
ಸಂಘದ ಅಭಿವೃದ್ಧಿಗೆ ಸದಸ್ಯರ ಸಹಕಾರ ಅಗತ್ಯ : ಸಂತೋಷ್ ಜಿ ಶೆಟ್ಟಿ
ಕರ್ನಾಟಕ ಸಂಘ ಪನ್ವೆಲ್ ಇದರ ವಾರ್ಷಿಕೋತ್ಸವ ಸಮಾರಂಭವು ಫೆ. 23ರಂದು ಕರ್ನಾಟಕ ಸಂಘ ಗ್ರೌಂಡ್, ಕರ್ನಾಟಕ ಸಂಘದ ಕಟ್ಟಡದ ಹಿಂದುಗಡೆ, ನ್ಯೂ ಪನ್ವೆಲ್ ಇಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಕಾರ್ಯಾಧ್ಯಕ್ಷ,ಪನ್ವೆಲ್ ಮಹಾನಗರ ಪಾಲಿಕೆಯ ಮಾಜಿ ಸಭಾಪತಿ ಸಂತೋಷ್ ಜಿ ಶೆಟ್ಟಿ ಅವರು ವಹಿಸಿ ಮಾತನಾಡಿ ಸಂಘದ ಅಭಿವೃದ್ಧಿಗೆ ಸರ್ವ ಸದಸ್ಯರ ಸಹಕಾರ ಅತಿ ಅಗತ್ಯ, ಸಂಘದಲ್ಲಿ ಯಾವುದೇ ಜಾತಿ – ಮತ ಭೇದವಿಲ್ಲದೆ ಸದಸ್ಯರೆಲ್ಲರೂ ಅನ್ಯೋನ್ಯತೆಯಿಂದ ಸಂಘದ ಪ್ರತಿ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಿಟಿರುವರು. ಸಂಘವು ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಿರುತ್ತದೆ. ಕರ್ನಾಟಕ ಸಂಘ ಹಿರಿಯ, ಕಿರಿಯ ಸದಸ್ಯರ ಒಗ್ಗೂಡು ವಿಕೆಯಲ್ಲಿ ಸಮೃದ್ಧವಾಗಿ ಬೆಳೆಯಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಡಾಕ್ಟರ್ ಶಿಶಿರ್ ಶೆಟ್ಟಿ, ನಾಟಕಗಾರ, ನಿರ್ದೇಶಕ ನಾರಾಯಣ ಶೆಟ್ಟಿ ನಂದಳಿಕೆ ಮತ್ತು ನಳಿನ್ ರಾವ್ , ಸಂಘದ ಉಪಾಧ್ಯಕ್ಷರಾದ ಗುರು ಶೆಟ್ಟಿ,ಗೌರವ ಪ್ರಧಾನ ಕಾರ್ಯದರ್ಶಿ ಸತೀಶ್ ಶೆಟ್ಟಿ ಕುತ್ಯಾರ್,ಜೊತೆ ಕಾರ್ಯದರ್ಶಿ ಕಾಂತಿ ಶೆಟ್ಟಿ, ಕೋಶಾಧಿಕಾರಿ ಸುಧಾರಾವ್ ಹಾಗೂ ಮಹಿಳಾ ವಿಭಾಗದ ಅಧ್ಯಕ್ಷ ಶಬುನ ಶೆಟ್ಟಿ ಅವರು ಉಪಸ್ಥಿತರಿದ್ದರು.
ನಂತರ ಡಾ. ಶಿಶಿರ್ ಶೆಟ್ಟಿ ಅವರು ಆರೋಗ್ಯದ ಬಗ್ಗೆ ಜನಸಾಮಾನ್ಯರು ಯಾವ ರೀತಿಯ ಕಾಳಜಿಯಲ್ಲಿ ಇರುಬೇಕು, ಕೆಲವು ಮಾರಕ ರೋಗಗಳು ಕೇವಲ ರೋಗಿಗೆ ಮಾತ್ರವಲ್ಲ ಆತನು ಇಡೀ ಕುಟುಂಬಕ್ಕೂ ಕಂಠಕ ಪ್ರಾಯವಾಗುತ್ತದೆ, ಎಂದು ಕಿವಿಮಾತು ಕೊಟ್ಟರು.

ನಾರಾಯಣ ಶೆಟ್ಟಿ ನಂದಳಿಕೆ ಅವರು ಮಾತನಾಡುತ್ತಾ, ಸಾಹಿತ್ಯ ಕಲೆ ಇಂದಿನ ಸಮಾಜದ ಒಂದು ಅಂಗ.ಸಾಹಿತ್ಯ ಕ್ಷೇತ್ರದಲ್ಲಿ ಅವರ ಸೇವೆ ಹಾಗೂ ಮಾಯಾ ನಗರಿ ಮುಂಬೈಯಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಇರುವ ಕರ್ನಾಟಕ ಸಂಘ ಪನ್ವೆಲ್ ನ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಕೊಂಡಾಡಿದರು. ಸಂಘ ಸಂಸ್ಥೆಗಳಿಂದ ಕಲೆ ಸಾಹಿತ್ಯ ಪ್ರೋತ್ಸಾಹ ಸಿಗುವುದರಿಂದ ಎಂದಿಗೂ ಕಲೆ ಸಾಹಿತ್ಯ ನಿರಂತರ ಬೆಳೆವಣಿಗೆಯನ್ನು ಕಂಡಿದೆ ಎಂದು ಹೇಳಿದರು.

ನಳಿನಿ ರಾವ್ ರವರು ಕರ್ನಾಟಕ ಸಂಘ ಪನ್ವೆಲ್ ನ ಶಿಸ್ತು ಬದ್ಧ ಕಾರ್ಯಕ್ರಮ, ಭಾಷೆಯ ಮೇಲಿನ ಅಭಿಮಾನ ಹಾಗೂ ಸಂಘದ ಬೆಳವಣಿಗೆಯನ್ನು ಕಂಡು ಹೆಮ್ಮೆ ವ್ಯಕ್ತಪಡಿಸಿದರು. ನಮ್ಮ ಸಂಸ್ಕೃತಿಯನ್ನು ನಮ್ಮ ಮಕ್ಕಳಲ್ಲಿಯೂ ಕಾಣಬೇಕೆಂದರೆ ಮಕ್ಕಳನ್ನು ಇಂತಹ ಸಂಘ ಸಂಸ್ಥೆಗಳ ಕಾರ್ಯಕ್ರಮಗಳಿಗೆ ಬರುವಂತೆ ಮಾಡಬೇಕು ಎಂದು, ಪಾಲಕರಿಗೆ ಉತ್ತಮ ಸಂದೇಶವನ್ನು ಕೊಡುವ ಮೂಲಕ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪಾಲಕರ ಪಾಲು ಮಹತ್ತರವಾಗಿದೆ ಎಂದು ಸೂಚಿಸಿದರು.
ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಶ್ವೇತಾ ಸಂತೋಷ ಶೆಟ್ಟಿ ಮಾಡಿದರು. ಪ್ರಾರ್ಥನೆಯನ್ನು ಗೀತಾ ಶೆಟ್ಟಿಯವರು ಪ್ರಾರ್ಥನೆ ಮಾಡಿದರು. ರೇಷ್ಮಾ ಶೆಟ್ಟಿ ಅವರು ಧನ್ಯವಾದ ಸಮರ್ಪಿಸಿದರು. ಸಂಘದ ವಾರ್ಷಿಕ ವರದಿಯನ್ನು ಗೌರವ ಪ್ರಧಾನ ಕಾರ್ಯದರ್ಶಿ ಅವರು ವಾಚಿಸಿದರು.ಸಭಾ ಕಾರ್ಯಕ್ರಮದಲ್ಲಿ ಪರಿಸರದ ದಾನಿಗಳ ಹಿತೈಷಿಗಳ ಪ್ರೋತ್ಸಾಹ ಸಹಕಾರಗಳನ್ನು ಸ್ಮರಿಸಲಾಯಿತು.
ಸಭಾ ಕಾರ್ಯಕ್ರಮದ ಮೊದಲಿಗೆ ಸದಸ್ಯರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರಾರಂಭವಾಯಿತು. ಕುಮಾರಿ ಶ್ಲೋಕ ಸಂತೋಷ್ ಶೆಟ್ಟಿ ಅವರು ನೃತ್ಯದ ಮೂಲಕ ಶ್ರೀ ಮಹಾಲಕ್ಷ್ಮಿ ಯನ್ನು ಸ್ತುತಿಸಿದರು. ನಂತರ ಪುಟಾಣಿಗಳಾದ ಗಾರ್ವಿ ಶೆಟ್ಟಿ, ಕ್ರಿಶ ಪೂಜಾರಿ,ರಿದ್ವಿ ಶೆಟ್ಟಿ,ಶ್ರಾವಣಿ ಶೆಟ್ಟಿ,ಹಾಗೂ ನಕ್ಷ ಶೆಟ್ಟಿ ಅವರು ಪಾಶ್ಚಾತ್ಯ ಶೈಲಿಯಲ್ಲಿ ನೃತ್ಯ ಮಾಡಿದರು. ಮಹಿಳಾ ವಿಭಾಗದ ಮಹಿಳೆಯರ ಜಾನಪದ ಶೈಲಿಯ ನೃತ್ಯ ನೋಡಲು ಸುಂದರವಾಗಿತ್ತು ಅದೇ ರೀತಿ ಇನ್ನೊಂದು ಮಹಿಳಾ ಸಮೂಹ ಬೇರೆ ಬೇರೆ ರಾಜ್ಯದ ಸೀರೆಯ ಸೊಬಗನ್ನು ಪ್ರಸ್ತುತಪಡಿಸಿದರು.ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ಶಬುನ ಶೆಟ್ಟಿ ಅವರು ಹಾಗೂ ಸುಧಾರಾವ್ ರವರು ನಡೆಸಿಕೊಟ್ಟರು.

ಸಭಾ ಕಾರ್ಯಕ್ರಮದ ನಂತರ ಸಂಘದ ಸದಸ್ಯರಿಂದ ಸತೀಶ್ ಶೆಟ್ಟಿ ಕುತ್ಯಾರ್ ರಚಿಸಿ, ಶೈಲೇಶ್ ಪುತ್ರ ನಿರ್ದೇಶನದ “ಕರ್ಣ ಅವಸಾನ” ಪೌರಾಣಿಕ ನಾಟಕ ಪ್ರದರ್ಶಿಸಲ್ಪಟ್ಟಿತು. ಸತೀಶ್ ಶೆಟ್ಟಿ ಕುತ್ಯಾರ್, ಶೈಲೇಶ ಪುತ್ರನ್, ಯಾದಾನಂದ್ ಮುಲ್ಕಿ,, ರವಿ ಆಚಾರ್ಯ ನಾಗೇಶ್ ಜತ್ತನ್ ಇವರು ಈ ನಾಟಕದಲ್ಲಿ ಪಾತ್ರ ಮಾಡಿ,ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿ ಕೊಟ್ಟರು, ಶ್ರೀಕಾಂತ್ ಶೆಟ್ಟಿ ಸೂಡ ಉತ್ತಮ ಹಿನ್ನೆಲೆ ಸಂಗೀತವನ್ನೂ,ಚಂದ್ರಕಾಂತ್ ಸಾಲಿಯನ್ ರವರ ವೇಷ ಭೂಷಣದ ವಸ್ತ ವಿನ್ಯಾಸ, ಹಾಗೂ ಮಂಜುನಾಥ್ ಶೆಟ್ಟಿಗಾರ್ ವರ್ಣಲಂಕಾರ, ಹಾಗೂ ಕರಾವಳಿ ಸೌಂಡ್ಸ್ ನವರ ಧ್ವನಿ ಮತ್ತು ಬೆಳಕು, ಮತ್ತು ಬಾಲಕೃಷ್ಣ ಶೆಟ್ಟಿ ಅದ್ಯಪಾಡಿಯವರ ಬೆಳಕು ಸಂಯೋಜನೆ ನಾಟಕಕ್ಕೆ ಬಹಳ ಪೂರಕವಾಗಿ ಮೂಡಿ ಬಂತು. ಕಾರ್ಯಕ್ರಮದ ಕೊನೆಗೆ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಜಗದೀಶ್ ಶೆಟ್ಟಿ ಪನ್ವೆಲ್, ಸುರೇಶ ಕೋಣಿ,ಮತ್ತು ರಾಮಚಂದ್ರ ಗೌಡರವರು ಮತ್ತಿತರ ಸದಸ್ಯರು ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದರು.,