29.1 C
Karnataka
March 31, 2025
ಸುದ್ದಿ

ಚೀನಾದ  ಮಿಲಿಯನ್ ಡಾಲರ್ ರೌಂಡ್ ಟೇಬಲ್ ಅಧೀವೇಶನಕ್ಕೆ ಸ್ಪೀಕ‌ರ್ ಆಗಿ   ಡಾ| ಆರ್.ಕೆ ಶೆಟ್ಟಿ ಆಯ್ಕೆ

ಅಂತರಾಷ್ಟ್ರೀಯ ಪ್ರಸಿದ್ಧಿಯ ಆರ್ಥಿಕತಜ್ಞ, ಪ್ರಸಿದ್ಧ ಜೀವ ವಿಮಾ ಸಲಹೆಗಾರ, ಇಸ್ಸಾರ್ ಫೈನಾನ್ಶಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಆ‌ರ್.ಕೆ. ಶೆಟ್ಟಿ ಎಂಡ್ ಕಂಪೆನಿ ಇದರ ಆಡಳಿತ ನಿರ್ದೇಶಕ ಡಾ|ಆರ್.ಕೆ. ಶೆಟ್ಟಿ ಅವರು. ಆಗಸ್ಟ್ 24ರಿಂದ 27ರ ತನಕ ಚೀನಾದ ಮಕಾವು ಇಲ್ಲಿ ನಡೆಯಲಿರುವ ಮಿಲಿಯನ್ ಡಾಲರ್ ರೌಂಡ್ ಟೇಬಲ್ (ಎಂಡಿಆರ್‌ಟಿ) ಜಾಗತಿಕ ಸಮ್ಮೇಳನದಲ್ಲಿ (ಗ್ಲೋಬಲ್‌ ಕಾನ್ಸರೆನ್ಸ್) ಪ್ರಧಾನ ಭಾಷಣಕಾರಾಗಿ (ಫೋಕಸ್ ಸೆಷನ್ ಸ್ಪೀಕರ್) ಆಯ್ಕೆ ಆಗಿದ್ದಾರೆ.

ಜಗತ್ತಿನ ಅತೀ ಶ್ರೇಷ್ಠರಲ್ಲಿ ಶ್ರೇಷ್ಠ ವಿತ್ತೀಯ ಸಲಹೆಗಾರ ಪರಮೋಚ್ಛ ಸಂಘಟನೆ ಎಂದೆಣಿಸಿದ ಕೋರ್ಟ್ ಆಫ್ ಟೇಬಲ್‌ನಲ್ಲಿ ಹಲವು ಬಾರಿ ಸರ್ವೋತ್ಕೃಷ್ಟ ಸಾಧನಾ ಪ್ರಶಸ್ತಿಗೆ ಭಾಜನರಾಗಿರುವ ಡಾ. ಆರ್‌ ಕೆ ಶೆಟ್ಟಿ ಅಮೇರಿಕಾದ ಯುಎಸ್ಎ ಟೆನ್ನೆಸ್ಸಿ ಇಲ್ಲಿನ ನ್ಯಾಶ್‌ವಿಲ್ಲೆ ಇಲ್ಲಿ 2023ರ ಜುಲಾಯಿ 25-28ರ ಜರುಗಿದ ಎಂಆರ್‌ಡಿಟಿ ಶೃಂಗಸಭೆಯ ಸಭಾಪತಿಯಾಗಿ (ಕನೆಕ್ಸಿಯಾನ್ ವಲಯದ ಭಾಷಣಕಾರ) ಜೀವ ವಿಮಾ ನಿಗಮ (ಎಲ್‌ಐಸಿ ಆಫ್ ಇಂಡಿಯಾ) ಇದರ ಸರ್ವೋತ್ಕೃಷ್ಟ ಸ್ಥಾನವನ್ನು ಅಲಂಕರಿಸಿದ ಭಾರತೀಯರಾಗಿದ್ದರು.

ಸದಾ ಸಾಮಾಜಿಕ ಕಳಕಳಿಯನ್ನೂ ಹೊಂದಿ ತೆರೆಯ ಮರೆಯಲ್ಲಿದ್ದೇ ಸಮಾಜ ಸೇವೆಯಲ್ಲಿ ಕಾರ್ಯೋನ್ಮುಖರಾಗಿ ಸಾವಿರಾರು ಜನರ ಬದುಕಿನ ಕನಸನ್ನು ನನಸಾಗಿಸಿದ ಮಾನವತಾವಾದಿ ಆಗಿದ್ದು ತನ್ನ ಬದುಕನ್ನು ಬಡವರು, ಜನಸಾಮಾನ್ಯರಲ್ಲೂ ಹಂಚಿಕೊಳ್ಳುತ್ತಾ ಜೀವನದ ಯಶೋಗಾಥೆಯನ್ನು ಆರಂಭಿಸಿದ ಡಾ| ಆರ್. ಕೆ. ಶೆಟ್ಟಿ ಪ್ರಸ್ತುತ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ,  ಬಂಟರ ಸಂಘ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ ,ಹಾಗೂ ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿರುವರು.

ಭಾರತ ರಾಷ್ಟ್ರದ ಮಾಜಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಂದ ಜಾಗತಿಕ ಭಾರತೀಯ ಸಾಧಕರ ಪ್ರಶಸ್ತಿಯಾದ ಗ್ಲೋಬಲ್ ಇಂಡಿಯನ್ ಅವಾರ್ಡ್‌ಗೆ ಭಾಜನರಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-2010 ಪುರಸ್ಕೃತರು ಮುಡಿಗೇರಿಸಿ ಕೊಂಡಿರುವ ಆರ್.ಕೆ ಶೆಟ್ಟಿ,

ಮಹಾರಾಷ್ಟ್ರ ರಾಜ್ಯದ ಮಾಜಿ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರಿಂದ (2022) ಪುರಸ್ಕೃತರಾಗಿರುವರು. ಇವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಸಂಸ್ಥಾಪನಾ ದಿನಾಚರಣಾ ‘ಭಾರತ ಗೌರವ ಜೀವಮಾನ ಪ್ರಶಸ್ತಿ-2019 ಪ್ರದಾನಿಸಿ ವಿಶ್ವವಿದ್ಯಾನಿಲಯದ ಸಾಂಪ್ರದಾಯಿಕ ಗೌರವಿಸಿದೆ.

ಶ್ರೀಲಂಕಾದ ಓಪನ್ ಇಂಟರ್‌ನ್ಯಾಷನಲ್ ಯೂನಿವರ್ಸಿಟಿಯ ಸೆನೆಟ್ ಡಾಕ್ಟರೇಟ್ ಆಫ್ ಆನರ್ಸ್ ಪ್ರದಾನಿಸಿ ಗೌರವಿಸಿದೆ. ಛತ್ರಪತಿ ಶಿವಾಜಿ ಮಹಾರಾಜ್ ಸಾಧನಾ ಪುರಸ್ಕಾರ 2015′, ಈಗೆ ಹಲವೂ ಪ್ರಶಸ್ತಿ ಸನ್ಮಾನಗಳು ಲಭಿಸಿದೆ .

Related posts

ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷರಾಗಿ ಮಯೂರ್ ಉಳ್ಳಾಲ್ ಆಯ್ಕೆ

Mumbai News Desk

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಪುತ್ರಿ ವಿಧಿವಶ.

Mumbai News Desk

ಡೊಂಬಿವಲಿ – ವೆಂಕಟೇಶ್ ಕೆ. ಕೋಟ್ಯಾನ್ ನಿಧನ.

Mumbai News Desk

ಉಡುಪಿ ನ್ಯಾಯಾಲಯ ಮತ್ತು ವಕೀಲರ ಸಂಘದ ಶತಮಾನೋತ್ತರ ಬೆಳ್ಳಿ ಹಬ್ಬದ ಆಮಂತ್ರಣ ಪತ್ರಿಕೆ ಧರ್ಮಸ್ಥಳದಲ್ಲಿ ಬಿಡುಗಡೆ

Mumbai News Desk

ಕರ್ನಾಟಕದ ಜನರಿಗೆ ಹೊಸ ವರ್ಷಕ್ಕೆ ಶಾಕ್ ನೀಡಿದ ಸರ್ಕಾರ – ಬಸ್ ಪ್ರಯಾಣ ದರ ಶೇಕಡ 15ರಷ್ಟು ಏರಿಕೆ

Mumbai News Desk

ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಸಭೆ.

Mumbai News Desk