
ಡೊಂಬಿವಲಿ ಪಶ್ಚಿಮ ಗೋಪಿನಾಥ್ ಚೌಕ್ ಬಳಿಯ ಯಕ್ಷ ಕಲಾ ಸಂಸ್ಥೆ ಸ್ಥಾಪಿಸಿ, ಜಗದಂಬಾ ಚಾರಿಟೇಬಲ್ ಟ್ರಸ್ಟ್ ಸಂಚಾಲಕತ್ವದ ಶ್ರೀ ಜಗದಂಬಾ ಮಂದಿರದ, ಶ್ರೀ ಜಗದಂಬಾ ದೇವಿ ಹಾಗೂ ಪರಿವಾರ ದೇವರ 10ನೇ ವಾರ್ಷಿಕ ಮಹೋತ್ಸವ ಹಾಗೂ ಪಲ್ಲಕ್ಕಿ ಉತ್ಸವವು ಇದೇ ಬರುವ ಸ್ವಸ್ತಿ ಶ್ರೀ ಕ್ರೋಧಿನಾಮ ಸಂವತ್ಸರದ ಕುಂಭ ಮಾಸ ದಿನ 24-25 ದಿ. 08.03.2025ನೇ ಶನಿವಾರ ಮೊದಲ್ಗೊಂಡು ದಿ. 09.03.2025 ನೇ ಆದಿತ್ಯವಾರ ಪರ್ಯಂತ ಡೊಂಬಿವಲಿ ಜಗದಂಬಾ ದೇವಿ ಸನ್ನಿಧಿಯಲ್ಲಿ, ಸುಬ್ರಮಣ್ಯ ರಾವ್ ಇವರ ಸಾರಥ್ಯದಲ್ಲಿ ಹಾಗೂ ಮಂದಿರದ ಪ್ರಧಾನ ಅರ್ಚಕರಾದ ಶ್ರೀ ಜಗದೀಶ ಭಟ್ ಇವರ ನೇತೃತ್ವದಲ್ಲಿ ಜರಗಲಿರುವುದು.
ಕಾರ್ಯಕ್ರಮದ ವಿವರ :
08.3.2025ನೇ ಶನಿವಾರ : ಬೆಳಿಗ್ಗೆ ಗಂಟೆ 8.00 ರಿಂದ ಸಾಮೂಹಿಕ ಪ್ರಾರ್ಥನೆ, ದೀಪ ಪ್ರಜ್ವಲನೆ, ಸ್ವಸ್ತಿ ಪುಣ್ಯಾಹವಾಚನ, ತೋರಣ ಮುಹೂರ್ತ 8.30 ರಿಂದ ಗಣಪತಿ ಹೋಮ ಹಾಗೂ 10.30 ರಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಮಧ್ಯಾಹ್ನ 12.00 ಗಂಟೆಗೆ ಮಹಾಮಂಗಳಾರತಿ, ಗಂಟೆ 12.30 ರಿಂದ ಶನಿಪೂಜೆ ಹಾಗೂ ಶನಿಗ್ರಂಥ ಪಾರಾಯಣ( ಯಕ್ಷಗಾನ ತಾಳಮದ್ದಳೆ ರೂಪದಲ್ಲಿ) ಶ್ರೀ ಜಗದಂಬಾ ಮಂದಿರದ ಸದಸ್ಯರಿಂದ ನಡೆಯಲಿದೆ. ಮಂಡಲಿಯ ಸದಸ್ಯರಾದ ಶ್ರೀ ಸುರೇಶ ಟಿ. ಅಂಚನ್‌ರವರ ಹಸ್ತದಿಂದ ಕಲಶ ಪ್ರತಿಷ್ಠಾಪನೆ ನೆರವೇರಲಿದೆ.
ಮಧ್ಯಾಹ್ನ 1.00 ರಿಂದ ಪಲ್ಲಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ 5 ರಿಂದ ದುರ್ಗಾ ನಮಸ್ಕಾರ ಪೂಜೆ, ಲಲಿತ ಸಹಸ್ರನಾಮಾರ್ಚನೆ, ಕುಂಕುಮಾರ್ಚನೆ, 8.00 ಮಹಾಮಂಗಳಾರತಿ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ.

09.3.2025 ರವಿವಾರ, ಬೆಳಿಗ್ಗೆ 8.00 ರಿಂದ ಶ್ರೀದೇವಿ ಸನ್ನಿಧಿಯಲ್ಲಿ 25 ಕಲಶದ ಕಲಶಾರಾಧನೆ ಪ್ರಧಾನ ಹೋಮ, ಪಂಚಾಮೃತ ಅಭಿಷೇಕ ಹಾಗೂ ಪರಿವಾರ ದೇವರಿಗೆ ನವಕಕಲಶ ಹಾಗೂ ಕಲಶಾಭಿಷೇಕ ಜರಗಲಿದೆ.
ಬಳಿಕ ಶ್ರೀ ದೇವಿಯ ಬಲಿ ಮೂರ್ತಿಯ ಭವ್ಯ ಮೆರವಣಿಗೆಯು ಬೆಳಿಗ್ಗೆ 10.00 ರಿಂದ ಶ್ರೀ ಜಗದಂಬಾ ಮಂದಿರದಿಂದ ಗೋಪಿನಾಥ ಚೌಕಿನ ಹರಿ ಹರೇಶ್ವರ ಮಂದಿರದವರೆಗೆ ತದನಂತರ ಉತ್ಸವ ಬಲಿ, ಕಟ್ಟೆಪೂಜೆ ಜರಗಿ, 12.00 ಗಂಟೆಗೆ ಶ್ರೀ ಜಗದಂಬಾ ದೇವಿಗೆ ಮಹಾಮಂಗಳಾರತಿ ಪ್ರಸಾದ ವಿತರಣೆ,ಪಲ್ಲಪೂಜೆ ನಡೆದು ಮಧ್ಯಾಹ್ನ 1.00 ರಿಂದ ಅನ್ನ ಸಂತರ್ಪಣೆ ನಡೆಯುವುದು. ಸಾಯಂಕಾಲ ಗಂಟೆ 5.00 ರಿಂದ ಕುಂಕುಮಾರ್ಚನೆ, ಮಹಾಪೂಜೆ ಹಾಗೂ ರಂಗಪೂಜೆ ಹಾಗೂ ಪ್ರಸಾದ ವಿತರಣೆ ಹಾಗೂ ಸತೀಶ್ ಶೆಟ್ಟಿ ಅಜೇಕಾರ್ ಮತ್ತು ಕುಟುಂಬಸ್ತರಿಂದ ಸೇವಾ ರೂಪದಲ್ಲಿ ಅನ್ನ ಸಂತರ್ಪಣೆ ಜರಗಲಿದೆ.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತಾ. 9ರಂದು ರಾತ್ರಿ 8 ಗಂಟೆಗೆ, ಜಗದಂಬಾ ಮಂದಿರದ ಸದಸ್ಯರಿಂದ ಎನ್ನ ಬುಡೆದಿ ತುಳು ನಾಟಕ ಪ್ರದರ್ಶನಗೊಳ್ಳಲಿದೆ
ಕಥೆ ಹಾಗೂ ನಿರ್ದೇಶನ : ಧನಂಜಯ ಮೂಳೂರು ಬರಹಗಾರ : ಅರುಣ ಚಂದ್ರ, ಬಿ. ಸಿ. ರೋಡ್.

ತಾವೆಲ್ಲರೂ ಎರಡೂ ದಿನಗಳೂ ನಡೆಯುವ ಧಾರ್ಮಿಕ ಕಾರ್ಯಕ್ರಮಕ್ಕೆ ತನು-ಮನ-ಧನಗಳಿಂದ ಸಹಕರಿಸಿ, ದೇವತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾನಿಧ್ಯ ದೇವರುಗಳ ಶ್ರೀಗಂಧ ತೀರ್ಥ ಪ್ರಸಾದವನ್ನು ಸ್ವೀಕರಿಸಿ, ಪ್ರದಾನ ದೇವರಾದ ಜಗದಂಬಾ ದೇವಿ ಹಾಗೂ ಕಲಿಯುಗ ಒಡೆಯ ಶ್ರೀ ಶನೀಶ್ವರ, ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ, ಶ್ರೀ ನಾಗದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಯಕ್ಷ ಕಲಾ ಸಂಸ್ಥೆಯ ಗೌರವಾಧ್ಯಕ್ಷ
ಹರೀಶ್ ಡಿ. ಶೆಟ್ಟಿ, ಅಧ್ಯಕ್ಷ ದಿವಾಕರ ಜಿ. ರೈ, ಉಪಾಧ್ಯಕ್ಷ
ರವೀಂದ್ರ ವೈ ಶೆಟ್ಟಿ, ಗೌ.ಪ್ರ. ಕಾರ್ಯದರ್ಶಿ ರಾಜೇಶ ಸಿ. ಕೋಟ್ಯಾನ್, ಕೋಶಾಧಿಕಾರಿ ಸಂತೋಷ ಎಮ್. ಶೆಟ್ಟಿ, ಜೊತೆ ಕಾರ್ಯದರ್ಶಿ ಸಚಿನ್ ಎಸ್. ಪೂಜಾರಿ
ಹಾಗೂ ಕಾರ್ಯಕಾರಿ ಸಮಿತಿ, ಶನಿಪೂಜೆ ಸಮಿತಿ,
ಮಹಿಳಾ ಸದಸ್ಯರು ವಿನಂತಿಸಿದ್ದಾರೆ.
ವಿ. ಸೂ. : ಸಾಮೂಹಿಕ ಶನಿಪೂಜೆ ಮಾಡುವ ಭಕ್ತರು ರೂ. 301/- ಪಾವತಿ ಮಾಡತಕ್ಕದು.
