ಮುಂಬಯಿ ಮಹಾನಗರದ ಹಿರಿಯ ವಕೀಲರಾದ ಬಿ. ಕೆ. ಸದಾಶಿವ ಇವರನ್ನು ಬಾರತ ಸರಕಾರದ ಕಾನೂನು ಮತ್ತು ನ್ಯಾಯಾಂಗ ಸಚಿವಾಲಯ ನೋಟರಿ ಪಬ್ಲಿಕ್ ಆಗಿ ನೇಮಕ ಮಾಡಿದೆ.
ಮುಂಬಯಿ ಹಾಗೂ ಪರಿಸರದಲ್ಲಿ ಕಳೆದ ಸುಮಾರು 35 ವರ್ಷಗಳಿಂದ ವಕೀಲರಾಗಿ ಸೇವೆ ಸಲ್ಲಿಸುತ್ತಾ ಜನಪ್ರಿಯರಾಗಿರುವ ಇವರು ಮಂಗಳೂರಿನ ಸೈಂಟ್ ಅಲೋಷಿಯಸ್ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು ಮುಂಬಯಿಯ ಸಿದ್ದಾರ್ಥ ಕಾಲೇನಿನಲ್ಲಿ ಕಾನೂನು ಪದವಿ ಹಾಗೂ ಮುಂಬಯಿ ವಿಶ್ವ ವಿದ್ಯಾನಿಲಯದಿಂದ ಎಲ್. ಎಲ್. ಎಂ. ಪದವಿ ಪಡೆದಿರುವರು. ಮೂಲತ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಕನಿಲದವರಾದ ನ್ಯಾ. ಬಿ. ಕೆ. ಸದಾಶಿವ ಇವರು ಕಳೆದ ಹಲವಾರು ವರ್ಷಗಳಿಂದ ತನ್ನ ಪರಿವಾರದೊಂದಿಗೆ ವಸಯಿಯಲ್ಲಿ ನೆಲೆಸಿದ್ದಾರೆ.

previous post