
ಚಿತ್ರ ವರದಿ : ರವಿ.ಬಿ.ಅಂಚನ್ ಪಡುಬಿದ್ರಿ
ಡೊಂಬಿವಲಿ ಫೆ 26: ಸಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಜಗಜ್ಯೋತಿ ಕಲಾವೃಂದ ಪ್ರತಿ ಸೋಮವಾರ ತನ್ನ ಕಚೇರಿಯಲ್ಲಿ ಈಶ್ವರ ದೇವರ ಪೂಜೆಯನ್ನು ಮಾಡುತ್ತಿದ್ದು, ಕಲಾವೃಂದದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಮಹಾ ಶಿವರಾತ್ರಿ ಪೂಜೆಯನ್ನು ಸಂಘದ ಕಚೇರಿಯ ಅವರಣದಲ್ಲಿ ಖ್ಯಾತ ಪುರೋಹಿತರಾದ ಕನಾಂಗಿ ಪ್ರಕಾಶ್ ಭಟ್ ಅವರ ಪೌರೋಹಿತ್ಯದಲ್ಲಿ ಸಹ ಪುತೋಹಿತರಾದ ಗೋಪಾಲ ಕೋಟ್ಯಾನ್, ನಿಲೇಶ್ ಪೂಜಾರಿ ಇವರ ಸಹಕಾರದಲ್ಲಿ ಜರಗಿತು ಪೂಜೆಯ ವೃತಧಾರಿಗಳಾಗಿ ಸಂತೋಷ್ ಪುತ್ರನ್ ಪ್ರತಿಭಾ ಪುತ್ರನ್ ದಂಪತಿ ಸಹಕರಿಸಿದರು.

ಈ ಸಂದರ್ಭದಲ್ಲಿ ಭಜನೆಯು ನಡೆಯಿತು ಭಜನೆಯಲ್ಲಿ ಚಿಣ್ಣರ ಬಿಂಬದ ಚಿಣ್ಣರು, ಸಿರಿನಾಡ ವೇಲ್ಫೇರ್ ಅಸೋಸಿಯೇಷನ್, ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ,ತುಳು ವೆಲ್ಫೇರ್ ಅಸೋಸಿಯೇಷನ್, ಮುಂಬ್ರಾ ಮಿತ್ರ ಭಜನಾ ಮಂಡಳಿ ಭಜನೆಯಲ್ಲಿ ಸಹಕರಿಸಿದರು.

ಸಂಸ್ಥೆಯ ಅಧ್ಯಕ್ಷರಾದ ರಮೇಶ್ ಅಚ್ಚಣ್ಣ ಶೆಟ್ಟಿ, ಸುಕುಮಾರ್ ಶೆಟ್ಟಿ, ಜಯಕರ ಶೆಟ್ಟಿ, ವಸಂತ ಸುವರ್ಣ, ಬಾಬು ಮೊಗವೀರ, ತಾರಾನಾಥ ಅಮೀನ್ ರಾಜು ಸುವರ್ಣ, ಸದಾಶಿವ ಶ್ರೀಯಾನ್, ಚಂದ್ರಕಾಂತ ನಾಯ್ಕ್, ಸುರೇಂದ್ರ ನಾಯ್ಕ್, ಸಂತೋಷ್ ಶೆಟ್ಟಿ, ಉಮೇಶ್ ಸುವರ್ಣ, ಲಕ್ಷ್ಮಣ್ ಮೂಲ್ಯ, ದಯಾನಂದ ಸಾಲ್ಯಾನ್, ಮೊದಲಾದ ಸದಸ್ಯರು ಉಪಸ್ಥಿತರಿದ್ದರು

ಹಾಗೂ ಇದೇ ಸಂದರ್ಭದಲ್ಲಿ ಕರ್ನಾಟಕ ಸಂಘ ಡೊಂಬಿವಲಿಯ ಕಾರ್ಯಾಧ್ಯಕ್ಷ ಡಾ. ದಿವಾಕರ ಶೆಟ್ಟಿ ಇಂದ್ರಾಳಿ, ಉಪ ಕಾರ್ಯಾಧ್ಯಕ್ಷ ದೇವದಾಸ ಕುಲಾಲ್, ಉಪಾಧ್ಯಕ್ಷ ಲೋಕನಾಥ್ ಎ ಶೆಟ್ಟಿ, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಪ್ರಭಾಕರ್ ಶೆಟ್ಟಿ, ವಾಚನಾಲಯ ವಿಭಾಗದ ಕಾರ್ಯಾಧ್ಯಕ್ಷ ರಾಜೀವ್ ಭಂಡಾರಿ, ಲಲಿತ ಕಲಾ ವಿಭಾಗದ ಕಾರ್ಯಾಧ್ಯಕ್ಷೆ ಸುಷ್ಮಾ ಶೆಟ್ಟಿ, ಕಾರ್ಯಾಕಾರಿ ಸಮಿತಿ ಸದಸ್ಯ ನ್ಯಾ. ಅರ್.ಎಂ. ಭಂಡಾರಿ, ಬಂಟರ ಸಂಘ ಮುಂಬಯಿ ಇದರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಉಪ ಕಾರ್ಯಾಧ್ಯಕ್ಷ ಸುಬ್ಬಯ್ಯ ಎ. ಶೆಟ್ಟಿ, ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಸಂಚಾಲಕ ಕಲ್ಲಡ್ಕ ಕರುಣಾಕರ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಯೋಗಿನಿ ಶೆಟ್ಟಿ, ಗುರು ನಾರಾಯಣ ರಾತ್ರಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವರಾಮ ಶೆಟ್ಟಿ , ಮಾಜಿ ಅಧ್ಯಕ್ಷ ರವಿ ಬಂಗೇರ, ಸಾಯಿನಾಥ ಮಿತ್ರ ಮಂಡಳಿಯ ಅಧ್ಯಕ್ಷ ಮೋಹನ್ ಸಾಲ್ಯಾನ್, ವೇಣುಗೋಪಾಲ ರೈ, ನ್ಯಾ ಸುಂದರ್ ಶೆಟ್ಟಿ, ಸತೀಶ್ ಶೆಟ್ಟಿ ಡಾಲಿ, ಗುರುರಾಜ ಪೋತನಿಸ,ಮಂಜುನಾಥ ದೇವಾಡಿಗ, ನಿತ್ಯಾನಂದ ಜತ್ತನ್, ಸುರೇಶ್ ಶೆಟ್ಟಿ, ಸುರೇಶ್ ಕುಂದರ್, ತುಳು ವೆಲ್ಫೇರ್ ಅಸೋಸಿಯೇಷನ್ ನ ಪದಾಧಿಕಾರಿಗಳು, ಮುಂಬ್ರಾ ಮಿತ್ರ ಭಜಸಾ ಮಂಡಳಿಯ ಅಧ್ಯಕ್ಷ ಇಂದುಶೇಖರ್ ಕೋಟ್ಯಾನ್ ಮತ್ತು ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದು ತೀರ್ಥ ಪ್ರಸಾದ ಸ್ವೀಕರಿಸಿದರು.