನ್ ಸಿ.ಕೋಟ್ಯಾನ್.
ಚಿತ್ರ, ವರದಿ : ಉಮೇಶ್ ಕೆ. ಅಂಚನ್.
ಮುಂಬಯಿ, ಫೆ: ಸಮಾಜದ ಏಳಿಗೆಯೇ ಅಸೋಸಿಯೇಷನಿನ ಮುಖ್ಯ ಧ್ಯೇಯ. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದೇಶದಂತೆ ಒಗ್ಗಟ್ಟಿನಿಂದ ಬಾಳೋಣ. ಪರಿಸರದ ಸಮಾಜಬಾಂಧವರನ್ನು ಒಟ್ಟು ಸೇರಿಸಿ ಸಂಸ್ಥೆಯನ್ನು ಬಲಪಡಿಸುವ ಧ್ಯೇಯ ನಮ್ಮದಿರಬೇಕೇ ಹೊರತು ಸಮಾಜವನ್ನು ವಿಭಜಿಸುವ ಕಾರ್ಯವನ್ನು ಮಾಡಬಾರದು. ನಮ್ಮ ಹಿರಿಯರು ಬಹಳ ಶ್ರಮ ಪಟ್ಟು ಸಂಸ್ಥೆಗೆ ಗಟ್ಟಿಮುಟ್ಟಾದ ಅಡಿಪಾಯವನ್ನು ಹಾಕಿದ್ದಾರೆ. ಅವರನ್ನು ಸದಾ ನೆನಪಿಸುತ್ತಾ ಸಕಾರಾತ್ಮಕ ದೃಷ್ಟಿಯಿಂದ ಸಂಸ್ಥೆಯ ಪ್ರಗತಿಗೆ ಶ್ರಮಿಸೋಣ. ಪ್ರಸ್ತುತ ಅದ್ಯಕ್ಷರ ಉನ್ನತ ವಿದ್ಯಾ ಸಂಸ್ಥೆಯನ್ನು ಸ್ಥಾಪಿಸುವ ಉದ್ದೇಶಕ್ಕೆ ನಾವೆಲ್ಲರೂ ಸಹಕರಿಸುವ ಎಂದು ಬಿಲ್ಲವರ ಅಸೋಸಿಯೇಷನ್ ಮುಂಬಯಿ ಇದರ ಉಪಾಧ್ಯಕ್ಷ ಮೋಹನ್ ಸಿ.ಕೋಟ್ಯಾನ್ ನುಡಿದರು.
ಅವರು ಫೆ. 20 ರಂದು ಬಿಲ್ಲವರ ಅಸೋಸಿಯೇಷನ್ ಇದರ ಭಾಯಂದರ್ ಸ್ಥಳೀಯ ಕಚೇರಿಯಲ್ಲಿ ನೂತನ ಪದಾಧಿಕಾರಿಗಳ ಸಮಿತಿಯನ್ನು ರಚಿಸಿ ಸದಸ್ಯರನ್ನುದ್ದೇಶಿಸಿ ಮಾತನಾಡಿದರು.
ಕೇಂದ್ರ ಕಚೇರಿಯ ಜತೆ ಕೋಶಾಧಿಕಾರಿ ಹಾಗೂ ಕೇಂದ್ರ ಕಚೇರಿಯ ಪ್ರತಿನಿಧಿ ಜಿ. ಕೆ. ಕೆಂಚನಕೆರೆ ಸಂಸ್ಥೆಯ ನೀತಿ ನಿಯಮಗಳ ಬಗ್ಗೆ, ಸಂಸ್ಥೆಯ ಮುಂದಿನ ಯೋಜನೆಗಳು ಹಾಗೂ ಸಂಸ್ಥೆಯ ಕೆಲವೊಂದು ಕಾರ್ಯಗಳಿಗೆ ತಡೆಯಾದ ವಿಷಯಗಳನ್ನು ವಿವರಿಸಿ ನೂತನ ಸಮಿತಿಗೆ ಶುಭಕೋರಿದರು.
ಕೇಂದ್ರ ಕಚೇರಿಯ ಕಾರ್ಯಕಾರಿ ಸಮಿತಿಯ ಸದಸ್ಯೆ ಭಾರತಿ ಎ. ಅಂಚನ್ ನೂತನ ಪದಾಧಿಕಾರಿಗಳಿಗೆ ಅಭಿನಂದಿಸಿದರು.
ಶೇಖರ ರಾಮ ಪೂಜಾರಿ, ಸತೀಶ್ ಜೆ. ಪೂಜಾರಿ, ಚಿತ್ರಾಪು ಕೆ. ಎಮ್. ಕೋಟ್ಯಾನ್, ಗಣೇಶ್ ಅಂಚನ್ ಸಂದರ್ಭೋಚಿತವಾಗಿ ಮಾತನಾಡಿ ನವ ಸಮಿತಿಗೆ ಎಲ್ಲರೂ ಪ್ರೋತ್ಸಾಹಿಸಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಇತ್ತೀಚೆಗೆ ಬಿಲ್ಲವರ ಅಸೋಸಿಯೇಷನ್ ಆಯೋಜಿಸಿದ್ದ ಕೋಟಿಚೆನ್ನಯ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಎಲ್ಲಾ ಕ್ರೀಡಾಪಟುಗಳನ್ನು, ಬಹುಮಾನ ವಿಜೇತರನ್ನು ಸತ್ಕರಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮವನ್ನು ಜ್ಯೋತಿ ರತ್ನಾಕರ ಪೂಜಾರಿ ನಿರೂಪಿಸಿದರು.
ಭಜನೆ, ಗುರುಪೂಜೆ ಪ್ರಸಾದ ವಿತರಣೆ ನಡೆಯಿತು.
ಕಾರ್ಯಾದ್ಯಕ್ಷರಾಗಿ ಶೇಖರ ರಾಮ ಪೂಜಾರಿ, ಗೌರವ ಕಾರ್ಯಾದ್ಯಕ್ಷರಾಗಿ ಪ್ರಮೋದ್ ಕೋಟ್ಯಾನ್, ಮುಖ್ಯ ಸಲಹೆಗಾರರಾಗಿ ಚಿತ್ರಾಪು ಕೆ. ಎಮ್. ಕೋಟ್ಯಾನ್, ಉಪಕಾರ್ಯಾದ್ಯಕ್ಷರಾಗಿ ಸುಧಾಕರ್ ಜಿ. ಪೂಜಾರಿ ಮತ್ತು ಸತೀಶ್ ಜೆ. ಪೂಜಾರಿ, ಕಾರ್ಯದರ್ಶಿ ಜ್ಯೋತಿ ರತ್ನಾಕರ್ ಪೂಜಾರಿ, ಜತೆ ಕಾರ್ಯದರ್ಶಿಗಳಾಗಿ ಜಯಶ್ರೀ ಎಸ್. ಕರ್ಕೇರ ಮತ್ತು ದೀಪಕ್ ಎಸ್. ಕರ್ಕೇರ, ಕೋಶಾಧಿಕಾರಿ ಹರೀಶ್ ಎ. ಸಾಲ್ಯಾನ್, ಜತೆ ಕೋಶಾಧಿಕಾರಿಗಳಾಗಿ ನಾಗೇಶ್ ಎನ್. ಪೂಜಾರಿ ಮತ್ತು ಅಶೋಕ್ ಟಿ. ಪೂಜಾರಿ, ಯುವ ವಿಭಾಗದ ಮುಖ್ಯಸ್ಥರಾಗಿ ಗಣೇಶ್ ಅಂಚನ್, ಆಡಳಿತ ಸಮಿತಿಯ ಸದಸ್ಯರಾಗಿ ಸದಾನಂದ್ ಎಸ್. ಪೂಜಾರಿ, ಹೇಮಂತ್ ಪೂಜಾರಿ, ಜತೀಶ್ ಆರ್. ಕುಂದರ್, ವಿಜಯ ಎಲ್. ಅಂಚನ್, ಯೋಗೇಶ್ ಬಿ. ಕೋಟ್ಯಾನ್, ಉಮೇಶ್ ಕುಮಾರ್, ಸಂತೋಷ್ ಕರ್ಕೇರ, ಕುಸುಮ ಆರ್. ಪೂಜಾರಿ, ಸದಾಶಿವ ಪೂಜಾರಿ, ಗಣೇಶ್ ವಿ. ಪೂಜಾರಿ,ಶೇಖರ್ ಅಂಚನ್,ತೇಜ್ಪಾಲ್ ಪೂಜಾರಿ,ಶೇಖರ್ ಪೂಜಾರಿ, ಶಿವಾನಂದ್ ಪೂಜಾರಿ ಯವರನ್ನು ಆಯ್ಕೆ ಮಾಡಲಾಯಿತು.
ಪೂಜಾ ಕಮಿಟಿಯ ಸದಸ್ಯರಾಗಿ ಬಾಲಕೃಷ್ಣ ಸುವರ್ಣ ಮತ್ತು ರಾಕೇಶ್ ಅಮೀನ್,ವಿಶೇಷ ಆಮಂತ್ರಿತ ಸದಸ್ಯರಾಗಿ ರತ್ನಾಕರ ವೈ. ಪೂಜಾರಿ, ಹರೀಶ್ ಎಮ್. ಸಾಲ್ಯಾನ್, ನವೀನ್ ಕೆ. ಸುವರ್ಣ, ವಿಠ್ಠಲ್ ಪೂಜಾರಿ, ಶ್ರೀನಿವಾಸ್ ಪೂಜಾರಿ, ಮಹಿಳಾ ವಿಭಾಗದ ಸದಸ್ಯೆಯರಾಗಿ ಸುಮಿತ್ರಾ ಕರ್ಕೇರ, ಸಂದ್ಯಾ ವಿ. ಪೂಜಾರಿ, ಅಮಿತಾ ಆರ್. ಸುವರ್ಣ, ಸುರೇಖಾ ಕೋಟ್ಯಾನ್, ಮೋಹಿನಿ ಟಿ.ಪೂಜಾರಿ, ಶಕುಂತಳಾ ಎಸ್. ಪೂಜಾರಿ, ವಿಜಯಲಕ್ಷ್ಮೀ. ಬಿ. ಸುವರ್ಣ,ಹರಿಣಾ ಎನ್. ಪೂಜಾರಿ, ಮೀರಾ ಆರ್. ಅಮೀನ್, ಇಂದಿರಾ ಸಾಲ್ಯಾನ್, ನಮಿತಾ ಎಸ್. ಪೂಜಾರಿ, ಸುಮಿತ್ರ ಎಚ್. ಸಾಲ್ಯಾನ್, ಸರೋಜಿನಿ ಎ. ಪೂಜಾರಿ, ಉಷಾ ಅಂಚನ್, ಶಾರದಾ ಸುವರ್ಣ, ಆಶಾ ಎಸ್. ಬಂಗೇರ, ಯುವ ವಿಭಾಗದ ಸದಸ್ಯರಾಗಿ ಪ್ರತಿಕ್ಷಾ ಎಚ್. ಸಾಲ್ಯಾನ್, ಅನೀಶ್ ಬಿ. ಸುವರ್ಣ, ಸಾಕ್ಷಿ ಆರ್ ಪೂಜಾರಿ, ತನಿಷಾ ಸಾಲ್ಯಾನ್,ಶ್ರುತಿ ಪೂಜಾರಿ, ಇಷಾ ಪೂಜಾರಿ, ದಿಯಾ ಪೂಜಾರಿ, ಮನೀಶ್ ಸುವರ್ಣ , ನಿಖಿಲ್ ಪೂಜಾರಿ, ರಾಕೇಶ್ ಅಮೀನ್, ಚೇತನ್ ಎಸ್. ಪೂಜಾರಿ,ಮಲಿತಾ ಎಸ್. ಪೂಜಾರಿ ಹಾಗೂ ಅನೀಶ್ ಎನ್. ಪೂಜಾರಿಯವರನ್ನು ನೇಮಿಸಲಾಯಿತು.